Justin Bieber: ಲವ್ ಲೆಟರ್ ಬರೆದು ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಗಾಯಕ ಜಸ್ಟಿನ್ ಬೈಬರ್!

Hailey Bieber 25th birthday: ಈ ಬಾರಿ ಗಾಯಕ ಜಸ್ಟಿನ್ ಬೈಬರ್ ಅವರು ಸುದ್ದಿಯಲ್ಲಿರುವುದು ತಾವು ತಮ್ಮ ತುಂಬಾ ಹತ್ತಿರದವರಿಗೆ ಸಾಮಾಜಿಕ ಮಾಧ್ಯಮದಲ್ಲಿರುವ ಖಾತೆಯ ಪುಟದಲ್ಲಿ ತುಂಬಾನೇ ಸುಂದರವಾಗಿ ಬರೆದ ಪ್ರೇಮ ಟಿಪ್ಪಣಿಯಿಂದ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಅರೇ ಇವರಿಗೆ ಈಗಾಗಲೇ ಮದುವೆಯಾಗಿದೆ, ಇವರು ಯಾರ ಬಗ್ಗೆ ಬರೆದಿದ್ದಾರೆ ಎಂದು ನೀವು ಗಾಬರಿಯಾಗಬಹುದು.

ಜಸ್ಟಿನ್​ ಬೈಬರ್​- ಹೇಲಿ ಬಾಲ್ಡ್ವಿನ್

ಜಸ್ಟಿನ್​ ಬೈಬರ್​- ಹೇಲಿ ಬಾಲ್ಡ್ವಿನ್

  • Share this:
    ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕೆನಡಿಯನ್ ಸಿಂಗರ್ ಜಸ್ಟಿನ್ ಬೈಬರ್ (Justin Bieber) ಯಾರಿಗೆ ಗೊತ್ತಿಲ್ಲ ಹೇಳಿ? ಇವರು ಹೇಲಿ ಬಾಲ್ಡ್ವಿನ್ (Hailey Bieber) ಅವರನ್ನು ಮದುವೆಯಾದಾಗಿನಿಂದಲೂ ಯಾವುದಾದರೊಂದು ರೋಚಕ ವಿಷಯಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಮಾಧ್ಯಮಗಳಲ್ಲಿ (Soacial Media) ಸದಾ ಸುದ್ದಿಯಲ್ಲಿರುವ ಸೆಲೆಬ್ರಿಟಿ (Clebrity) ದಂಪತಿಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ.

    ಈಗಾಗಲೇ ಕೆನಡಿಯನ್ ಗಾಯಕ ಜಸ್ಟಿನ್ ಬೈಬರ್ ಮತ್ತು ಹೇಲಿ ಬಾಲ್ಡ್ವಿನ್ ದಂಪತಿಗಳಿಬ್ಬರೂ ಅಂತರ್ಜಾಲದಲ್ಲಿ ತಮ್ಮ ಪೋಸ್ಟ್ ಗಳಿಂದ ಸಾಕಷ್ಟು ಅಭಿಮಾನಿಗಳ ಮನೆ ಮಾತಾಗಿದ್ದಾರೆ ಎಂದು ಹೇಳಬಹುದು.

    ಈ ಬಾರಿ ಗಾಯಕ ಜಸ್ಟಿನ್ ಬೈಬರ್ ಅವರು ಸುದ್ದಿಯಲ್ಲಿರುವುದು ತಾವು ತಮ್ಮ ತುಂಬಾ ಹತ್ತಿರದವರಿಗೆ ಸಾಮಾಜಿಕ ಮಾಧ್ಯಮದಲ್ಲಿರುವ ಖಾತೆಯ ಪುಟದಲ್ಲಿ ತುಂಬಾನೇ ಸುಂದರವಾಗಿ ಬರೆದ ಪ್ರೇಮ ಟಿಪ್ಪಣಿಯಿಂದ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಅರೇ ಇವರಿಗೆ ಈಗಾಗಲೇ ಮದುವೆಯಾಗಿದೆ, ಇವರು ಯಾರ ಬಗ್ಗೆ ಬರೆದಿದ್ದಾರೆ ಎಂದು ನೀವು ಗಾಬರಿಯಾಗಬಹುದು.

    ಗಾಯಕ ತನ್ನ ಪ್ರೀತಿಯ ಮಡದಿ ಹೇಲಿ ಬೈಬರ್ ಅವರ 25 ನೇ ಜನ್ಮದಿನದಂದು (ನವೆಂಬರ್ 22) ಜಸ್ಟಿನ್ ಬೈಬರ್ ತಮ್ಮ ಪತ್ನಿಗೆ ಹೃತ್ಪೂರ್ವಕ ಹುಟ್ಟುಹಬ್ಬದ ಶುಭಾಶಯವನ್ನು ಹೇಳಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಮ್ಮ ಹೆಂಡತಿಯಾದ ಹೇಲಿ ಮತ್ತು ತನ್ನ ಹಲವಾರು ಹಿಂದಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ತಮ್ಮ ಪ್ರೀತಿಯ ಮಡದಿಯ ಹುಟ್ಟುಹಬ್ಬಕ್ಕೆ ಒಂದು ಸಿಹಿ ಟಿಪ್ಪಣಿಯನ್ನು ಬರೆದಿದ್ದಾರೆ.

    ಜಸ್ಟಿನ್ ಹಂಚಿಕೊಂಡ ಫೋಟೋದಲ್ಲಿ ಜಸ್ಟಿನ್ ಹೇಲಿ ಅವರ ಕೆನ್ನೆಗೆ ಚುಂಬಿಸುತ್ತಿರುವುದಾಗಿ ಮತ್ತು ಹೇಲಿ ತುಂಬಾನೇ ಕೋಪದಿಂದ ನೋಡುತ್ತಿರುವುದನ್ನು ಕಾಣಬಹುದಾಗಿದೆ.

    ಈ ಫೋಟೋಗೆ "ನನ್ನ ಪ್ರೀತಿಯ ಮಡದಿ ನನ್ನ ಹೃದಯ ನಿನಗೆ ಸೇರಿದ್ದು. ನನ್ನ ಕಣ್ಣುಗಳು ನಿನಗೆ ಸೇರಿವೆ, ನನ್ನ ತುಟಿಗಳು ನಿನಗೆ ಸೇರಿವೆ. ನಾನು ನಿನ್ನವನು. ನಾನು ನಿನ್ನವನಾಗಲು ತುಂಬಾ ಅದೃಷ್ಟ ಮಾಡಿರಬೇಕು. ನೀನು ಎಂದೆಂದಿಗೂ ನನ್ನವಳು. ನೀವು ನನ್ನ ಹೆಂಡತಿಯಾಗುವವರೆಗೂ ಜೀವನವು ಅಷ್ಟೊಂದು ಅರ್ಥಪೂರ್ಣವಾಗಿರಲಿಲ್ಲ. ನಾನು ನಿನ್ನನ್ನು ಪ್ರೀತಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ, ನಾನು ನಿನ್ನನ್ನು ರಕ್ಷಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ" ಎಂದು ಅವರು ಬರೆದಿದ್ದಾರೆ.

    ಇದನ್ನು ಓದಿ: Avatara Purushaನಾಗಿ ಹತ್ತು ಅವತಾರಗಳಲ್ಲಿ ಕಾಣಿಸಿಕೊಂಡಿರುವ ನಟ ಶರಣ್: 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್​






    ಈ ಪೋಸ್ಟ್ ಅನ್ನು ಸುಮಾರು 65 ಲಕ್ಷ ಜನ ಅಭಿಮಾನಿಗಳು ನೋಡಿ ಇಷ್ಟ ಪಟ್ಟಿದ್ದಾರೆ. 40 ಸಾವಿರಕ್ಕೂ ಹೆಚ್ಚು ಜನರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

    "ನೀನು ನನ್ನ ರಾಣಿ ನನಗೆ ಸಾಕಾಗುವುದಕ್ಕಿಂತ ಹೆಚ್ಚು ಮತ್ತು ನಾನು ಪ್ರತಿದಿನವೂ ನಿನ್ನನ್ನು ರಾಣಿಯಂತೆ ಭಾವಿಸುವಂತೆ ಮಾಡುತ್ತೇನೆ. ನಿಮ್ಮ ಅಜ್ಜಿ ತನ್ನ ಪೋರ್ಚುಗೀಸ್ ಉಚ್ಚಾರಣೆಯಲ್ಲಿ ಹೇಳುವಂತೆ "ಹ್ಯಾಪಿ ಬರ್ಸ್ಡೇ ಬೇಬಿ" ಸಮಯದ ಅಂತ್ಯದವರೆಗೆ ಮತ್ತು ನಂತರವೂ ಸಹ ನಿನ್ನನ್ನು ಪ್ರೀತಿಸುತ್ತಾ ಇರುತ್ತೇನೆ" ಎಂದು ಜಸ್ಟಿನ್ ತಮ್ಮ ಟಿಪ್ಪಣಿಯನ್ನು ಕೊನೆಗೊಳಿಸಿದ್ದಾರೆ.

    ಇದನ್ನು ಓದಿ: Bangarraju Teaser: ನಾಗಚೈತನ್ಯ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್‌; ಹುಟ್ಟುಹಬ್ಬದಂದೇ ಬಂಗಾರ್‌ರಾಜು ಸಿನಿಮಾ ಟೀಸರ್ ಬಿಡುಗಡೆ

    ಚೆಲ್ಸಿ ಬೈಬರ್, ರೋಮಿಯೋ ಬೆಕ್‌ಹ್ಯಾಮ್, ಕಾಸನ್ ಕೆನಡಿ, ಅಲೈಯಾ ಬಾಲ್ಡ್ವಿನ್ ಅರೋನೊ ಮತ್ತು ಇತರರು ಹುಟ್ಟುಹಬ್ಬದ ಹುಡುಗಿಗೆ ಸಾಮಾಜಿಕ ಮಾಧ್ಯಮದಲ್ಲಿ ಶುಭ ಹಾರೈಸಿದ್ದಾರೆ. ಹೇಲಿ ಬಾಲ್ಡ್ವಿನ್ ಮತ್ತು ಜಸ್ಟಿನ್ ಬೈಬರ್ ಇಬ್ಬರೂ 2019 ರಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಭಾಗವಹಿಸಿದ ಖಾಸಗಿ ಸಮಾರಂಭವೊಂದರಲ್ಲಿ ವಿವಾಹವಾಗಿದ್ದರು.
    Published by:Harshith AS
    First published: