ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಆರ್ಭಟ ಮುಂದುವರೆದಿದೆ. RRR ಬಳಿಕ 'ಕೆಜಿಎಫ್ 2' (KGF 2) ಸಿನಿಮಾ ಬಾಕ್ಸಾಫೀಸ್ (Box Office) ನಡುಗುವಂತೆ ಮಾಡುತ್ತಿದೆ. ಕನ್ನಡದ ಪ್ಯಾನ್ ಇಂಡಿಯಾ (Kannada Pan India) ಸಿನಿಮಾವೊಂದು ರಿಲೀಸ್ ಆಗಿ 15 ದಿನ ಕಳೆದರೂ ಬಾಕ್ಸಾಫೀಸ್ನಲ್ಲಿ ಕಮಾಲ್ ಮಾಡುತ್ತಿರುವುದನ್ನು ಕಂಡರೆ ಕನ್ನಡಿಗರು ಹೆಮ್ಮೆ ಪಡುವ ವಿಚಾರ. ವರ್ಲ್ಡ್ ಬಾಕ್ಸ್ ಆಫೀಸ್ನಲ್ಲಿ ನರಾಚಿ ಅಧಿಪತಿ ರಾಕಿ ಭಾಯ್ (Rocky Bhai) ಅಬ್ಬರ ಮುಂದುವರೆದಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಪ್ರತಿ ಶೋ ಕೂಡ ಹೌಸ್ಫುಲ್ (House Full) ಪ್ರದರ್ಶನ ಕಾಣುತ್ತಿದೆ. ಒಮ್ಮೆ ಸಿನಿಮಾ ನೋಡಿದ ಮಂದಿ ಮತ್ತೆ ಮತ್ತೆ ಚಿತ್ರಮಂದಿಗಳಿಗೆ ತೆರಳಿ ರಾಕಿ ಭಾಯ್ ಆರ್ಭಟ್ ಕಂಡು ಖುಷಿ ಪಡುತ್ತಿದ್ದಾರೆ. ಕ್ರಿಕೆಟ್ (Cricket( ಜಗತ್ತಿನಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಿ ಅಬ್ಬರಿಸುತ್ತಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Banglore) ತಂಡದ ಆಟಗಾರರು ಹಾಗೂ ಸಿಬ್ಬಂದಿ ವರ್ಗ ಚಿತ್ರವನ್ನು ವೀಕ್ಷಿಸಿದ್ದರು.
ಕೆಜಿಎಫ್ 2 ಸಿನಿಮಾ ನೋಡಿದ ಗುಜರಾತ್ ಟೈಟನ್ಸ್
ಬೆಂಗಳೂರು ಬಾಯ್ಸ್ ರಾಕಿ ಭಾಯ್ ಅಬ್ಬರ ಕಂಡು ದಂಗಾಗಿ ಹೋಗಿದ್ದರು. ಇದೀಗ ಗುಜರಾತ್ ಟೈಟನ್ಸ್ ತಂಡದ ಆಟಗಾರರು ಸಹ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ವೀಕ್ಷಿಸಿದ್ದು, ಈ ವಿಷಯವನ್ನು ಸ್ವತಃ ಗುಜರಾತ್ ಟೈಟನ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಗುಜರಾತ್ ಟೈಟನ್ಸ್ ಫ್ರಾಂಚೈಸಿ ತಮ್ಮ ಆಟಗಾರರು ಹಾಗೂ ಸಿಬ್ಬಂದಿ ವರ್ಗದವರಿಗಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿತ್ತು. ನಿನ್ನೆ ( ಏಪ್ರಿಲ್ 29 ) ಎಲ್ಲರೂ ಕೆಜಿಎಫ್ 2 ಸಿನಿಮಾವನ್ನು ನೋಡಿದ್ದಾರೆ.
ರಾಕಿ ಭಾಯ್ ಅಬ್ಬರ ಕಂಡು ದಂಗಾದ ಗುಜರಾತ್ ಫ್ಯಾನ್ಸ್!
ಗುಜರಾತ್ ಟೈಟನ್ಸ್ ತಮ್ಮ ಅಧಿಕೃತ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ, ಶುಬ್‌ಮನ್ ಗಿಲ್, ರಾಹುಲ್ ತೆವಾಟಿಯಾ ಹಾಗೂ ರಶೀದ್ ಖಾನ್ ಸೇರಿದಂತೆ ಇನ್ನೂ ಹಲವು ಆಟಗಾರರು ಚಿತ್ರ ವೀಕ್ಷಿಸಿ ಖುಷಿಯಿಂದ ಎಂಜಾಯ್ ಮಾಡಿದ್ದಾರೆ. ಇನ್ನು ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತುಂಬಾ ಕುತೂಹಲದಿಂದ ಚಿತ್ರ ವೀಕ್ಷಿಸಿದ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಚಿತ್ರ ಮುಗಿದ ನಂತರ ಕೆಜಿಎಫ್ ಅಬ್ಬರಕ್ಕೆ ಮನಸೋತ ಹಾರ್ದಿಕ್ ಪಾಂಡ್ಯ ಚಪ್ಪಾಳೆ ತಟ್ಟಿದ್ದಾರೆ.
ಇದನ್ನೂ ಓದಿ: ಬಲಿಷ್ಠ ರಾಜಸ್ಥಾನ್ ತಂಡಕ್ಕೆ ಮುಂಬೈ ಸವಾಲ್, ಹೇಗಿದೆ ಉಭಯ ತಂಡಗಳ ಬಲಾಬಲ
ಇನ್ನು ತಂಡದ ಇತರೆ ಆಟಗಾರರಾದ ಶುಬ್‌ಮನ್ ಗಿಲ್ ಹಾಗೂ ರಶೀದ್ ಖಾನ್ ಕೂಡ ಸಿನಿಮಾವನ್ನು ಗಮನವಿಟ್ಟು ವೀಕ್ಷಿಸುತ್ತಿದ್ದನ್ನು ಕಾಣಬಹುದಾಗಿದೆ. ಚಿತ್ರ ವೀಕ್ಷಣೆ ಮುಗಿದ ನಂತರ ಕ್ಯಾಮೆರಾ ಮುಂದೆ ಬಂದು ಪ್ರೇಕ್ಷಕರ ರೀತಿಯಲ್ಲೇ ಸಾಲಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ ಗುಜರಾತ್ ಟೈಟನ್ಸ್ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.ಶುಬ್‌ಮನ್ ಗಿಲ್ 'ಲವ್ಡ್ ಇಟ್' ಎಂದರೆ, ತಂಡದ ನಾಯಕ ಹಾರ್ದಿಕ್ ಪಾಂಡ್ಯ 'ವೆರಿ ನೈಸ್' ಎಂದು ಉತ್ಸಾಹದಿಂದ ಹೇಳಿದ್ದಾರೆ.
ಇದನ್ನೂ ಓದಿ: ಬಯೋ ಬಬಲ್ನಲ್ಲೇ ಮದುವೆ ಪಾರ್ಟಿ! ಮ್ಯಾಕ್ಸ್ವೆಲ್-ವಿನಿ ರಾಮನ್ ಜೊತೆ ಆರ್ಸಿಬಿ ಸಂಭ್ರಮ ನೋಡಿ!
ಸಾವಿರ ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ!
ರಾಕಿ ಭಾಯ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಬಂದಿದ್ದ ಕೆಜಿಎಫ್ ಚಾಪ್ಟರ್ ಒನ್ ಸಿನಿಮಾ ಸಖತ್ ಸೌಂಡ್ ಮಾಡಿತ್ತು, ಕೆಜಿಎಫ್ ಚಾಪ್ಟರ್2 ಮೇಲೆ ಹೆಚ್ಚು ನಿರೀಕ್ಷೆ ಬರುವಂತೆ ಮಾಡಿತ್ತು. ಕೆಜಿಎಫ್ 2 ರಿಲೀಸ್ ಆದ ನಂತರ ಇಡೀ ವಿಶ್ವದಲ್ಲೇ ರೂಲ್ ಮಾಡುತ್ತಿದ್ದೆ. ಕರ್ನಾಟಕದಲ್ಲಿ 153.8 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ತಮಿಳುನಾಡು 94.24 ಕೋಟಿ, ಕೇರಳದಲ್ಲಿ 53.8 ಕೋಟಿ, ಇತರೆಡೆ 402.9 ಕೋಟಿ, ಒಟ್ಟು 816.3 ಕೋಟಿ ಗಳಿಗೆ, ವಿದೇಶದಲ್ಲಿ 164.2 ಕೋಟಿ ರೂಪಾಯಿ, ಒಟ್ಟು 980.5 ಕೋಟಿ ಕಲೆಕ್ಷನ್ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ