ರಾಜ್​ ಕುಟುಂಬದ ಕುಡಿ ಯುವರಾಜ್​ ಕುಮಾರ್​ ನಿಶ್ಚಿತಾರ್ಥಕ್ಕೆ ಕ್ಷಣಗಣನೆ: ಆಪ್ತರ ಸಮ್ಮುಖದಲ್ಲಿ ಶುಭಕಾರ್ಯ

news18
Updated:July 4, 2018, 4:33 PM IST
ರಾಜ್​ ಕುಟುಂಬದ ಕುಡಿ ಯುವರಾಜ್​ ಕುಮಾರ್​ ನಿಶ್ಚಿತಾರ್ಥಕ್ಕೆ ಕ್ಷಣಗಣನೆ: ಆಪ್ತರ ಸಮ್ಮುಖದಲ್ಲಿ ಶುಭಕಾರ್ಯ
news18
Updated: July 4, 2018, 4:33 PM IST
ಬೆಂಗಳೂರು(ಜುಲೈ.04): ವರನಟ ಡಾ. ರಾಜ್ ಕುಟುಂಬದ ಕುಡಿ ಹಾಗೂ ನಟ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್​ಕುಮಾರ್ ​(ಗುರುರಾಜ್​ ಕುಮಾರ್) ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೈಸೂರಿನಲ್ಲಿ ಇದೇ ತಿಂಗಳು ಜುಲೈ 5.ಕ್ಕೆ ದೊಡ್ಮನೆ ಹುಡುಗನ ನಿಶ್ಚಿತಾರ್ಥ ನಡೆಯಲಿದೆ.

ಬಹುಕಾಲದ ಗೆಳೆತಿ, ಮೈಸೂರು ಮೂಲದ ಶ್ರೀದೇವಿ ಬೈರಪ್ಪ ಎಂಬಾಕೆಯೊಂದಿಗೆ ಯುವ ರಾಜ್​ಕುಮಾರ್ ಅವರ ನಿಶ್ಚಿತಾರ್ಥ ಖಾಸಗಿ ಹೊಟೆಲ್​ವೊಂದರಲ್ಲಿ ನಡೆಯಲಿದೆ. ಈಗಾಗಲೇ ರಾಕ್​ ಕುಟುಂಬ ಸಾಂಸ್ಕೃತಿಕ ನಗರಿಯಲ್ಲಿ ಬೀಡುಬಿಟ್ಟಿದ್ದು ನಿಶ್ಚಿತಾರ್ಥ ಕಾರ್ಯಗಳ ಸಿದ್ದತೆಯಲ್ಲಿ ತೊಡಗಿದೆ.

ಯುವರಾಜ್​ ಕುಮಾರ್​ ಅವರು ತಮ್ಮ ಸ್ವಂತ ಪ್ರೊಡಕ್ಷನ್​ ಹೌಸ್​ ‘ವಜ್ರೇಶ್ವರಿ ಕಂಬೈನ್ಸ್’​ನ ನಿರ್ಮಾಣದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ರಘುಶಾಸ್ತ್ರಿ ನಿರ್ದೇಶನದ ವಿನಯ್​ ರಾಜ್ ​ಕುಮಾರ್​ ಅಭಿಯನದ 'ರನ್​ ಆ್ಯಂಟನಿ' ಕನ್ನಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಸಹೋದರ ವಿನಯ್​ ರಾಜಕುಮಾರ್​ ಅವರಿಗಿಂತ ಮುನ್ನವೇ ಹಸೆಮಣೆ ಏರಲು ಮುಂದಾಗಿರುವ ಯುವ ರಾಜ್​ಕುಮಾರ್​ ಅವರು ಮುಂಬರುವ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ. ಅಣ್ಣವರ ಕುಟುಂಬದ ಈ ಶುಭಕಾರ್ಯಕ್ಕೆ ಆಪ್ತರು ಮತ್ತು ಚಿತ್ರರಂಗದ ಗಣ್ಯರು ಸಾಕ್ಷಿಯಾಗಲಿದ್ದಾರೆ.
First published:July 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ