Kiccha Sudeep Birthday: ಇಂದು 49ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್​, ಐರನ್​ ಲೆಗ್​ ಟು ಗೋಲ್ಡನ್​ ಮ್ಯಾನ್​!

ಗುಣದಲ್ಲಿ ಮಾಣಿಕ್ಯ, ಅಭಿನಯದಲ್ಲಿ ಚಕ್ರವರ್ತಿ, ಅಭಿಮಾನಿಗಳ ಬಾದ್​ಷಾ, ಕಿಚ್ಚ ಸುದೀಪ್ ಅವರು ಇಂದು 49ನೇ ವಸಂತಕ್ಕೆ ಸುದೀಪ್​ ಕಾಲಿಟ್ಟಿದ್ದಾರೆ.

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

  • Share this:
ಸ್ಯಾಂಡಲ್​ವುಡ್​ ಬಾದ್​ಷಾ (Sandalwood Badshah) ಅಂದರೆ ಯಾರಿಗೆ ಇಷ್ಟ ಇಲ್ಲ. ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್ (Kiccha Sudeep)​ ಅಂದರೆ ನೂರು ರೂಪಾಯಿ ನೋಟು ನೋಡಿದ ಹಾಗೇ ಇರುತ್ತೆ. ಯಾಕೆ ಗೊತ್ತಾ? 100 ರೂಪಾಯಿ ನೋಟಿನಲ್ಲಿ ಎಲ್ಲಾ ಭಾಷೆ ಇರುವ ಹಾಗೆ, ಕಿಚ್ಚನ ನೋಡಿದರೆ ಪರಿಪೂರ್ಣ ನಟ ಎಂದರೆ ಅತಿಶೋಕ್ತಿಯಲ್ಲ. ಹೀರೋ (Hero) , ವಿಲನ್ (Villain) ​, ಸಪೋರ್ಟಿಂಗ್​ ಕ್ಯಾರಕ್ಟರ್​, ಗೆಸ್ಟ್​ ಕ್ಯಾರೆಕ್ಟರ್​ ಹೀಗೆ ಕಿಚ್ಚ ಮಾಡದೇ ಇರುವ ಪಾತ್ರವೇ ಇಲ್ಲ ಅನ್ನಬಹುದು. ಇಂಥಹ ನಟನಿಗೆ ಇಂದು ಜನ್ಮದಿನ (Kiccha Sudeep Birthday) ದ ಸಂಭ್ರಮ. ಸುದೀಪ್ ಅವರ ಇಂಡಸ್ಟ್ರಿ ಸ್ನೇಹಿತರು, ಆಪ್ತರು ಸಹ ಬಾದ್‌ಶಾ ಬರ್ತಡೇಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಗುಣದಲ್ಲಿ ಮಾಣಿಕ್ಯ, ಅಭಿನಯದಲ್ಲಿ ಚಕ್ರವರ್ತಿ, ಅಭಿಮಾನಿಗಳ ಬಾದ್​ಷಾ, ಕಿಚ್ಚ ಸುದೀಪ್ ಅವರು ಇಂದು 49ನೇ ವಸಂತಕ್ಕೆ ಸುದೀಪ್​ ಕಾಲಿಟ್ಟಿದ್ದಾರೆ.

ರಾತ್ರಿಯಿಂದಲೇ ಕಿಚ್ಚನ ಮನೆ ಮುಂದೆ ಸಂಭ್ರಮ!

ಕಳೆದ ಎರಡು ವರ್ಷಗಳಿಂದ ಕಿಚ್ಚ ಸುದೀಪ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಕೊರೋನಾ ಕಾರಣದಿಂದ ಮನೆ ಬಳಿ ಬರಬೇಡಿ ಎಂದು ಕಿಚ್ಚ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ, ಈ ಬಾರಿ ಕಿಚ್ಚನ ಬರ್ತ್​ಡೇ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ತಡರಾತ್ರಿಯಿಂದಲೇ ಜೆಪಿ ನಗರದ ಕಿಚ್ಚನ ನಿವಾಸದ ಎದುರು ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ಕೇಕ್​ ತಂದಿದ್ದರು.

ಇದನ್ನೂ ಓದಿ: ನಟ ಸುದೀಪ್​ ಮನೆಗೆ ತೆರಳಿ ತ್ರಿವರ್ಣ ಧ್ವಜ ನೀಡಿದ ನಳೀನ್ ಕುಮಾರ್ ಕಟೀಲ್​​

ಐರೆನ್​ ಲೆಗ್​ ಟು ಗೋಲ್ಡನ್​ ಲೆಗ್​!

ಕಿಚ್ಚನ ಮೊದಲ ಮೂರು ಸಿನಿಮಾಗಳಲ್ಲಿ ‘ಬ್ರಹ್ಮ’ ಹಾಗೂ ‘ಓ ಕುಸುಮ ಬಾಲೆ’ ಸಿನಿಮಾಗಳು ರಿಲೀಸ್ ಆಗಲೇ ಇಲ್ಲ. ಆದರೂ, ಛಲ ಬಿಡದೆ  ಚಿತ್ರರಂಗದಲ್ಲಿ ‘ಗೂಳಿ’ಯಂತೆ ನುಗ್ಗಿದ  ಕಿಚ್ಚನಿಗೆ ‘ ಸ್ಪರ್ಶ’ ಚಿತ್ರದಲ್ಲಿ ಒಂದು ಐಡೆಂಟಿಟಿ (Identity) ಸಿಕ್ಕಿತ್ತು. ನಂತರ, ‘ಹುಚ್ಚ’ ಚಿತ್ರ ಕಿಚ್ಚನಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು.. ಅಲ್ಲಿಂದ ಇಲ್ಲಿಯವರೆಗೂ ಕಿಚ್ಚ ಹಿಂದೆ ತಿರುಗಿ ನೋಡೆ ಇಲ್ಲ.


ಪ್ಯಾನ್ ಇಂಡಿಯಾ ಸ್ಟಾರ್​​ ಕಿಚ್ಚ ಸುದೀಪ್​!

ಸಿನಿ ಜರ್ನಿಯಲ್ಲಿ ಸಾಕಷ್ಟು ಸೋಲು, ಗೆಲುವು ಎಲ್ಲಾವನ್ನು  ಕಂಡಿರುವ ಕಿಚ್ಚ ಗೆದ್ದಾಗ ಹಿಗ್ಗಲಿಲ್ಲ, ಬಿದ್ದಾಗ ಕುಗ್ಗಲಿಲ್ಲ. ಅದಕ್ಕೆ ಸಾಕ್ಷಿ ಎಂಬತೆ ‘ಹುಚ್ಚ’ ಚಿತ್ರದ ನಂತರ ಸುದೀಪ್ ಅವರ ಸಾಲು ಸಾಲು  ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ್ದವು, ಇದಕ್ಕೆ ಜಗ್ಗದ ಕಿಚ್ಚ ನಟನೆಯಿಂದ ನಿರ್ದೇಶಕ, ನಿರ್ಮಾಪಕನಾಗಿ ‘ಮೈ ಆಟೋ ಗ್ರಾಫ್’ ಚಿತ್ರ ಮಾಡಿ ಮತ್ತೆ ಗೆಲುವಿನ ಕುದುರೆ ಏರಿ ಚಿತ್ರರಂಗದಲ್ಲಿ ಸವಾರಿ ಮುಂದುವರೆಸಿದರು. ಕನ್ನಡ ಮಾತ್ರವಲ್ಲ ತೆಲುಗು, ಹಿಂದಿ, ಹಾಗೂ ತಮಿಳು ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಿಚ್ಚ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಅಗಿ ದರ್ಬಾರ್ ನಡೆಸುತ್ತಿದ್ದಾರೆ.


ಮರುಜೀವ ಪಡೆಯುತ್ತಾ ಬಿಲ್ಲ ರಂಗ ಭಾಷಾ?

ವಿಕ್ರಾಂತ್ ರೋಣ ಸಿನಿಮಾಗೂ ಮುನ್ನ ಅನೂಪ್​ ಭಂಡಾರಿ ಕಿಚ್ಚ ಸುದೀಪ್​ ಅವರ ಬಳಿ ಬಿಲ್ಲ ರಂಗ ಭಾಷಾ ಸಿನಿಮಾದ ಕಥೆಯನ್ನು ಹೇಳಿ ಓಕೆ ಮಾಡಿಸಿದ್ದರು. ಈ ಸಿನಿಮಾ ಕೂಡ ಅನೌನ್ಸ್​ ಆಗಿತ್ತು. ಆದರೆ, ಈ ಸಿನಿಮಾ ಟೇಕ್ ಆಫ್​ ಆಗಲಿಲ್ಲ. ಇದರ ಬದಲು ವಿಕ್ರಾಂತ್​ ರೋಣ ಸಿನಿಮಾ ಟೇಕ್​ ಆಫ್​ ಆಯ್ತು. ಈಗ ಕಿಚ್ಚ ನನ್ನ ಮುಂದಿನ ಸಿನಿಮಾ ವಿತ್​ ಅನೂಪ್​ ಭಂಡಾರಿ ಅಂತ ಹೇಳಿರುವುದು ಒಂದು ವೇಳೆ ಇದೇ ಸಿನಿಮಾವನ್ನು ಈಗ ಟೇಕ್​ ಆಫ್​ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಇಂದು ಕಿಚ್ಚನ ಹುಟ್ಟುಹಬ್ಬ ಹಿನ್ನೆಲೆ ಈ ಸಿನಿಮಾದ  ಬಗ್ಗೆ ಏನಾದರೂ ಅಪ್​ಡೇಟ್​ ಸಿಗುತ್ತಾ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: ಕಿಚ್ಚನಿಗೆ ತಿನ್ನೋದಕ್ಕಿಂತ ಅಡುಗೆ ಮಾಡಿ ಬಡಿಸೋದು ಇಷ್ಟವಂತೆ! ವಿಮಾನ ಹಾರಿಸುವ ಕನಸು ಬಿಚ್ಚಿಟ್ಟ ವಿಕ್ರಾಂತ್ ರೋಣ

ಶಿವಮೊಗ್ಗದಲ್ಲಿ ಜನಿಸಿದ ಕಿಚ್ಚ ಸುದೀಪ್ ಇಂದು ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದು, ಕನ್ನಡದ ಕಂಪನ್ನು  ಸಾಗರದಾಚೆಯು ಪಸರಿಸಿರುವ ಕಿಚ್ಚನ ಸಿನಿ ಜರ್ನಿ ಮತ್ತಷ್ಟು ಬೆಳಗಲಿ ಎಂದು ಹಾರೈಸೋಣ.
Published by:Vasudeva M
First published: