Happy Birthday Ayushmann Khurrana: ಆಯುಷ್ಮಾನ್ ಖುರಾನಾ ಜನ್ಮದಿನ- ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ ಸ್ಟಾರ್ ನಟ

Ayushman Khurrana: ತಮ್ಮ  ಕಾಲೇಜು ದಿನಗಳಲ್ಲಿಯೇ ಈ  ಸ್ಟಾರ್ ನಟ,  ತನ್ನ ಸ್ನೇಹಿತರೊಂದಿಗೆ ಸೇರಿ ಜನಪ್ರಿಯ ಹಾಡು 'ಪಾನಿ ಡಾ'(Paani Da’) ಅನ್ನು ರಚಿಸಿದ್ದರು. ಅಲ್ಲದೇ. ಅವರು ರಿಯಾಲಿಟಿ ಶೋಗಳಲ್ಲಿ  ಭಾಗವಹಿಸಿ ಜನಪ್ರಿಯತೆ ಪಡೆದಿದ್ದರು

ಆಯುಷ್ಮಾನ್ ಖುರಾನಾ

ಆಯುಷ್ಮಾನ್ ಖುರಾನಾ

  • Share this:
ಆಯುಷ್ಮಾನ್ ಖುರಾನಾ , (Ayushmann Khurrana)ತಮ್ಮ ಅದ್ಭುತ ನಟನೆಯ ಮೂಲಕ ಬಾಲಿವುಡ್​ನಲ್ಲಿ(Bollywood) ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬಹುಮುಖ  ಪ್ರತಿಭೆ  ಎಂದರೆ ತಪ್ಪಾಗಲಾರದು.  ನಟನೆ, ಹಾಡುಗಾರಿಕೆ, ಹೋಸ್ಟಿಂಗ್ ಮತ್ತು ಸಾಹಿತ್ಯ  ಹೀಗೆ ಪ್ರತಿಯೊಂದರ ಮೂಲಕ ಜನರ ಗಮನ ಸೆಳೆದಿದ್ದಾರೆ. ಆಯುಷ್ಮಾನ್ ಖುರಾನಾ  ಬಾಲಿವುಡ್ ಸ್ಟಾರ್ ಆಗುವ ಮುನ್ನವೇ ಹೆಸರು ಮಾಡಿದವರು. ಚಂಡೀಗಢ್​ನಲ್ಲಿ ಜನಿಸಿದ ಅವರು ಕಾಲೇಜು ವರ್ಷಗಳಲ್ಲಿಯೇ  ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರು. ಅಲ್ಲದೇ  ತಮ್ಮ ಕಾಲೇಜು ನಾಟಕ ತಂಡವನ್ನು ಸ್ಥಾಪಿಸಿ, ಬೀದಿ ನಾಟಕಗಳಲ್ಲಿ ಭಾಗವಹಿಸಿ ಹಲವಾರು  ಕಾಲೇಜು ಉತ್ಸವಗಳಲ್ಲಿ ಬಹುಮಾನಗಳನ್ನು ಗೆದ್ದು ಬೀಗಿದವರು.  

ತಮ್ಮ  ಕಾಲೇಜು ದಿನಗಳಲ್ಲಿಯೇ ಈ  ಸ್ಟಾರ್ ನಟ,  ತನ್ನ ಸ್ನೇಹಿತರೊಂದಿಗೆ ಸೇರಿ ಜನಪ್ರಿಯ ಹಾಡು 'ಪಾನಿ ಡಾ'(Paani Da’) ಅನ್ನು ರಚಿಸಿದ್ದರು. ಅಲ್ಲದೇ. ಅವರು ರಿಯಾಲಿಟಿ ಶೋಗಳಲ್ಲಿ  ಭಾಗವಹಿಸಿ ಜನಪ್ರಿಯತೆ ಪಡೆದಿದ್ದರು.  ಆಯುಷ್ಮಾನ್ 2004 ರಲ್ಲಿ ಎಂಟಿವಿ ರೋಡೀಸ್  ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಜೇತರಾಗಿದ್ದರು.  ಜೊತೆಗೆ ಆರ್‌ಜೆ, ವಿಜೆ ಮತ್ತು  ಟಿವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಹಾಗೂ ಧಾರವಾಹಿಗಳಲ್ಲಿ ಸಹ ಅಭಿನಯಿಸಿದ್ದರು.

2012 ರಲ್ಲಿ, ವಿಕಿ ಡೋನರ್ ಚಿತ್ರದ ಮೂಲಕ   ಬಾಲಿವುಡ್​ನಲ್ಲಿ ಮನೆಮಾತಾಗಿದ್ದಾರೆ. ಶೂಜಿತ್ ಸಿರ್ಕಾರ್ ನಿರ್ದೇಶನದ ಈ ಚಿತ್ರ ಪುರುಷ ಬಂಜೆತನ ಮತ್ತು ವೀರ್ಯ ದಾನದ ವಿಭಿನ್ನ ಕತೆಯನ್ನು ಹೊಂದಿತ್ತು. ಇದರ ನಂತರ ಆಯುಷ್ಮಾನ್ ಒಂದರ ನಂತರ ಒಂದು ಹಿಟ್ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಇಂದು ಅವರ ಜನ್ಮದಿನ. ಯಾರ ಸಹಾಯವೂ ಇಲ್ಲದೇ ನಟನೆಯ ಮೂಲಕ ಬಾಲಿವುಡ್​ನಲ್ಲಿ ನೆಲೆಯೂರಿರುವ ಆಯುಷ್ಮಾನ್ ಖುರಾನ್ ಕೈನಲ್ಲಿ ಸಧ್ಯ ಹಲವಾರು ಚಿತ್ರಗಳಿವೆ.

ಹಾಗಾದ್ರೆ ಅವರ ಮುಂದಿನ ಚಿತ್ರಗಳು ಯಾವುದು ಎಂಬುದು ಇಲ್ಲಿದೆ.

ಡಾಕ್ಟರ್ ಜಿ

ಇದನ್ನೂ ಓದಿ: ಕಂಗನಾ ರನೌತ್ ಅಭಿನಯದ Thalaivii ಮಾಡಿದ ವಾರಾಂತ್ಯದ ಕಲೆಕ್ಷನ್ ಎಷ್ಟು ಗೊತ್ತಾ..?

ಆಯುಷ್ಮಾನ್ ಖುರಾನಾ  ಅವರ ಮುಂದಿನ ಚಿತ್ರ ಡಾಕ್ಟರ್ ಜಿ ಸಾಮಾಜಿಕ ಕಾಳಜಿಯುಳ್ಳ ಚಿತ್ರವಾಗಿದ್ದು, ಇದನ್ನು  ಅನುಭೂತಿ ಕಶ್ಯಪ್ ನಿರ್ದೇಶಿಸಿದ್ದಾರೆ.  ಖುರಾನಾ ಅವರು ವೈದ್ಯಕೀಯ ಸಂಸ್ಥೆಯ ಕ್ಯಾಂಪಸ್ ಆಧಾರಿತ ಚಿತ್ರದಲ್ಲಿ ಡಾ ಉದಯ್ ಗುಪ್ತಾ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ರಕುಲ್ ಪ್ರೀತ್ ಸಿಂಗ್  ನಟಿಸುತ್ತಿದ್ದಾರೆ.  ಅಲ್ಲದೆ ಇದರಲ್ಲಿ ಶೆಫಾಲಿ ಶಾ ಮತ್ತು ಶೀಬಾ ಚಡ್ಡಾ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಬರೇಲಿ ಕಿ ಬರ್ಫಿ (2017) ಮತ್ತು ಬಧಾಯಿ ಹೋ (2018) ನಂತರ ಮೂರನೇ ಬಾರಿಗೆ ಆಯುಷ್ಮಾನ್ ಜಂಗಲೀ ಪಿಕ್ಚರ್ಸ್ ಸಂಸ್ಥೆಯ  ಜೊತೆ ಕೈಜೋಡಿಸಿದ್ದಾರೆ.  ಚಿತ್ರದ ಚಿತ್ರೀಕರಣವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಗಿಸಲಾಗಿದ್ದು, ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಚಂಡಿಗಢ್ ಕರೇ ಆಶಿಕಿ

ಅಭಿಷೇಕ್ ಕಪೂರ್ ನಿರ್ದೇಶಿನದ  ಈ ರೊಮ್ಯಾಂಟಿಕ್ ಚಿತ್ರದಲ್ಲಿ ಆಯುಷ್ಮಾನ್ ಮತ್ತು ವಾಣಿ ಕಪೂರ್ ಅವರನ್ನು ಮೊದಲ ಬಾರಿಗೆ ಜೊತೆಯಾಗಿದ್ದಾರೆ. ಆಯುಷ್ಮಾನ್ ಕ್ರೀಡಾಪಟುವಿನ ಪಾತ್ರವನ್ನು ನಿರ್ವಹಿಸಿದ್ದಾರೆ.  ಈ ಚಿತ್ರಕ್ಕಾಗಿ ಆಯುಷ್ಮಾನ್ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೇ ಈ ಚಿತ್ರಕ್ಕಾಗಿ ಬಹಳಷ್ಟು ತಯಾರಿಯನ್ನು ಸಹ ಮಾಡಿಕೊಂಡಿದ್ದಾರೆ.

ಆನೆಕ್

ಇದನ್ನೂ ಓದಿ: ದೀರ್ಘಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಯುಎಸ್ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್

ಆಯುಷ್ಮಾನ್ ಖುರಾನ ಅವರ ಮುಂದಿನ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಅನುಭವ ಸಿನ್ಹಾ ನಿರ್ದೇಶಿಸುತ್ತಿದ್ದಾರೆ. ಆಯುಷ್ಮಾನ್ ಮತ್ತು ಸಿನ್ಹಾ ಅವರು 2019 ರಲ್ಲಿ  ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಆರ್ಟಿಕಲ್ 15 ಚಿತ್ರದ ನಂತರ ಎರೆಡನೇ ಬಾರಿಗೆ ಜೊತೆಯಾಗಿದ್ದಾರೆ.ಅನೆಕ್ ಚಿತ್ರದಲ್ಲಿ ಆಯುಷ್ಮಾನ್  ಜೋಶುವಾ ಎಂಬ ವ್ಯಕ್ತಿಯ ಪಾತ್ರ ಮಾಡಿದ್ದು, ಅದರ ಫಸ್ಟ್ ಲುಕ್ ಅಭಿಮಾನಿಗಳ ಮೆಚ್ಚುಗೆಗ ಪಾತ್ರವಾಗಿದೆ.  ಅಷ್ಟೇ ಅಲ್ಲದೇ ಆಯುಷ್ಮಾನ್ ಇನ್ನೂ ಎರಡು  ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
Published by:Sandhya M
First published: