ಕೊಹ್ಲಿ-ಅನುಷ್ಕಾ ಮೊದಲ ವಿವಾಹ ವಾರ್ಷಿಕೋತ್ಸವ: ವಿರುಷ್ಕಾ ಲವ್​​ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು?

ಕೊಹ್ಲಿ ಪತ್ನಿ ಅನುಷ್ಕಾ ಅವರು ಈಗಾಗಲೇ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಇಂದು ಮೊದಲ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಳ್ಳಲಿದ್ದಾರೆ.

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

  • News18
  • Last Updated :
  • Share this:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಮದುವೆಯಾಗಿ ಇಂದಿಗೆ ಒಂದು ವರ್ಷ. ಕಳೆದ ವರ್ಷ ಇದೇ ದಿನ ಅದ್ಧೂರಿಯಾಗಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ವಿರುಷ್ಕಾ ಜೋಡಿ ಕಾಲಿಟ್ಟಿದ್ದರು.

ಸದ್ಯ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ನಿನ್ನೆ ತಾನೆ ಮುಕ್ತಾಯಗೊಂಡ ಮೊದಲ ಟೆಸ್ಟ್​​ನಲ್ಲಿ ಕೊಹ್ಲಿ ಪಡೆ 31 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಕೊಹ್ಲಿ ಪತ್ನಿ ಅನುಷ್ಕಾ ಅವರು ಈಗಾಗಲೇ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಇಂದು ಮೊದಲ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಳ್ಳಲಿದ್ದಾರೆ.

ವಿರುಷ್ಕಾ ಲವ್​​ ಸ್ಟೋರಿ:

ದೆಹಲಿ ಮೂಲದವರಾದ ಇವರಿಬ್ಬರ ಪರಿಚಯವಾಗಿದ್ದು 2013ರ ಜಾಹೀರಾತು ಚಿತ್ರೀಕರಣವೊಂದರಲ್ಲಿ. ಕ್ಲಿಯರ್ ಹೇರ್ ಶಾಂಪುನಲ್ಲಿ ಬ್ಲಾಕ್ ಡ್ರೆಸ್‍ನಲ್ಲಿ ಹಾಟ್ ಜೋಡಿ ಆಗಿ ಕಾಣಿಸಿಕೊಂಡ ಇವರು ನೋಡುಗರ ಹುಬ್ಬೇರುವಂತೆ ಮಾಡಿತ್ತು. ಮೊದಲ ಪರಿಚಯದಿಂದಲೇ ಇಬ್ಬರು ಮನಸೋತರು. ಪರಿಚಯ ಸ್ನೇಹವಾಗಿ.. ಸದ್ದಿಲ್ಲದೇ ಡೇಟಿಂಗ್ ಕೂಡ ಆರಂಭಿಸಿದರು. ಅದು ಎಷ್ಟರ ಮಟ್ಟಿಗೆ ಅಂದರೆ ಕೊಹ್ಲಿ ವಿದೇಶಕ್ಕೆ ಟೂರ್ನಮೆಂಟ್‍ಗೆ ತೆರಳಿದರೆ ಅನುಷ್ಕಾ ಸಹ ಕದ್ದು ಮುಚ್ಚಿ ವಿಮಾನ ಏರುತ್ತಿದ್ದರು. ಈ ಮಧ್ಯೆ ಅನುಷ್ಕಾರನ್ನ ಕೊಹ್ಲಿ ಹಿಂಬಾಲಿಸಿದ್ದೂ ಇದೆ.

ಇದನ್ನೂ ಓದಿ'ಎಲ್ಲರು ಪೂಜಾರ ಆಗಲು ಸಾಧ್ಯವಿಲ್ಲ': ರಿಷಭ್ ಪಂತ್ ಸ್ಲೆಡ್ಜಿಂಗ್​ಗೆ ಬೆಚ್ಚಿದ ಆಸೀಸ್ಇಷ್ಟೆಲ್ಲಾ ಕದ್ದು ಮುಚ್ಚಿ ಓಡಾಡುತ್ತಿದ್ದ ಜೋಡಿ ಅಂತೂ ಒಂದು ದಿನ ಎಲ್ಲರ ಕಣ್ಣಿಗೆ ಕಂಡರು. ಅದು ಸ್ವರ್ಗವೇ ಧರಗಿಳಿದಿರುವಂತೆ ಕಾಣುವ ನ್ಯೂಜಿಲೆಂಡ್‍ನಲ್ಲಿ. ಅಷ್ಟು ದಿನ ಹೇಗೋ ಅರಾಮಾಗಿ ಸುತ್ತುತ್ತಿದ್ದ ಜೋಡಿಗೆ ಅಯ್ಯೋ ಸಿಕ್ಕಿ ಬಿದ್ದವಲ್ಲ ಎಂಬ ಮುಜುಗರ ಒಂದು ಕಡೆ ಆದರೆ, ಮತ್ತೊಂದೆಡೆ ಇನ್ನೇನು ಗೊತ್ತಾಯಿತಲ್ಲ.. ಅರಾಮಾಗಿ ಓಡಾಡೋಣ ಎಂಬ ಧೈರ್ಯ.

ಈ ಮೂಲಕ ಗಪ್​​ಚುಪ್​ ಆಗಿದ್ದ ವಿರುಷ್ಕಾ ಪ್ರೀತಿ ಬಹಿರಂಗವಾಗಿದ್ದೇ ತಡ. ಇಬ್ಬರೂ ಪ್ರೀತಿಯನ್ನ ಒಪ್ಪಿಕೊಂಡು ಕಳೆದ ವರ್ಷ ಡಿಸೆಂಬರ್ 11ರಂದು ಅದ್ಧೂರಿಯಾಗಿ ಇಟಲಿಯಲ್ಲಿ ಮದುವೆಯಾದರು. ಇವರು ಮದುವೆಯಾಗಿ ಇಂದಿಗೆ ಒಂದು ವರ್ಷವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿವೆ.

  5 ರಾಜ್ಯಗಳ ಚುನಾವಣಾ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

First published: