Happy Birthday Ambareesh: ಈ ಸಲ ಅಂಬಿ ಹುಟ್ಟುಹಬ್ಬದ ಆಚರಣೆ ಇಲ್ಲ: ಭಾವುಕರಾಗಿ ಪೋಸ್ಟ್​ ಮಾಡಿದ ಅಭಿಷೇಕ್​ ಅಂಬರೀಷ್​

ಅಂಬರೀಷ್​ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಒಂದೆಡೆ ಸೇರಿ ಪ್ರತಿ ವರ್ಷ ಆಚರಿಸುತ್ತಿದ್ದರು. ಆದರೆ ಈ ಸಲ ರೆಬೆಲ್​ ಸ್ಟಾರ್​ ಅಭಿಮಾನಿಗಳಿಗೆ ಆ ಖುಷಿಯೂ ಇಲ್ಲದಂತಾಗಿದೆ. ಕೊರೋನಾ ಕಾರಣದಿಂದಾಗಿ ಲಾಕ್​ಡೌನ್​ ಇರುವ ಕಾರಣ ಒಂದೆಡೆ ಜನ ಸೇರಲಾಗುವುದಿಲ್ಲ. ಅದಕ್ಕೆ ಸುಮಲತಾ ಅವರೂ ಸಹ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಅಂಬರೀಷ್​ ಹುಟ್ಟುಹಬ್ಬದ ಕಾಮನ್​ ಡಿಪಿ

ಅಂಬರೀಷ್​ ಹುಟ್ಟುಹಬ್ಬದ ಕಾಮನ್​ ಡಿಪಿ

 • Share this:
  ರೆಬೆಲ್​ಸ್ಟಾರ್​​ ಅಂಬರೀಷ್​ ಅವರ ಜನ್ಮದಿನ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ. ಇಂದು ಕಲಿಯುಗ ಕರ್ಣ ನಮ್ಮೊಂದಿಗೆ ಇಲ್ಲವಾದರೂ ಅವರ ಸಿನಿಮಾಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಜೀವಂತವಾಗಿದ್ದಾರೆ. ರೆಬೆಲ್​ ಸ್ಟಾರ್​ ಅಂಬರೀಶ್​ ಕನ್ನಡ ಚಿತ್ರರಂಗದ ಮೇರು ನಟ. 1971 ರಲ್ಲಿ ಪುಟ್ಟಣ್ಣ ಕಣಗಾಲ್​ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅಂಬಿ, ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಮಂಡ್ಯದ ಗಂಡು ಎಂದೇ ಜನಪ್ರಿಯವಾಗಿದ್ದ ಅಂಬರೀಷ್​ ಅವರ  69ನೇ ಹುಟ್ಟುಹಬ್ಬ ಇಂದು.

  ಮಂಡ್ಯದ ಗಂಡು ನಮ್ಮನ್ನಗಲಿ ಎರಡುವರೆ ವರ್ಷಗಳಾಗಿವೆ. ಸುಮಲತಾ ಅಂಬರೀಷ್​ ಹಾಗೂ ಅಭಿಷೇಕ್​ ಅಂಬರೀಷ್​ ಅವರು ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿ ಬಂದು ಪೂಜೆ ಸಲ್ಲಿಸಲಿದ್ದಾರಂತೆ. 8 .30ರಿಂದ 9ಗಂಟೆಗೆ ಕಂಠೀರವ ಸ್ಟುಡಿಯೋಗೆ ಬರಲಿದ್ದಾರಂತೆ. ಕೊರೋನಾ ಲಾಕ್​ಡೌನ್​ನಿಂದ ಅಂಬಿ ಹುಟ್ಟುಹಬ್ಬದ ಸಡಗರಕ್ಕೆ ಬ್ರೇಕ್ ಬಿದ್ದಿದೆ. ಅಭಿಮಾನಿಗಳಿಂದ ಅದ್ಧೂರಿಯ ಬರ್ತಡೇ ಆಚರಣೆಗೆ ಅವಕಾಶವಿಲ್ಲ. ಸಾರ್ವಜನಿಕವಾಗಿ ಈ ಸಲ ಹುಟ್ಟುಹಬ್ಬ ಆಚರಿಸುವಂತಿಲ್ಲ. ಈ ದಿನವನ್ನ ಅಂಬಿ ಡೇ ಅಂತ ಆಚರಿಸಲು ಸುಮಲತಾ ಮನವಿ ಮಾಡಿರುವ ಸುಮಲತಾ ಅಂಬರೀಷ್​ ಅವರು ಪೂಜೆಯ ಬಳಿಕ ಮಂಡ್ಯಕ್ಕೆ ತೆರಳಲಿದ್ದಾರಂತೆ.

  Ambareesh's Pet Dog, Ambareesh's Pet Dog death, Ambareesh's Pet Dog Kanwar Died, Ambareesh's Pet Dogs kanwar and Bul Bul, Kanwar Dog Died, ಅಂಬರೀಶ್ ಪ್ರೀತಿಯ ಶ್ವಾನ, ಅಂಬರೀಶ್ ಕನ್ವರ್ ಶ್ವಾನ ನಿಧನ, ಕನ್ವರ್ ಮತ್ತು ಬುಲ್ ಬುಲ್, Rebel Star Ambareesh favorite dog Kanwar is no more and Sumalatha shares photos with a note ae
  ಅಂಬರೀಷ್​


  ಅಂಬರೀಷ್​ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಒಂದೆಡೆ ಸೇರಿ ಪ್ರತಿ ವರ್ಷ ಆಚರಿಸುತ್ತಿದ್ದರು. ಆದರೆ ಈ ಸಲ ರೆಬೆಲ್​ ಸ್ಟಾರ್​ ಅಭಿಮಾನಿಗಳಿಗೆ ಆ ಖುಷಿಯೂ ಇಲ್ಲದಂತಾಗಿದೆ. ಕೊರೋನಾ ಕಾರಣದಿಂದಾಗಿ ಲಾಕ್​ಡೌನ್​ ಇರುವ ಕಾರಣ ಒಂದೆಡೆ ಜನ ಸೇರಲಾಗುವುದಿಲ್ಲ. ಅದಕ್ಕೆ ಸುಮಲತಾ ಅವರೂ ಸಹ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.  ನಾಳೆ ನಮ್ಮೆಲ್ಲರ ಪ್ರೀತಿಯ ಅಂಬರೀಷ್ ಅವರ 69ನೇ ಜಯಂತಿ. ಸಂಭ್ರಮದಿಂದ ಆಚರಿಸಲು ನೀವೆಲ್ಲರೂ ಕಾಯುತ್ತಿರುತ್ತೀರಿ. ಆದರೆ ಕೊರೋನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ನನ್ನ ವಿನಮ್ರ ಮನವಿ. ಈ ವರ್ಷ ಅವರನ್ನು ನಮ್ಮ ಮನಸ್ಸು ಮನೆಗಳಲ್ಲೇ ಆಚರಿಸೋಣ ಎಂದು ನಿನ್ನೆ ರಾತ್ರಿಯೇ ಟ್ವೀಟ್​ ಮಾಡುವ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.  ಅಂಬಿ ಬದುಕಿದ್ದಿದ್ದರೆ ಅವರಿಗೆ 69 ವರ್ಷ ವಯಸ್ಸಾಗಿರುತ್ತಿತ್ತು. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು. ಅಂಬಿ ನಮ್ಮ ಮನಗಳಲ್ಲಿ ಶಾಶ್ವತವಾಗಿ ಇರುವಂತೆ ಆಗಿದೆ. ಬ್ರಹ್ಮಾಂಡಕ್ಕಿಂತಲೂ ವಿಶಾಲ ಹೃದಯ ಹೊಂದಿದ್ದ ಅಂಬರೀಶ್ ಜೊತೆಗೆ ಜೀವನದಲ್ಲಿ ಕೆಲವು ಹೆಜ್ಜೆಗಳನ್ನಾದರೂ ನಡೆಯುವ ಅವಕಾಶ ಸಿಕ್ಕಿದ್ದ ನಾನು ಧನ್ಯ' ಎಂದು ಬರೆದುಕೊಂಡಿದ್ದಾರೆ ಸುಮಲತಾ ಅಂಬರೀಷ್​.

  ಇದನ್ನೂ ಓದಿ: ಹಾಟ್​ ಫೋಟೋಗಳಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ ಸೋನಮ್​ ಕಪೂರ್​ ಸಹೋದರಿ ಶನಾಯಾ ಕಪೂರ್​

  .ಇನ್ನು ನಿನ್ನೆ ರಾತ್ರಿಯೇ ಅಭಿಷೇಕ್​ ಅಂಬರೀಷ್​ ಅಪ್ಪನ ಹುಟ್ಟುಹಬ್ಬದ ಕಾಮನ್​ ಡಿಪಿ ರಿಲೀಸ್​ ಮಾಡಿದ್ದು, ಜೊತೆಗೆ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
  ಅಪ್ಪನ ಜತೆಗಿನ ಫೋಟೋವನ್ನು ಹಂಚಿಕೊಂಡಿರುವ ಅಭಿಷೇಕ್​, ನಾನೇನಿದ್ದರೂ ನಿಂದಲೇ, ಸದಾ ನಿಮಗೆ ಆಭಾರಿಯಾಗಿರುತ್ತೇನೆ. ಲವ್​ ಯೂ ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  ಇದನ್ನೂ ಓದಿ: Sneha Ullal: ಬ್ರೈಡಲ್​ ಲುಕ್​ನಲ್ಲಿ ಸ್ನೇಹಾ ಉಲ್ಲಾಳ್​: ಮತ್ತೆ ಐಶ್ವರ್ಯಾ ರೈ ಜತೆ ಹೋಲಿಕೆ ಮಾಡುತ್ತಿರುವ ನೆಟ್ಟಿಗರು..!

  ಕಳೆದ ವರ್ಷ ಅಂಬರೀಷ್​ ಅವರ 68ನೇ ಹುಟ್ಟುಹಬ್ಬವನ್ನು ಅಂಬರೀಷ್ ಅವರ ಸಮಾಧಿ ಬಳಿ  ಆಚರಿಸಲಾಗಿತ್ತು.ಅಲ್ಲೇ ಅಭಿಷೇಕ್​ ಹಾಗೂ ಸುಮಲತಾ ಅವರು ಕೇಕ್​ ಕತ್ತರಿಸಿದ್ದರು. ಜೊತೆಗೆ ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಅಭಿಷೇಕ್ ಅಂಬರೀಶ್‌ ಅವರ ಎರಡನೇ ಚಿತ್ರ ಬ್ಯಾಡ್​ ಮ್ಯಾನರ್ಸ್ ಪೋಸ್ಟರ್‌ ರಿಲೀಸ್‌ ಮಾಡಲಾಗಿತ್ತು.
  Published by:Anitha E
  First published: