Gurmeet and Debina: 2ನೇ ಮಗುವಿನ ನಿರೀಕ್ಷೆಯಲ್ಲಿ ಗುರ್ಮೀತ್ ಚೌಧರಿ, ಡೆಬಿನಾ ಬೊನ್ನರ್ಜಿ ದಂಪತಿ

ನಟ ಗುರ್ಮೀತ್ ಚೌಧರಿ ಮತ್ತು ನಟಿ ಡೆಬಿನಾ ಬೊನ್ನರ್ಜಿ ದಂಪತಿ ತಮ್ಮ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಎರಡನೇ ಮಗುವಿಗೆ ಪೋಷಕರಾಗುತ್ತಿರುವ ಬಗ್ಗೆ ಡೆಬಿನಾ ಮೂವರು ಇರುವ ಫೋಟೋವನ್ನು ಇನ್‌ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಈ ವಿಷಯವನ್ನು ತಿಳಿಸಿದ್ದಾರೆ.

 ಗುರ್ಮೀತ್ ಚೌಧರಿ ಮತ್ತು ಡೆಬಿನಾ ಬೊನ್ನರ್ಜಿ

ಗುರ್ಮೀತ್ ಚೌಧರಿ ಮತ್ತು ಡೆಬಿನಾ ಬೊನ್ನರ್ಜಿ

  • Share this:
ನಟ ಗುರ್ಮೀತ್ ಚೌಧರಿ (Gurmeet Chaudhary) ಮತ್ತು ನಟಿ ಡೆಬಿನಾ ಬೊನ್ನರ್ಜಿ (Debina Bonnerjee) ದಂಪತಿ ತಮ್ಮ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಎರಡನೇ ಮಗುವಿಗೆ ಪೋಷಕರಾಗುತ್ತಿರುವ (parents) ಬಗ್ಗೆ ಡೆಬಿನಾ ಮೂವರು ಇರುವ ಫೋಟೋವನ್ನು ಇನ್‌ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಈ ವಿಷಯವನ್ನು ತಿಳಿಸಿದ್ದಾರೆ. ಪೋಸ್ಟ್​​ನಲ್ಲಿ, "ಈ ಗರ್ಭಧಾರಣೆಯು ಯೋಜಿತವಲ್ಲ. ಕೆಲವು ವಿಷಯಗಳು ದೈವಿಕವಾಗಿ ಯೋಜಿತವಾಗಿರುತ್ತದೆ, ಯಾವುದನ್ನೂ ಬದಲಾಯಿಸಲು ಸಾಧ್ಯವಿಲ್ಲ. ಇದು ಒಂದು ಬ್ಲೆಸ್ಸಿಂಗ್" ಎಂದು ಬರೆದುಕೊಂಡಿದ್ದಾರೆ. ಕೆಲವು ವಿಭಿನ್ನ ಲಕ್ಷಣಗಳನ್ನು ಹೊಂದಿದ್ದರೂ ಆಶ್ಚರ್ಯಕರವಾಗಿ ನನ್ನ ಪ್ರೆಗ್ನೆನ್ಸಿ (Pregnancy) ಧೃಢವಾಗಿದೆ ಎಂದು ಡೆಬಿನಾ ತಿಳಿಸಿದ್ದಾರೆ.

ಡೆಬಿನಾ ಎರಡನೇಯ ಗರ್ಭಾಧಾರಣೆ ಸಮಯದಲ್ಲಿ ಮೊದಲ ಕೆಲ ತಿಂಗಳು ಭಾರಿ ರಕ್ತಸ್ರಾವ ಅನುಭವಿಸಿದ್ದರಂತೆ. ಈ ಬಗ್ಗೆ ವಿವರವಾಗಿ ಡೆಬಿನಾ ತಮ್ಮ ಬ್ಲಾಗ್‌ ನಲ್ಲಿ ತಿಳಿಸಿದ್ದಾರೆ. ಹಾಗಾದರೆ ಡೆಬಿನಾ ಏನೆಲ್ಲಾ ಹಂಚಿಕೊಂಡಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ವರದಿ.

ಅಂತಿಮವಾಗಿ ಮನೆಯಲ್ಲಿ ಪ್ರೆಗ್ನೆನ್ಸಿ ಪರೀಕ್ಷೆಯನ್ನು ತೆಗೆದುಕೊಂಡು ಗರ್ಭಧಾರಣೆಯನ್ನು ಧೃಢಪಡಿಸಿಕೊಂಡ ಡೆಬಿನಾ ಈ ವಿಷಯವನ್ನು ನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಈ ವಿಷಯ ತಿಳಿದಾದ ಮೇಲೆ ನಾನು ತುಂಬಾ ಸಂತೋಷಪಟ್ಟೆ, ಆತಂಕವೂ ಸಹಜವಾಗಿ ಆಯಿತು, ಮುಂದೆ ಏನು ಮಾಡಬೇಕೆಂದು ನಾನು ಯೋಚಿಸಿದೆ" ಎಂದು ಅವರ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ವರದಿಗಳು ನನಗೆ ಎರಡನೇ ಗರ್ಭಧಾರಣೆ ಸಾಧ್ಯವಿಲ್ಲ ಸದ್ಯಕ್ಕೆ ಎಂದು ಹೇಳಿದ್ದವು, ಆದರೆ ಇದು ಪವಾಡದಂತೆ ನಡೆದಿದೆ ಎಂದು ಹೇಳಿದ್ದಾರೆ.

"ನೈಸರ್ಗಿಕ ಗರ್ಭಧಾರಣೆ ಆಗುವುದಿಲ್ಲ ಎಂಬ ಆತಂಕವಿತ್ತು"
“ನನಗೆ ಎಂಡೊಮೆಟ್ರಿಯೊಸಿಸ್, ಅಡೆನೊಮೈಯೋಸಿಸ್ ಇತ್ತು. ಹೀಗಾಗಿ ಕಳೆದ 5-7 ವರ್ಷಗಳಲ್ಲಿ ನನ್ನ ದೇಹವು ಗರ್ಭಧರಿಸುವ ನೈಸರ್ಗಿಕ ಸಾಮರ್ಥ್ಯವನ್ನು ಕಳೆದುಕೊಂಡಿದೆ ಎಂದು ನಾನು ಭಾವಿಸಿದ್ದೆ. ಈ ಸ್ಥಿತಿ ನೈಸರ್ಗಿಕವಾಗಿ ಗರ್ಭಧರಿಸಲು ಇರುವ ಒಂದು ದೊಡ್ಡ ಅಡಚಣೆಯಾಗಿದೆ. ನನ್ನ ಗರ್ಭಾಶಯದ ಒಳಪದರದ ರಚನೆ ಸಹ ಸರಿಯಾಗಿ ಆಗಿರಲಿಲ್ಲ, ಹೀಗಾಗಿ ನಾನು ಸ್ವಾಭಾವಿಕವಾಗಿ ಗರ್ಭಿಣಿಯಾಗುವುದನ್ನು ನೀರೀಕ್ಷಿಸರಲಿಲ್ಲ. ಆದರೆ ಇವನ್ನೆಲ್ಲಾ ದಾಟಿ ಈಗ ಎರಡನೇ ಮಗುವಿಗೆ ತಾಯಿಯಾಗುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.

ಇದನ್ನೂ ಓದಿ:  PHOTOS: ಮತ್ತೆ ಮಾಜಿ ಬಾಯ್​ಫ್ರೆಂಡ್​ ರೋಹ್ಮನ್ ಜೊತೆ ಕಾಣಿಸಿಕೊಂಡ ಸುಶ್ಮಿತಾ ಸೇನ್, ಎಲ್ಲಿ ಲಲಿತ್ ಮೋದಿ?

‘ಗುರ್ಮೀತ್ ಮೊದಲಿಗೆ ನಂಬಲಿಲ್ಲ"
ತಾನು ಮತ್ತೆ ಗರ್ಭಿಣಿಯಾಗಿದ್ದೇನೆ ಎಂದು ನನ್ನ ಪತಿಗೆ ಹೇಳಿದರೇ ಗುರ್ಮೀತ್‌ ನಂಬಲೇ ಇಲ್ಲ ಎಂದು ಡೆಬಿನಾ ತಿಳಿಸಿದ್ದಾರೆ. ಈ ವಿಷಯ ಕೇಳಿ ವೈದ್ಯರೂ ಕೂಡ ಅಚ್ಚರಿ ವ್ಯಕ್ತಪಡಿಸಿದರು. ನನಗೆ ಕೂಡಲೇ ಸ್ಕ್ಯಾನ್ ಮಾಡಿ ಮಗುವಿನ ಹೃದಯ ಬಡಿತವನ್ನು ಪರೀಕ್ಷಿಸಿದರು ಎಂದು ಹೇಳಿದ್ದಾರೆ.

"ನನ್ನ ಎರಡನೇ ಗರ್ಭಧಾರಣೆಯ ಬಗ್ಗೆ ನನ್ನ ತಾಯಿಗೆ ಮಾತ್ರ ತಿಳಿದಿತ್ತು"
ನನ್ನ ಎರಡನೇ ಪ್ರೆಗ್ನೆನ್ಸಿ ಬಗ್ಗೆ ನನ್ನ ತಾಯಿಗೆ ಮಾತ್ರ ಹೇಳಿದ್ದೆ. ನನಗೆ ವೈದ್ಯರು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದರಿಂದ ನಾನು ವಿಶ್ರಾಂತಿ ತೆಗೆದುಕೊಳ್ಳಬೇಕಿತ್ತು. ಹೀಗಾಗಿ ಈ ಸಮಯದಲ್ಲಿ ತಾಯಿ ಬೆಂಬಲ ಬೇಕಾಗುತ್ತದೆ. ಈ ವಿಷಯ ಕೇಳಿ ನನ್ನ ತಾಯಿ ಕೂಡ ತುಂಬಾ ಖುಷಿಯಾಗಿದ್ದಾರೆ ಎಂದು ಡೆಬಿನಾ ಹೇಳಿದ್ದಾರೆ.

ಲಿಯಾನಾ ಹುಟ್ಟಿದ ನಂತರ ಪೂರ್ತಿ ರಕ್ತಸ್ರಾವ
ಲಿಯಾನಾ ಹುಟ್ಟಿದ ನಂತರ ಪೂರ್ತಿ ರಕ್ತಸ್ರಾವ ಆಗುತ್ತಿತ್ತು, ಹೀಗಾಗಿ ನಾನು ಗರ್ಭಿಣಿ ಎಂಬುವುದನ್ನು ಊಹಿಸಿರಲಿಲ್ಲ. ಮೊದಲ ಮಗುವಿನ ಹೆರಿಗೆಯ ನಂತರದ ರಕ್ತಸ್ರಾವ ಇದು ಎಂದು ವೈದ್ಯರು ಹೇಳಿದ್ದರು. ನಂತರ ಮೂರನೇ ತಿಂಗಳು ಕಳೆದ ಬಳಿಕ ರಕ್ತಸ್ರಾವ ಕಡಿಮೆಯಾಯಿತು ಎಂದಿದ್ದಾರೆ ಡೆಬಿನಾ.

ಇದನ್ನೂ ಓದಿ:Alia Bhatt: ಅಬ್ಬಾ, ಆಲಿಯಾ​ ತೊಟ್ಟಿರೋ ಈ ಟಾಪ್​ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ! ಬಟ್ಟೆ ಅಂಗಡಿನೇ ಓಪನ್​ ಮಾಡ್ಬಹುದಿತ್ತು 

ಮಗು ಆರೋಗ್ಯವಾಗಿದೆಯೇ ಎಂದು ಪರೀಕ್ಷಿಸಲು 12 ನೇ ವಾರದಲ್ಲಿ ಸ್ಕ್ಯಾನ್
12 ನೇ ವಾರದ ಆರಂಭದಲ್ಲಿ, ಮಗುವಿಗೆ ಡೌನ್‌ ಸಿಂಡ್ರೋಮ್ ಅಥವಾ ಎಡ್ವರ್ಡ್ಸ್ ಸಿಂಡ್ರೋಮ್‌ನಂತಹ ಯಾವುದೇ ಕ್ರೋಮೋಸೋಮಲ್ ದೋಷವಿದೆಯೇ ಎಂದು ಪರೀಕ್ಷಿಸಲು ಸ್ಕ್ಯಾನ್ ಮತ್ತು ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡೆ. ಇದು ದುಬಾರಿ ವೈದ್ಯಕೀಯ ಪರೀಕ್ಷೆಯಾಗಿತ್ತು, ಆದರೂ ನನ್ನ ಮಗುವಿನ ಸುರಕ್ಚತೆಗಾಗಿ ನಾನೂ ಇದನ್ನು ಮಾಡಿಸಲೇಬೇಕಿತ್ತು ಎಂದು ಹೇಳಿದ್ದಾರೆ.

'ನನಗೆ ಯಾವುದೇ ಗರ್ಭಧಾರಣೆಯ ಲಕ್ಷಣಗಳಿಲ್ಲ'
ನನ್ನ ಈ ಪ್ರೆಗ್ನೆನ್ಸಿಯ ಬಗ್ಗೆ ಅನೇಕ ಜನರು ನನ್ನನ್ನು ಕೇಳಿದರು. ಆದರೆ ನನಗೆ ಮೊದಲಿಗೆ ಅಂತಹ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಯಾವುದೇ ಕಡುಬಯಕೆಗಳು, ವಿಲಕ್ಷಣವಾದ ವಾಸನೆ, ವಾಕರಿಕೆ, ತಲೆಸುತ್ತು, ಮಲಬದ್ಧತೆ ಯಾವುದೂ ಗೋಚರವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಈ ದಂಪತಿ ತಮ್ಮ ಮೊದಲ ಮಗು ಲಿಯಾನಾಳನ್ನು ಈ ವರ್ಷದ ಏಪ್ರಿಲ್‌ನಲ್ಲಿ ಸ್ವಾಗತಿಸಿದ್ದರು. ಇದೀಗ ಮತ್ತೆ ಶುಭ ಸುದ್ದಿ ನೀಡಿದ್ದು ಅಭಿಮಾನಿಗಳು ಶುಭ ಕೋರಿದ್ದಾರೆ.
Published by:Ashwini Prabhu
First published: