-ನ್ಯೂಸ್ 18 ಕನ್ನಡ
ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು 30ನೇ ಹುಟ್ಟುಹಬ್ಬದ ಸಂಭ್ರಮ. ಅದ್ಧೂರಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟಿದ್ದ ಧ್ರುವ ಬಹುದ್ದೂರ್ ಗಂಡಾಗಿ ಬಾಕ್ಸಾಫೀಸ್ನ್ನು ಆಳಿದ್ದರು. ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳೊಂದಿಗೆ ಭರ್ಜರಿ ಬರ್ತ್ಡೇ ಆಚರಿಸಿಕೊಳ್ಳುತ್ತಿರುವ ಸರ್ಜಾ ಕುಡಿ ಈಗ ಪೊಗರಿನ ಅಲೆಯಲ್ಲಿದ್ದಾರೆ.
ಮೂರೇ ಮೂರು ಚಿತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಪಟ್ಟಕೇರಿರುವ ಧ್ರುವ ಅವರ ಹುಟ್ಟುಹಬ್ಬದ ಪ್ರಯುಕ್ತ ಪೊಗರು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಖಡಕ್ ಡೈಲಾಗ್ಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ ಧ್ರುವ ಅವರ ಈ ಚಿತ್ರವೂ ಖದರ್ನಿಂದ ಕೂಡಿರಲಿದೆ ಎಂದು ಹೇಳಲಾಗುತ್ತಿದೆ.
ಅಧ್ಯಕ್ಷ,
ರನ್ನ ಸಿನಿಮಾಗಳ ಖ್ಯಾತಿ ನಂದ ಕಿಶೋರ್ ನಿರ್ದೇಶಿಸುತ್ತಿರುವ
ಪೊಗರು ಚಿತ್ರದ ಟೀಸರ್ ಇಂದು ಸಂಜೆ ಬಿಡುಗಡೆ ಕಾಣಲಿದೆ. ರ‍್ಯಾಪ್ ಕಿಂಗ್ ಚಂದನ್ ಶೆಟ್ಟಿ ಹಾಡಿರುವ ಜಬರ್ದಸ್ತ್ ಗೀತೆ ಟೀಸರ್ನಲ್ಲಿರಲಿದೆ.
ಯುವ ತಲೆಮಾರಿನ ಮಾಸ್ ನಟನಾಗಿ ಗುರುತಿಸಿಕೊಂಡಿರುವ ಧ್ರುವ ಸರ್ಜಾ ಅಭಿನಯದ ಈ ಚಿತ್ರ ಕೂಡ ಮಾಸ್ ಪ್ರೇಕ್ಷಕರಿಗಾಗಿ ಕ್ಲಾಸ್ ಆಗಿ ನಿರ್ಮಿಸಲಾಗುತ್ತಿದೆ. ಈಗಾಗಲೇ
ಪೊಗರು ಚಿತ್ರದ ಶೂಟಿಂಗ್ ಶೇ.20 ರಷ್ಟು ಪೂರ್ಣಗೊಂಡಿದ್ದು, ಇಲ್ಲಿ ಎರಡು ವಿಭಿನ್ನ ಶೇಡ್ಗಳಲ್ಲಿ ಆ್ಯಕ್ಷನ್ ಪ್ರಿನ್ಸ್ ಕಾಣಿಸಿಕೊಳ್ಳಲಿದ್ದಾರೆ.
ಇದಾಗಲೇ ಫಸ್ಟ್ ಲುಕ್ ಮೂಲಕ ಅಭಿಮಾನಿಗಳಿಗೆ ಕಿಚ್ಚು ಹಚ್ಚಿರುವ
ಪೊಗರು ತಂಡ ಟೀಸರ್ ಮೂಲಕ ಮತ್ತಷ್ಟು ನಿರೀಕ್ಷೆ ಹುಟ್ಟಿಸುವ ಲಕ್ಷಣಗಳು ಕಾಣಿಸುತ್ತಿದೆ. ಬೆರಳಣಿಯಷ್ಟು ಚಿತ್ರಗಳ ಮೂಲಕ ಅಭಿಮಾನಿ ಪಡೆಗಳನ್ನು ಸೃಷ್ಟಿಸಿಕೊಂಡಿರುವ ಧ್ರುವ ಸರ್ಜಾರಿಗೆ ಒಂದು ಬರ್ತ್ ಡೆ ವಿಶಸ್ ತಿಳಿಸೋಣ.