Happy Birtday Chiranjeevi Sarja: ಇಂದೇ ರಿಲೀಸ್​ ಆಗಲಿದೆ ಚಿರು ಅಭಿನಯದ ಕ್ಷತ್ರಿಯ ಸಿನಿಮಾದ ಟೀಸರ್​​..!

Kshatriya Teaser: ಇನ್ನು ಚಿರು ಹುಟ್ಟುಹಬ್ಬಕ್ಕೆ ಅವರ ಅಭಿನಯದ ಕೊನೆಯ ಸಿನಿಮಾ ಕ್ಷತ್ರಿಯ ಚಿತ್ರತಂಢ ಸಹ ಉಡುಗೊರೆ ನೀಡಲಿದೆ. ಇಂದು ಮಧ್ಯಾಹ್ನ 12ಕ್ಕೆ ಕ್ಷತ್ರಿಯ ಚಿತ್ರದ ಟೀಸರ್​ ರಿಲೀಸ್​ ಮಾಡಲಿದೆ ಚಿತ್ರತಂಡ.

Anitha E | news18-kannada
Updated:October 17, 2020, 8:39 AM IST
Happy Birtday Chiranjeevi Sarja: ಇಂದೇ ರಿಲೀಸ್​ ಆಗಲಿದೆ ಚಿರು ಅಭಿನಯದ ಕ್ಷತ್ರಿಯ ಸಿನಿಮಾದ ಟೀಸರ್​​..!
ಕ್ಷತ್ರಿಯ ಸಿನಿಮಾದಲ್ಲಿ ಚಿರು ಸರ್ಜಾ
  • Share this:
ಇಂದು ನಟ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದ್ದಾರೆ. ಒಂದು ದಿನ ಮುಂಚಿತವಾಗಿ ಅಂದರೆ ನಿನ್ನೆಯೇ ಅವರ ಅಭಿನಯದ ಶಿವಾರ್ಜುನ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ, ಮೆಜೆಸ್ಟಿಕ್​ನಲ್ಲಿರುವ ಸಂತೋಷ್​​ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಇನ್ನು ಸಿನಿಮಾ ನೋಡಲು ಚಿರು ಅವರ ತಾಯಿ ಸಹ ಬಂದಿದ್ದು ವಿಶೇಷವಾಗಿತ್ತು. ಇಂದು ಚಿರು ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ. ಹುಟ್ಟುಹಬ್ಬಕ್ಕೆ ಶುಭಕೋರಿ ಹೊಸ ಕಟೌಟ್ ಹಾಕಿರುವ ಅಭಿಮಾನಿಗಳು ಸಂತೋಷ್​ ಚಿತ್ರಮಂದಿರದ ಬಳಿ ಬರ್ತ್​ಡೇ ಆಚರಿಸಲು ಸಿದ್ಧರಾಗಿದ್ದಾರೆ. ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಅನ್ನ ದಾಸೋಹ ನಡೆಯಲಿದೆ. ಮಧ್ಯಾಹ್ನದ  1.30ರ ಶೋಗೆ ಶಿವಾರ್ಜುನ ಸಿನಿಮಾ ನೋಡಲು ಧ್ರುವ ಸರ್ಜಾ ಸಂತೋಷ್ ಥಿಯೇಟರ್​ಗೆ ಬರಲಿದ್ದಾರೆ ಎನ್ನಲಾಗುತ್ತಿದೆ . ನಿನ್ನೆ, ಮೊನ್ನೆಗಿಂತ ಇವತ್ತು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವ ನಿರೀಕ್ಷೆಇದೆ. 

ಇನ್ನು ಚಿರು ಹುಟ್ಟುಹಬ್ಬಕ್ಕೆ ಅವರ ಅಭಿನಯದ ಕೊನೆಯ ಸಿನಿಮಾ ಕ್ಷತ್ರಿಯ ಚಿತ್ರತಂಡ ಸಹ ಉಡುಗೊರೆ ನೀಡಲಿದೆ. ಇಂದು ಮಧ್ಯಾಹ್ನ 12ಕ್ಕೆ ಕ್ಷತ್ರಿಯ ಚಿತ್ರದ ಟೀಸರ್​ ರಿಲೀಸ್​ ಮಾಡಲಿದೆ ಚಿತ್ರತಂಡ.

Stay Tuned ▶️ https://t.co/IKwWnRKH9C 🔔#ChiranjeeviSarja #Kshatriya #AnandAudio @dharmavish pic.twitter.com/fl2p6UNrlMಕ್ಷತ್ರಿಯ ಚಿರಂಜೀವಿ ಸರ್ಜಾ ಅಭಿನಯದ ಕಡೆಯ ಸಿನಿಮಾ ಆಗಿದ್ದು, ಇದರ ಡಬ್ಬಿಂಗ್ ಆರಂಭವಾಗುವ ವೇಳೆಗೆ ಚಿರು ಅಗಲಿದ್ದರು. ಈ ಕಾರಣದಿಂದಾಗಿ ಧ್ರುವ ಸರ್ಜಾ ಈ ಚಿತ್ರಕ್ಕೆ ಡಬ್ಬಿಂಗ್​ ಮಾಡಿದ್ದಾರೆ.View this post on Instagram

ನಮ್ಮ ಚಿರು ಅಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು♥️Heartly welcome junior Chiru 😍♥️♥️♥️♥️♥️ Can't wait to welcome our little chiru 😍♥️ 1 days to go 😍😍😍 MCforever - Meghanachiru forever ❤️💞@megsraj @chirusarja @dhruva_sarjaa @lasya_umesh @classycaptures_official #chiranjeevisarja #meghanaraj #pogaru #kannada #kannadaactress #sandalwood #rockingstaryash #sudeep #salmankhan #radhikapandit #ayra #puneethrajkumar #rachitaram #biggboss #shrutiprakash #jothejotheyali #chandanshetty #vasuki #shineshetty #sanjithhegde #anushree #saregamapa #official_tiktokstars #tiktok #kannada #kannadaactress #sandalwood #rockingstaryash #sudeep #salmankhan #radhikapandit #ayra #puneethrajkumar #rachitaram #biggboss #shrutiprakash #jothejotheyali #chandanshetty #vasuki #shineshetty #sanjithhegde #anushree #saregamapa #chiranjeevisarja #meghanaraj #pogaru #kannada #kannadaactress #sandalwood #rockingstaryash #sudeep #salmankhan #radhikapandit #ayra #puneethrajkumar #rachitaram #biggboss #kannadabiggboss #yash #ayra #song #dance #shrutiprakash #jothejotheyali #chandanshetty #vasuki #shineshetty #sanjithhegde #anushree #saregamapa #kannada #kannadaactress #sandalwood #rockingstaryash #sudeep #salmankhan #radhikapandit #ayra #biggbosskannadaofficial #puneethrajkumar #rachitaram #biggboss #shrutiprakash #jothejotheyali #chandanshetty #vasuki #shineshetty #sanjithhegde #anushree #saregamapa


A post shared by Meghanachiru_forever (@megsraj_officialfc) on


ಚಿರು ಹುಟ್ಟುಹಬ್ಬಕ್ಕೆ ಅವರ ಗೆಳೆಯರಾದ ಪ್ರಜ್ವಲ್​ ದೇವರಾಜ್​, ಪನ್ನಾಗಭರಣ ಸೇರಿದಂತೆ ಹಲವಾರು ಮಂದಿ ಶುಭ ಕೋರುತ್ತಾ ಪೋಸ್ಟ್ ಮಾಡುತ್ತಿದ್ದಾರೆ.

Happy Birtday Chiranjeevi Sarja Kshatriya Movie teaser will be releasing today on his birthday 
ಕ್ಷತ್ರಿಯ ಸಿನಿಮಾದಲ್ಲಿ ಚಿರು ಸರ್ಜಾ


ಇನ್ನು ನಿನ್ನೆಯೇ ಧ್ರುವ ಸರ್ಜಾ ಒಂದು ಸಖತ್​ ವಿಡಿಯೋ ಹಂಚಿಕೊಂಡಿದ್ದು, ಅದು ವೈರಲ್​ ಆಗಿದೆ. ಅಲ್ಲದೆ ಮೇಘನಾರ ಸೀಮಂತದ ಸಾಕಷ್ಟು ವಿಡಿಯೋಗಳು ಈಗ ಸಾಮಾಜಿಕ ಜಾಲತಾನದಲ್ಲಿ ವೈರಲ್​ ಆಗುತ್ತಿವೆ.


ತುಂಬು ಗರ್ಭಿಣಿ ಮೇಘನಾ ರಾಜ್​ ಇಂದೇ ಜೂನಿಯರ್​ ಚಿರುಗೆ ಜನ್ಮ ನೀಡಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಅದರಲ್ಲೂ ನಿನ್ನೆ ಧ್ರುವಾ ಹಂಚಿಕೊಂಡಿರುವ ವಿಡಿಯೋದಲ್ಲಿ ಜೂನಿಯರ್​ ಚಿರು ಕಮಿಂಗ್​ ಸೂನ್​ ಎಂದು ಬರೆಯಲಾಗಿದೆ. ಅದಕ್ಕೆ ಅಭಿಮಾನಿಗಳು ಇಂದು ಕಾತರರಾಗಿ ಕಾಯುತ್ತಿದ್ದಾರೆ.
Published by: Anitha E
First published: October 17, 2020, 8:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading