Happy Birthday Prem: ಕುಟುಂಬದ ಜೊತೆ ಕೇಕ್​ ಕತ್ತರಿಸಿ ಸಂಭ್ರಮಿಸಿದ ನಿರ್ದೇಶಕ ಪ್ರೇಮ್​

ರಕ್ಷಿತಾ ಪ್ರೇಮ್​ ಸಹ ಪತಿಯ ಹುಟ್ಟುಹಬ್ಬಕ್ಕೆ ಕ್ಯೂಟ್​ ಆಗಿ ವಿಶ್​ ಮಾಡಿದ್ದಾರೆ. ಎಂದಿನಂತೆ ರಾತ್ರಿ 12 ಗಂಟೆಗೆ ಪತಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಪ್ರೇಮ್​ ಅವರ ಹುಟ್ಟುಹಬ್ಬದ ಚಿತ್ರಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ ರಕ್ಷಿತಾ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ದೇಶಕ ಪ್ರೇಮ್​

ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ದೇಶಕ ಪ್ರೇಮ್​

  • Share this:
ಆ್ಯಕ್ಷನ್​, ರೊಮ್ಯಾಂಟಿಕ್​ ಹಾಗೂ ವಿಭಿನ್ನ ಸಿನಿಮಾಗಳನ್ನು ನೀಡುವ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಜೋಗಿ ಪ್ರೇಮ್​ (Jogi Prem) ಎಂದೇ ಖ್ಯಾತರಾಗಿದ್ದಾರೆ. ಇಂದು ಈ ನಟ 44ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 44ನೇ (44th Birthday) ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ. ಪ್ರೇಮ್​ ತಮ್ಮ ಕುಟುಂಬ ಹಾಗೂ ಏಕ್​ ಲವ್ಯಾ ತಂಡವರೊಂದಿಗೆ ಹುಟ್ಟುಹಬ್ಬ (Happy Birthday Prem) ಆಚರಿಸಿಕೊಂಡಿದ್ದಾರೆ. ಕೇಕ್​ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಿಸಿರುವ ಪ್ರೇಮ್​  ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 




ಇನ್ನು ತಮ್ಮ ಹುಟ್ಟುಹಬ್ಬಕ್ಕೆ ಎರಡು ದಿನ ಇರುವಾಗಲೇ ಪ್ರೇಮ್​ ಅವರು ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದರು. ಈ ಸಲ ತಾವು ತಮ್ಮ ಹುಟ್ಟುಹಬ್ಬದಂದು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಹೇಳಿರುವ ಒಂದು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.










View this post on Instagram






A post shared by Prem❣️s (@directorprems)






ಪ್ರತಿ ಸಲ ಕುಟುಂಬದವರು, ಸ್ನೇಹಿತರ ಜೊತೆಗೆ ದೂರ ಊರುಗಳಿಂದ ಅಭಿಮಾನಿಗಳು ಬರ್ತ್​ ಡೇ ಸೆಲಬ್ರೇಷನ್​ಗಾಗಿ ಕೇಕ್​ ಹಾಗೂ ಉಡುಗೊರೆಗಳ ಜತೆ ಬರುತ್ತಿದ್ದಿರಿ. ಆದರೆ, ಈ ಸಲ ನಾನು ಹುಟ್ಟುಹಬ್ಬದಂದು ಮುಂಬೈನಲ್ಲಿರುತ್ತೇನೆ. ಕಾರಣ ಏಕ್​ ಲವ್​ ಯಾ ಸಿನಿಮಾದ 3ನೇ ಹಾಡು ದೀಪಾವಳಿಯಂದು ರಿಲೀಸ್ ಆಗುತ್ತಿದೆ. ಅದರ ಕೆಲಸದ ಮೇಲೆ ಮುಂಬೈನಲ್ಲಿರುವುದಾಗಿ ಹೇಳಿದ್ದರು.

ಇದನ್ನೂ ಓದಿ: Yaare Yaare Song: ಯಾರೆ ಯಾರೆ... ಎನ್ನುತ್ತಲೇ ಪ್ರೇಮಿಗಳ ದಿನದಂದು ಮ್ಯೂಸಿಕಲ್​ ಟ್ರೀಟ್ ಕೊಟ್ಟ ಏಕ್​ ಲವ್​ ಯಾ ಚಿತ್ರತಂಡ: ಮೆಚ್ಚಿಕೊಂಡ ಪುನೀತ್​..!

ಇನ್ನು ನಿನ್ನೆ ರಾತ್ರಿಯೇ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಿರ್ದೇಶಕ ಈಗ ತಮ್ಮ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಕನ್ನಡದ ಬಹುತೇಕ ಸಿನಿಮಾಗಳು ಪೋಸ್ಟರ್​ ಜೊತೆಗೆ ಟೀಸರ್ ಹಾಗೂ ಟ್ರೇಲರ್ ರಿಲೀಸ್ ಮಾಡಿದ್ದವು. ಅಂತೆಯೇ ನಿರ್ದೇಶಕ ಜೋಗಿ ಪ್ರೇಮ್​ ಸಹ ತಮ್ಮ ಏಕ್​ ಲವ್​ ಯಾ (Ek Love Ya) ಚಿತ್ರದ ಮೊದಲ ಹಾಡಿನ ರಿಲೀಸ್ ದಿನಾಂಕ ಪ್ರಕಟಿಸುವುದರ ಜೊತೆಗೆ ಸಿನಿಮಾದ ಹೊಸ ಪೋಸ್ಟರ್​ಗಳನ್ನೂ ಹಂಚಿಕೊಂಡಿದ್ದರು.

ಜೋಗಿ ಪ್ರೇಮ್(Jogi Prem)​ ನಿರ್ದೇಶಿಸುತ್ತಿರುವ ಸಿನಿಮಾ ಏಕ್​ ಲವ್​ ಯಾ ಚಿತ್ರತಂಡ ಮೊದಲ ಹಾಡನ್ನು ಪ್ರೇಮಿಗಳ ದಿನದಂದು ಅಂದರೆ ಫೆ. 14ಕ್ಕೆ ರಿಲೀಸ್ ಮಾಡಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿತ್ತು. ಚಿತ್ರತಂಡ. ಏಕ್​ ಲವ್​ ಯಾ ಸಿನಿಮಾದ ಮೊದಲ ಹಾಡು ಸಹ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್‌ ಆಗಿತ್ತು. ಈ ಹಾಡನ್ನು ಅರ್ಮಾನ್ ಮಲ್ಲಿಕ್​ ಹಾಡಿದ್ದಾರೆ. ಈಗ ಈ ಸಿನಿಮಾದ ಮೂರನೇ ಹಾಡು ರಿಲೀಸ್​ ಆಗಲಿದೆ.

ಇದನ್ನೂ ಓದಿ:  Ek Love Ya ಸಿನಿಮಾ ಚಿತ್ರೀಕರಣಕ್ಕೆ ತೆರೆ: ಭಾವುಕ ಪೋಸ್ಟ್​ ಮಾಡಿದ ರಕ್ಷಿತಾ ಪ್ರೇಮ್​..!

ರಕ್ಷಿತಾ ಫಿಲಂ ಫ್ಯಾಕ್ಟರಿ ಮೂಲಕ ನಿರ್ಮಾಣವಾಗ್ತಿರೋ ಸಿನಿಮಾಗೆ ಅರ್ಜುನ್ಯ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತಾ ಅವರ ತಮ್ಮ ರಾಣಾ ನಾಯಕನಾಗಿ ನಟಿಸಿದ್ದು ಸಿ ಕ್ಸ್‌ ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 'ಏಕ್​ ಲವ್ ಯಾ' ಚಿತ್ರವು ವಿಭಿನ್ನ ಪ್ರೇಮಕಥೆಯನ್ನು ಹೊಂದಿದ್ದು, ಇಲ್ಲಿ ರಾಣಾಗೆ ನಾಯಕಿಯಾಗಿ ರೇಷ್ಮಾ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಡಿಂಪಲ್ ಕ್ವೀನ್ ರಚಿತಾ ರಾಮ್ ಟಾಮ್ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾದ ಚಿತ್ರೀಕರಣ ಊಟಿ, ಗುಜರಾತ್​ ಹಾಗೂ ಕಾಶ್ಮೀರದಲ್ಲಿ ಮಾಡಲಾಗಿದೆ. ಇನ್ನು ಲಾಕ್​ಡೌನ್​ ಸಡಿಲಗೊಂಡ ಕೂಡಲೇ ಊಟಿಯಲ್ಲಿ ಹಾಡಿನ ಚಿತ್ರೀಕರಣದ ಜೊತೆಗೆ ಕೊಂಚ ಪ್ಯಾಚ್​ ವರ್ಕ್​ ಸಹ ಮುಗಿಸಿರುವ ಚಿತ್ರತಂಡ ನಂತರ ಕಾಶ್ಮೀರಕ್ಕೆ ಹೋಗಿತ್ತು. ಅಲ್ಲಿಯೂ ಹಾಡಿನ ಚಿತ್ರೀಕರಣ ಮಾಡಿ ಮುಗಿಸಿತ್ತು. ಇನ್ನು ಜನವರಿ 21ಕ್ಕೆ ಅಂದರೆ ಮುಂದಿನ ವರ್ಷ ತೆರೆಗೆ ಬರಲಿದೆ.
Published by:Anitha E
First published: