Hansika Motwani: ಮಗಳ ಮದುವೆಯಲ್ಲಿಯೇ 5 ಲಕ್ಷಕ್ಕೆ ಬೇಡಿಕೆ ಇಟ್ಟ ನಟಿ ತಾಯಿ

ಹನ್ಸಿಕಾ ಮೋಟ್ವಾನಿ ಮದುವೆ ಫೋಟೋ

ಹನ್ಸಿಕಾ ಮೋಟ್ವಾನಿ ಮದುವೆ ಫೋಟೋ

ನಟಿ ಹನ್ಸಿಕಾ ಮದುವೆಯ ಸಂಪ್ರದಾಯದ ಎಲ್ಲಾ ಆಚರಣೆಗಳು ಯಾವುದೇ ತೊಂದರೆಯಿಲ್ಲದೆ ನಡೆದವು. ಆದರೆ ಹನ್ಸಿಕಾ ಅವರ ತಾಯಿ ಮೋನಾ ಮೋಟ್ವಾನಿ ಅವರಿಗೆ ಮಾತ್ರ ಒಂದು ವಿಷಯದ ಬಗ್ಗೆ ಅಸಮಾಧಾನವಿತ್ತು.

  • Share this:

ಮುಂಬೈ: ಮದುವೆಯೆಂದ (Marriage) ಮೇಲೆ ಒಂದಲ್ಲ ಒಂದು ಹಂಗಾಮಾ ಇದ್ದೇ ಇರುತ್ತೆ. ಮದುವೆಯೆಂದ ಮೇಲೆ ನೂರಾರು ಜನರು ಬಂದಿರುತ್ತಾರೆ. ಊಟ ವ್ಯವಸ್ಥೆ ಬಂದವರನ್ನು ಮಾತನಾಡಿಸೋದು. ಇನ್ನು ಎರಡೂ ಮನೆಯವರ ಶಾಸ್ತ್ರ ಸಂಪ್ರದಾಯ (Wedding Plan). ಇಷ್ಟೆಲ್ಲ ಕೆಲಸದ ಮಧ್ಯೆ ಒಂದಲ್ಲ ಒಂದು ಲೋಪ ಆಗಿಯೇ ಆಗುತ್ತದೆ. ಹಾಗಾಗಿ ಚಿಕ್ಕ ಪುಟ್ಟ ಅಸಮಾಧಾನಗಳು ಸಹಜ. ಇದು ಜನಸಾಮಾನ್ಯರ ಮದುವೆಯಲ್ಲಿನ ಸಂಗತಿಗಳಾದರೆ ಸೆಲೆಬ್ರಿಟಿಗಳ ಮದುವೆಯಲ್ಲೂ (Celebrity Marriage)  ಇಂಥ ಸಮಸ್ಯೆಗಳು ಆಗುತ್ತದೆ.


ಇತ್ತೀಚೆಗೆ ನಟಿ ಹನ್ಸಿಕಾ ಮೋಟ್ವಾನಿ (Hansika Motwani's Marriage), ಉದ್ಯಮಿ ಸೋಹೇಲ್ ಕಥುರಿಯಾ (Businessman Sohael Kathuria) ಅವರೊಂದಿಗೆ ಹಸೆಮಣೆ ಏರಿದರು. ಈ ಜೋಡಿ 2022 ರ ಡಿಸೆಂಬರ್‌ ತಿಂಗಳಲ್ಲಿ ರಾಜಸ್ಥಾನದ ಜೈಪುರದ ಮುಂಡೋಟಾ ಫೋರ್ಟ್ ಮತ್ತು ಅರಮನೆಯಲ್ಲಿ ತಮ್ಮ ಆಪ್ತ ಸ್ನೇಹಿತರು ಮತ್ತು ಕುಟುಂಬದ ಉಪಸ್ಥಿತಿಯಲ್ಲಿ ವಿವಾಹವಾದರು.


ಸೆಲೆಬ್ರಿಟಿಗಳ ಮದುವೆ ಅಂದ್ರೆ ಕೇಳಬೇಕಾ? ಮಹತ್ವದ ಕಾರ್ಯಕ್ರಮಗಳಾದ ಮೆಹೆಂದಿ ಪೋಲೋ, ಸಂಗೀತ ಮತ್ತು ಹಲ್ದಿ ಕಾರ್ಯಕ್ರಮಗಳನ್ನು ಭರ್ಜರಿಯಾಗೇ ಏರ್ಪಡಿಸಲಾಗಿತ್ತು.


ಹನ್ಸಿಕಾ ಮೋಟ್ವಾನಿ ಮದುವೆ


ಲವ್, ಶಾದಿ ಡ್ರಾಮಾ


ನಟಿ ಹನ್ಸಿಕಾ ಅವರ ಲವ್ ಶಾದಿ ಡ್ರಾಮಾ ಪ್ರಸ್ತುತ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ. ಈ ವೆಬ್‌ ಸಿರೀಸ್‌ನ ಇತ್ತೀಚಿನ ಸಂಚಿಕೆಯಲ್ಲಿ ನಟಿ ಹನ್ಸಿಕಾ ತಾಯಿ ಮೋನಾ ಮೋಟ್ವಾನಿ ಅವರು ಸಮಾರಂಭಗಳಿಗೆ ತಡವಾಗಿ ಬಂದಿದ್ದಕ್ಕಾಗಿ ವರನ ಕುಟುಂಬ ಸದಸ್ಯರಿಗೆ 5 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದರು.


ನಟಿ ಹನ್ಸಿಕಾ ತಾಯಿಗೆ ಅಸಮಾಧಾನ !


ನಟಿ ಹನ್ಸಿಕಾ ಮದುವೆಯ ಸಂಪ್ರದಾಯದ ಎಲ್ಲಾ ಆಚರಣೆಗಳು ಯಾವುದೇ ತೊಂದರೆಯಿಲ್ಲದೆ ನಡೆದವು. ಆದರೆ ಹನ್ಸಿಕಾ ಅವರ ತಾಯಿ ಮೋನಾ ಮೋಟ್ವಾನಿ ಅವರಿಗೆ ಮಾತ್ರ ಒಂದು ವಿಷಯದ ಬಗ್ಗೆ ಅಸಮಾಧಾನವಿತ್ತು.


ಈವೆಂಟ್‌ಗಳಿಗೆ ತಡವಾಗಿ ಬಂದಿದ್ದಕ್ಕಾಗಿ ಸೋಹೇಲ್‌ನ ಕುಟುಂಬದೊಂದಿಗೆ ಮೋನಾ ಅಸಮಾಧಾನಗೊಂಡಿದ್ದರು. ಆದರೆ ಮೋನಾ ಅವರು ಹಾಗೇ ಸುಮ್ಮನಾಗಲಿಲ್ಲ. ಬದಲಾಗಿ ಅವರು ಸೋಹೇಲ್ ಅವರ ತಾಯಿಗೆ ಕರೆ ಮಾಡಿ ಸಮಾರಂಭಗಳಿಗೆ ತಡವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ತಡವಾಗಿ ಬಂದವರು 5 ಲಕ್ಷ ನೀಡಬೇಕು!


ಹೌದು, ಈ ಬಗ್ಗೆ ದೂರಿರುವ ಮೋನಾ ಮೋಟ್ವಾನಿ, “ಒಂದು ವಿನಮ್ರ ವಿನಂತಿ ಇದೆ. ಕಥುರಿಯಾ ಕಡೆಯವರು ಈವೆಂಟ್‌ಗಳಿಗೆ ಬಹಳ ತಡವಾಗಿ ಬರುತ್ತಿದ್ದಾರೆ. ಮೋಟ್ವಾನಿಯವರು ಬಹಳ ಸಮಯಪ್ರಜ್ಞೆ ಹೊಂದಿದ್ದಾರೆ.


ಅಲ್ಲದೇ ನೀವು ಇಂದು ತಡವಾಗಿ ಬಂದರೆ, ಪ್ರತಿ ನಿಮಿಷ ವಿಳಂಬಕ್ಕೆ 5 ಲಕ್ಷ ರೂ ನೀಡಬೇಕಾಗುತ್ತದೆ. ಏಕೆಂದರೆ ಅಶುಭ ಸಮಯವು ಸಂಜೆ 4:30 ರಿಂದ 6 ರವರೆಗೆ ಇರುತ್ತದೆ. ಆದ್ದರಿಂದ ನೀವು ಸ್ವಲ್ಪ ಬೇಗ ಬರಬೇಕೆಂದು ವಿನಂತಿಸುತ್ತೇನೆ" ಎಂಬುದಾಗಿ ಮೋನಾ ಹೇಳಿದ್ದಾರೆ.


ಹನ್ಸಿಕಾ ಮೋಟ್ವಾನಿ ಮದುವೆ


ಹನ್ಸಿಕಾ ಹೇಳಿದ್ದೇನು?


ಇತ್ತ ಮಂಟಪದಲ್ಲಿ ಸೋಹೇಲ್ ಕಾಯುತ್ತಿರುವುದನ್ನು ನೋಡಿದ ಹನ್ಸಿಕಾ ತಮ್ಮ ಭಾವನೆ ವಿವರಿಸಿದ್ದಾರೆ. ಅದೊಂದು ಅತಿ ವಾಸ್ತವಿಕ ಕ್ಷಣ ಎಂದು ಹೇಳಿರುವ ಹನ್ಸಿಕಾ, “ನಾನು ನನ್ನ ಜೀವನದ ಪ್ರೀತಿಯನ್ನು ಮದುವೆಯಾಗುತ್ತಿದ್ದೇನೆ. ಇದು ಅದ್ಭುತ ಭಾವನೆ. ನಾನು ಅಂದುಕೊಂಡ ಎಲ್ಲ ಸಂಗತಿಗಳೂ ನಿಜವಾಗುತ್ತಿವೆ. ನಾನು ಮದುವೆಯಾಗುತ್ತಿದ್ದೇನೆ. ಅದನ್ನು ಹೇಗೆ ವಿವರಿಸಬೇಕೆಂದು ನನಗೆ ತಿಳಿದಿಲ್ಲ. ಆದರೆ ಆ ಕ್ಷಣಗಳು ತುಂಬಾ ವಿಭಿನ್ನವಾಗಿತ್ತು. ಆದರೂ ನನಗೆ ನನ್ನ ಭಾವನೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿಲ್ಲ" ಎಂದಿದ್ದಾರೆ.


ಯಾರು ಈ ಸೋಹೆಲ್?


ಅಂದಹಾಗೆ ಹನ್ಸಿಕಾ ಪತಿ, ಸೊಹೇಲ್ ಮುಂಬೈ ಮೂಲದ ಉದ್ಯಮಿಯಾಗಿದ್ದು, ಅವರು ಹನ್ಸಿಕಾ ಅವರ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗೆ ಗೊತ್ತುಪಡಿಸಿದ ಪಾಲುದಾರರಾಗಿಯೂ ಕೆಲಸ ಮಾಡುತ್ತಾರೆ. ಅವರು ವಾಣಿಜ್ಯೋದ್ಯಮಿ, ಮತ್ತು 1985 ರಿಂದ ಜಾಗತಿಕವಾಗಿ ಬಟ್ಟೆಗಳನ್ನು ರಫ್ತು ಮಾಡುತ್ತಿರುವ ಜವಳಿ ಸಂಸ್ಥೆಯನ್ನು ಹೊಂದಿದ್ದಾರೆ.


ಇದನ್ನೂ ಓದಿ: Hansika Motwani: ಸಿಂಬು ಜೊತೆ ಲವ್! ನಾನು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಹುಡುಗಿ ಎಂದ ಹನ್ಸಿಕಾ


ಕಳೆದ ವರ್ಷ ನವೆಂಬರ್‌ನಲ್ಲಿ ಹನ್ಸಿಕಾ ಸೋಹೇಲ್ ಜೊತೆ ತನ್ನ ನಿಶ್ಚಿತಾರ್ಥವನ್ನು ಘೋಷಿಸಿದ್ದು, ಎಲ್ಲರನ್ನು ಆಶ್ಚರ್ಯ ಚಕಿತರನ್ನಾಗಿಸಿತ್ತು. ಅಲ್ಲದೇ ಹನ್ಸಿಕಾ ಪ್ಯಾರೀಸ್‌ ನ ಐಫೆಲ್‌ ಟವರ್‌ ನಲ್ಲಿ ಸೋಹೇಲ್‌ ಪ್ರಪೋಸ್‌ ಮಾಡಿದ ಕ್ಷಣವನ್ನು ಹಂಚಿಕೊಂಡಿದ್ದರು.

Published by:Mahmadrafik K
First published: