• Home
  • »
  • News
  • »
  • entertainment
  • »
  • Hrithik Roshan Birthday: ಗ್ರೀಕ್ ಗಾಡ್​​ಗೆ 49, ಹೃತಿಕ್ ರೋಷನ್​ನ ಟಾಪ್ ಡ್ಯಾನ್ಸ್​ಗಳಿವು

Hrithik Roshan Birthday: ಗ್ರೀಕ್ ಗಾಡ್​​ಗೆ 49, ಹೃತಿಕ್ ರೋಷನ್​ನ ಟಾಪ್ ಡ್ಯಾನ್ಸ್​ಗಳಿವು

 ನಟ ಹೃತಿಕ್ ರೋಷನ್

ನಟ ಹೃತಿಕ್ ರೋಷನ್

ಹೃತಿಕ್ ರೋಷನ್ ಬರ್ತ್​ಡೇ. ಬಾಲಿವುಡ್ ಗ್ರೀಕ್ ಗಾಡ್​ಗೆ 49 ವರ್ಷ ಆಗಿದೆ. ನಟನ ಟಾಪ್ ಡ್ಯಾನ್ಸ್ ನಂಬರ್ಸ್ ಯಾವುವು ಗೊತ್ತೇ?

  • News18 Kannada
  • Last Updated :
  • Bangalore, India
  • Share this:

ಬಾಲಿವುಡ್‌ನಲ್ಲಿ 'ಗ್ರೀಕ್ ದೇವರು' (Greek God) ಎಂಬ ಬಿರುದು ಪಡೆದಿರುವ ಹೃತಿಕ್ ರೋಷನ್ (Hrithik Roshan) ಅವರಿಗೆ ಇಂದು ಬರ್ತ್​ಡೇ ಸಂಭ್ರಮ. ಹಿಂದಿ ಚಿತ್ರರಂಗದ ಅತ್ಯುತ್ತಮ ನಟರಲ್ಲಿ (Actor) ಒಬ್ಬರೆನಿಸಿಕೊಂಡಿರೋ ಹೃತಿಕ್ ರೋಷನ್​ಗೆ 49 ವರ್ಷ ವಯಸ್ಸಾಗಿದೆ. ಅವರು 2000 ರಲ್ಲಿ ಕಹೋ ನಾ ಪ್ಯಾರ್ ಹೈ ಚಿತ್ರದ ಮೂಲಕ ತಮ್ಮ ಸಿನಿಮಾ ಜರ್ನಿ ಆರಂಭಿಸಿದರು. ಡಬಲ್ ಆ್ಯಕ್ಟಿಂಗ್ ಮತ್ತು ಸ್ಟಾರ್ ಡ್ಯಾನ್ಸ್ ನಂಬರ್ಸ್​ಗಳಲ್ಲಿ ತಮ್ಮ ಪರ್ಫಾಮೆನ್ಸ್​ನಿಂದ ಪ್ರೇಕ್ಷಕರ ಪ್ರೀತಿ ಗಳಿಸಿದ್ದಾರೆ.


ಹಲವು ವರ್ಷಗಳಲ್ಲಿ ನಟನು ತನ್ನ ನಟನೆಯಿಂದ ಮಾತ್ರವಲ್ಲದೆ ತನ್ನ ನೃತ್ಯದ ಮೂಲಕವೂ ಪ್ರೇಕ್ಷಕರನ್ನು ಮತ್ತು ಚಲನಚಿತ್ರ ವಿಮರ್ಶಕರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. ಅವರು ಅನೇಕ ಸ್ಟಾರ್ ನಟರಿಗೆ ಹಾಗೂ ಪ್ರಸ್ತುತ ಯೂತ್ ಜನರೇಷನ್​ಗೆ ಡ್ಯಾನ್ಸ್ ಐಕಾನ್ ಆಗಿದ್ದಾರೆ. ನಟ ಟೈಗರ್ ಶ್ರಾಫ್ ಕೂಡ ಅವರನ್ನು ರೋಲ್ ಮಾಡೆಲ್ ಆಗಿ ಪರಿಗಣಿಸುತ್ತಾರೆ.




ಏಕ್ ಪಾಲ್ ಕಾ ಜೀನಾ (ಕಹೋ ನಾ... ಪ್ಯಾರ್ ಹೈ)


ಅವರ ತಂದೆ ರಾಕೇಶ್ ರೋಷನ್ ನಿರ್ದೇಶಿಸಿದ ಅವರ ಡಿಬಟ್ ಮೂವಿ, ಕಹೋ ನಾ... ಪ್ಯಾರ್ ಹೈ, ಹೃತಿಕ್ ಅವರ ಕಿಲ್ಲರ್ ಡ್ಯಾನ್ಸ್ ಮೂವ್ಸ್​  ಮೂಲಕ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದರು. ಈ ಹಾಡು ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಇದರ ಸಿಗ್ನೇಚರ್ ಸ್ಟೆಪ್ ಈಗಲೂ ಅನೇಕರಿಗೆ ಅಚ್ಚುಮೆಚ್ಚಿನದು. ಲಕ್ಕಿ ಅಲಿ ಅವರ ಮಾಂತ್ರಿಕ ಧ್ವನಿ ಮತ್ತು ಫರಾ ಖಾನ್ ಅವರ ಅತ್ಯುತ್ತಮ ನೃತ್ಯ ಸಂಯೋಜನೆಯಲ್ಲಿ ಹೃತಿಕ್ ಸಖತ್ ಡ್ಯಾನ್ಸ್ ಮೂಲಕ ಮಿಂಚಿದರು.




ಮೈನ್ ಐಸಾ ಕ್ಯೂನ್ ಹೂನ್ (ಲಕ್ಷ್ಯ)


ಫರ್ಹಾನ್ ಅಖ್ತರ್ ಮೆಚ್ಚುಗೆ ಪಡೆದ ಚಿತ್ರ ಲಕ್ಷ್ಯ (2004)ದಲ್ಲಿ ಹೃತಿಕ್ ರೋಷನ್ ಬೆಸ್ಟ್ ಆಗಿ ಕಂಡುಬಂದರು. ರೋಷನ್ ಶಾನ್ ಹಾಡಿರುವ ಮೈನ್ ಐಸಾ ಕ್ಯೂನ್ ಹೂನ್‌ ನಲ್ಲಿ ಮಿಂಚಿದ್ದಾರೆ. ಡ್ಯಾನ್ಸ್ ಲೆಜೆಂಡ್ ಪ್ರಭುದೇವ ಅವರ ನೃತ್ಯ ಸಂಯೋಜನೆಯ ಔಟ್ ಆಫ್ ದಿ ಬಾಕ್ಸ್. ಈ ನೃತ್ಯವು ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಪ್ರಭುದೇವ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು.




ಧೂಮ್ ಅಗೈನ್ (ಧೂಮ್ 2)


ಹೃತಿಕ್ ರೋಷನ್ ಅವರು ಧೂಮ್ 2 ಚಿತ್ರದಲ್ಲಿ ಅವರ 'ಗ್ರೀಕ್ ಗಾಡ್' ಮೈಕಟ್ಟು ತೋರಿಸಿ ಯುವತಿಯರ ನಿದ್ದೆ ಕೆಡಿಸಿದರು. ಶಿಯಾಮಕ್ ದಾವರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರ ಡ್ಯಾನ್ಸ್ ಎಲ್ಲರಿಗೂ ಇಷ್ಟವಾಯಿತು.




ಬ್ಯಾಂಗ್ ಬ್ಯಾಂಗ್ (ಬ್ಯಾಂಗ್ ಬ್ಯಾಂಗ್)


ಹೃತಿಕ್ ರೋಷನ್ ಕತ್ರಿನಾ ಕೈಫ್ ಜೊತೆಗಿನ ಕೆಮೆಸ್ಟ್ರಿ ಬ್ಯಾಂಗ್ ಬ್ಯಾಂಗ್ ಟೈಟಲ್ ಟ್ರ್ಯಾಕ್‌ನಲ್ಲಿ  ಕಂಪ್ಲೀಟ್ ಆಗಿ ಸಿಂಕ್ ಆಗಿದೆ. ಇದಕ್ಕೆ ಬಾಸ್ಕೋ-ಸೀಸರ್ ಅವರು ನೃತ್ಯ ಸಂಯೋಜನೆ ಮಾಡಿದರು. ಅವರು ಬಲ್ಲಾಡ್, ಹಿಪ್-ಹಾಪ್ ಅನ್ನು ಬೆರೆಸಿದರು. ಪಾಪ್ ರಾಜ ಮೈಕೆಲ್ ಜಾಕ್ಸನ್ ಅವರಿಗೆ ಗೌರವ ಸಲ್ಲಿಸಿದರು.


ಇದನ್ನೂ ಓದಿ: Rashmika Mandanna: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾತಿಗೆ ರಶ್ಮಿಕಾ ಮಂದಣ್ಣ ಬದಲಾದ್ರಾ?




ಘುಂಗ್ರೂ (ವಾರ್)


ಹೃತಿಕ್ ರೋಷನ್ ಮತ್ತು ವಾಣಿ ಕಪೂರ್ ಅವರ ಡ್ಯಾನ್ಸ್ ಘುಂಗ್ರೂ  ಖ್ಯಾತಿಯನ್ನು ಗಳಿಸಿತು.




ಇದು ಯುವ ಜನರ ನೆಚ್ಚಿನ ಡ್ಯಾನ್ಸ್ ನಂಬರ್ ಎನ್ನುವುದರಲ್ಲಿ ನೋ ಡೌಟ್. ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್​ನಲ್ಲಿ ಉಳಿದುಕೊಂಡಿರುವ ಹಾಡಿದು.

Published by:Divya D
First published: