Happy Birthday Dhruva Sarja: ಮಧ್ಯರಾತ್ರಿ ರಿಲೀಸ್​ ಆಯ್ತು ಮಾರ್ಟಿನ್ ಸಿನಿಮಾದ ಹೊಸ ಪೋಸ್ಟರ್​

ಮಾರ್ಟಿನ್ ಚಿತ್ರತಂಡ ಧ್ರುವ ಅವರ ಹುಟ್ಟುಹಬ್ಬಕ್ಕೆಂದು ವಿಶೇಷ ಪೋಸ್ಟರ್ ರಿಲೀಸ್ ಮಾಡಿದೆ. ಅದೂ ಸಹ ಮಧ್ಯರಾತ್ರಿ 12.03ಕ್ಕೆ ಈ ಬರ್ತ್​ ಡೇ ಪೋಸ್ಟರ್ ಬಿಡುಗಡೆಯಾಗಿದೆ.

ಧ್ರುವ ಸರ್ಜಾ ಹುಟ್ಟುಹಬ್ಬದ ವಿಶೇಷ ಪೋಸ್ಟರ್​

ಧ್ರುವ ಸರ್ಜಾ ಹುಟ್ಟುಹಬ್ಬದ ವಿಶೇಷ ಪೋಸ್ಟರ್​

  • Share this:
ಸ್ಯಾಂಡಲ್​ವುಡ್​ ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ  (Happy Birthday Dhruva Sarja)ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.33ನೇ ವಸಂತಕ್ಕೆ ಕಾಲಿಟ್ಟಿರುವ ಧ್ರುವ ಸರ್ಜಾ ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಈ ಸಲವೂ ತಾನು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲವೆಂದು ಧ್ರುವ ಸರ್ಜಾ ಈ ಹಿಂದೆಯೇ ಮನವಿ ಮಾಡಿದ್ದರು. ಅಲ್ಲದೆ ಈ ಸಲ ಹುಟ್ಟುಹಬ್ಬದ ದಿನ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು, ರಾಜ್ಯದಿಂದ ಹೊರಗಿರುವುದಾಗಿಯೂ ಹೇಳಿದ್ದರು. ಹುಟ್ಟುಹಬ್ಬದ ಆಚರಣೆಗೆ ಬ್ರೇಕ್​ ಬಿದ್ದಿತ್ತಾದರೂ, ಅಭಿಮಾನಿಗಳಿಗೆ ಮಾತ್ರ ನಿನ್ನೆ ಮಧ್ಯರಾತ್ರಿಯೇ ಧ್ರುವ ಸರ್ಜಾ ಕಡೆಯಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಹೌದು, ಮಾರ್ಟಿನ್ (Martin) ಚಿತ್ರತಂಡ ಹೇಳಿದಂತೆ ಮಧ್ಯರಾತ್ರಿ ಸಿನಿಮಾದ ವಿಶೇಷ ಪೋಸ್ಟರ್ ರಿಲೀಸ್ ಮಾಡಿದೆ. 

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್​ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಇದರ ಚಿತ್ರೀಕರಣ ವೈಜಾಗ್​ ನಡೆಯುತ್ತಿದ್ದು, ಧ್ರುವ ಸರ್ಜಾ ಈಗ ಅಲ್ಲೇ ಇದ್ದಾರೆ. ಮಾರ್ಟಿನ್ ಚಿತ್ರತಂಡ ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕೆಂದು ವಿಶೇಷ ಪೋಸ್ಟರ್ ರಿಲೀಸ್ ಮಾಡಿದೆ. ಅದೂ ಸಹ ಮಧ್ಯರಾತ್ರಿ 12.03ಕ್ಕೆ ಈ
ಬರ್ತ್​ ಡೇ ಪೋಸ್ಟರ್ ಬಿಡುಗಡೆಯಾಗಿದೆ.
View this post on Instagram


A post shared by ap arjun (@aparjun_official)


ಈ ಪೋಸ್ಟರ್​ನಲ್ಲಿ ಧ್ರುವ ಸರ್ಜಾ ಕೈಗೆ ಕೋಳ ತೊಡಿಸಲಾಗಿದ್ದು, ಅದನ್ನು ಅವರು ಹಲ್ಲಿನಿಂದ ಕಚ್ಚಿ ತೆಗೆಯುವ ಪ್ರಯತ್ನದಲ್ಲಿದ್ದಾರೆ. ಇನ್ನು ಕೈ ಮೇಲೆ ನಾನಾ ರೀತಿಯ ಟ್ಯಾಟೂಗಳ ಜೊತೆ ಇಂಡಿಯನ್ ಎನ್ನುವ ಟ್ಯಾಟೂ ಸಹ ಇದೆ. ಈ ಪೋಸ್ಟರ್​ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.

ಇದನ್ನೂ ಓದಿ: Martin: ಧ್ರುವ ಸರ್ಜಾ ಜೊತೆ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುವ ಅವಕಾಶ ನಿಮ್ಮದಾಗಬಹುದು..!

ಆ್ಯಕ್ಷನ್​ ಪ್ರಿನ್ಸ್​ ಧುವ್ರ ಸರ್ಜಾ ಹಾಗೂ ನಿರ್ದೇಶಕ ಎ.ಪಿ. ಅರ್ಜುನ್ ಅವರು 9 ವರ್ಷಗಳ ನಂತರ ಮತ್ತೆ ಈ ಸಿನಿಮಾಗಾಗಿ ಒಂದಾಗಿದ್ದಾರೆ. ಎ.ಪಿ. ಅರ್ಜುನ್ ಹಾಗೂ ಧ್ರುವ ಅವರ ಕಾಂಬಿನೇಷನ್​ ಮೇಲೆ ಕನ್ನಡ ಸಿನಿಪ್ರಿಯರಿಗೆ ತುಂಬಾ ನಿರೀಕ್ಷೆ ಇದೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಾರ್ಟಿನ್ ಸಿನಿಮಾದ ಪೋಸ್ಟರ್​ ಅನ್ನು ರಿಲೀಸ್ ಮಾಡಲಾಗಿತ್ತು, ಅಭಿಮಾನಿಗಳು ಧ್ರುವ ಸರ್ಜಾ ಅವರ ಖಡಕ್ ಲುಕ್​ಗೆ ಫಿದಾ ಆಗಿದ್ದರು. ಅದೇ ಕಟ್ಟು ಮಸ್ತಾದ ದೇಹ, ಕೈ ಮೇಲೆ ಟ್ಯಾಟೂ. ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಲುಕ್ ವೈರಲ್ ಆಗಿತ್ತು. ಈ ಸಿನಿಮಾ ಕುರಿತಾಗಿ ಧ್ರುವ ಸರ್ಜಾ ಅವರು ಸಾಕಷ್ಟು ವಿಷಯಗಳನ್ನು ಆಗಲೇ ಹಂಚಿಕೊಂಡಿದ್ದರು. ಮಾರ್ಟಿನ್​ ಚಿತ್ರದ ಪೋಸ್ಟರ್ ನೋಡಿದವರೆಲ್ಲ ಇದರಲ್ಲಿ ಧ್ರುವ ಸರ್ಜಾ ಅವರ ಪಾತ್ರದ ಹೆಸರು ಇದೇ ಎಂದು ತಿಳಿದುಕೊಂಡಿದ್ದರು. ಆದರೆ, ಇದು ಸತ್ಯ ಅಲ್ಲ ಎಂದಿದ್ದ ಧ್ರುವ ಸರ್ಜಾ, ಮಾರ್ಟಿನ್​ ನಾನಲ್ಲ ಎಂದಿದ್ದರು.

ಇದನ್ನೂ ಓದಿ: Martin: ಯೂಟ್ಯೂಬ್‍ನಲ್ಲಿ ದಾಖಲೆ ಮಾಡುವ ಮೂಲಕ ಟ್ರೆಂಡಿಂಗ್​ನಲ್ಲಿದ್ದಾನೆ ಮಾರ್ಟಿನ್ !

ಈ ಸಿನಿಮಾ ಸೆಟ್ಟೇರುವ ಮುನ್ನವೇ ಮಾರ್ಟಿನ್ ಚಿತ್ರದ ಐದೂ ಭಾಷೆಗಳ ಆಡಿಯೋ ಹಕ್ಕು ಮಾರಾಟವಾಗಿದೆಯಂತೆ. ಲಹರಿ ಸಂಸ್ಥೆ ಎಲ್ಲ ಭಾಷೆಯ ಹಕ್ಕನ್ನು ಖರೀದಿ ಮಾಡಿದೆಯಂತೆ. ಮಾರ್ಟಿನ್ ಚಿತ್ರಕ್ಕೂ ಮೊದಲು ಅಂದರೆ ಪೊಗರು ಸಿನಿಮಾ ರಿಲೀಸ್ ಆದ ನಂತರ ನಂದ ಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಅವರ ಮತ್ತೊಂದು ಹೊಸ ಸಿನಿಮಾ ಪ್ರಕಟಿಸಲಾಗಿತ್ತು. ಅದೇ ದುಬಾರಿ. ಆ ಸಿನಿಮಾಗೂ ಉದಯ್ ಮೆಹ್ತಾ ಅವರೇ ಹಣ ಹೂಡುವವರಿದ್ದರು. ಆದರೆ ಆ ಚಿತ್ರವನ್ನು ಮಧ್ಯದಲ್ಲೇ ಕೈ ಬಿಡಲಾಯಿತು.

ಹುಟ್ಟುಹಬ್ಬದ ಆಚರಣೆಗೆ ಬ್ರೇಕ್​ ಹಾಕಿದ ಧ್ರುವ

ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದ ಧ್ರುವ ಸರ್ಜಾ, ನಾನೇನು ದೊಡ್ಡ ಸೆಲಬ್ರಿಟಿಯೇನಲ್ಲ... ಇದೇ 6ರಂದು ನನ್ನ ಹುಟ್ಟುಹಬ್ಬ. ಆದರೆ, ನನಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮನಸ್ಸು ಇಲ್ಲ. ನೀವು ಅರ್ಥ ಮಾಡಿಕೊಳ್ಳುತ್ತೀರಾ ಅಂತ ಭಾವಿಸಿದ್ದೇನೆ. ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ಎರಡು ದೊಡ್ಡ ಕಾರಣಗಳಿವೆ. ಒಂದು ಕೋರೋನಾ ಮತ್ತೊಂದು ಸಿನಿಮಾ ಚಿತ್ರೀಕರಣದ ನಿಮಿತ್ತ ವೈಜಾಗ್​ನಲ್ಲಿರುತ್ತೇನೆ. ಪ್ರತಿ ವರ್ಷ ಹೇಗೆ ತಮ್ಮ ಮನೆಯ ಹುಡುಗ ಅಂತ ಎಲ್ಲರೂ ಆಶೀರ್ವಾದ ಮಾಡಿ, ನಿಮ್ಮ ಪ್ರೋತ್ಸಾಹವೇ ನಮಗೆ ಶ್ರೀರಕ್ಷೆ ಅಂತ ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
Published by:Anitha E
First published: