Happy Birthday Ganesh: ತ್ರಿಬಲ್​ ರೈಡಿಂಗ್​ ಟೀಸರ್ ಜೊತೆಗೆ ರಿಲೀಸ್​ ಆಯ್ತು ಗಣೇಶ್​ ಅಭಿನಯದ ಹೊಸ ಸಿನಿಮಾದ ಪೋಸ್ಟರ್​

ಗಣೇಶ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ತ್ರಿಬಲ್ ರೈಡಿಂಗ್​. ಮಹೇಶ್ ಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಟೀಸರ್​ ಅನ್ನು ಗಣೇಶ್ ಅವರ ಹುಟ್ಟುಹಬ್ಬಕ್ಕೆಂದು ವಿಶೇಷವಾಗಿ ರಿಲೀಸ್​ ಮಾಡಲಾಗಿದೆ.

ಗಣೇಶ್ ಅಭಿಮಾನಿಗಳಿಗೆ ಸಿಕ್ತು ಸರ್ಪ್ರೈಸ್​

ಗಣೇಶ್ ಅಭಿಮಾನಿಗಳಿಗೆ ಸಿಕ್ತು ಸರ್ಪ್ರೈಸ್​

  • Share this:
ಮಳೆ ಹುಡುಗ ಗಣೇಶ್​ ಅವರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಾಕಷ್ಟು ಸರ್ಪ್ರೈಸ್​ಗಳು ಸಿಕ್ಕಿವೆ. ಇನ್ನು ಗೋಲ್ಡನ್​ ಸ್ಟಾರ್ ಗಣೇಶ್​ 41ನೇ ವಸಂತಕ್ಕೆ ಕಾಲಿಟ್ಟಿದ್ದು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಗಣೇಶ್​ ಅವರ ಹುಟ್ಟುಹಬ್ಬವನ್ನು ಅವರ ಮನೆಯಲ್ಲೇ ಸರಳವಾಗಿ ಕೇಕ್​ ಕತ್ತರಿಸುವ ಮೂಲಕ ಆಚರಿಸಲಾಗಿದೆ. ಹೌದು, ಗೋಲ್ಡನ್​ ಕ್ವೀನ್​ ಅಮೂಲ್ಯಾ ಹಾಗೂ ಅವರ ಪತಿ ಜಗದೀಶ್​ ಚಂದ್ರ ಅವರು ಗಣೇಶ್​ ಅವರ ಮನೆಗೆ ಹೋಗಿ ಬರ್ತ್​ ಡೇ ಸೆಲಬ್ರೇಟ್ ಮಾಡಿದ್ದಾರೆ. ಈ ಬರ್ತ್​ ಡೇಯಲ್ಲಿ ಗಣೇಶ್ ಅವರ ಮಡದಿ ಶಿಲ್ಪಾ ಗಣೇಶ್​, ಪ್ರೀತಮ್​ ಗುಬ್ಬಿ ಸಹ ಭಾಗಿಯಾಗಿದ್ದರು. ಇನ್ನು ನಟನ ಹುಟ್ಟುಹಬ್ಬಕ್ಕೆ ನಿರ್ದೇಶಕರು, ನಟ-ನಟಿಯರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ಶುಭ ಕೋರುತ್ತಿದ್ದಾರೆ. ಹುಟ್ಟುಹಬ್ಬದ ಉಡುಗೊರೆಯಾಗಿ ಹೊಸ ಸಿನಿಮಾಗಳ ಟೀಸರ್​, ಮೋಷನ್  ಪೋಸ್ಟರ್​ ಹಾಗೂ ಹೊಸ ಚಿತ್ರದ ಪ್ರಕಟಣೆ ಸಹ ಆಗಿದೆ. 

ಗಣೇಶ್​ ಹುಟ್ಟುಹಬ್ಬಕ್ಕೆಂದು ಸಖತ್​ ಚಿತ್ರತಂಡ, ಗಾಳಿಪಟ 2, ತ್ರಿಬಲ್​ ರೈಡಿಂಗ್ ಕಡೆಯಿಂದ ಸಖತ್​ ಉಡುಗೊರೆ ಸಿಕ್ಕಿದೆ. ಯೋಗರಾಜ್​ ಭಟ್​ ನಿರ್ದೇಶನ ಗಾಳಿಪಟ 2 ಸಿನಿಮಾದ ಮೋಷನ್​ ಪೋಸ್ಟರ್​ ಅನ್ನು ರಿಲೀಸ್​ ಮಾಡಲಾಗಿದೆ. ಇನ್ನು ಸಖತ್​ ಚಿತ್ರತಂಡ ಗಣೇಶ್​ ಅವರ ಹೊಸ ಪೋಸ್ಟರ್​ ಅನ್ನು ಬಿಡುಗಡೆ ಮಾಡಿದೆ.



ಗಾಳಿಪಟ 2 ಸಿನಿಮಾದಲ್ಲಿ ದಿಗಂತ್​, ಪವನ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ನಟಿಸಿದ್ದಾರೆ. ಯೋಗರಾಜ್​ ಭಟ್​ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕೊರೋನಾ 2ನೇ ಅಲೆ ಲಾಕ್​ಡೌನ್​ ಆರಂಭವಾಗುವ ಮುನ್ನ ಚಿತ್ರತಂಡ ವಿದೇಶಕ್ಕೆ ಹೋಗಿ ಶೂಟಿಂಗ್​ ಮುಗಿಸಿಕೊಂಡು ಬಂದಿತ್ತು.



ಸಖತ್ ಸಿನಿಮಾದಲ್ಲಿ ಕಣ್ಣು ಕಾಣದ ವ್ಯಕ್ತಿಯ ಪಾತ್ರದಲ್ಲಿ ಗಣೇಶ್​ ನಟಿಸುತ್ತಿದ್ದಾರೆ. ಈ ಸಿನಿಮಾದ ನಿರ್ದೇಶಕ ಸಿಂಪಲ್​ ಸುನಿ ಗಣೇಶ್​ ಅವರಿಗೆ ತಮ್ಮದೇ ಆದ ರೀತಿಯಲ್ಲಿ ಸಖತ್ತಾಗಿ ವಿಶ್​ ಮಾಡಿದ್ದಾರೆ. ಚಿತ್ರದ ಪೋಸ್ಟರ್​ ಹಂಚಿಕೊಂಡಿರುವ ನಿರ್ದೇಶಕ ಸಿನಿಮಾ ರೈತರು ಕಾದ ಮಳೆ... ಹೊನ್ನಿನ ನಕ್ಷತ್ರದ ಬೆಳೆ ... ಚೆಲುವಿನ ಹೂ ನ ಪಕಳೆ... ಕರ್ನಾಟಕದ ಮಾತಿನ ಕಹಳೆ... ಗಣೇಶ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Bigg Boss 8 Kannada: ಸಿನಿಮಾ ಆಗಲಿದೆ ಅರವಿಂದ್​-ದಿವ್ಯಾ ಉರುಡುಗ ಲವ್​ ಸ್ಟೋರಿ: ಅರ್ಧ ಗಂಟೆಯಲ್ಲಿ ಕಥೆ ರೆಡಿಯಂತೆ..!

ಗಣೇಶ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ತ್ರಿಬಲ್ ರೈಡಿಂಗ್​. ಮಹೇಶ್ ಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಟೀಸರ್​ ಅನ್ನು ಗಣೇಶ್ ಅವರ ಹುಟ್ಟುಹಬ್ಬಕ್ಕೆಂದು ವಿಶೇಷವಾಗಿ ರಿಲೀಸ್​ ಮಾಡಲಾಗಿದೆ. ಮೇಘನಾ ಶೆಟ್ಟಿ, ರಚನಾ ಇಂದರ್​ ಹಾಗೂ ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.



ಕೆಲವೇ ನಿಮಿಷಗಳ ಹಿಂದೆ ರಿಲೀಸ್ ಆಗಿರುವ ಈ ಟೀಸರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಸ್ಯ, ಆ್ಯಕ್ಷನ್​, ಸಸ್ಪೆನ್ಸ್​ ಎಲ್ಲವೂ ಇದೆ.

ಹೊಸ ಸಿನಿಮಾ ಪ್ರಕಟಣೆ

ಗಣೇಶ್ ಹುಟ್ಟುಹಬ್ಬಕ್ಕೆ ಇಂದು ಹೊಸ ಸಿನಿಮಾ ಪ್ರಕಟಣೆಯಾಗಿದೆ. ಪ್ರೊಡಕ್ಷನ್​ ನಂ 7 ಹೆಸರಲ್ಲಿ ಗಣೇಶ್​ ಅವರ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಸದ್ಯದಲ್ಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಕ್ರೈಂ ಥ್ರಿಲ್ಲರ್​ ಕಥಾಹಂದರ ಹೊಂದಿರುವ ಈ ಹೊಸ ಸಿನಿಮಾಗೆ ನಿರ್ದೇಶಕ ಪ್ರಶಾಂತ್ ರಾಜ್​​ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ.

Ganesh Birthday, Ganesh Birthday photos, Happy Birthday Golden Star Ganesh, Amulya Jagadish Chandra, Jagadish Chandra, Ganesh Birthday Celebration, shilpa Ganesh, ಗಣೇಶ್​ ಹುಟ್ಟುಹಬ್ಬ, ಅಮೂಲ್ಯಾ ಜಗದೀಶ್​, ಶಿಲ್ಪಾ ಗಣೇಶ್​, ಗಣೇಶ್​ ಹುಟ್ಟುಹಬ್ಬದಲ್ಲಿ ಅಮೂಲ್ಯಾ ಜಗದೀಶ್​, ಗೋಲ್ಡನ್​ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಚಿತ್ರಗಳು, Ganesh celebrated his birthday with Amulya and her husband Jagadish Chandra ae
ಪ್ರೊಡಕ್ಷನ್​ ನಂ 7 ಸಿನಿಮಾ


ಪ್ರಶಾಂತ್​ ಹಾಗೂ ಗಣೇಶ್​ ಅವರ ಕಾಂಬಿನೇಶನ್​ನಲ್ಲಿ ಬರುತ್ತಿರುವ ಮೂರನೇ ಚಿತ್ರವಾಗಿದೆ. ಈ ಹಿಂದೆ 2016ರಲ್ಲಿ ಜೂಮ್​ ಹಾಗೂ 2018ರಲ್ಲಿ ಆರೆಂಜ್​ ಸಿನಿಮಾದಲ್ಲಿ ಈ ಜೋಡಿ ಕೆಲಸ ಮಾಡಿತ್ತು.

ಇದನ್ನೂ ಓದಿ: ಗೋಲ್ಡನ್ ಕ್ವೀನ್​ ಅಮೂಲ್ಯಾ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಗೋಲ್ಡನ್ ಸ್ಟಾರ್​ ಗಣೇಶ್

ಇನ್ನು ಗೋಲ್ಡನ್​ ಸ್ಟಾರ್ ಹುಟ್ಟುಹಬ್ಬದಲ್ಲಿ ಅಮೂಲ್ಯಾ ಹಾಗೂ ಅವರ ಪತಿ ಜಗದೀಶ್​ ಭಾಗಿಯಾಗಿದ್ದರು. ಪ್ರೀತಮ್​ ಗುಬ್ಬಿ ಸಹ ಇದರಲ್ಲಿ ಭಾಗಿಯಾಗಿದ್ದು ವಿಶೇಷ. ಹುಟ್ಟುಹಬ್ಬದ ವಿಡಿಯೋ ಇಲ್ಲಿದೆ.

ಗಣೇಶ್​ ಅವರ ಹುಟ್ಟುಹಬ್ಬದ ವಿಡಿಯೋ ಇರುವ ಟ್ವೀಟ್​ ಲಿಂಕ್​​



ಗಣೇಶ್​ ಅವರು ಕೊರೋನಾ ಕಾರಣದಿಂದಾಗಿ ತಮ್ಮ ಹುಟ್ಟುಹಬ್ಬವನ್ನು ಎಂದಿನಂತೆ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ ಹೂ, ಹಣ್ಣು, ಕೇಕ್​ ತಂದು ಬರ್ತ್​ ಡೇ ಆಚರಿಸುತ್ತಿದ್ದ ಅಭಿಮಾನಿಗಳಿಗೂ ಒಂದು ಮನವಿ ಮಾಡಿದ್ದರು. ಹುಟ್ಟಹಬ್ಬ ಆಚರಿಸಲು ಇಟ್ಟಹಣವನ್ನು ಕೊರೋನಾ ಸೋಂಕಿತರಿಗೆ ನೀಡಿ ನೆರವಾಗುವಂತೆ ಮನವಿ ಮಾಡಿದ್ದರು.
Published by:Anitha E
First published: