• Home
  • »
  • News
  • »
  • entertainment
  • »
  • HBD Jaggesh: ಗುರು ರಾಯರ ಸನ್ನಿಧಿಯಲ್ಲಿ ಜನ್ಮದಿನ ಆಚರಿಸಿಕೊಂಡ ನಟ ಜಗ್ಗೇಶ್

HBD Jaggesh: ಗುರು ರಾಯರ ಸನ್ನಿಧಿಯಲ್ಲಿ ಜನ್ಮದಿನ ಆಚರಿಸಿಕೊಂಡ ನಟ ಜಗ್ಗೇಶ್

ರಾಯರ ಸನ್ನಿಧಿಯಲ್ಲಿ ನಟ ಜಗ್ಗೇಶ್​

ರಾಯರ ಸನ್ನಿಧಿಯಲ್ಲಿ ನಟ ಜಗ್ಗೇಶ್​

Jaggesh Birthday: ಸಿನಿಮಾ ಬಗ್ಗೆ ಮಾತನಾಡಿದ ಜಗ್ಗೇಶ್​, “ಈ ವರ್ಷ ನಾನು ಹಲವಾರು ಚಿತ್ರಗಳನ್ನು ಮಾಡಲಿದ್ದೇನೆ. ‘ರಂಗನಾಯಕ’ ಸೇರಿ ಮೂರು ಸಿನಿಮಾ ಕೆಲಸಗಳ ಕೆಲಸ ನಡೆಯುತ್ತಿದೆ,” ಎಂದರು.

  • Share this:

ನಟ ಜಗ್ಗೆಶ್​ ರಾಘವೇಂದ್ರ ಸ್ವಾಮಿ ಭಕ್ತ. ಹೀಗಾಗಿ ತಮ್ಮ 57ನೇ ಜನ್ಮದಿನವನ್ನು ಅವರು ರಾಯರ ಸನ್ನಿಧಿಯಲ್ಲಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರು ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ನಂತರ ಜಗ್ಗೇಶ್ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕೊರೋನಾ ಭೀತಿ ಭಾರತದಲ್ಲಿ ಹೆಚ್ಚುತ್ತಿದ್ದು, ಈ ಬಗ್ಗೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ, “ಕೊರೋನಾ ಮಾನವ ನಿರ್ಮಿತ ವೈರಾಣು. ನಂಬರ್ ಒನ್ ಸ್ಥಾನಕ್ಕಾಗಿ ಅಮೆರಿಕ, ರಷ್ಯಾ ಹಾಗು ಚೀನಾ ನಡುವೆ ನಡೆದಿರುವ ಬಯೋಲಾಜಿಕಲ್ ವಾರ್. ಪ್ರಕೃತಿ ಆಗಾಗ ಇಂಥ ರೋಗಗಳಿಂದ ಮಾನವನಿಗೆ ಎಚ್ಚರಿಸುತ್ತದೆ. ಹಿಂದಿನ‌ ಶತಮಾನದಲ್ಲಿ ಪ್ಲೇಗ್ ಬಂದಿತ್ತು. ಈಗ ಕೊರೋನಾ ಬಂದಿದೆ. ಕೊರೋನಾ ಬಗ್ಗೆ ಭಯಬೇಡ, ಜಾಗೃತಿಯಿಂದ ಇರಿ,” ಎಂದು ಜಗ್ಗೇಶ್​ ಮನವಿ ಮಾಡಿಕೊಂಡರು.

ಇಂದು ಪುನೀತ್​ 45ನೇ ಜನ್ಮದಿನ. ಹೀಗಾಗಿ ಪುನೀತ್​ ರಾಜ್​ಕುಮಾರ್​ಗೂ ಅವರು ಶುಭಾಶಯ ಕೋರಿದರು.  “ಈ ನಾಡಿನ ಹೆಸರಾಂತ ನಟ, ಹಿರಿಯರ ಮಗ ಪುನೀತ್​ಗೆ ಜನ್ಮದಿನದ ಶುಭಾಶಯ. ರಾಯರು ಪುನೀತ್​ಗೆ ಆರೋಗ್ಯ ನೀಡಲಿ,” ಎಂದರು.

ಇದನ್ನೂ ಓದಿ: ನವರಸ ನಾಯಕನ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿ ನಿಂತಿದೆ ಜಗ್ಗೇಶ್-ಪರಿಮಳ ನಿಲಯ

ಸಿನಿಮಾ ಬಗ್ಗೆ ಮಾತನಾಡಿದ ಜಗ್ಗೇಶ್​, “ಈ ವರ್ಷ ನಾನು ಹಲವಾರು ಚಿತ್ರಗಳನ್ನು ಮಾಡಲಿದ್ದೇನೆ. ‘ರಂಗನಾಯಕ’ ಸೇರಿ ಮೂರು ಸಿನಿಮಾ ಕೆಲಸಗಳ ಕೆಲಸ ನಡೆಯುತ್ತಿದೆ,” ಎಂದರು.

ಪಾಪು ನಿಧನಕ್ಕೆ ಸಂತಾಪ

ನಿನ್ನೆ ಸಾಹಿತಿ ಪಾಟೀಲ್​ ಪುಟ್ಟಪ್ಪ ನಿಧನ ಹೊಂದಿದ್ದರು. ಈ ಬಗ್ಗೆ ಜಗ್ಗೇಶ್​ ಸಂತಾಪ ಸೂಚಿಸಿದ್ದಾರೆ. “102 ವರ್ಷ ಈ ನಾಡು ನುಡಿಗಾಗಿ ಪಾಟೀಲ್​ ಪುಟ್ಟಪ್ಪ ಹೋರಾಟ ಮಾಡಿದ್ದರು. ಅವರು ವಿಶ್ವೇಶ್ವರಯ್ಯ ಅವರಂತೆ ಈ ನಾಡಿಗಾಗಿ ಶ್ರಮಿಸಿದವರು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ,” ಎಂದರು.

First published: