500 ಕೋಟಿ ಬಜೆಟ್​ನಲ್ಲಿ 6 ಭಾಷೆಗಳಲ್ಲಿ ನಿರ್ಮಾಣವಾಗಲಿದೆ ಈ ಸಿನಿಮಾ..!

ಕಳೆದ ವರ್ಷ ಕೇರಳದ ಭಗವತಿ ಅಮ್ಮ ದೇವಸ್ಥಾನಕ್ಕೆ ಬರೋಬ್ಬರಿ 700 ಕೋಟಿ ರೂಪಾಯಿ ದೇಣಿಗೆ ನೀಡಿ ಸುದ್ದಿಯಾಗಿದ್ದ ಗಾನ ಶ್ರವಣ್ ಸ್ವಾಮೀಜಿ, ಈಗ ಕ್ರಿಷ್ಣರಾಜ 4 ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಕ್ರಿಷ್ಣರಾಜ 4 ಸಿನಿಮಾದ ಸುದ್ದಿಗೋಷ್ಠಿಯ ಚಿತ್ರ

ಕ್ರಿಷ್ಣರಾಜ 4 ಸಿನಿಮಾದ ಸುದ್ದಿಗೋಷ್ಠಿಯ ಚಿತ್ರ

  • Share this:
ಒಂದು ಕಡೆ ಕೊರೋನಾ ಆತಂಕ. ಮತ್ತೊಂದು ಕಡೆ ಕೊರೋನಾ ಲಾಕ್​ಡೌನ್​ನಿಂದಾಗಿ ಇನ್ನು ಸರಿಯಾಗಿ ಆರಂಭಗೊಳ್ಳದ ಉದ್ಯಮಗಳು. ಇದಕ್ಕೆ ಸಿನಿರಂಗ ಸಹ ಹೊರತಾಗಿಲ್ಲ. ಚಿತ್ರಮಂದಿರಗಳು ಬಾಗಿಲು ತೆರೆದಿದ್ದರೂ ಶೇ 50ರಷ್ಟು ಆಸನ ಭರ್ತಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಇದರಿಂದಾಗಿ ಚಿತ್ರಮಂದಿರವರೂ ನಷ್ಟ ಅನುಭವಿಸುತ್ತಿದ್ದು, ಸಿನಿ ಕಾರ್ಮಿಕರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳು ಸಿನಿಮಾ ಮಂದಿರಗಳು ಸಂಪೂರ್ಣವಾಗಿ ಬಾಗಿಲು ತೆರೆಯುವರೆಗೂ ರಿಲೀಸ್ ದಿನಾಂಕ ಪ್ರಕಟಿಸೋದಿಲ್ಲ ಅಂತ ಪಟ್ಟು ಹಿಡಿದು ಕುಳಿತಿವೆ. ಕೆಲವು ಸಿನಿತಂಡಗಳು  ಒಟಿಟಿ ಮೊರೆ ಹೋಗುತ್ತಿವೆ. ಪರಿಸ್ಥಿತಿ ಹೀಗಿರುವಾಗ ಬಿಗ್ ಬಜೆಟ್​ ಸಿನಿಮಾಗಳ ಪ್ರಕಟಣೆ ಕಡಿಮೆಯಾಗಿದೆ. ಇತ್ತೀಚೆಗಷ್ಟೆ ಹೊಂಬಾಳೆ ಸಿನಿಮಾ ಸಾಲು ಸಾಲು ಹೊಸ ಸಿನಿಮಾಗಳನ್ನು ಪ್ರಕಟಿಸಿದೆ. ಇದರ ಬೆನ್ನಲ್ಲೇ ಈಗ ಮತ್ತೊಂದು ಬ್ಯಾನರ್​ ದೊಡ್ಡ ಬಜೆಟ್​ನ ಚಿತ್ರವನ್ನು ಪ್ರಕಟಿಸಿದೆ. 

ಇದು ಕನ್ನಡ ಸಿನಿಪ್ರೇಮಿಗಳು ನೋಡಲೇಬೇಕಾದ ಸುದ್ದಿ. ಕನ್ನಡ ಚಿತ್ರರಂಗ ಹೆಮ್ಮೆ ಪಡುವ ವಿಷಯ. 400-500 ಕೋಟಿ ರೂಪಾಯಿಯ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ ಕನ್ನಡದ ನಿರ್ಮಾಪಕರು. ಜಿಎಸ್ಆರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಗಾನ ಶ್ರವಣ್ ಸ್ವಾಮೀಜಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

GSR film productions, Big Budget Kannada movie, Krishnaraja 4 , Story, music and producer gana shravan, Co Produver aditi, 6 ಭಾಷೆಗಳಲ್ಲಿ ನಿರ್ಮಾಣ, ಜಿಎಸ್ಆರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್, ಗಾನ ಶ್ರವಣ್ ಸ್ವಾಮೀಜಿ, ಕ್ರಿಷ್ಣರಾಜ 4, GSR film productions making Big Budget Kannada movie Krishnaraja 4 ae
ಕ್ರಿಷ್ಣರಾಜ 4 ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಸಹ ನಿರ್ಮಾಪಕಿ ಅದಿತಿ


ಕಳೆದ ವರ್ಷ ಕೇರಳದ ಭಗವತಿ ಅಮ್ಮ ದೇವಸ್ಥಾನಕ್ಕೆ ಬರೋಬ್ಬರಿ 700 ಕೋಟಿ ರೂಪಾಯಿ ದೇಣಿಗೆ ನೀಡಿ ಸುದ್ದಿಯಾಗಿದ್ದ ಗಾನ ಶ್ರವಣ್ ಸ್ವಾಮೀಜಿ, ಈಗ ಕ್ರಿಷ್ಣರಾಜ 4 ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಇದನ್ನೂ ಓದಿ: ಈ ವಿಶೇಷ ದಿನದಂದೇ ರಿಲೀಸ್ ಆಯ್ತು ದಿಗಂತ್ ಅಭಿಯನ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಪೋಸ್ಟರ್​

ಕ್ರಿಷ್ಣ ಎಂಬ ಹೆಸರಿನ ರಾಜ ಸುತ್ತ ನಡೆಯುವ ಕತೆ ಇದಾಗಿದೆ. ಕ್ರಿಷ್ಣ ಎಂಬ ಒಬ್ಬ ರಾಜ ಹಾಗೂ ಅವನ ನಾಲ್ಕು ಮುಖಗಳು ಅಂದರೆ ಶೇಡ್ಸ್​. ಈ ಚಿತ್ರಕ್ಕೆ ಇನ್ನು ನಿರ್ದೇಶಕರು ಫಿಕ್ಸ್​ ಆಗಿಲ್ಲ. ಗಾನ ಶ್ರವಣ ಅವರೇ ಕತೆ ಬರೆದು, ಸಂಗೀತ ಸಹ ನೀಡಲಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲೀಷ್ 6 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆಯಂತೆ.

ಇದನ್ನೂ ಓದಿ: Abhishek Bachchan: 45.75 ಕೋಟಿಗೆ ಐಷಾರಾಮಿ ಮನೆ ಮಾರಿದ ಅಭಿಷೇಕ್ ಬಚ್ಚನ್..!

ಸದ್ಯ ಸ್ಯಾಂಡಲ್​ವುಡ್​ನಲ್ಲಿ ಯಶ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2, ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ 3,ವಿಕ್ರಾಂತ್ ರೋಣ, ದಿಗಂತ್ ಹಾಗೂ ಐಂದ್ರಿತಾ ನಟನೆಯ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ. ರಿಷಭ್​ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರ ಚಿತ್ರಗಳು ಹೀಗೆ ಸಾಲು ಸಾಲು ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿದೆ. ಸಿನಿಮಾ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ವೀಕ್ಷಣೆಗೆ ಅವಕಾಶ ಸಿಗುತ್ತಿದ್ದಂತೆಯೇ ಒಂದೊಂದಾಗಿ ರಿಲೀಸ್​ ದಿನಾಂಕ ಪ್ರಕಟಿಸಲಿವೆ.ಇದನ್ನೂ ಓದಿ: KGF Chapter 2 ಚಿತ್ರಕ್ಕೆ ಸಿಕ್ತು ಕೋಟಿ ಕೋಟಿ ಆಫರ್​: ಒಟಿಟಿಯಲ್ಲಿ ರಿಲೀಸ್​ ಆಗಲಿದೆಯಾ ಈ ಸಿನಿಮಾ..?(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯ ಇನ್ನೂ ಸಂಪೂರ್ಣವಾಗಿ ತಪ್ಪಿಲ್ಲ. ಹೀಗಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಆದ್ದರಿಂದಲೇ ಪ್ರತಿಯೊಬ್ಬರು ಕೋವಿಡ್​​ ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗಿದೆ. ನಿತ್ಯ ಹೊರಗೆ ಹೋದರೆ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಮನೆಗೆ ಬಂದ ಕೂಡಲೆ ಕೈ ತೊಳೆಯುವುದನ್ನು ಮರೆಯಬೇಡಿ. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Anitha E
First published: