Gulabo Sitabo Movie Review: ನಿರಾಶೆ ಮೂಡಿಸುವ ಸಿನಿಮಾದಲ್ಲೂ ಮನ ಗೆಲ್ಲುವ ಅಮಿತಾಭ್ ಬಚ್ಚನ್​​..!

Gulabo Sitabo Movie Review: ಸದಾ ಹೊಸ ಪ್ರಯೋಗಗಳನ್ನು ಮಾಡುತ್ತಾ ಮನರಂಜನೆಗಿಂತ ಹೆಚ್ಚಾಗಿ ಭಿನ್ನವಾದ ಕತೆಗಳಿಗೆ ಮಹತ್ವ ನೀಡುವ ನಿರ್ದೇಶಕ ಶೂಜಿತ್​ ಸರ್ಕಾರ್​. ವಿಕ್ಕಿ ಡೋನರ್​, ಪೀಕು ಹಾಗೂ ಮದ್ರಾಸ್​ ಕೆಫೆಯಂತಹ ಸಿನಿಮಾಗಳನ್ನು ಕೊಟ್ಟ ನಿರ್ದೇಶಕನ ಬತ್ತಳಿಕೆಯಿಂದ ಬಂದ ಗುಲಾಬೊ ಸಿತಾಬೊ ಬಗ್ಗೆ ಸಿನಿಪ್ರಿಯರಿಗೆ ತುಂಬಾ ನಿರೀಕ್ಷೆ ಇತ್ತು. ಆದರೆ ಈ ಸಿನಿಮಾ ನೋಡಿದ ಪ್ರೇಕ್ಷಕನಿಗೆ ನಿರಾಶೆ ಮಾತ್ರ ಕಟ್ಟಿಟ್ಟ ಬುತ್ತಿ.

ಗುಲಾಬೊ ಸಿತಾಬೊ ಸಿನಿಮಾದಲ್ಲಿ ಅಮಿತಾಭ್​ ಹಾಗೂ ಆಯುಷ್ಮಾನ್​ ಖುರಾನ

ಗುಲಾಬೊ ಸಿತಾಬೊ ಸಿನಿಮಾದಲ್ಲಿ ಅಮಿತಾಭ್​ ಹಾಗೂ ಆಯುಷ್ಮಾನ್​ ಖುರಾನ

  • Share this:
ಸಿನಿಮಾ: ಗುಲಾಬೊ ಸಿತಾಬೊ

ಭಾಷೆ: ಹಿಂದಿ

ನಿರ್ದೇಶಕ: ಶೂಜಿತ್​ ಸರ್ಕಾರ್​

ತಾರಾಗಣ: ಅಮಿತಾಭ್​ ಬಚ್ಚನ್​, ಆಯುಷ್ಮಾನ್​ ಖುರಾನ, ಫಾರೂಕ್​ ಜಫರ್

ಅನಿತಾ .ಈ, 

ಲಾಕ್​ಡೌನ್​ನಿಂದಾಗಿ ಸದ್ಯ ಚಿತ್ರಮಂದಿರಗಳು ಮುಚ್ಚಿವೆ. ತೆರೆ ಕಾಣುವ ಹೊಸ್ತಿಲಲ್ಲಿರುವ ಸಿನಿಮಾಗಳು ರಿಲೀಸ್ ದಿನಾಂಕವನ್ನು ಮುಂದೂಡುತ್ತಿವೆ. ಇದರಿಂದಾಗಿ ಜನರು ಡಿಜಿಟಲ್​ ವೇದಿಕೆಯಲ್ಲಿ ಬರುತ್ತಿರುವ ವೆಬ್​ ಸರಣಿಗಳನ್ನೇ ನೋಡುತ್ತಾ ಮನ ರಂಜಿಸಿಕೊಳ್ಳುತ್ತಿದ್ದಾರೆ.  ಹೀಗಿರುವಾಗಲೇ ಬೆಳ್ಳಿತೆರೆ ಮೇಲೆ ಪ್ರದರ್ಶನಗೊಳ್ಳಬೇಕಿದ್ದ ಬಹುನಿರೀಕ್ಷಿತ ಹಿಂದಿ ಸಿನಿಮಾ ಗುಲಾಬೊ ಸಿತಾಬೊ ಒಟಿಟಿ ಮೂಲಕ ಅಮೆಜಾನ್​ ಪ್ರೈಂನಲ್ಲಿ ಇಂದು ತೆರೆ ಕಂಡಿದೆ. 

ಸದಾ ಹೊಸ ಪ್ರಯೋಗಗಳನ್ನು ಮಾಡುತ್ತಾ ಮನರಂಜನೆಗಿಂತ ಹೆಚ್ಚಾಗಿ ಭಿನ್ನವಾದ ಕತೆಗಳಿಗೆ ಮಹತ್ವ ನೀಡುವ ನಿರ್ದೇಶಕ ಶೂಜಿತ್​ ಸರ್ಕಾರ್​. ವಿಕ್ಕಿ ಡೋನರ್​, ಪೀಕು ಹಾಗೂ ಮದ್ರಾಸ್​ ಕೆಫೆಯಂತಹ ಸಿನಿಮಾಗಳನ್ನು ಕೊಟ್ಟ ನಿರ್ದೇಶಕನ ಬತ್ತಳಿಕೆಯಿಂದ ಬಂದ ಗುಲಾಬೊ ಸಿತಾಬೊ ಬಗ್ಗೆ ಸಿನಿಪ್ರಿಯರಿಗೆ ತುಂಬಾ ನಿರೀಕ್ಷೆ ಇತ್ತು. ಆದರೆ ಈ ಸಿನಿಮಾ ನೋಡಿದ ಪ್ರೇಕ್ಷಕನಿಗೆ ನಿರಾಶೆ ಮಾತ್ರ ಕಟ್ಟಿಟ್ಟ ಬುತ್ತಿ.

gulabo sitabo Tongue twister challenge accepted by Bollywood celebrities here are the videos
ಗುಲಾಬೊ ಸಿತಾಬೊ ಸಿನಿಮಾದಲ್ಲಿ ಆಯಷ್ಮಾನ್​ ಖರಾನಾ ಹಾಗೂ ಅಮಿತಾಭ್​


ಉತ್ತರಪ್ರದೇಶದಲ್ಲಿ ಬೀದಿಯಲ್ಲಿ ನಡೆಯುವ ಗೊಂಬೆಯಾಟ ಗುಲಾಬಿ ಸಿತಾಬೊ ಹೆಸರನ್ನೇ ಈ ಸಿನಿಮಾಗೆ ಇಡಲಾಗಿದೆ.  ಹಳೇ ಲಕ್ನೊ ಸಿಟಿಯಲ್ಲಿ ನಡೆಯುವ ಈ ಕತೆಯಲ್ಲಿ 87 ವರ್ಷದ ಮಿರ್ಜಾ ಅವರ ಪಾತ್ರದಲ್ಲಿ ಅಮಿತಾಭ್​ ಬಚ್ಚನ್​ ಹಾಗೂ ಅವರ ಮನೆಯಲ್ಲಿರು ಬಾಡಿಗೆದಾರ ಬಾಂಕೆಯಾಗಿ ಆಯುಷ್ಮಾನ್​ ಖರಾನ ನಟಿಸಿದ್ದಾರೆ. ಮಿರ್ಜಾ ಪತ್ನಿ ಬೇಗಂ ಪಾತ್ರದಲ್ಲಿ ಫಾರೂಕ್​ ಜಫರ್​ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಗುಲಾಬೊ ಸಿತಾಬೊ ಚಾಲೆಂಜ್​ ಸ್ವೀಕರಿಸಿದ ಸೆಲೆಬ್ರಿಟಿಗಳಲ್ಲಿ ಯಾರು ಉತ್ತಮರು..?

ಅಮಿತಾಭ್​ ಬಚ್ಚನ್​ ವಯಸ್ಸಿನಲ್ಲಿ ತಮಗಿಂತ ದೊಡ್ಡವರಾದ ಬೇಗಂ ಅವರನ್ನು ವಿವಾಹವಾಗಿ ಮನೆ ಅಳಿಯನಾಗಿ  ಫಾತಿಮಾ ಮಹಲ್​ನಲ್ಲೇ ತಮ್ಮ ಇಡೀ ಜೀವನ ಕಳೆದಿರುತ್ತಾರೆ. ದುರಾಸೆ ಹಾಗೇ ಜುಗ್ಗನಾಗಿರುವ ಮಿರ್ಜಾ ವಯಸ್ಸಾದ ತನ್ನ ಪತ್ನಿಗಿಂತ ಹೆಚ್ಚಾಗಿ ಆಕೆಯ ಹೆಸರಿನಲ್ಲಿರುವ ಮಹಲ್​ ಅನ್ನೇ ಜೀವನದುದ್ದಕ್ಕೂ ಪ್ರೀತಿಸುತ್ತಿರುತ್ತಾರೆ.

ಇದೇ ಮಹಲ್​ನಲ್ಲಿರುವ ಬಾಡಿಗೆಗೆ ಇರುವ ಐದು ಬಡ ಕುಟುಂಬಗಳೊಂದಿಗೆ ಮಿರ್ಜಾ ಕೊಂಚ ತಾಳ್ಮೆಯಿಂದ ಜೀವಿಸುತ್ತಿರುತ್ತಾರೆ. ಹೆಸರಿಗೆ ಮಹಲ್​ ಆದರೂ ಕಾಲಿನಲ್ಲಿ ಒದ್ದರೆ ಬೀಳುವ ಕಟ್ಟಡದಲ್ಲಿರುವ ಬಾಡಿಗೆದಾರನಲ್ಲಿ ಒಬ್ಬರಾದ ಬಾಂಕೆಯಿಂದ ಬಾಡಿಗೆ ಪಡೆಯಲು ಹರಸಾಹಸ ಪಡುವ ಮಾಲೀಕ ಮಿರ್ಜಾ ಅವರ ನಡುವೆ ತಿಳಿ ಹಾಸ್ಯ ಭರಿತ ಸನ್ನಿವೇಶಗಳು ಹಾಗೂ ಮಾತು ಮಾತಿಗೂ ಅವಮಾನ ಅನುಭವಿಸುವ ಮಿರ್ಜಾ ಪಾತ್ರದಲ್ಲಿ ಅಮಿತಾಭ್ ಅವರ​ ಅಭಿನಯದ ಬಗ್ಗೆ ಚಕಾರ ಎತ್ತುವಂತಿಲ್ಲ.

ಇದನ್ನೂ ಓದಿ: ರಶ್ಮಿಕಾಗಿಂತ ಸಹ ನೃತ್ಯಗಾರ್ತಿಯೇ ಚೆಂದ ಎಂದ ಟಾಲಿವುಡ್​ ನಿರ್ದೇಶಕ ನಾಗ್​ ಅಶ್ವಿನ್​

ಮಿರ್ಜಾ ತಮ್ಮ ಪತ್ನಿ ಬೇಗಂ ಹೆಸರಿನಲ್ಲಿರುವ ಮಹಲ್​ಗಾಗಿ ಇಡೀ ಜೀವನವನ್ನೇ ಸವೆಸಿರುತ್ತಾರೆ. ಆದರೆ ಅವರಿಗೆ ಮಕ್ಕಳಿರುವುದಿಲ್ಲ. ಆದರೆ ಅಲ್ಲೇ ಬಾಡಿಗೆಗೆ ಇರುವ ಬಾಂಕೆ ಸಹ ಆಸ್ತಿಯ್ನ ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿರುತ್ತಾನೆ. ಇವರ ಜೊತೆಗೆ ರಿಯಲ್​ ಎಸ್ಟೇಟ್ ಹಾಗೂ ಪುರಾತತ್ವ ಇಲಾಖೆಯ ಕಣ್ಣೂ ಈ ಮಹಲ್​ ಮೇಲೆ ಇರುತ್ತದೆ. ಈ ಮಹಲ್​ ಕೊನೆಗೆ ಯಾರಿಗೆ ಸಿಗುತ್ತದೆ ಅನ್ನೋದೆ ಈ ಸಿನಿಮಾದ ಕ್ಲೈಮ್ಯಾಕ್ಸ್​.

ಅಮಿತಾಭ್​ ಬಚ್ಚನ್​  ಈ ಸಿನಿಮಾಗಾಗಿ ಡಬ್ ಮಾಡುವಾಗ ತಮ್ಮದನಿಯನ್ನೂ ಸಾಕಷ್ಟು ಬದಲಾಯಿಸಿಕೊಂಡಿದ್ದಾರೆ. ಅಲ್ಲದೆ ಈ ಸಿನಿಮಾದಲ್ಲಿ ಅಮಿತಾಭ್​ ಅವರ ಮೂಗನ್ನು ಪ್ರೊಸ್ಥೆಟಿಕ್​ ವಿಧಾನ ಮೂಲಕ ಉದ್ದ ಮಾಡಲಾಗಿಯಂತೆ. ನಿತ್ಯ ಸಿನಿಮಾ ಚಿತ್ರೀಕರಣಕ್ಕಾಗಿ ಐದು ಗಂಟೆಗಳ ಕಾಲ ಮೇಕಪ್​ ಮಾಡಿಕೊಳ್ಳಬೇಕಾಗಿತ್ತಂತೆ ಅಮಿತಾಭ್​.

ಅಮಿತಾಭ್​ ಬಚ್ಚನ್​ ಹಾಗೂ ಆಯುಷ್ಮಾನ್​ ಖುರಾನ ಅವರ ಜೋಡಿಯ ಅಭಿನಯ ಪ್ರೇಕ್ಷಕರ ಮೊಗದಲ್ಲಿ ಸಣ್ಣ ನಗು ಮೂಡಿಸುತ್ತಾದರೂ, ನಿಧಾನವಾಗಿ ಸಾಗುವ ಸಿನಿಮಾವನ್ನು ನೋಡಲು ತಾಳ್ಮೆ ಬೇಕು.

Bhumi Pednekar: ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರಾ ಬಿ-ಟೌನ್​ ಸ್ಟಾರ್ ಭೂಮಿ ಪೆಡ್ನೆಕರ್​ ತಂಗಿ..!ಇದನ್ನೂ ಓದಿ: ಮದ್ಯ ತರಲು ಡ್ರಮ್​ ಹೊತ್ತು ಹೊರಟ ಶ್ರದ್ಧಾ ಕಪೂರ್​ ತಂದೆಯ ವಿಡಿಯೋ ವೈರಲ್​..!
First published: