• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Tongue Twister Challenge: ಗುಲಾಬೊ ಸಿತಾಬೊ ಚಾಲೆಂಜ್​ ಸ್ವೀಕರಿಸಿದ ಸೆಲೆಬ್ರಿಟಿಗಳಲ್ಲಿ ಯಾರು ಉತ್ತಮರು..?

Tongue Twister Challenge: ಗುಲಾಬೊ ಸಿತಾಬೊ ಚಾಲೆಂಜ್​ ಸ್ವೀಕರಿಸಿದ ಸೆಲೆಬ್ರಿಟಿಗಳಲ್ಲಿ ಯಾರು ಉತ್ತಮರು..?

ಗುಲಾಬೊ ಸಿತಾಬೊ ಸಿನಿಮಾದಲ್ಲಿ ಆಯಷ್ಮಾನ್​ ಖರಾನಾ ಹಾಗೂ ಅಮಿತಾಭ್​

ಗುಲಾಬೊ ಸಿತಾಬೊ ಸಿನಿಮಾದಲ್ಲಿ ಆಯಷ್ಮಾನ್​ ಖರಾನಾ ಹಾಗೂ ಅಮಿತಾಭ್​

Gulabo Sitabo: ಗುಲಾಬೊ ಸಿತಾಬೊ ಎಂದು ಸಿನಿಮಾದ ಹೆಸರಿನಿಂದಲೇ ಆರಂಭವಾಗುವ ಈ ಸಾಲುಗಳನ್ನು ಐದು ಬಾರಿ ತಪ್ಪಿಲ್ಲದೆ ವೇಗವಾಗಿ ಹೇಳಬೇಕು. ಗುಲಾಬೊ ಸಿತಾಬೊ ಟಂಗ್​ ಟ್ವಿಸ್ಟರ್​ ಸವಾಲು. ಹಿಂದೆ ಮೊದಲ ಬಾರಿಗೆ ಪ್ರಯತ್ನಿಸಿದ್ದ ಅಮಿತಾಭ್​ ಬಚ್ಚನ್​ ಅವರು ತಮ್ಮ ಕೈಲಾದರೆ ನೀವು ಪ್ರಯತ್ನಿಸಿ ಎಂದು ಪೋಸ್ಟ್​ ಮಾಡಿದ್ದರು. ಜೊತೆಗೆ ಆಯುಷ್ಮಾನ್​, ವಿರಾಟ್ ಕೊಹ್ಲಿ, ದೀಪಿಕಾ ಪಡುಕೋಣೆ ಸೇರಿದಂತೆ ಹಲವರನ್ನು ನಾಮಿನೇಟ್ ಮಾಡಿದ್ದರು.

ಮುಂದೆ ಓದಿ ...
  • Share this:

ಅಮಿತಾಭ್​ ಬಚ್ಚನ್​ ಹಾಗೂ ಆಯುಷ್ಮಾನ್​ ಖುರಾನಾ ಅಭಿನಯದ ಗುಲಾಬೊ ಸಿತಾಬೊ ಸಿನಿಮಾ ನಾಳೆ ಅಂದರೆ ಜೂ.12ಕ್ಕೆ ಅಮೆಜಾನ್​ ಪ್ರೈಂನಲ್ಲಿ ಪ್ರದರ್ಶವಾಗಲಿದೆ. ಚಿತ್ರಮಂದಿರಲ್ಲಿ ತೆರೆ ಕಾಣುವ ಮೊಲದೇ ಒಟಿಟಿ ಮೂಲಕ ಪ್ರದರ್ಶನಗೊಳ್ಳಲಿರುವ ಈ ಚಿತ್ರದ ಪ್ರಚಾರಕ್ಕಾಗಿ ಈ ಚಿತ್ರತಂಡ ಟಂಗ್​ ಟ್ವಿಸ್ಟರ್​ ಚಾಲೆಂಜ್​ ಆರಂಭಿಸಿದೆ.


ಗುಲಾಬೊ ಸಿತಾಬೊ ಎಂದು ಸಿನಿಮಾದ ಹೆಸರಿನಿಂದಲೇ ಆರಂಭವಾಗುವ ಈ ಸಾಲುಗಳನ್ನು ಐದು ಬಾರಿ ತಪ್ಪಿಲ್ಲದೆ ವೇಗವಾಗಿ ಹೇಳಬೇಕು. ಇದೇ ಗುಲಾಬೊ ಸಿತಾಬೊ ಟಂಗ್​ ಟ್ವಿಸ್ಟರ್​ ಸವಾಲು. ಇದನ್ನು ಮೊದಲ ಬಾರಿಗೆ ಪ್ರಯತ್ನಿಸಿದ್ದ ಅಮಿತಾಭ್​ ಬಚ್ಚನ್​ ಅವರು ನಿಮ್ಮ ಕೈಲಾದರೆ ನೀವು ಪ್ರಯತ್ನಿಸಿ ಎಂದು ಪೋಸ್ಟ್​ ಮಾಡಿದ್ದರು. ಜೊತೆಗೆ ಆಯುಷ್ಮಾನ್​, ವಿರಾಟ್ ಕೊಹ್ಲಿ, ದೀಪಿಕಾ ಪಡುಕೋಣೆ ಸೇರಿದಂತೆ ಹಲವರನ್ನು ನಾಮಿನೇಟ್ ಮಾಡಿದ್ದರು.




ನಂತರ ಆಯುಷ್ಮಾನ್​ ಖುರಾನ ಸಹ ಚಾಲೆಂಜ್​ ತೆಗೆದುಕೊಂಡು ಕೆಲವು ಸೆಲೆಬ್ರಿಟಿಗಳಿಗೆ ಇದನ್ನು ಪಾಸ್​ ಮಾಡಿದ್ದರು.



ಅಮಿತಾಭ್​ ಅವರು ನೀಡಿದ್ದ ಈ ಸವಾಲನ್ನು ಸ್ವೀಕರಿಸಿದ ನಟಿ ಭೂಮಿ ಪೆಡ್ನೆಕರ್​, ತಮ್ಮ ಪ್ರಯತ್ನ ಮಾಡುವ ಮೂಲಕ ಅದನ್ನು ರಾಜ್​ಕುಮಾರ್​ ರಾವ್​ ಅವರಿಗೆ ಪಾಸ್ ಮಾಡಿದ್ದರು.



ಭೂಮಿ ಕೊಟ್ಟ ಸವಾಲನ್ನು ಸ್ವೀಕರಿಸಿದ ರಾಜ್​ಕುಮಾರ್ ರಾವ್​ ತಮ್ಮ ನೈಜ ನಟನೆಯಂತೆ ಇದನ್ನೂ ಸರಾಗವಾಗಿ ಐದು ರೀತಿಗಳಲ್ಲಿ ಹೇಳಿದ್ದಾರೆ. ಅವರ ವಿಡಿಯೋ ಸದ್ಯ ವೈರಲ್​ ಆಗುತ್ತಿದೆ.



ಆಯುಷ್ಮಾನ್​ ಖುರಾನಾ, ಕರಣ್​ ಜೋಹರ್​ ಅವರಿಗೆ ಈ ಸವಾಲನ್ನು ಕೊಟ್ಟಿದ್ದು, ಅವರೂ ಸಹ ಕೈಲಾದಷ್ಟು ಪ್ರಯತ್ನಿಸಿದ್ದಾರೆ.



ರಾಜ್​ ಕುಮಾರ್ ರಾವ್​ ಅವರನ್ನು ಹೊರತುಪಡಿಸಿದರೆ ನಟಿ ಯಾಮಿ ಗೌತಮ್​ ಈ ಚಾಲೆಂಜ್​ ಅನ್ನು ಕೊಂಚ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತದೆ.



ಗೊಲಾಬೊ ಸಿತಾಬೊ ಟಂಗ್​ ಟ್ವಿಸ್ಟರ್​ ಚಾಲೆಂಜ್​ ಕೇವಲ ಸೆಲೆಬ್ರಿಟಿಗಳಿಗೆ ಅಲ್ಲ. ಇದನ್ನೂ ನೀವು ಪ್ರಯತ್ನಿಸಬಹುದಾಗಿದೆ.


Rashmika Mandanna: ರಶ್ಮಿಕಾಗಿಂತ ಸಹ ನೃತ್ಯಗಾರ್ತಿಯೇ ಚೆಂದ ಎಂದ ಟಾಲಿವುಡ್​ ನಿರ್ದೇಶಕ ನಾಗ್​ ಅಶ್ವಿನ್​




ಇದನ್ನೂ ಓದಿ: Nikhil Kumaraswamy: ಅಪ್ಪ-ಅಮ್ಮನೊಂದಿಗೆ ರಾಮನಗರಕ್ಕೆ ಭೇಟಿ ಕೊಟ್ಟ ನಿಖಿಲ್​ ಕುಮಾರಸ್ವಾಮಿ..!

Published by:Anitha E
First published: