ಇತ್ತೀಚೆಗಷ್ಟೆ ಕೋವಿಡ್ ಪಾಸಿಟಿವ್ ಆಗಿದ್ದು, ಕ್ವಾರಂಟೈನ್ನಲ್ಲಿರುವ ನಟ ಜೂನಿಯರ್ ಎನ್ಟಿಆರ್ ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿಸುತ್ತಿದ್ದಾರೆ. ಸದ್ಯ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿರುವ ನಟ ಜೂನಿಯರ್ ಎನ್ಟಿಆರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬದಂತೆ ಆಚರಿಸುತ್ತಿದ್ದಾರೆ. 38ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಕುಟುಂಬದ ಸದಸ್ಯರು, ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಪ್ರಸ್ತುತ ಜೂನಿಯರ್ ಎನ್ಟಿಆರ್ ಅವರು ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಆರ್ಆರ್ಆರ್. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಕೋಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರ್ಆರ್ಆರ್ ಚಿತ್ರತಂಡ ಜೂ. ಎನ್ಟಿಆರ್ ಫ್ಯಾನ್ಸ್ಗೆ ಇಂದು ಸಖತ್ ಸರ್ಪ್ರೈಸ್ ಕೊಟ್ಟಿದೆ.
ಬಾಹುಬಲಿ ನಂತರ ರಾಜಮೌಳಿ ಅವರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಆರ್ಆರ್ಆರ್. ಈ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಕೋಮರಾಮ್ ಭೀಮ್ ಹಾಗೂ ರಾಮ್ ಚರಣ್ ತೇಜ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಜೂ. ಎನ್ಟಿಆರ್ ಅವರ ಇಂಟೆನ್ಸ್ ಲುಕ್ ಇರುವ ಪೋಸ್ಟರ್ ಅನ್ನು ಆರ್ಆರ್ಆರ್ ಚಿತ್ರತಂಡ ರಿಲೀಸ್ ಮಾಡಿದೆ.
ಕೋಮರಾಮ್ ಭೀಮ್ ಪಾತ್ರದ ಈ ಹೊಸ ಪೋಸ್ಟರ್ ಅನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾ ಟ್ರೆಂಡ್ ಮಾಡುತ್ತಿದ್ದಾರೆ.
He's a rebel full of heart!
It's been a pleasure to play this intense role and I am happy to introduce to you all, one of my biggest challenges so far. #KomaramBheem from #RRRMovie.@ssrajamouli @AlwaysRamCharan @ajaydevgn @aliaa08 @oliviamorris891 @RRRMovie @DVVMovies pic.twitter.com/aXDV5mP4sG
— Jr NTR (@tarak9999) May 20, 2021
ಇದನ್ನೂ ಓದಿ: Happy Birthday Nishvika: ಸರಳವಾಗಿ ಹುಟ್ಟುಹಬ್ಬ ಆಚರಿಸಿದ ನಿಶ್ವಿಕಾಗೆ ಸಿಕ್ತು ಭರ್ಜರಿ ಗಿಫ್ಟ್..!
ಇದರಿಂದಾಗಿ ಮೇ 20ರಿಂದ ಇಲ್ಲಿಯವರೆಗೆ ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಕಾತರರಾಗಿ ಕಾಯುತ್ತಲೇ ಇದ್ದರು. ನಂತರ ಅಕ್ಟೋಬರ್ನಲ್ಲಿ ರಾಮ್ಚರಣ್ ಅವರು ಕಂಠದಾನ ಮಾಡಿದ ವಿಡಿಯೋವನ್ನು ರಿಲೀಸ್ ಮಾಡಲಾಯಿತು.
ಕೋಮರಾಮ್ ಭೀಮ್ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್ ಆದಾಗಲೂ ಜೂನಿಯರ್ ಎನ್ಟಿಆರ್ ಅಭಿಮಾನಿಗಳನ್ನು ಅದನ್ನು ಟ್ವಿಟರ್ನಲ್ಲಿ ಟ್ರೆಂಡ್ ಮಾಡಿದ್ದರು. ಒಮ್ಮೆ ಲಾಕ್ಡೌನ್ ತೆರವುಗೊಂಡ ನಂತರ ಸಿನಿಮಾದ ಚಿತ್ರೀಕರಣ ಆರಂಭವಾದಾ ಅದರ ವಿಡಿಯೋವನ್ನೂ ಸಹ ರಾಜಮೌಳಿ ಹಂಚಿಕೊಂಡಿದ್ದರು.
ಇದನ್ನೂ ಓದಿ: Kichcha Sudeep: ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿದ ಕಿಚ್ಚ ಸುದೀಪ್
ರಾಜಮೌಳಿ ನಿರ್ದೇಶನದ ಈ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ-ನಟಿಯರಾದ ಅಜಯ್ ದೇವಗನ್, ಆಲಿಯಾ ಭಟ್ ಸಹ ನಟಿಸಿದ್ದಾರೆ. ಆಲಿಯಾ ಭಟ್ ಹುಟ್ಟುಹಬ್ಬದಂದು ಅವರ ಫಸ್ಟ್ಲುಕ್ ಪೋಸ್ಟರ್ ಸಹ ರಿಲೀಸ್ ಮಾಡಲಾಯಿತು. ಆಲಿಯಾ ಅವರ ಲುಕ್ಗೆ ಅಭಿಮಾನಿಗಳು ವಾಹ್ ಎಂದಿದ್ದರು. ಭಾರೀ ಬಜೆಟ್ನ ಆರ್ಆರ್ಆರ ಸಿನಿಮಾವನ್ನು ದಾಸಯ್ಯ ನಿರ್ಮಾಣ ಮಾಡುತ್ತಿದ್ದು, ಅಕ್ಟೋಬರ್ 13ರಂದು ರಿಲೀಸ್ ಆಗಲಿದೆ.
ಇದನ್ನೂ ಓದಿ: ತೌಕ್ತೆ ಚಂಡಮಾರುತ: ಹಾಳಾಯ್ತು ಸಲ್ಮಾನ್- ಕತ್ರಿನಾ ಅಭಿನಯದ ಟೈಗರ್ 3 ಸಿನಿಮಾದ ಸೆಟ್
ಜೂನಿಯರ್ ಎನ್ಟಿಆರ್ ಅವರಿಗೆ ಕೊರೋನಾ ಸೋಂಕಾಗುವ ಮೊದಲು ಆರ್ಆರ್ಆರ್ ಚಿತ್ರತಂಡ ಒಂದು ವಿಡಿಯೋ ರಿಲೀಸ್ ಮಾಡಿತ್ತು. ಅದರಲ್ಲಿ ಜೂನಿಯರ್ ಎನ್ಟಿಆರ್ ಕನ್ನಡದಲ್ಲಿ ಮಾತನಾಡುವ ಮೂಲಕ ಅಭಿಮಾನಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ನ ಮಹತ್ವ ವಿವರಿಸಿದ್ದರು. ಕೊರೋನಾ ಹರಡುತ್ತಿರುವ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜಾಗ್ರತೆಯಿಂದ ಇರುವಂತೆ ಮನವಿ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ