ಅಭಿಮಾನಿಗಳ ದಾಸ... ಚಾಲೆಂಜಿಂಗ್ ಸ್ಟಾರ್... ಸ್ಯಾಂಡಲ್ವುಡ್ ಡಿಬಾಸ್ ದರ್ಶನ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೊರೋನಾ ಕಾರಣದಿಂದಾಗಿ ದರ್ಶನ್ ಈ ಸಲ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ಇಲ್ಲವಾದಲ್ಲಿ ಪ್ರತಿ ವರ್ಷ ಮಧ್ಯರಾತ್ರಿಯಿಂದಕೇ ಅಭಿಮಾನಿಗಳನ್ನು ಭೇಟಿ ಮಾಡಿ, ಅವರು ತರುತ್ತಿದ್ದ ಕೇಕ್ಗಳನ್ನು ಕತ್ತರಿಸುತ್ತಾ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದರು. ಆದರೆ, ಈ ಸಲ ಅಭಿಮಾನಿಗಳನ್ನು ಭೇಟಿ ಮಾಡದೆ ಹೋದರೂ ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗಾಗಿ ದರ್ಶನ್ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ಹೌದು, ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಟ್ರೇಲರ್ ಅನ್ನು ಫ್ಯಾನ್ಸ್ಗೆ ತಮ್ಮ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಾರೆ. ಅಭಿಮಾನಿಗಳು ರಾಬರ್ಟ್ ಟ್ರೇಲರ್ಗಾಗಿ ಕಾತರದಿಂದ ಕಾಯುತ್ತಿದ್ದರು. ತರುಣ್ ಸುಧೀರ್ ನಿರ್ದೇಶನದ ಹಾಗೂ ಉಮಾಪತಿ ಅವರು ಹಣ ಹೂಡಿರುವ ರಾಬರ್ಟ್ ಸಿನಿಮಾ ಮಾರ್ಚ್ 11ಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ದರ್ಶನ್ ಅವರ 44ನೇ ಹುಟ್ಟುಹಬ್ಬದ ಉಡುಗೊರೆಯಾಗಿ ರಾಬರ್ಟ್ ಸಿನಿಮಾದ ಟ್ರೇಲರ್ ಅನ್ನು ಈಗಷ್ಟೆ ರಿಲೀಸ್ ಮಾಡಲಾಗಿದೆ. ಎಂದಿನಂತೆ ಈಗ ರಾಬರ್ಟ್ ಟ್ರೇಲರ್ ಅನ್ನು ವೈರಲ್ ಮಾಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಭರ್ಜರಿ ಗಿಫ್ಟ್ ಸಿಕ್ಕಿದೆ.
ಪಂಚಿಂಗ್ ಡೈಲಾಗ್.., ಧೂಳೆಬ್ಬಿಸುವ ಡಿಬಾಸ್ ಎಂಟ್ರಿ... ಸ್ಟೈಲಿಶ್ ಹೀರೋಯಿನ್... ಖಡಕ್ ವಿಲನ್ಗಳು... ರಾಬರ್ಟ್ ಟ್ರೇಲರ್ನ ಹೈಲೈಟ್ಸ್. ನೀನು ಮಾಸ್ ಆದರೆ ನಾನು ಮಾಸ್ಗೆ..... ಅನ್ನೋ ಡೈಲಾಗ್ ನಿಜಕ್ಕೂ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ.
ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ರಾಬರ್ಟ್ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾದಲ್ಲಿನ ಪ್ರಮುಖ ಪಾತ್ರಗಳಾದ ನಾಯಕಿ ಆಶಾಭಟ್, ಜಗಪತಿ ಬಾಬು, ರವಿಶಂಕರ್, ರವಿ ಕಿಶನ್, ವಿನೋದ್ ಪ್ರಭಾಕರ್ ಪ್ರತಿಯೊಬ್ಬರ ಪಾತ್ರಗಳನ್ನು ಅಚ್ಚುಕಟ್ಟಾಗಿ ಟ್ರೇಲರ್ನಲ್ಲಿ ಪರಿಚಯಿಸಲಾಗಿದೆ.
ನಿಮ್ಮೆಲ್ಲರ ಆಸೆಯಂತೆ #Roberrt ಚಿತ್ರದ ಟ್ರೈಲರ್ ಈಗ ನಿಮ್ಮ ಮುಂದೆ. ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಈ ದಾಸ ಸದಾ ಚಿರಋಣಿ 🙏https://t.co/BOhrjv1B8c@umap30071 @UmapathyFilms @TharunSudhir @StarAshaBhat @aanandaaudio @IamJagguBhai pic.twitter.com/p1a4WpwJ21
— Darshan Thoogudeepa (@dasadarshan) February 16, 2021
ಇದನ್ನೂ ಓದಿ: Happy Birthday Darshan: ಸೀನಿಯರ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಅಭಿಷೇಕ್ ಅಂಬರೀಷ್..!
ಇನ್ನು, ವಿಲನ್ ಜಗಪತಿ ಬಾಬು ಅವರು ಈ ಸಲ ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ತಾವೇ ಕಂಠದಾನ ಮಾಡಿದ್ದಾರೆ. ಅವರ ವಾಯ್ಸ್ನಲ್ಲೇ ಅವರು ಹೇಳುವ ಡೈಲಾಗ್ ಅನ್ನು ಟ್ರೇಲರ್ನಲ್ಲಿ ಕೇಳಬಹುದಾಗಿದೆ. ಈ ಹಿಂದೆ ಟಾಲಿವುಡ್ನಲ್ಲಿ ರಾಬರ್ಟ್ ಸಿನಿಮಾ ರಿಲೀಸ್ಗೆ ಸಮಸ್ಯೆಯಾಗಿತ್ತು. ಆದರೆ ನಂತರ ಮಾತುಕತೆ ನಡೆಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಯಿತು.
ಡಿಬಾಸ್ ಮನೆ ಬಳಿ ಬಂದ ಅಭಿಮಾನಿಗಳು
ಈ ಹಿಂದೆಯೇ ಹೇಳಿದಂತೆ ದರ್ಶನ್ ಫೆ. 15ರಂದೇ ಅಂದರೆ ನಿನ್ನೆಯಿಂದಲೇ ಬೆಂಗಳೂರಿನಲ್ಲಿ ಇಲ್ಲ. ತಾವು ಮನೆಯಲ್ಲಿ ಇಲ್ಲದಿದ್ದರೂ ಕೆಲವು ಅಭಿಮಾನಿಗಳು ಮನೆಯ ಬಳಿ ಬರಬಹುದೆಂದು ಮನೆ ಮುಂದೆ ಬ್ಯಾನರ್ ಹಾಕಲಾಗಿದೆ. ಅದರಲ್ಲಿ ತಾನು ಮನೆಯಲ್ಲಿ ಇರುವುದಿಲ್ಲ ಅನ್ನೋ ವಿಷಯವನ್ನೂ ಸ್ಪಷ್ಟಪಡಿಸಲಾಗಿದೆ. ಜೊತೆಗೆ ದರ್ಶನ್ ಅವರ ಮನೆ ಬಳಿ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ