ತರುಣ್ ಸುಧೀರ್ ಹಾಗೂ ಶರಣ್ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಸಿನಿಮಾ ಗುರುಶಿಷ್ಯರು. ಲಡ್ಡು ಫಿಲ್ಮ್ಸ್ ಮತ್ತು ತರುಣ್ ಸುಧೀರ್ ಕ್ರಿಯೇಟಿವ್ಸ್ನಲ್ಲಿ ಈ ಹೊಸ ಸಿನಿಮಾ ನಿರ್ಮಾಣವಾಗುತ್ತಿದೆ. ಶರಣ್ ಈ ಸಿನಿಮಾದಲ್ಲಿ ನಟಿಸುವುರ ಜೊತೆಗೆ ಸಹ ನಿರ್ಮಾಪಕರೂ ಹೌದು. ಪ್ರಜ್ವಲ್ ದೇವರಾಜ್ ಅಭಿನಯದ ಜೆಂಟಲ್ ಮನ್ ನಂತಹ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ನಿರ್ದೇಶಕರಾದ ಜಡೇಶ್ ಹಂಪಿ ಅವರು ಗುರು ಶಿಷ್ಯರು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 1995ರಲ್ಲಿ ನಡೆಯುವ ಕಥೆ ಎಂದು ಈ ಹಿಂದೆಯೇ ಹೇಳಿದ್ದ ಚಿತ್ರದ ಇತರೇ ವಿವರಗಳು ಬಹಿರಂಗ ಮಾಡಲಿಲ್ಲ. ಈಗಾಗಲೇ ಪೋಸ್ಟರ್ಗಳ ಮೂಲಕ ಸದ್ದು ಮಾಡುತ್ತಿರುವ ಸಿನಿಮಾದ ಚಿತ್ರೀಕರಣ ಶೇ. 60ರಷ್ಟು ಪೂರ್ಣಗೊಂಡಿದೆಯಂತೆ.
1995ರಲ್ಲಿ ನಡೆಯುವ ಕಥೆಯಾಗಿರುವ ಕಾರಣದಿಂದ
ಗುರುಶಿಷ್ಯರು ಸಿನಿಮಾ ರೆಟ್ರೊ ಲುಕ್ನಲ್ಲಿರಲಿದೆ. ಇನ್ನು ಈ ಸಿನಿಮಾದಲ್ಲಿ ನಾಯಕನಾಗಿ ಶರಣ್ ಅವರು ಕಾಣಿಸಿಕೊಂಡರೆ, ನಾಯಕಿಯಾಗಿ ನಿಶ್ವಿಕಾ ನಾಯ್ಡು ಅವರು ನಟಿಸಿದ್ದಾರೆ. ನಿಶ್ವಿಕಾ ಅವರ ಹುಟ್ಟುಹಬ್ಬದಂದು ಅವರ ಪಾತ್ರದ ಫಸ್ಟ್ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು.
ಗಾಂಧಿ ಜಯಂತಿಯ ಪ್ರಯುಕ್ತ ಹಿರಿಯ ನಟರಾದ ಸುರೇಶ್ ಹೆಬ್ಳೀಕರ್ ಅವರನ್ನು 'ಗುರು ಶಿಷ್ಯರು' ತಂಡಕ್ಕೆ ಸ್ವಾಗತಿಸಿದೆ ಚಿತ್ರತಂಡ ಜೊತೆಗೆ ಅವರ ಪಾತ್ರದ ಫಸ್ಟ್ಲುಕ್ ಪೋಸ್ಟರ್ ಅನ್ನೂ ರಿಲೀಸ್ ಮಾಡಿದೆ.
1981 ರಲ್ಲಿ ಬಿಡುಗಡೆಯಾಗಿ ಭಾರೀ ಜನಪ್ರಿಯತೆ ಪಡೆದಿತ್ತು "ಗುರು ಶಿಷ್ಯರು" ಸಿನಿಮಾ. ಈಗ ಇದೇ ಶೀರ್ಷಿಕೆಯನ್ನು ನಿರ್ಮಾಪಕ ತರುಣ್ ಕಿಶೋರ್ ಸುಧೀರ್ ಹಾಗೂ ಶರಣ್ ತಮ್ಮ ಸಿನಿಮಾಗೆ ಮರುಬಳಕೆ ಮಾಡುತ್ತಿದ್ದಾರೆ. ಹಿರಿಯ ನಿರ್ಮಾಪಕ ದ್ವಾರಕೀಶ್ ಅವರು ಈ ಹಿಂದೆ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಮಾಡಿ ಶೀರ್ಷಿಕೆ ಅನಾವರಣ ಗೊಳಿಸಿದ್ದರು.
ಇದನ್ನೂ ಓದಿ: Sharaan: ನಕ್ಕರೆ ಅಪ್ಪನಂತೆಯೇ ಕಾಣುತ್ತಾಳೆ ಸ್ಯಾಂಡಲ್ವುಡ್ ಅಧ್ಯಕ್ಷನ ಮಗಳು Punya
ದ್ವಾರಕೀಶ್ ಅವರ ಗುರು ಶಿಷ್ಯರು ಕನ್ನಡದಲ್ಲಿ ಒಂದು ಎಪಿಕ್ ಚಿತ್ರ. ದ್ವಾರಕೀಶ್ ಅವರು ನಮ್ಮ ಲಿವಿಂಗ್ ಲೆಜೆಂಡ್. ಜನರ ಮನಸಲ್ಲಿ ಅಚ್ಚಳಿಯದೆ ಉಳಿದಿರುವ ಸಿನೆಮಾ ಮತ್ತು ಟೈಟಲ್ ಗುರುಶಿಷ್ಯರು. ಅದನ್ನು ನಾವು ಬಳಸಲು ಅವರನ್ನು ಕೇಳಿದಾಗ ಅವರು ತೋರಿಸಿದ ಪ್ರೀತಿ ಮತ್ತು ಆಶೀರ್ವಾದ ದೊಡ್ಡದು. ಎಂದು ಟೈಟಲ್ ಟೀಸರ್ ಬಿಡುಗಡೆ ಸಮಯದಲ್ಲಿ ಶರಣ್ ಹೇಳಿದ್ದರು.
ಬಿ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದ್ದು, ಆರೂರು ಸುಧಾಕರ್ ಶೆಟ್ಟಿ ಅವರ ಸಿನಿಮಾಟೋಗ್ರಫಿಯಲ್ಲಿ ಸಿನಿಮಾ ಮೂಡಿ ಬರಲಿದೆ. ಲಡ್ಡು ಸಿನಿಮಾ ಹೌಸ್, ತರುಣ್ ಸುಧೀರ್ ಕ್ರಿಯೇಟಿವ್ಸ್ ಬ್ಯಾನರ್ನ ಸಿನಿಮಾ ಇದಾಗಿದೆ.
ಇದನ್ನೂ ಓದಿ: Happy Birthday Sharan: ಹುಟ್ಟುಹಬ್ಬದ ಸಂಭ್ರಮದಲ್ಲಿ ಶರಣ್: ಸ್ಯಾಂಡಲ್ವುಡ್ ಅಧ್ಯಕ್ಷನ ಅಪರೂಪದ ಫೋಟೋಗಳು..!
ತರುಣ್ ಸುಧೀರ್ ಅವರು ತಮ್ಮ ಚೊಚ್ಚಲ ನಿರ್ಮಾಣದ ಗುರು ಶಿಷ್ಯರು ಚಿತ್ರಕ್ಕೆ ಈ ಹಿಂದೆ ಆಡಿಷನ್ ನಡೆಸಿದ್ದರು. ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಲು ಕ್ರೀಡಾ ದೈಹಿಕ ಸಾಮರ್ಥ್ಯವುಳ್ಳ 13-17 ವರ್ಷದ ಒಳಗಿರುವ ಹುಡುಗರು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಹಿಂದೆ ತರುಣ್ ಸುಧೀರ್ ಪೋಸ್ಟ್ ಮಾಡಿದ್ದರು. ಇನ್ನು ಯಾವ ಹೊಸ ಪತಿಭೆಗಳು ಈ ಸಿನಿಮಾ ಮೂಲಕ ಬೆಳಕಿಗೆ ಬರಲಿದೆ ಅನ್ನೋದು ಚಿತ್ರ ರಿಲೀಸ್ ಆದ ನಂತರವೇ ತಿಳಿಯಲಿದೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವತಾರ ಪುರುಷ ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ಎರಡು ಭಾಗಗಳಲ್ಲಿ ತೆರೆಗೆ ಬರಲಿರುವ ಅವತಾರ ಪುರುಷ ಸಿನಿಮಾದ ಚಿತ್ರೀಕರಣದ ವೇಳೆ ನಡೆದಿದ್ದ ಅವಘಡದಿಂದ ಶರಣ್ ಆಸ್ಪತ್ರೆ ಸೇರಿದ್ದರು. ಶರಣ್ ಅವರ ಮಗಳು ಪುಣ್ಯ ಅಪ್ಪನ ಅಭಿನಯದ ಅವತಾರ ಪುರುಷ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ. ಪುಣ್ಯ ಅಭಿನಯದ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಪುಣ್ಯಾಳ ಹುಟ್ಟುಹಬ್ಬದಂದು ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಶರಣ್ ಅವರಿಗೆ ಆಶಿಕಾ ರಂಗನಾಥ್ ನಾಯಕಿಯಾಗಿದ್ದು, ಕಳೆದ ಮೇ ತಿಂಗಳಿನಲ್ಲೇ ಇದು ರಿಲೀಸ್ ಆಗಬೇಕಿತ್ತು. ಆದರೆ ಕೊರೋನಾ ಕಾರಣದಿಂದಾಗಿ ರಿಲೀಸ್ ದಿನಾಂಕವನ್ನು ಮುಂದೂಡಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ