• Home
 • »
 • News
 • »
 • entertainment
 • »
 • Gul Panag: ಆರೋಗ್ಯಕರ ಜೀವನದ ಸೀಕ್ರೆಟ್ ಬಿಚ್ಚಿಟ್ಟ ಬಾಲಿವುಡ್ ನಟಿ ಗುಲ್ ಪನಾಗ್!

Gul Panag: ಆರೋಗ್ಯಕರ ಜೀವನದ ಸೀಕ್ರೆಟ್ ಬಿಚ್ಚಿಟ್ಟ ಬಾಲಿವುಡ್ ನಟಿ ಗುಲ್ ಪನಾಗ್!

ಗುಲ್ ಪನಾಗ್

ಗುಲ್ ಪನಾಗ್

ಸಂದರ್ಶನದಲ್ಲಿ 43 ವರ್ಷದ ಗುಲ್ ತನ್ನ ದೈನಂದಿನ ಜೀವನವನ್ನು ಹೇಗೆ ಶುರು ಮಾಡುತ್ತಾರೆ ಮತ್ತು ಫಿಟ್ ಆಗಿರಲು ಏನೆಲ್ಲಾ ಮಾಡುತ್ತಾರೆ ಎನ್ನುವುದರ ಬಗ್ಗೆಯೂ ಹೇಳಿಕೊಂಡಿದ್ದಾರೆ.

 • Trending Desk
 • 4-MIN READ
 • Last Updated :
 • Bangalore, India
 • Share this:

ಬಾಲಿವುಡ್ (Bollywood) ನಟಿ ಗುಲ್ ಪನಾಗ್ (Gul Panag) ಅವರು ಬರೀ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ ಅಂತ ಹೇಳಿದರೆ ಬಹುತೇಕರಿಗೆ ಆಶ್ಚರ್ಯವಾಗಬಹುದು. ಹೌದು. ಗುಲ್ ಪನಾಗ್ ಅವರು ನಟಿಯಾಗಿ (Actress), ಉದ್ಯಮಿಯಾಗಿ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಒಬ್ಬ ತಾಯಿಯಾಗಿ ತನ್ನೆಲ್ಲಾ ಕೆಲಸಗಳಿಗೂ ಸಹ ಸಮಾನವಾದ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಪ್ರತಿದಿನ ಹೊಸ ಹುರುಪಿನೊಂದಿಗೆ ದಿನವನ್ನು ಶುರು ಮಾಡುವ ಈ ನಟಿಯ ಆರೋಗ್ಯದ ಸಿಕ್ರೆಟ್ ಏನು ಅಂತ ಅನೇಕ ಅಭಿಮಾನಿಗಳಿಗೆ (Fans) ತಿಳಿದುಕೊಳ್ಳಲು ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ ಎಂದು ಹೇಳಬಹುದು.


ನಟಿ ಗುಲ್ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೇಳಿದ್ದೇನು?


ನಟಿ ತನ್ನ ಇತ್ತೀಚಿನ ಉಪಕ್ರಮವಾದ ಸನ್‌ಫ್ಯೂಯಲ್ ಎಲೆಕ್ಟ್ರಿಕ್, ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯೊಂದಿಗೆ ಪರಿಸರದ ಸುಧಾರಣೆಗಾಗಿ ಶುದ್ಧ ಇಂಧನ ಮೂಲಗಳನ್ನು ಬಳಸುವ ಅಗತ್ಯವನ್ನು ಪ್ರತಿಪಾದಿಸುವಲ್ಲಿ ನಿರತರಾಗಿದ್ದಾರೆ, ಅದರಲ್ಲಿ ಅವರು ಸಹ-ಸಂಸ್ಥಾಪಕರಾಗಿದ್ದಾರೆ.
ಸಂದರ್ಶನದಲ್ಲಿ 43 ವರ್ಷದ ಗುಲ್ ತನ್ನ ದೈನಂದಿನ ಜೀವನವನ್ನು ಹೇಗೆ ಶುರು ಮಾಡುತ್ತಾರೆ ಮತ್ತು ಫಿಟ್ ಆಗಿರಲು ಏನೆಲ್ಲಾ ಮಾಡುತ್ತಾರೆ ಎನ್ನುವುದರ ಬಗ್ಗೆಯೂ ಹೇಳಿಕೊಂಡಿದ್ದಾರೆ.


ನಟಿಯನ್ನು ಸದ್ಯಕ್ಕೆ ಬ್ಯುಸಿಯಾಗಿರಿಸುತ್ತಿವೆಯಂತೆ ಈ ಕೆಲಸಗಳು


ಯಾವ ಕೆಲಸಗಳಲ್ಲಿ ತುಂಬಾ ಬ್ಯುಸಿ ಇರುತ್ತೀರಿ ಅಂತ ಕೇಳಿದ್ದಕ್ಕೆ, ನಟಿ ಗುಲ್ ಅವರು “ನನ್ನ ಚಿತ್ರಗಳಾದ ಘೋಸ್ಟ್ ಮತ್ತು ಗುಡ್ ಬ್ಯಾಡ್ ಗರ್ಲ್ ಅನ್ನು ಪ್ರಚಾರ ಮಾಡುತ್ತಿದ್ದೇನೆ, ಚಲನಚಿತ್ರಗಳನ್ನು ನಿರ್ಮಿಸುವುದು ಮತ್ತು ಸನ್‌ಫ್ಯೂಯಲ್ ನಲ್ಲಿ ಪಾಲುದಾರಿಕೆಯ ಕೆಲಸದಿಂದ ಬ್ಯುಸಿ ಆಗಿರುತ್ತೇನೆ” ಎಂದು ಹೇಳಿದರು.


ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದ ಅನುಭವಗಳನ್ನು ಹಂಚಿಕೊಂಡ ನಟಿ


“ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯವು ಜನರಿಗೆ ಹೊಸ ಸಾಮಾನ್ಯತೆಗೆ ಮರುಹೊಂದಿಕೊಳ್ಳಲು ಒಂದು ಹೊಸ ಅವಕಾಶವಾಗಿತ್ತು. ಇದು ಸಾಮಾನ್ಯವಾಗಿ ಜೀವನವನ್ನು ಮರುಮೌಲ್ಯಮಾಪನ ಮಾಡಲು ಮತ್ತು ಮರು-ಆದ್ಯತೆ ನೀಡಲು ಒಂದು ಅವಕಾಶವಾಗಿತ್ತು. ಒಂದು ಕುಟುಂಬವಾಗಿ ನಾವು ಒಟ್ಟಿಗೆ ಸೇರಿದ ಆ ಸಮಯಕ್ಕಾಗಿ ಕೃತಜ್ಞರಾಗಿದ್ದೇವೆ” ಎಂದು ನಟಿ ಹೇಳಿದರು.


ನೀವು ಪ್ರಯಾಣಿಸಲು ಇಷ್ಟಪಡುತ್ತೀರಿ, ಇದಕ್ಕೆ ನಿಮ್ಮ ಸಾಮಾಜಿಕ ಮಾಧ್ಯಮವೇ ಸಾಕ್ಷಿ. ನಿಮ್ಮ ಈ ಉತ್ಸಾಹ ಎಲ್ಲಿಂದ ಬರುತ್ತದೆ ಅಂತ ಕೇಳಿದ ಪ್ರಶ್ನೆಗೆ ಗುಲ್ ಅವರು “ಹೊಸ ಅನುಭವಗಳನ್ನು ಹುಡುಕುವುದು ಮತ್ತು ನನ್ನ ದಿಗಂತ ಮತ್ತು ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳುವುದು ಇದಕ್ಕೆ ಉತ್ಸಾಹವನ್ನು ನೀಡುತ್ತದೆ” ಎಂದು ಹೇಳಿದರು.


ಕೆಲಸ, ಪ್ರಯಾಣ ಮತ್ತು ಕುಟುಂಬದ ನಡುವೆ, ನೀವು ವರ್ಕೌಟ್ ಮಾಡಲು ಹೇಗೆ ಸಮಯವನ್ನು ಹೊಂದಿಸಿಕೊಳ್ಳುತ್ತೀರಿ ಅಂತ ಕೇಳಿದಾಗ, ಗುಲ್ ಅವರು “ನಾನು ಹೆಚ್ಚಿನ ದಿನಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಏಳುತ್ತೇನೆ, ಮತ್ತು ಬೆಳಿಗ್ಗೆ ವ್ಯಾಯಾಮವನ್ನು ಮಾಡುತ್ತೇನೆ. ದಿನದ ಕೊನೆಯಲ್ಲಿ ವ್ಯಾಯಾಮ ಮಾಡುವುದಕ್ಕೆ ನನಗೆ ಆಗುವುದಿಲ್ಲ, ಹಾಗಾಗಿ ಬೆಳಿಗ್ಗೆ ಮಾಡಿ ಮುಗಿಸುತ್ತೇನೆ” ಎಂದು ಹೇಳಿದರು.


ಪರ್ವತಗಳಲ್ಲಿ ಸೈಕ್ಲಿಂಗ್ ಮಾಡಿದ ಅನುಭವವನ್ನು ಹಂಚಿಕೊಂಡ ಗುಲ್ ಪನಾಗ್


“ಪರ್ವತಗಳಲ್ಲಿ ಸೈಕ್ಲಿಂಗ್ ಹೋಗುವುದು ಒಂದು ವಿಭಿನ್ನ ರೀತಿಯ ಅನುಭವವನ್ನು ಕಟ್ಟಿಕೊಡುತ್ತದೆ” ಎಂದು ನಟಿ ಹೇಳಿದರು.


ಇದನ್ನೂ ಓದಿ: Niveditha Gowda: ನಟಿ ನಿವೇದಿತಾ ಗೌಡ ಹಾಟ್ ಲುಕ್! ಫೋಟೋ ತೆಗೆದೋರು ಯಾರು?


ಇನ್ನೂ ಇವರ ಡಯಟ್ ಬಗ್ಗೆ ಕೇಳಿದಾಗ, ನಟಿ “ನಾನು ಎಲ್ಲೇ ಇದ್ದರೂ ಸಮತೋಲಿತವಾದ ಆಹಾರವನ್ನು ನಾನು ತಿನ್ನುತ್ತೇನೆ. ನಾನು ಸಂಸ್ಕರಿಸಿದ ಆಹಾರ, ಸಂಸ್ಕರಿಸಿದ ಹಿಟ್ಟು ಮತ್ತು ಸಕ್ಕರೆಯನ್ನು ಆದಷ್ಟು ದೂರವಿಡಲು ಪ್ರಯತ್ನಿಸುತ್ತೇನೆ” ಎಂದು ಹೇಳಿದರು.


ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರಬೇಕು ಎಂದ ನಟಿ


ಮಹಿಳೆಯರು ಉದ್ಯಮಶೀಲತೆ ಸೇರಿದಂತೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿರಬೇಕು ಆದರೆ ಒಂದಕ್ಕೆ ಯಾವತ್ತೂ ಸೀಮಿತವಾಗಬಾರದು. ನಮ್ಮಂತಹ ಪುರುಷ ಪ್ರಧಾನ ಸಮಾಜದಲ್ಲಿ, ಮಹಿಳೆಯರು ತಮ್ಮನ್ನು ತಾವು ಆರ್ಥಿಕವಾಗಿ ಸಬಲಗೊಳಿಸುವುದು ಅತ್ಯಗತ್ಯವಾಗಿದೆ, ಏಕೆಂದರೆ ಸ್ವಾತಂತ್ರ್ಯ ಮತ್ತು ಸಬಲೀಕರಣಕ್ಕೆ ಅದೇ ನಿಜವಾದ ಮಾರ್ಗವಾಗಿದೆ ಎಂದು ಗುಲ್ ಹೇಳಿದರು.


ನಾವು ಪರಿಪೂರ್ಣತೆಯನ್ನು ಹುಡುಕಲು ಹೋಗಬಾರದು, ನನ್ನ ಅಭಿಪ್ರಾಯದಲ್ಲಿ ಪರಿಪೂರ್ಣತೆಯನ್ನು ಹುಡುಕುವುದು ನಿರಾಶೆಯನ್ನು ಹೊರತುಪಡಿಸಿ ಬೇರೆ ಏನನ್ನೂ ತಂದುಕೊಡುವುದಿಲ್ಲ. ಎಲ್ಲಾ ಸಂದರ್ಭಗಳಲ್ಲಿ ಹೊಂದಿಕೊಳ್ಳುವ ಮತ್ತು ಅಭಿವೃದ್ಧಿ ಹೊಂದುವ ಸಾಮರ್ಥ್ಯವು ಹೆಚ್ಚು ಮುಖ್ಯವಾಗಿದೆ ಎಂದು ಹೇಳಿದರು.


ಸೌಂದರ್ಯದ ಬಗ್ಗೆ ಏನ್ ಹೇಳ್ತಾರೆ ಈ ನಟಿ


ಸೌಂದರ್ಯದ ಬಗ್ಗೆ ಬದಲಾಗುತ್ತಿರುವ ಗ್ರಹಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಮತ್ತು ಇದು ಸಮಾಜವನ್ನು ರೂಪಿಸಲು ಹೇಗೆ ಸಹಾಯ ಮಾಡುತ್ತದೆ ಅಂತ ಕೇಳಿದ ಪ್ರಶ್ನೆಗೆ, ನಟಿ ಗುಲ್ ಅವರು “ಸೌಂದರ್ಯದ ಗ್ರಹಿಕೆಯು ಯಾವಾಗಲೂ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಸಂದರ್ಭ ಬದಲಾದಂತೆ, ಸೌಂದರ್ಯದ ಗ್ರಹಿಕೆ ಬದಲಾಗುತ್ತದೆ. ಇದು ಹೆಚ್ಚು ವ್ಯಕ್ತಿನಿಷ್ಠವಾಗಿದೆ ಮತ್ತು ಇಂದು ಕರ್ತವ್ಯವೆಂದು ಪರಿಗಣಿಸಲಾಗುವುದನ್ನು ಬಹುಶಃ ನಾಳೆ ಸೌಂದರ್ಯವೆಂದು ಪರಿಗಣಿಸಲಾಗುವುದಿಲ್ಲ” ಎಂದು ಹೇಳಿದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು