ಬಾಲಿವುಡ್ ಹಂಕ್ ಹೃತಿಕ್ ರೋಷನ್ (Hrithik Roshan) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹ ಹಾಗೂ ಫ್ಯಾಷನ್ ಸೆನ್ಸ್ಗೆ ಹೆಸರಾಗಿರುವ ಹೃತಿಕ್ ರೋಷನ್ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ತಾರೆಯರು ಹಾಗೂ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಇನ್ನು ಬಹಳ ಸಮಯದಿಂದ ಹರಿದಾಡುತ್ತಿದ್ದ ಹೃತಿಕ್ ಅವರ ಹೊಸ ಸಿನಿಮಾ ಕುರಿತಾದ ಸುದ್ದಿಯೊಂದು ಈಗ ನಿಜವಾಗಿದೆ. ಹೃತಿಕ್ ರೋಷನ್ ಮತ್ತೊಂದು ದೇಶಭಕ್ತಿ ಸಿನಿಮಾದಲ್ಲಿ ನಟಿಸಲಿದ್ದು, ದೀಪಿಕಾ ಆ ಚಿತ್ರ ನಾಯಕಿ ಎಂದು ಹೇಳಲಾಗುತ್ತಿತ್ತು. ಈಗ ಈ ಚಿತ್ರದ ಕುರಿತಾದ ಅಪ್ಡೇಟ್ ಅನ್ನು ನಟ ಹೃತಿಕ್ ರೋಷನ್ ತಮ್ಮ ಇನ್ಸ್ಟಾಗ್ರಾಂ ಮೂಲಕ ನೀಡಿದ್ದಾರೆ. ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಇದೇ ಮೊದಲ ಸಲ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಜೋಡಿಯನ್ನು ಜೋಡಿ ಖುಷಿ ಪಡಲು ಸಿನಿಪ್ರಿಯರೂ ಸಿದ್ಧರಾಗಿದ್ದಾರೆ.
ಹೃತಿಕ್ ಅಭಿನಯಿಸಲಿರುವ ಹೊಸ ಸಿನಿಮಾ ಫೈಟರ್(Fighter). ಈ ಚಿತ್ರದ ಟೈಟಲ್ ವಿಡಿಯೋವನ್ನು ಹೃತಿಕ್ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ (Deepika Padukone) ನಟಿಸುತ್ತಿದ್ದಾರೆ. ಇಲ್ಲಿದೆ ಈ ಸಿನಿಮಾದ ಒಂದು ಪುಟ್ಟ ವಿಡಿಯೋ ತುಣುಕು.
ಮಾರ್ ಫ್ಲಿಕ್ಸ್ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಫೈಟರ್ ಚಿತ್ರ ಮುಂದಿನ ವರ್ಷ ಸೆ.30ಕ್ಕೆ ತೆರೆ ಕಾಣಲಿದೆ. ಹೃತಿಕ್ ಅಭಿನಯದ ಹಿಟ್ ಸಿನಿಮಾ ವಾರ್ ಅನ್ನು ನಿರ್ದೇಶಿಸಿದ್ದ ಸಿದ್ಧಾರ್ಥ್ ಆನಂದ್ ಅವರೇ ಫೈಟರ್ಗೂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
![bollywood Super Hero Hrithik Roshan,Hrithik Roshan,Hrithik Roshan Hollywood Project,Hrithik Roshan krish series,Hrithik Roshan krish,Hrithik Roshan krishKrrish movie,Krrish twitter,Krrish instagram,Krrish movies,bollywood,Hollywood, ಹೃತಿಕ್ ರೋಷನ್, ಹಾಲಿವುಡ್, ಬಾಲಿವುಡ್, ಸ್ಪೈ ಪಾತ್ರದಲ್ಲಿ ಹೃತಿಕ್ ರೋಷನ್]()
ಹೃತಿಕ್ ರೋಷನ್
ಇನ್ನು ಹೃತಿಕ್ ಅವರ ಹುಟ್ಟುಹಬ್ಬಕ್ಕೆ ವಿಚ್ಛೇದಿತ ಪತ್ನಿ ಸುಸೈನ್ ಖಾನ್ ಸಹ ವಿಶ್ ಮಾಡಿದ್ದಾರೆ. ಜೊತೆಗೆ ಮಕ್ಕಳು ಹಾಗೂ ಹೃತಿಕ್ ಇರುವ ಕ್ಯೂಟ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಹೃತಿಕ್ ರೋಷನ್ ಅವರ ಹುಟ್ಟುಹಬ್ಬಕ್ಕೆ ಬಾಲಿವುಡ್ ತಾರೆಯರೂ ಸಹ ಶುಭ ಕೋರುತ್ತಿದ್ದಾರೆ.
ಹೃತಿಕ್ ರೋಷನ್ ಕ್ರಿಷ್ 4 ಹಾಗೂ ಧೂಮ್ ಸರಣಿಯ 4ನೇ ಸಿನಿಮಾದಲ್ಲೂ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ವಾರ್ ಚಿತ್ರದ ಸೀಕ್ವಲ್ ಹಾಗೂ ಒಂದು ಹಾಲಿವುಡ್ ಚಿತ್ರವೂ ಹೃತಿಕ್ ಕೈಲಿದೆಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ