ಇಂದು ಬಾಲಿವುಡ್(Bollywood)ನ 'ಮಿ. ಪರ್ಫೆಕ್ಷನಿಸ್ಟ್'(Mr. Perfectionist) ಆಮಿರ್ ಖಾನ್(Aamir Khan) ಹುಟ್ಟಿದ ದಿನ ಅವರ 57ನೇ ಹುಟ್ಟಿದ ಹಬ್ಬಕ್ಕೆ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮ(Social Media)ಗಳಲ್ಲಿ ಶುಭಾಶಯಗಳ ಹೊಳೆ ಹರಿಯುತ್ತಿದೆ. ಈ ನಟ ನಿಸ್ಸಂದೇಹವಾಗಿ ಭಾರತದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರು. ಅವರ ಸ್ಟಾರ್ಡಮ್(Stardom) ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಪಂಚದಾದ್ಯಂತದ ಅಭಿಮಾನಿಗಳು ನಟನಿಗೆ ಪ್ರೀತಿ ಮತ್ತು ಬರ್ಥ್ಡೇ ವಿಶ್ ಹೇಳುತ್ತಿದ್ದಾರೆ.ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ನಟ ಆಮಿರ್ ಖಾನ್ 50ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಮಿರ್ ಇಂದು ಇಡೀ ವಿಶ್ವವೇ ಮೆಚ್ಚುವ ನಟನಾಗಿ ಬೆಳೆದಿದ್ದಾರೆ. ಪ್ರತಿಯೊಂದು ಚಿತ್ರಗಳಲ್ಲೂ ಹೊಸತನ ಮತ್ತು ಪಾತ್ರಗಳಿಗಾಗಿ ಆಮೀರ್ ನಡೆಸುವ ತಯಾರಿ ಯುವ ಕಲಾವಿದರಿಗೆ ಮಾದರಿ. ಇತ್ತೀಚೆಗೆ ಅವರು ಸಿನಿಮಾಗಳ ವಿಚಾರಗಳಿಗಿಂತ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ.
57ನೇ ವಸಂತಕ್ಕೆ ಕಾಲಿಟ್ ಆಮಿರ್ ಖಾನ್
ನಟನಾಗಿರಲಿ ಅಥವಾ ನಿರ್ದೇಶಕನಾಗಿರಲಿ ಇಲ್ಲ ನಿರ್ಮಾಪಕನಾಗಿರಲಿ ಆಮಿರ್ ಪ್ರೇಕ್ಷಕರಿಗೆ ಮನರಂಜನೆ ಮಾತ್ರವಲ್ಲ, ಸಮಾಜಕ್ಕೆ ಒಂದು ಸಂದೇಶವನ್ಹು ನೀಡುವ ಕೆಲಸವನ್ನು ತಮ್ಮ ಚಿತ್ರಗಳ ಮೂಲಕ ಮಾಡುತ್ತಲೇ ಇರುತ್ತಾರೆ. ಇಂದು ನಟ ಆಮಿರ್ ಖಾನ್ 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೇವಲ ಆಯ್ದ ಚಿತ್ರಗಳಲ್ಲಿ ಮಾತ್ರ ಆಮಿರ್ ಖಾನ್ ನಟನೆ ಮಾಡುತ್ತಾರೆ. ಕಡಿಮೆ ಚಲನಚಿತ್ರಗಳಲ್ಲಿ ನಟಿಸುವ ಮೂಲಕ, ಆ ಸಿನಿಮಾ ಜನರಿಗೆ ಮುಟ್ಟುವಂತೆ ಮಾಡುವುದು ಆಮಿರ್ ಖಾನ್ ವಿಶೇಷತೆ ಆಗಿದೆ.
ಸಿನಿಮಾದಲ್ಲಿ ಸಂದೇಶ ನೀಡುವ ಆಮಿರ್ ಖಾನ್
ಲಗಾನ್ (2001), ಗಜಿನಿ (2008), 3 ಈಡಿಯಟ್ಸ್ (2009), PK (2014), ದಂಗಲ್ (2016), ಸೀಕ್ರೆಟ್ ಸೂಪರ್ಸ್ಟಾರ್ (2017) ಮುಂತಾದ ಚಿತ್ರಗಳಲ್ಲಿ ಆಮಿರ್ ಖಾನ್ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಅವರ ಕೆಲವೊಂದು ಸಿನಿಮಾಗಳನ್ನು ಇಂದಿಗೂ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಖಾನ್ಗಳ ಸಾಮ್ರಾಜ್ಯ ಈ ಬಾಲಿವುಡ್, ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ಗಿಂತ ಆಮಿರ್ ಖಾನ್ ಭಿನ್ನವಾಗಿ ಕಾಣುತ್ತಾರೆ. ಅವರ ಪ್ರತಿ ಸಿನಿಮಾದಲ್ಲೂ ಒಂದಲ್ಲ ಒಂದು ಸಂದೇಶ ಇದ್ದೇ ಇರುತ್ತೆ. ಸಿನಿಮಾದಲ್ಲಿ ಜನರನ್ನು ಹಾದಿ ತಪ್ಪಿಸುವ ಕೆಲಸವನ್ನು ಎಂದೂ ಆಮಿರ್ ಖಾನ್ ಮಾಡಿಲ್ಲ.
ಇದನ್ನೂ ಓದಿ: ಪ್ರಭಾಸ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ನೋಡಿ..
ಲಗಾನ್ನಲ್ಲಿ ಕಮಾಲ್ ಮಾಡಿದ್ದ ಆಮಿರ್!
ಆಮಿರ್ ಖಾನ್ ವೃತ್ತಿ ಜೀವನದ ಅತ್ಯಂತ ಯಶಸ್ವಿ ಸಿನಿಮಾಗಳಲ್ಲಿ ಒಂದಾಗಿದೆ. 2001ರಲ್ಲಿ ತೆರೆಗೆ ಬಂದ ಈ ಸಿನಿಮಾ ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದು. ಹಳ್ಳಿಯ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಪಾತ್ರದಲ್ಲಿ ಆಮೀರ್ ನಟಿಸಿದ್ದರು. ಈ ಸಿನಿಮಾಗೆ ಚಿತ್ರಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ಈ ಸಿನಿಮಾ ಆಸ್ಕರ್ ರೇಸ್ ನಲ್ಲಿ ಜಾಗಪಡೆದಿತ್ತು.
ಪಿಕೆ ಸಿನಿಮಾದಲ್ಲಿ ಏಲಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ
ಆಮಿರ್ ಖಾನ್ ನಟನೆಯ ಅದ್ಭುತ ಸಿನಿಮಾಗಳಲ್ಲಿ ಇದು ಕೂಡ ಒಂದು. ರಾಜ್ ಕುಮಾರ್ ಹಿರಾನಿ ಸಾರಥ್ಯದಲ್ಲಿ ಬಂದ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು. ಅನ್ಯಗ್ರಹ ಜೀವಿ ಪಾತ್ರದಲ್ಲಿ ಆಮಿರ್ ಖಾನ್ ನಟಿಸಿದ್ದರು. ಧರ್ಮದ ಹೆಸರಿನಲ್ಲಿ ಮೂಢನಂಬಿಕೆ ಮತ್ತು ದೇವಮಾನವರನ್ನು ಆರಾಧಿಸುವ ಜನರಿಗೆ ಈ ಸಿನಿಮಾ ಕಣ್ಣುತೆರೆಸುವಂತೆ ಮಾಡಿತ್ತು.
ಇದನ್ನೂ ಓದಿ: ಫಸ್ಟ್ ಡೇ ಕಲೆಕ್ಷನ್ ನೋಡಿ ಫ್ಲಾಪ್ ಅಂದ್ರು, ಆಮೇಲೆ ನಡೆದಿದ್ದು ಜಾದೂ! ಎಲ್ರೂ ಈ ಸಿನಿಮಾ ನೋಡ್ಲೇ ಬೇಕು..
ಆಮಿರ್ ಖಾನ್ (Aamir Khan), ಕರೀನಾ ಕಪೂರ್ ಖಾನ್ (Kareena Kapoor Khan) ನಟಿಸಿರುವ ಲಾಲ್ ಸಿಂಗ್ ಚಡ್ಡಾ (Laal Singh Chaddha) ಸಿನಿಮಾದ ಬಿಡುಗಡೆ (Release) ದಿನಾಂಕವನ್ನು (Date) ಪ್ರಕಟಿಸಲಾಗಿದೆ. ಈ ಹಿಂದೆ ಏಪ್ರಿಲ್ 14ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಇದೀಗ ಆಗಸ್ಟ್ 11ರಂದು ಈ ಸಿನಿಮಾ ರಿಲೀಸ್ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ