Golden Star Ganesh: ಟ್ವಿಟ್ಟರ್​ನಲ್ಲಿ ಟ್ರೆಂಡ್​ ಮಾಡುವ ಮೂಲಕ ನಟ ಗಣೇಶ್​​​​ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

Happy Birthday Ganesh: ಕಳೆದ ವರ್ಷ ನಟ ಗಣೇಶ್​ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಗಣೇಶ್​ ಅವರ ತಂದೆ ಕಿಶನ್​​ ಅಗಲಿಕೆಯಿಂದ ಗಣಿ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಮನಸ್ಸು ಮಾಡಿಲ್ಲ. ಈ ವರ್ಷ ಕೊರೋನಾ ಸಂಕಷ್ಟವನ್ನು ಅರಿತು ಹುಟ್ಟು ಹಬ್ಬವನ್ನು ಆಚರಿಸುತ್ತಿಲ್ಲ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಅದರಂತೆ ಎಲ್ಲಾ ಅಭಿಮಾನಿಗಳಿಗೆ ನೀವೆಲ್ಲಿದ್ದೀರೋ ಅಲ್ಲಿಂದಲೇ ಶುಭಾಶಯ ಕೋರಿ ಎಂದು ಹೇಳಿದ್ದರು. ಅದರಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಗೋಲ್ಡನ್​ ಗಣಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ.

news18-kannada
Updated:July 2, 2020, 5:43 PM IST
Golden Star Ganesh: ಟ್ವಿಟ್ಟರ್​ನಲ್ಲಿ ಟ್ರೆಂಡ್​ ಮಾಡುವ ಮೂಲಕ ನಟ ಗಣೇಶ್​​​​ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು
ನಟ ಗಣೇಶ್
  • Share this:
ಗೋಲ್ಡನ್​ ಸ್ಟಾರ್​ ಗಣೇಶ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ನಟ ಗಣೇಶ್​ ಅವರ ಫೋಟೋ ಹಾಕಿಕೊಂಡು ಬರ್ತ್​​​ ಡೇಗೆ ವಿಶ್​ ಮಾಡುತ್ತಿದ್ದಾರೆ. ಟ್ವಿಟ್ಟರ್​ನಲ್ಲಿ ಹ್ಯಾಪಿ ಬತ್​​​ ಡೇ ಗಣೇಶ್​ ಎಂಬ ಹ್ಯಾಶ್​​ಟ್ಯಾಗ್​ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ. 

ಕಳೆದ ವರ್ಷ ನಟ ಗಣೇಶ್​ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಗಣೇಶ್​ ಅವರ ತಂದೆ ಕಿಶನ್​​ ಅಗಲಿಕೆಯಿಂದ ಗಣಿ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಮನಸ್ಸು ಮಾಡಿಲ್ಲ. ಈ ವರ್ಷ ಕೊರೋನಾ ಸಂಕಷ್ಟವನ್ನು ಅರಿತು ಹುಟ್ಟು ಹಬ್ಬವನ್ನು ಆಚರಿಸುತ್ತಿಲ್ಲ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಅದರಂತೆ ಎಲ್ಲಾ ಅಭಿಮಾನಿಗಳಗೆ ನೀವೆಲ್ಲಿದ್ದೀರೋ ಅಲ್ಲಿಂದಲೇ ಶುಭಾಶಯ ಕೋರಿ ಎಂದು ಹೇಳಿದ್ದರು. ಅದರಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಗೋಲ್ಡನ್​ ಗಣಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ. ಟ್ವಿಟ್ಟರ್​ನಲ್ಲಿ #HappyBithdayGanesh ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ.



ಇನ್ನು ನಟ ಗಣೇಶ್​ ಅವರ ಸಿನಿಮಾ ವಿಚಾರಕ್ಕೆ ಬರೋದಾದ್ರೆ ನಿರ್ದೇಶಕ ಸಿಂಪಲ್​ ಸುನಿ ನಿರ್ದೇಶನದ ‘ಸಖತ್’​, ‘ದಿ ಸ್ಟೋರಿ ಆಫ್​​ ರಾಯಗಢ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಯೋಗರಾಜ್​ ಭಟ್​​ ‘ಗಾಳಿಪಟ-2’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.  ಪ್ರಶಾಂತ್​ ರಾಜ್​ ಅವರ ‘ಪ್ರೊಡಕ್ಷನ್​ ನಂ 7’ ಮತ್ತು ಮಹೇಶ್​ ಗೌಡ ನಿರ್ದೇಶನದ ‘ತ್ರಿಬಲ್​ ರೈಡಿಂಗ್’​​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಗೋಲ್ಡನ್​ ಗಣಿ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕೊರೋನಾ ಲಾಕ್​ಡೌನ್​ ಮುಗಿದ ನಂತರ ಒಂದೊಂದೇ ಸಿನಿಮಾಗಳು ತೆರೆ ಮೇಲೆ ಬರಲಿದೆ.

’ಬೆಲ್​ ಬಾಟಂ’ ಸಿನಿಮಾ ಖ್ಯಾತಿಯ ಕಲಾ ನಿರ್ದೇಶಕ ಲೋಕೇಶ್​ ಆತ್ಮಹತ್ಯೆ!

ಭಜರಂಗಿ ಶಿವಣ್ಣನ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗಲಿದೆ ಬಿಗ್​​ ಸರ್​​ಪ್ರೈಸ್​​!
First published: July 2, 2020, 5:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading