ರಾಜ್​ಕುಮಾರ್ ಕುಟುಂಬದ ಕುಡಿಯ ನಿಶ್ಚಿತಾರ್ಥಕ್ಕೆ ಸಿದ್ಧತೆ; ಅಣ್ಣನಿಗಿಂತ ಮುಂಚೆ ತಮ್ಮ ಹಸೆಮಣೆ ಹತ್ತಲು ರೆಡಿ

zahir | news18
Updated:July 3, 2018, 11:25 PM IST
ರಾಜ್​ಕುಮಾರ್ ಕುಟುಂಬದ ಕುಡಿಯ ನಿಶ್ಚಿತಾರ್ಥಕ್ಕೆ ಸಿದ್ಧತೆ; ಅಣ್ಣನಿಗಿಂತ ಮುಂಚೆ ತಮ್ಮ ಹಸೆಮಣೆ ಹತ್ತಲು ರೆಡಿ
zahir | news18
Updated: July 3, 2018, 11:25 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಜುಲೈ.03): ಕನ್ನಡದ ಕಣ್ಮಣಿ ಡಾ. ರಾಜ್ ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸುಪುತ್ರ ಯುವ ರಾಜ್​ಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಹಸೆಮಣೆ ಏರಲಿರುವ ದೊಡ್ಮನೆ ಹುಡುಗನ ನಿಶ್ಚಿತಾರ್ಥ ಇದೇ ತಿಂಗಳ ಜುಲೈ 5 ರಂದು ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಸಹೋದರ ವಿನಯ್​ ರಾಜಕುಮಾರ್​ ಅವರಿಗಿಂತ ಮುನ್ನವೇ ಹಸೆಮಣೆ ಏರಲು ಮುಂದಾಗಿರುವ ಯುವ ರಾಜ್​ಕುಮಾರ್​(ಗುರುರಾಜ್​ ಕುಮಾರ್) ಅವರು ಮೈಸೂರು ಮೂಲದ ಗೆಳತಿ ಶ್ರೀದೇವಿ ಬೈರಪ್ಪ ಅವರನ್ನು ವರಿಸಲಿದ್ದಾರೆ. ಎರಡು ಕುಟುಂಬದ ಸಮ್ಮುಖದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಶ್ಚಿತಾರ್ಥ ಶುಭಕಾರ್ಯ ನಡೆಯಲಿದೆ ಎನ್ನುತ್ತಿವೆ ಮೂಲಗಳು.

ಯುವರಾಜ್​ ಕುಮಾರ್​ ಅವರು ತಮ್ಮ ಸ್ವಂತ ಪ್ರೊಡಕ್ಷನ್​ ಹೌಸ್​ ವಜ್ರೇಶ್ವರಿ ಕಂಬೈನ್ಸ್​ನಲ್ಲಿ ಸಿನಿಮಾ ನಿರ್ಮಾಣದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ರಘುಶಾಸ್ತ್ರಿ ನಿರ್ದೇಶನದ ವಿನಯ್​ ರಾಜ್ ​ಕುಮಾರ್​ ಅಭಿಯನದ 'ರನ್​ ಆ್ಯಂಟನಿ' ಕನ್ನಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಇನ್ನು ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದತೆ ನಡೆಸಿರುವ ಯುವ ರಾಜ್​ಕುಮಾರ್​ ಅವರ ಮದುವೆ ಶೀಘ್ರದಲ್ಲೇ ನಡೆಯಲಿದೆ. ದೊಡ್ಮನೆ ಕುಟುಂಬದಲ್ಲಿ ನಡೆಯಲಿರುವ ಈ ಶುಭಕಾರ್ಯಕ್ಕೆ ಚಿತ್ರರಂಗದ ದಿಗ್ಗಜರು ಸಾಕ್ಷಿಯಾಗಲಿದ್ದಾರೆ. ಶಿವರಾಜ್​ ಕುಮಾರ್​ ಅವರ ಪುತ್ರಿ  ವಿವಾಹದ ನಂತರ ದೊಡ್ಮನೆಯಲ್ಲಿ ನಡೆಯುತ್ತಿರುವ ಮತ್ತೊಂದು ಶುಭಕಾರ್ಯ ಇದಾಗಿದೆ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...