• Home
  • »
  • News
  • »
  • entertainment
  • »
  • Hansika Motwani: 'ಬಿಂದಾಸ್' ಬೆಡಗಿ ಹನ್ಸಿಕಾ ಮದುವೆ ಖರ್ಚೆಷ್ಟು? ಗೊತ್ತಾದರೆ ಖಂಡಿತ ನೀವು ಶಾಕ್ ಆಗ್ತೀರಿ!

Hansika Motwani: 'ಬಿಂದಾಸ್' ಬೆಡಗಿ ಹನ್ಸಿಕಾ ಮದುವೆ ಖರ್ಚೆಷ್ಟು? ಗೊತ್ತಾದರೆ ಖಂಡಿತ ನೀವು ಶಾಕ್ ಆಗ್ತೀರಿ!

ಸತತ ಮೂರು ದಿನಗಳ ಕಾಲ ಸುಮಾರು 450 ವರ್ಷಗಳ ಹಿಂದಿನ ಮುಂಡೋಟಾ ಅರಮನೆಯಲ್ಲಿ ವೈಭವೋಪೇತವಾಗಿ ಮದುವೆ ನಡೆದಿತ್ತು.

ಸತತ ಮೂರು ದಿನಗಳ ಕಾಲ ಸುಮಾರು 450 ವರ್ಷಗಳ ಹಿಂದಿನ ಮುಂಡೋಟಾ ಅರಮನೆಯಲ್ಲಿ ವೈಭವೋಪೇತವಾಗಿ ಮದುವೆ ನಡೆದಿತ್ತು.

ಸತತ ಮೂರು ದಿನಗಳ ಕಾಲ ಸುಮಾರು 450 ವರ್ಷಗಳ ಹಿಂದಿನ ಮುಂಡೋಟಾ ಅರಮನೆಯಲ್ಲಿ ವೈಭವೋಪೇತವಾಗಿ ಮದುವೆ ನಡೆದಿತ್ತು.

  • News18 Kannada
  • Last Updated :
  • Rajasthan, India
  • Share this:

ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಟಿ ಎಂದೇ ಗುರುತಿಸಿಕೊಂಡಿರೋ ಹನ್ಸಿಕಾ ಮೋಟ್ವಾನಿ  (Hansika Motwani) ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಹು ಕಾಲದ ಗೆಳೆಯ, ಉದ್ಯಮಿಯಾಗಿರೋ ಸೊಹೈಲ್ ಖತುರಿಯಾ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಾಗಿದ್ದರು. ಆದರೆ ಅದ್ಧೂರಿಯಾಗಿ ಜರುಗಿದ ಹನ್ಸಿಕಾ ಮದುವೆ ಖರ್ಚು ಎಷ್ಟು ಎಂಬ ವಿಚಾರ ಸಖತ್ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ಬಿಂದಾಸ್ (Bindaas) ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಹನ್ಸಿಕಾ ಅವರ ವಿವಾಹ ಸಮಾರಂಭ ರಾಜಸ್ಥಾನದ ಐತಿಹಾಸಿಕ ಮುಂಡೋಟಾ ಅರಮನೆಯಲ್ಲಿ (Mundota Palace) ನೆರವೇರಿತ್ತು. ಡಿಸೆಂಬರ್ 4ರಂದು ನಡೆದಿದ್ದ ಹನ್ಸಿಕಾ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗ್ತಿದ್ದು, ಅಭಿಮಾನಿಗಳು ನವಜೋಡಿಗೆ ಶುಭಕೋರಿ ಪ್ರತಿಕ್ರಿಯೆ ನೀಡಿದ್ದಾರೆ. ಹನ್ಸಿಕಾ ಮೊದಲ ಬಾರಿಗೆ ವೈವಾಹಿಕ ಸಂಬಂಧಕ್ಕೆ ಕಾಲಿಟ್ಟಿದ್ದು, ಸೊಹೈಲ್​​ಗೆ ಇದು ಎರಡನೇ ಮದುವೆಯಾಗಿದೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಉದ್ಯಮಿ ಹನ್ಸಿಕಾ ಅವರ ಕೈ ಹಿಡಿದಿದ್ದಾರೆ. ಸೊಹೈಲ್​ ಮೊದಲ ಪತ್ನಿ ಹನ್ಸಿಕಾ ಅವರ ಗೆಳತಿಯೂ ಆಗಿದ್ದಾರೆ.


ಜೈಪುರದ ಐತಿಹಾಸಿಕ ಅರಮನೆಯಲ್ಲಿ ನಡೆದಿದ್ದ ವಿವಾಹ


ಹನ್ಸಿಕಾ ಹಾಗೂ ಸೊಹೈಲ್ ಇಬ್ಬರೂ ಉದ್ಯಮದಲ್ಲಿ ಪಾಲುದಾರರಾಗಿದ್ದ ಕಾರಣ ಇಬ್ಬರ ನಡುವೆ ಸ್ನೇಹ ಏರ್ಪಟ್ಟು, ಕೆಲ ಸಮಯದ ಬಳಿಕ ಸ್ನೇಹ ಪ್ರೀತಿಯಾಗಿ ಮಾರ್ಪಡಾಗಿತ್ತು. ಕೆಲ ಸಮಯ ಪ್ರೇಮಿಗಳಾಗಿ ಸುತ್ತಾಡಿದ್ದ ಇಬ್ಬರು ಕೊನೆಗೆ ವೈವಾಹಿಕ ಬದುಕಿಗೆ ಕಾಲಿಡಲು ನಿರ್ಧರಿಸಿ, ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಡಿಸೆಂಬರ್ 4ರಂದು ಮದುವೆ ನಡೆದರೇ, ಡಿಸೆಂಬರ್ 2ರಿಂದಲೇ ಮದುವೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದಿದ್ದವು. ಸತತ ಮೂರು ದಿನಗಳ ಕಾಲ ಸುಮಾರು 450 ವರ್ಷಗಳ ಹಿಂದಿನ ಮುಂಡೋಟಾ ಅರಮನೆಯಲ್ಲಿ ವೈಭವೋಪೇತವಾಗಿ ಮದುವೆ ನಡೆದಿತ್ತು.
ಇದನ್ನೂ ಓದಿ: Yash-Radhika Pandit: ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಜೋಡಿ!


ಮೂರು ದಿನಗಳ ಕಾಲ, ಅದು ರಾಜಸ್ಥಾನ ಐತಿಹಾಸಿಕ ಅರಮನೆಯಲ್ಲಿ ವಿವಾಹ ಕಾರ್ಯಕ್ರಮಗಳು ನಡೆದ ಕಾರಣ, ದಂಪತಿ ಭಾರೀ ಪ್ರಮಾಣದಲ್ಲಿ ಖರ್ಚು ಮಾಡಿದ್ದಾರೆ. ಅಲ್ಲಿನ ಒಂದು ಹೋಟೆಲ್ ರೂಮ್ ಬಾಡಿಗೆಯೇ ಸುಮಾರು 60 ಸಾವಿರ ರೂಪಾಯಿಗಳಷ್ಟಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯೂ ನಡೆದಿತ್ತು.


ಒಂದು ಅಂದಾಜಿನ ಪ್ರಕಾರ, ಹನ್ಸಿಕಾ-ಸೊಹೈಲ್ ಮದುವೆ ಕಾರ್ಯಕ್ರಮಗಳಿಗೆ 20 ಕೋಟಿ ರೂಪಾಯಿ ಖರ್ಚಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕುರಿತು ಖಚಿತ ಮಾಹಿತಿಯನ್ನು ನವ ದಂಪತಿಗಳು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಮದುವೆ ಮಾತ್ರವಲ್ಲ ಹನಿಮೂನ್​​​ ಕೂಡ ಸಖತ್ ಡಿಫರೆಂಟ್


ಮದುವೆ ವಿಚಾರದಲ್ಲೇ ವಿಶೇಷವಾಗಿ ಯೋಚನೆ ಮಾಡಿದ್ದ ಹನ್ಸಿಕಾ, ಹನಿಮೂನ್​​​ ಬಗ್ಗೆಯೂ ಡಿಫರೆಂಟ್​​ ಆಗಿ ಯೋಚನೆ ಮಾಡಿದ್ದರಂತೆ. ಮುಂದಿನ ಮೂರು ವಾರಗಳ ಕಾಲ ಫಾರಿನ್​​ನಲ್ಲಿ ಹನಿಮೂನ್​ಗೆ ತೆರಳಲು ಹನ್ಸಿಕಾ-ಸೊಹೈಲ್ ದಂಪತಿ ಫ್ಲಾನ್ ಮಾಡಿದ್ದರಂತೆ.


ಇದನ್ನೂ ಓದಿ: Vasishta Simha-Haripriya: ಪ್ರೀತಿ ಹುಟ್ಟಿಸಿದ ಸಿನಿಮಾಕ್ಕೆ ಒಟ್ಟಿಗೆ ಡಬ್ಬಿಂಗ್ ಮಾಡಿದ ವಸಿಷ್ಠ-ಹರಿಪ್ರಿಯಾ!


ಮೊದಲು ಮಾಲ್ಡೀವ್ಸ್​​ಗೆ ತೆರಳಲು ನವ ದಂಪತಿ ಮುಂದಾಗಿದ್ದು, ಅಲ್ಲಿ ಇಷ್ಟ ಆಗಿಲ್ಲ ಎಂದರೇ ಇಟಲಿ ಅಥವಾ ಸ್ವಿಟ್ಜರ್ಲ್ಯಾಂಡ್​ಗೆ ಹೋಗ್ತಾರಂತೆ ಅಂತ ಸುದ್ದಿಗಳು ಹರಿದಾಡುತ್ತಿದೆ. ಇದನ್ನು ತಿಳಿದುಕೊಂಡಿರೋ ಹನ್ಸಿಕಾ ಅಭಿಮಾನಿಗಳು, ತಮ್ಮ ನೆಚ್ಚಿನ ನಟಿ ನಟನೆಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ತುಂಬಾ ವಿಶೇಷ ಎಂದು ಕಾಮೆಂಟ್ ಮಾಡ್ತಿದ್ದಾರೆ.

Published by:Sumanth SN
First published: