ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾಗಿಂತ ಈಗ ಅವರ ಮಗಳು ಆಯ್ರಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾಳೆ. ಈ ಪುಟ್ಟ ಕಂದಮ್ಮನ ಹೆಸರಿನಲ್ಲಿ ಈಗಾಗಲೇ ಅನೇಕ ಅಭಿಮಾನಿಗಳ ಪೇಜ್ಗಳಿವೆ. ಒಂದೊಂದು ಫೋಟೋಗೂ ಲಕ್ಷಗಟ್ಟಲೆ ಲೈಕ್ಸ್ ಪಡೆಯುವ ಮೂಲಕ ಅಪ್ಪನ ಸ್ಟಾರ್ಗಿರಿಗಿಂತ ಹೆಚ್ಚು ಖ್ಯಾತಿ ಹೊಂದುತ್ತಿದ್ದಾಳೆ. ತುಂಬಿದ ಕೆನ್ನೆಯ ಬಟ್ಟಲು ಕಂಗಳ ಪುಟ್ಟ ರಾಜಕುಮಾರಿಯಂತಿರುವ ಆಯ್ರಾಳ ಇತ್ತೀಚಿನ ಚಿತ್ರಗಳನ್ನು ಅಮ್ಮ ರಾಧಿಕಾ ಹಂಚಿಕೊಳ್ಳುತ್ತಿದ್ದಂತೆಯೇ ಅವು ವೈರಲ್ ಆಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಸಕ್ರಿಯರಾಗಿರುವ ರಾಧಿಕಾ ಪಂಡಿತ್ ತಮ್ಮ ಮಗಳು ಹಾಗೂ ಮಗ ಯಥರ್ವ್ ಅಪ್ಡೇಟ್ ಅನ್ನು ನೀಡುತ್ತಿರುತ್ತಾರೆ. ಈ ಮುದ್ದು ಮಕ್ಕಳ ಯಾವ ಚಿತ್ರವನ್ನು ಸಾಮಾಜಿ ಜಾಲತಾಣದಲ್ಲಿ ಹರಿಬಿಟ್ಟರೂ ಅದು ಅಭಿಮಾನಿಗಳ ಪುಟಗಳಲ್ಲಿ ವೈರಲ್ ಆಗುತ್ತವೆ. ಇತ್ತೀಚೆಗಷ್ಟೆ ಮಗನ ಮೊದಲ ವರ್ಷದ ಹುಟ್ಟುಹಬ್ಬದ ವಿಡಿಯೋ ವೈರಲ್ ಆಗಿತ್ತು.
ಇನ್ನು ರಾಧಿಕಾ ಹಾಗೂ ಯಶ್ ಅವರ ಮೊದಲ ಸಂತಾನ ಆಯ್ರಾಳ ಹುಟ್ಟುಹಬ್ಬ ಇಂದು. ಮುದ್ದಿನ ಮಗಳ ಬರ್ತ್ ಡೇಗೆ ತುಂಬಾ ಪ್ರೀತಿಯಿಂದ ರಾಧಿಕಾ ಶುಭ ಕೋರಿದ್ದಾರೆ. ಜೊತೆಗೆ ಮಗಳಿಗಾಗಿ ಒಂದು ಮುದ್ದಾದ ಸಂದೇಶ ಕೊಟ್ಟಿದ್ದಾರೆ. ಜೊತೆಗೆ ಮಗಳ 12 ಕ್ಯೂಟ್ ಫೋಟೋಗಳನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದಾರೆ.
View this post on Instagram
View this post on Instagram
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ