ಹೊಸ ಪ್ರತಿಭೆಗಳ ವಿಭಿನ್ನ ಸಾಹಸ; ಗುಡುಗುಡಿಯಾ ಸೇದಿ ನೋಡೋ ಸಿನಿಮಾ

ಟೈಟಲ್​​​ನಲ್ಲಿ ಒಂದು ಗಟ್ಟಿತನ ಬೇಕಿತ್ತು. ಕಥೆಯ ಶೈಲಿಯೂ ಬೇರೆಯದ್ದಾಗಿರುವುದರಿಂದ ಅದಕ್ಕೆ ಒಪ್ಪುವ ಶೀರ್ಷಿಕೆಯ ಹುಡುಕಾಟದಲ್ಲಿದ್ದಾಗ, ಗುಡುಗುಡಿಯಾ ಸೇದಿ ನೋಡೋ ತುಂಬ ಹತ್ತಿರ ಎನಿಸಿತು. ಹಾಗಾಗಿ ಅದನ್ನೇ ಆಯ್ದುಕೊಂಡಿದ್ದೇನೆ. ಪ್ರಸ್ತುತ ನಡೆಯುತ್ತಿರುವ ಸನ್ನಿವೇಶಕ್ಕೂ ಈ ಶೀರ್ಷಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಳ್ಳುತ್ತಾರೆ ಚಿತ್ರದ ನಿರ್ದೇಶಕ ಜಂಟಿ ಹೂಗಾರ್.

ಸಿನಿಮಾ ತಂಡ

ಸಿನಿಮಾ ತಂಡ

  • Share this:
ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಸಿನಿಮಾ ತಂಡಗಳು, ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿವೆ. ಇದುವರೆಗೂ ಸಿನಿಮಾಗಳಲ್ಲಿ ತೋರಿಸಿದ್ದನ್ನು ಹೊರತುಪಡಿಸಿ ಹೊಸತನದತ್ತ ಗಮನ ಹರಿಸುತ್ತಿದ್ದಾರೆ. ಈಗ ಅದೇ ಬಗೆಯ ಆಲೋಚನೆಯೊಂದಿಗೆ ಹೊಚ್ಚ ಹೊಸ ಚಿತ್ರತಂಡವೊಂದು ಸದ್ದು ಮಾಡುತ್ತಿದೆ. ಹೆಸರು ಗುಡುಗುಡಿಯಾ ಸೇದಿ ನೋಡೋ… ಹಾಗಂತ ಇದು ಸದ್ಯದ ಡ್ರಗ್ಸ್ ಹಾಗೂ ಗಾಂಜಾ ಹಾವಳಿಯ ಕುರಿತ ಸಿನಿಮಾ ಅಲ್ಲ..! ವಾಟರ್ ಏಂಜಲ್ಸ್ ಸಿನಿಮಾಸ್ ಲಾಂಛನದಲ್ಲಿ ಕೃಷ್ಣಕಾಂತ್ ಎನ್, ಗುಡುಗುಡಿಯಾ ಸೇದಿ ನೋಡೋ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣಕಾಂತ್​ಗೆ ಮೊದಲಿಂದಲೂ ಸಿನಿಮಾ ಮಾಡಬೇಕು ಎಂಬ ಬಯಕೆ ಇತ್ತು. ಆ ಆಸೆಯನ್ನು ಈ ಚಿತ್ರದ ಮೂಲಕ ಈಡೇರಿಸಿಕೊಂಡಿದ್ದು, ಸಂಪೂರ್ಣ ಹೊಸ ತಂಡದೊಂದಿಗೆ ಆಗಮಿಸಿದ್ದಾರೆ.

‘ಟೈಟಲ್​​​ನಲ್ಲಿ ಒಂದು ಗಟ್ಟಿತನ ಬೇಕಿತ್ತು. ಕಥೆಯ ಶೈಲಿಯೂ ಬೇರೆಯದ್ದಾಗಿರುವುದರಿಂದ ಅದಕ್ಕೆ ಒಪ್ಪುವ ಶೀರ್ಷಿಕೆಯ ಹುಡುಕಾಟದಲ್ಲಿದ್ದಾಗ, ಗುಡುಗುಡಿಯಾ ಸೇದಿ ನೋಡೋ ತುಂಬ ಹತ್ತಿರ ಎನಿಸಿತು. ಹಾಗಾಗಿ ಅದನ್ನೇ ಆಯ್ದುಕೊಂಡಿದ್ದೇನೆ. ಪ್ರಸ್ತುತ ನಡೆಯುತ್ತಿರುವ ಸನ್ನಿವೇಶಕ್ಕೂ ಈ ಶೀರ್ಷಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಳ್ಳುತ್ತಾರೆ ಚಿತ್ರದ ನಿರ್ದೇಶಕ ಜಂಟಿ ಹೂಗಾರ್.

ಈ ಮೊದಲು ಸಭ್ಯ ಎನ್ನುವ ಕಿರುಚಿತ್ರ ನಿರ್ದೇಶಿಸಿದ್ದ ಅವರು ಹಲವು ಧಾರಾವಾಹಿ ಮತ್ತು ಸಿನಿಮಾಗಳಲ್ಲಿಯೂ ಕೆಲಸ ಮಾಡಿದ ಅನುಭವ ಪಡೆದಿದ್ದು, ಈಗ ಗುಡುಗುಡಿಯಾ ಸೇದಿ ನೋಡೋ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ.  ‘ಚಿತ್ರದ ಶೇ. 90 ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಪಯಣದ ಹಾದಿಯಲ್ಲಿ ಮಿಸ್ಟರಿ ಥ್ರಿಲ್ಲರ್ ಶೈಲಿಯ ಕಥೆ ತೆರೆದುಕೊಳ್ಳುತ್ತದೆ.

Mysuru Dasara 2020: ಈ ಬಾರಿಯ ಸರಳ ದಸರಾಗೆ ಖರ್ಚಾದ ಹಣ ಎಷ್ಟು?; ಇಲ್ಲಿದೆ ಸಚಿವರು ಕೊಟ್ಟ ಲೆಕ್ಕ..!

ಪ್ಯಾಚ್ವರ್ಕ್ ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ಚಿತ್ರಮಂದಿರಕ್ಕೆ ಬರುತ್ತೇವೆ. ಬುಡಕಟ್ಟು ಸಮುದಾಯ, 600, 700 ವರ್ಷಗಳ ಹಿಂದಿನ ಒಂದಷ್ಟು ನಾಗರಿಕತೆ ಮತ್ತು ಕನ್ನಡದ ಕಂಪು ಈ ಚಿತ್ರದಲ್ಲಿ ಕಾಣಿಸಲಿದೆ. ಬೆಂಗಳೂರು ಸೇರಿ ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಿದ್ದೇವೆ. ಚಿತ್ರದಲ್ಲಿ ಹಳಗನ್ನಡದ ಬಳಕೆ ಇರುವುದರಿಂದ ಕನ್ನಡ ಚಿತ್ರದಲ್ಲಿ ಕನ್ನಡದ ಸಬ್ಟೈಟಲ್ ಅನ್ನು ನೀವೆಲ್ಲ ನೋಡಲಿದ್ದೀರಿ’ ಎಂದು ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿ ನೀಡುತ್ತಾರೆ ಜಂಟಿ ಹೂಗಾರ್.

ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿರುವ ಸುಜಿತ್ ಪೂರ್ಣ ಪ್ರಮಾಣದಲ್ಲಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇನ್ನುಳಿದಂತೆ ಕಾಲೇಜು ದಿನಗಳಿಂದ ಸಿನಿಮಾ ಬಗ್ಗೆ ಆಕರ್ಷಣೆ ಹೊಂದಿದ್ದ ಐಶ್ವರ್ಯಾ ದಿನೇಶ್ ಮಾಡೆಲಿಂಗ್ ನಲ್ಲಿ ಮಿಂಚಿ, 2016ರಲ್ಲಿ ಮಿಸ್ ಕ್ವೀನ್ ಆಫ್ ಕರ್ನಾಟಕ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಟಿವಿ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈಗ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

ಕಳೆದ 14 ವರ್ಷಗಳಿಂದ ಭರತನಾಟ್ಯದಲ್ಲಿ ಪಳಗಿರುವ ರಶ್ಮಿತಾ ಗೌಡ, ಈ ಚಿತ್ರದ ಮತ್ತೋರ್ವ ನಾಯಕಿ. ನಿರಂಜನ್​ಗೂ ಇದು ಮೊದಲ ಸಿನಿಮಾ ಆಗಿದ್ದು ನಿಖಿಲ್ ಎಂಬ ಪಾತ್ರ ಮಾಡಿದ್ದಾರೆ. ನಿರ್ದೇಶಕರ ಪ್ರಕಾರ ಪಾತ್ರವರ್ಗದ ಶಕ್ತಿ ಒಂದೆಡೆಯಾದರೆ, ತಾಂತ್ರಿಕ ವರ್ಗ ಇಡೀ ಚಿತ್ರದ ಬೆನ್ನೆಲುಬು ಎನ್ನುತ್ತಾರೆ.

ಕಥಾಸಂಗಮ ಚಿತ್ರದಲ್ಲಿ ಕೆಲಸ ಮಾಡಿದ್ದ ದೀಪಕ್ ಯರಗೇರಾ ಗುಡುಗುಡಿಯಾ ಸೇದಿ ನೋಡೋ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಮೈಸೂರು ಮೂಲದ ಉದಿತ್ ಹರಿದಾಸ್ ಸಂಗೀತದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ವರದರಾಜ್ ಕಾಮತ್ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
Published by:Latha CG
First published: