-ಅನಿತಾ ಈ,
ಇಂದು ಚಾಲೆಂಜಿಂಗ್ ಸ್ಟಾರ್, ಡಿಬಾಸ್ ದರ್ಶನ್ರ ಹುಟ್ಟುಹಬ್ಬ. ಆದರೆ ಅಂಬಿ ಅಗಲಿಕೆಯಿಂದ ಈ ಬಾರಿ ಆಡಂಬರವಿಲ್ಲದೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವುದಾಗಿ ದರ್ಶನ್ ಮೊದಲೇ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
ಇದನ್ನೂ ಓದಿ: Gully Boy Movie Review: ಮುಂಬೈ ಸ್ಲಂನ ಗಲ್ಲಿಯ ಹುಡುಗನಾಗಿ ಮಿಂಚಿದ ರಣವೀರ್ ಸಿಂಗ್..!
ಅದರಂತೆ ಇಂದು ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಈ ಬಾರಿಯೂ ಎಂದಿನಂತೆ ಅಭಿಮಾನಿಗಳು 'ಡಿಬಾಸ್ ಉತ್ಸವ' ಆಚರಿಸುತ್ತಿದ್ದು, ದರ್ಶನ್ ಹೇಳಿದಂತೆಯೇ ಸರಳವಾಗಿ ದಾನ ಮಾಡುತ್ತಿದ್ದಾರೆ.
ಕೆಲವರು ದವಸ ಧಾನ್ಯ ನೀಡಿದರೆ, ಮತ್ತೆ ಕೆಲವರು ಅವರಿಗಾಗಿ ಹಾಡನ್ನು ಮಾಡಿ ಉಡುಗೊರೆಯಾಗಿ ನೀಡಿದ್ದಾರೆ.
ಮ್ಯೂಸಿಕ್ ಬಜಾರ್ ಅಡಿ ಸಮಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರು ದರ್ಶನ್ ಹುಟ್ಟುಹಬ್ಬಕ್ಕಾಗಿ ಒಂದು ಹಾಡಿಗೆ ಸಾಹಿತ್ಯ ಬರೆದು, ಸಂಗೀತ ನೀಡಿದ್ದಾರೆ. ಈ ಹಾಡಿಗೆ ಚಂದನ್ ಶೆಟ್ಟಿ ದನಿಯಾಗಿದ್ದಾರೆ. 'ಶತಸೋದರಾಗ್ರಜಾ......' ಹಾಡಿನ ವಿಡಿಯೋ ಇಲ್ಲಿದೆ ನೋಡಿ...
ಮತ್ತೊಮ್ಮಬ್ಬ ಅಭಿಮಾನಿ ಸುಪ್ರೀತ್ ಸಹ ಸ್ನೇಹಿತರು ಡಿ-ಬಾಸ್ ಹುಟ್ಟುಹಬ್ಬಕ್ಕೆಂದು ಕಳೆದ ಡಿಸೆಂಬರ್ನಿಂದಲೇ ಒಂದು ಹಾಡನ್ನು ರೆಕಾರ್ಡ್ ಮಾಡುತ್ತಿದ್ದು, ಈಗ ಅದನ್ನು ಬಿಡುಗಡೆ ಮಾಡಿದ್ದಾರೆ. ಗಾಯಕ ಅನಿರುದ್ ಶಾಸ್ತ್ರಿ ಅವರ ಕಂಠದಲ್ಲಿ ಸುಪ್ರೀತ್ ಗಾಂಧಾರಾ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡು ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತಿದೆ.
ಒಟ್ಟಾರೆ ಅಭಿಮಾನಿಗಳ ಅಭಿಮಾನಕ್ಕೆ ದಾಸನಾಗಿರುವ ದರ್ಶನ್ ಹುಟ್ಟುಹಬ್ಬಕ್ಕೆ ನಾವೂ ಸಹ ಶುಭ ಹಾರೈಸೋಣ....
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ