Imran Khan: ಜೂಹಿ ಚಾವ್ಲಾಗೆ 6ನೇ ವಯಸ್ಸಿನಲ್ಲೆ ಇಮ್ರಾನ್ ಖಾನ್ ಪ್ರಪೋಸ್ ಮಾಡಿದ್ದರಂತೆ..!

ನಟಿ ಜೂಹಿ ಅವರು ತಮ್ಮ ಟ್ವೀಟ್‌ನಲ್ಲಿ "ಇಮ್ರಾನ್ ಅವರು 6 ವರ್ಷದವನಾಗಿದ್ದಾಗ ನನಗೆ ಪ್ರಪೋಸ್ ಮಾಡಿದ್ದರು, ಅವರಿಗೆ ಒಳ್ಳೆಯದನ್ನು ಆಯ್ಕೆ ಮಾಡುವ ಗುಣ ಅವರಿಗೆ ಬಾಲ್ಯದಿಂದಲೇ ಇದೆ ಎಂದಿದ್ದಾರೆ.

ಇಮ್ರಾನ್ ಖಾನ್, ಜೂಹಿ ಚಾವ್ಲಾ

ಇಮ್ರಾನ್ ಖಾನ್, ಜೂಹಿ ಚಾವ್ಲಾ

  • Share this:
ಬಾಲಿವುಡ್ ನಟಿ ಜೆನಿಲಿಯಾ ಡಿ'ಸೋಜಾ (Bollywood actress Genelia D'Souza) ಅವರೊಟ್ಟಿಗೆ ‘ಜಾನೇ ತೂ.. ಯಾ ಜಾನೆ ನಾ’ ಹಿಂದಿ ಚಲನಚಿತ್ರದಲ್ಲಿ ನಟಿಸುವುದರ ಮೂಲಕ ಹಿಂದಿ ಚಲನಚಿತ್ರೋದ್ಯಮಕ್ಕೆ(Hindi Film Industry) ಎಂಟ್ರಿ ನೀಡಿದ ನಟ ಇಮ್ರಾನ್ ಖಾನ್ (Actor Imran Khan) ನಿನ್ನೆಯಷ್ಟೇ ಅವರ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. 2008ರಲ್ಲಿ ಬಿಡುಗಡೆಯಾದ ಅವರ ಮೊದಲ ಚಿತ್ರದಲ್ಲಿನ ನಟನೆಯಿಂದಲೇ ಪ್ರೇಕ್ಷಕರ ಮನ ಗೆದ್ದ ನಟ ಇವರು ಎಂದರೆ ತಪ್ಪಾಗುವುದಿಲ್ಲ.‘ಮೇರೆ ಬ್ರದರ್ ಕಿ ದುಲ್ಹನ್’ ಚಿತ್ರದ ಈ ನಟನಿಗೆ ನಿನ್ನೆ ಎಂದರೆ ಜನವರಿ 13, ಗುರುವಾರದಂದು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ವಿಶೇಷ ದಿನದಂದು ಶುಭ ಹಾರೈಸಿದ್ದಾರೆ. ಇಷ್ಟೆಲ್ಲಾ ಅಭಿಮಾನಿಗಳ ಶುಭ ಹಾರೈಕೆಗಳ ಮತ್ತು ಶುಭಾಶಯಗಳ ಪೋಸ್ಟ್‌ಗಳ ನಡುವೆ ಒಂದು ಪೋಸ್ಟ್ ಮಾತ್ರ ಇವರ ಬಾಲ್ಯದಲ್ಲಿ(Childhood) ನಡೆದ ಒಂದು ಘಟನೆಯ ಬಗ್ಗೆ ನಮಗೆ ತಿಳಿಸುತ್ತದೆ ಎಂದು ಹೇಳಬಹುದು. ಅದೇನಪ್ಪಾ ಅಂತಹ ಪೋಸ್ಟ್, ಅದರಲ್ಲಿ ಅಂತಹದ್ದೇನಿದೆ ಎಂದು ನಿಮಗೆ ಕುತೂಹಲ ಆಗುವುದು ಸಹಜ.

ಜೂಹಿ ಶುಭಾಶಯ
ಇಲ್ಲೊಬ್ಬ ಬಾಲಿವುಡ್ ನಟಿ ಇವರ ಬಾಲ್ಯದಲ್ಲಿ ಇವರು ಯಾರಿಗೆ ಪ್ರಪೋಸ್ ಮಾಡಿದ್ದರು ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ನೋಡಿ. ನಟ ಇಮ್ರಾನ್ ಖಾನ್ ಅವರು ತಮ್ಮ 6ನೇ ವಯಸ್ಸಿನಲ್ಲಿಯೇ ಹೆಸರಾಂತ ನಟಿಯನ್ನು ಪ್ರಪೋಸ್ ಮಾಡಿದ್ದರಂತೆ ಎಂದು ಖುದ್ದು ಆ ನಟಿಯೇ ಹೇಳಿಕೊಂಡಿದ್ದಾರೆ.

ಸರಿ, ಹಾಗಾದರೆ ಆ ನಟಿ ಯಾರು ಅಂತ ತಿಳಿದುಕೊಳ್ಳಲು ನಿಮಗೆ ಕುತೂಹಲ ಜಾಸ್ತಿ ಆಗಿರಬೇಕಲ್ಲವೇ..? ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ಖುದ್ದು ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ನಟ ಇಮ್ರಾನ್ ಖಾನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. ಜೂಹಿ ತನ್ನ ಟ್ವೀಟ್‌ನಲ್ಲಿ, ನಟ ಇಮ್ರಾನ್ ಖಾನ್‌ ಅವರನ್ನು ತನ್ನ ಕಿರಿಯ ಸೂಟರ್ ಎಂದು ಕರೆದಿದ್ದಾರೆ.

ಇದನ್ನೂ ಓದಿ: Juhi Chawla Family: ಪ್ರೇಮಲೋಕದ ಹುಡುಗಿ ಜೂಹಿ ಚಾವ್ಲಾ ರಿಯಲ್​ ಲೈಫ್​ ಹೀರೋ ಇವರೇ..!

ಹ್ಯಾಪಿ ಹ್ಯಾಪಿ ಬರ್ತ್ ಡೇ
ನಟಿ ಜೂಹಿ ಅವರು ತಮ್ಮ ಟ್ವೀಟ್‌ನಲ್ಲಿ "ಇಮ್ರಾನ್ ಅವರು 6 ವರ್ಷದವನಾಗಿದ್ದಾಗ ನನಗೆ ಪ್ರಪೋಸ್ ಮಾಡಿದ್ದರು, ಅವರಿಗೆ ಒಳ್ಳೆಯದನ್ನು ಆಯ್ಕೆ ಮಾಡುವ ಗುಣ ಅವರಿಗೆ ಬಾಲ್ಯದಿಂದಲೇ ಇದೆ. ನನ್ನ ಕಿರಿಯ ಸೂಟರ್‌ಗೆ ಹ್ಯಾಪಿ ಹ್ಯಾಪಿ ಬರ್ತ್ ಡೇ” ಎಂದು ಬರೆದಿದ್ದಾರೆ. ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ, ಇಮ್ರಾನ್ ತಮ್ಮ ಪತ್ರಿಕಾ ಸಂವಾದವೊಂದರಲ್ಲಿ ತನಗೆ ಈ ಪ್ರೇಮ ಕಥೆಗಳೆಂದರೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.


View this post on Instagram


A post shared by Juhi Chawla (@iamjuhichawla)


"ನಾನು ಬೆಳೆಯುತ್ತಿರುವಾಗ ಜೂಹಿ ಚಾವ್ಲಾ ಅವರ ಮೇಲೆ ಭಾರಿ ಮೋಹವನ್ನು ಹೊಂದಿದ್ದೆ, ಅವರು ನಟಿಸಿದ್ದಂತಹ ‘ಖಯಾಮತ್ ಸೆ ಖಯಾಮತ್ ತಕ್’ ಚಿತ್ರದಲ್ಲಿ ಅವರನ್ನು ನೋಡಿ ಅವರನ್ನು ಪ್ರೀತಿಸಲು ಶುರು ಮಾಡಿದೆ ಮತ್ತು ನಾನು ನಿಜವಾಗಿಯೂ ಬಾಲ್ಯದಲ್ಲಿಯೇ ಅವರಿಗೆ ಪ್ರಪೋಸ್ ಮಾಡಿದ್ದೆ” ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: Juhi Chawla: ಟ್ರೋಲ್​ ಮಾಡಿದವರಿಗೆ ನಗುತ್ತಲೇ ಉತ್ತರ ಕೊಟ್ಟ ನಟಿ ಜೂಹಿ ಚಾವ್ಲಾ

ನಟನೆಯಲ್ಲೂ ಸೈ
ಇನ್ನೊಬ್ಬ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಹ ಸಾಮಾಜಿಕ ಮಾಧ್ಯಮದಲ್ಲಿ ನಟ ಇಮ್ರಾನ್ ಖಾನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಜನ್ಮದಿನದ ಶುಭಾಶಯಗಳು ಇಮ್ರಾನ್! ನಿಮಗೆ ಯಾವಾಗಲೂ ಜನರಿಂದ ಪ್ರೀತಿ ಸಿಗಲಿ” ಎಂದು ಬರೆದಿದ್ದಾರೆ. ಜಾನೇ ತೂ.. ಯಾ ಜಾನೆ ನಾ’ ಅಂತಹ ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ಇಮ್ರಾನ್ ನಂತರದಲ್ಲಿ ಕಿಡ್ನ್ಯಾಪ್‌, ಬ್ರೇಕ್ ಕೆ ಬಾದ್, ಮೇರೆ ಬ್ರದರ್ ಕಿ ದುಲ್ಹನ್ ಚಿತ್ರಗಳಲ್ಲಿ ನಟಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಟಿ ಕಂಗನಾ ರನೌತ್ ಒಟ್ಟಿಗೆ 2015 ರಲ್ಲಿ ಬಿಡುಗಡೆಯಾದ ‘ಕಟ್ಟಿ ಬಟ್ಟಿ’ ಯಲ್ಲಿ ನಟಿಸಿ ನಟನೆಯಿಂದ ತುಂಬಾ ದೊಡ್ಡ ವಿರಾಮವನ್ನು ತೆಗೆದುಕೊಂಡಿದ್ದಾರೆ.
Published by:vanithasanjevani vanithasanjevani
First published: