Haddi First Look: ಅದ್ಭುತ ಸುಂದರಿಯಾಗಿ ಬದಲಾದ ಟಾಪ್ ನಟ! ಇದ್ಯಾರು ಗೊತ್ತಾಯ್ತಾ?

Haddi FIRST look: ಹಡ್ಡಿ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಫಸ್ಟ್ ಲುಕ್ ಡಿಫರೆಂಟಾಗಿದ್ದು ಸಖತ್ ಹವಾ ಕ್ರಿಯೇಟ್ ಮಾಡಿದೆ. ಇಲ್ಲಿ ಹೈಲೈಟ್ ಆಗಿರೋ ಚೆಲುವೆ ವಾಸ್ತವದಲ್ಲಿ ಅವಳಲ್ಲ, ಅವನು ಎಂದರೆ ನೀವು ನಂಬುತ್ತೀರಾ?

ನವಾಜುದ್ದೀನ್ ಸಿದ್ದಿಕಿ

ನವಾಜುದ್ದೀನ್ ಸಿದ್ದಿಕಿ

  • Share this:
ಬಾಲಿವುಡ್​ ಸಿನಿಮಾ ಒಂದರ ಫಸ್ಟ್​ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ದಿನದಲ್ಲಿ ಎಷ್ಟೊಂದು ಫಸ್ಟ್​ಲುಕ್ ರಿಲೀಸ್ ಆಗುತ್ತೆ, ಆದರೆ ಈ ಲೆವೆಲ್​ಗೆ ಸೌಂಡ್ ಮಾಡೋದು ಭಾರೀ ಕಡಿಮೆ. ಆದರೆ ಇದು ಸ್ವಲ್ಪ ವಿಭಿನ್ನ. ಬಾಲಿವುಡ್​ನ ಸೂಪರ್ ಆರ್ಟಿಸ್ಟ್ ಒಬ್ಬರ ಸಿನಿಮಾದ ಫಸ್ಟ್​ ಲುಕ್ ಈಗ ಹವಾ ಸೃಷ್ಟಿಸಿದೆ. ಹೌದು ಗ್ರೇ ಕಲರ್ ಡ್ರೆಸ್​ನಲ್ಲಿರುವ ಮಾಡರ್ನ್ ಸುಂದರಿಯನ್ನು ಒಳಗೊಂಡಿರುವ ಫಸ್ಟ್​ ಲುಕ್ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ. ಈ ಫಸ್ಟ್​ಲುಕ್​ನಲ್ಲಿ ಮಿಂಚಿರೋ ಬಾಲಿವುಡ್ ಬೆಡಗಿ ಯಾರು? ಟಾಪ್ ನಟಿಯರು ಯಾರೂ ಅಲ್ಲ, ಹೊಸ ನಟಿಯರೇನಾದರೂ ಬಾಲಿವುಡ್​ಗೆ ಎಂಟ್ರಿ ಕೊಟ್ಟು ಡಿಬಟ್ ಸಿನಿಮಾ ಮಾಡ್ತಿದ್ದಾರಾ ಎಂಬೆಲ್ಲ ಪ್ರಶ್ನೆಗಳು ಸಿನಿಪ್ರಿಯರ ಮನಸಿನಲ್ಲಿ ಮೂಡಿಸುವಂತಿದೆ ಈ ಪೋಸ್ಟರ್.

ಆದರೆ ಅಸಲಿಗೆ ಇದು ಹೀರೋಯಿನ್ ಅಲ್ಲ. ಹೀರೋ! ಹೌದು ಪೋಸ್ಟರ್​ನಲ್ಲಿ ಕಂಡಾಕೆ ಅವಳಲ್ಲ, ಅವನು ಎಂಬುದು ಬಹಳಷ್ಟು ಜನರಿಗೆ ಗೊತ್ತೇ ಆಗಲ್ಲ. ಅಷ್ಟೊಂದು ಸುಂದರವಾದ ರೂಪಾಂತರ ಸಾಧ್ಯವಾಗಿದೆ.

ಬಾಲಿವುಡ್​ನ ಅದ್ಭುತ ನಟ

ನವಾಜುದ್ದೀನ್ ಸಿದ್ದಿಕಿ ಅವರು ಭಾರತದ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು ತಮ್ಮನ್ನು ತಾವು ಅತ್ಯುತ್ತಮವಾಗಿ ಬಾಲಿವುಡ್​ ಮೂಲಕ ಸಿನಿ ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಹಾಲಿವುಡ್‌ನಲ್ಲಿ ತಮ್ಮ ನಟನೆಯಿಂದ ಮನ್ನನೆ ಗಳಿಸಿದ್ದಾರೆ. ಬ್ಯಾಕ್-ಟು-ಬ್ಯಾಕ್ ಪ್ರಾಜೆಕ್ಟ್‌ಗಳೊಂದಿಗೆ, ನವಾಜುದ್ದೀನ್ ತನ್ನ ಅಭಿಮಾನಿಗಳಿಗೆ ವೀಕ್ಷಿಸಲು ಅದ್ಭುತವಾದ ಚಲನಚಿತ್ರಗಳ ಲಿಸ್ಟ್​ನ್ನೇ ನೀಡಿದ್ದಾರೆ.

ಸಂಪೂರ್ಣವಾಗಿ ರೂಪಾಂತರಗೊಂಡ ನಟ

ನಟ ಮುಂಚಿನಂತೆಯೇ ಮತ್ತೊಮ್ಮೆ ಸಿನಿಮಾ ಪ್ರೇಮಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ. ಅವರು ತಮ್ಮ ಹೊಸ ಪ್ರಾಜೆಕ್ಟ್ ಹಡ್ಡಿ ಎನೌನ್ಸ್ ಮಾಡಿದ್ದಾರೆ. ನಟ ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಂಡಿದ್ದರಿಂದ ಇದು ಪ್ರೇಕ್ಷಕರಲ್ಲಿ ಕುತೂಹಲದ ಹೆಚ್ಚಿಸಿದೆ. ಏಕೆಂದರೆ ಅವರು ಪಾತ್ರಕ್ಕಾಗಿ ಅಕ್ಷರಶಃ ರೂಪಾಂತರಗೊಂಡಿದ್ದಾರೆ.

ಇದನ್ನೂ ಓದಿ: Nawazuddin Siddiqui: ನವಾಜುದ್ದಿನ್ ವೈವಾಹಿಕ ಜೀವನಕ್ಕೆ ಮುಳುವಾಯ್ತಾ ಅಕ್ರಮ ಸಂಬಂಧ?; ಪುಸ್ತಕವೊಂದರಿಂದ ಮುರಿದು ಬಿತ್ತು ಸಂಬಂಧ

ಪೋಸ್ಟರ್ ಕುರಿತು ಹೆಚ್ಚಿನ ಮಾಹಿತಿ

ಮೋಷನ್ ಪೋಸ್ಟರ್‌ನಲ್ಲಿ, ನವಾಜುದ್ದೀನ್ ಉದ್ದನೆಯ ಕೂದಲಿನೊಂದಿಗೆ ಬೂದು ಬಣ್ಣದ ಮಿನುಗುವ ಗೌನ್ ಧರಿಸಿ ಸೋಫಾದ ಮೇಲೆ ಬೋಲ್ಡ್ ಆಗಿ ಕುಳಿತಿದ್ದಾರೆ. ಅವರ ಪಕ್ಕದಲ್ಲಿ ರಕ್ತದ ಕಲೆಗಳಿರುವ ಕಬ್ಬಿಣದ ರಾಡ್ ಕೂಡ ಇಡಲಾಗಿದೆ. ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ನಟ ಇದನ್ನು ಶೇರ್ ಮಾಡಿದ್ದಾರೆ. ನಟ ಇದಕ್ಕೆ ಕ್ಯಾಪ್ಶನ್ ನೀಡಿ, ಕ್ರೈಮ್‌ಗೆ ಹೊಸ ಅವತಾರವಿದೆ. ಎಫ್‌ಆರ್ ಡಿಸ್ ನಾಯರ್ ಸೇಡು ತೀರಿಸಿಕೊಳ್ಳುವ ಸಿನಿಮಾ ಹಡ್ಡಿ ಚಿತ್ರೀಕರಣವನ್ನು ಪ್ರಾರಂಭಿಸಿದೆ. 2023 ರಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: Top 10 Actors: ಟಾಪ್ 10 ಪಟ್ಟಿಯಲ್ಲಿ ಕನ್ನಡದ ನಟ! ಸೌತ್ ಹೀರೋಗಳದ್ದೇ ಮೇಲುಗೈ

ನವಾಜುದ್ದೀನ್ ಅವರ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ ನಂತರ, ಅನೇಕ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ. ಈ ವಿಶೇಷ ಪೋಸ್ಟರ್​ಗಾಗಿ ನಟನನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರರು ಕಮೆಂಟ್ ಮಾಡಿ, ವಾವ್ ! ಇದು ತುಂಬಾ ಕುತೂಹಲಕರವಾಗಿ ಕಾಣುತ್ತಿದೆ. ನಾನು ಈ ಸಿನಿಮಾ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ ಸರ್. ಆಲ್ ದಿ ಬೆಸ್ಟ್ ಎಂದಿದ್ದಾರೆ. ಸಿನಿಮಾದ ಚಿತ್ರೀಕರಣದ ಕೆಲಸ ನಡೆಯುತ್ತಿದ್ದು 2023 ರಲ್ಲಿ ಬಿಡುಗಡೆಯಾಗಲಿದೆ.

ಪಾತ್ರದ ಬಗ್ಗೆ ಮಾತನಾಡಿ, ಸೇಕ್ರೆಡ್ ಗೇಮ್ಸ್ ನಟ, ನಾನು ವಿಭಿನ್ನ ಆಸಕ್ತಿದಾಯಕ ಪಾತ್ರಗಳನ್ನು ಮಾಡಿದ್ದೇನೆ. ಆದರೆ ಹಡ್ಡಿ ವಿಶೇಷವಾದದ್ದು. ಏಕೆಂದರೆ ನಾನು ಹಿಂದೆಂದೂ ನೋಡಿರದ ಲುಕ್ ಈ ಸಿನಿಮಾದಲ್ಲಿ ಹೊಂದಿದ್ದೇನೆ ಎಂದಿದ್ದಾರೆ. ಹಡ್ಡಿಯನ್ನು ಜೀ ಸ್ಟುಡಿಯೋಸ್ ನಿರ್ಮಿಸಿದೆ.
Published by:Divya D
First published: