ಬಾಲಿವುಡ್ನಲ್ಲಿ (Bollywood) ಬಿಗ್ ಬಿ ಅಮಿತಾಭ್ ಬಚ್ಚನ್ ನಂತರ ಅಷ್ಟೊಂದು ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಹೊಂದಿರುವ ನಟರ ಸಾಲಿನಲ್ಲಿ ಬಾಲಿವುಡ್ ನ ಬಾದ್ ಷಾ ಅಂತಾನೆ ಖ್ಯಾತಿ ಪಡೆದಿರುವ ಶಾರುಖ್ ಖಾನ್ (Shah Rukh Khan) ಮೊದಲಿಗರು. ಶಾರುಖ್ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ. ಸದಾ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಶಾರುಖ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಶಾರುಖ್ ಅವರ ಬಗ್ಗೆ ಒಂದಲ್ಲ ಒಂದು ವೀಡಿಯೋವನ್ನು (Video) ಮತ್ತು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಸದಾ ಒಂದಲ್ಲ ಒಂದು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಲೇ ಇರ್ತಾರೆ ಎಸ್‌ಆರ್‌ಕೆ
ಇಷ್ಟೇ ಅಲ್ಲದೆ ಶಾರುಖ್ ಸಹ ತಮ್ಮ ಅಭಿಮಾನಿಗಳಿಗೆ ಎಂದೂ ನಿರಾಸೆ ಮಾಡುವುದಿಲ್ಲ. ಏಕೆಂದರೆ ಅನೇಕ ಬಾರಿ ಶಾರುಖ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಮಾನಿಗಳು ಕೇಳುವ ಅನೇಕ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸುವುದನ್ನು ನಾವು ನೋಡಿರುತ್ತೇವೆ.
ಅನೇಕ ಬಾರಿ ಅಭಿಮಾನಿಗಳು ಹಾಕುವ ವೀಡಿಯೋ ಮತ್ತು ಪೋಸ್ಟ್ ಗಳಿಗೆ ಅಷ್ಟೇ ತಮಾಷೆಯಾಗಿ ಮತ್ತು ನಯವಾಗಿ ಪ್ರತಿಕ್ರಿಯೆ ನೀಡುತ್ತಾರೆ ಈ ಕಿಂಗ್ ಖಾನ್.
ಶಾರುಖ್ ಖಾನ್ ಅವರು ಸದಾ ಒಂದಲ್ಲ ಒಂದು ಪೋಸ್ಟ್ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಸೂಪರ್ ಸ್ಟಾರ್ ಮತ್ತೊಮ್ಮೆ ತಮ್ಮ ದೊಡ್ಡ ಅಭಿಮಾನಿಯಾಗಿರುವ ವಯಸ್ಸಾದ ಮಹಿಳೆಯ ಇತ್ತೀಚಿನ ವೀಡಿಯೋಗೆ ತಮ್ಮ ಹೃದಯಸ್ಪರ್ಶಿ ಉತ್ತರದಿಂದ ಲಕ್ಷಾಂತರ ಜನರ ಹೃದಯಗಳನ್ನು ಗೆದ್ದಿದ್ದಾರೆ ಅಂತ ಹೇಳಬಹುದು.
ಮೊಮ್ಮಗ ಕೇಳಿದ ಪ್ರಶ್ನೆಗೆ ಅಜ್ಜಿ ಕೊಟ್ಟ ಉತ್ತರ ನೋಡಿ ಹೇಗಿದೆ?
ಇಲ್ಲಿರುವ ವೈರಲ್ ವೀಡಿಯೋದಲ್ಲಿ ಅಹಮದಾಬಾದ್ ನ ವೃದ್ಧ ಮಹಿಳೆಯೊಬ್ಬರು ಬಾಲಿವುಡ್ ಐಕಾನ್ ಗೆ ದೊಡ್ಡ ಅಭಿಮಾನಿಯಾಗಿರುವುದನ್ನು ನೀವು ನೋಡಬಹುದು.
ಸಣ್ಣ ವೀಡಿಯೋ ಕ್ಲಿಪ್ ನಲ್ಲಿ ಸಂಯೋಜಕ-ಬರಹಗಾರ-ಸಂಗೀತಗಾರ ಸಿದ್ಧಾರ್ಥ್ ಅಮಿತ್ ಭಾವ್ಸರ್ ತನ್ನ ಅಜ್ಜಿಯನ್ನು ಅವರ ಫಸ್ಟ್ ಲವ್ ಬಗ್ಗೆ ಕೇಳಿದ್ದರು. ಆಗ ಅದಕ್ಕೆ ಆ ಅಜ್ಜಿ ತನಗೆ ನಟರಾದ ಶಾರುಖ್ ಖಾನ್ ಮತ್ತು ಧರ್ಮೇಂದ್ರ ಅವರ ಮೇಲೆ ಜೀವಮಾನವಿಡೀ ಕ್ರಶ್ (ಪ್ರೇಮ) ಇದೆ ತಕ್ಷಣ ಉತ್ತರಿಸಿದರು.
Huṁ paṇa tanē prēma karuṁ chuṁ Baa. https://t.co/nZLzYhafFl
— Shah Rukh Khan (@iamsrk) February 22, 2023
ಈ ವೀಡಿಯೋ ಈಗ ಶಾರುಖ್ ಖಾನ್ ಅವರ ಕಣ್ಣಿಗೆ ಬಿದ್ದಿದ್ದು, ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ ಶಾರುಖ್. ಶಾರುಖ್ ಅವರ ಪ್ರತಿಕ್ರಿಯೆ ಅನೇಕರನ್ನು ಗೊಂದಲಕ್ಕೊಳಗಾಗಿಸಿದೆ ಅಂತ ಹೇಳಬಹುದು.
ಅಜ್ಜಿಯ ವೀಡಿಯೋ ನೋಡಿ ಶಾರುಖ್ ಏನ್ ಹೇಳಿದ್ರು ನೋಡಿ..
ಪಠಾಣ್ ಚಿತ್ರದ ನಟ ಅಜ್ಜಿಯ ಹೃದಯದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ ಎಂದು ತೋರುತ್ತದೆ. ಅವರು ಟ್ವೀಟ್ ಗೆ ಪ್ರತಿಕ್ರಿಯಿಸಿ ಗುಜರಾತಿ ಭಾಷೆಯಲ್ಲಿ “ನಾನು ಸಹ ನಿಮ್ಮನ್ನು ತುಂಬಾನೇ ಪ್ರೀತಿಸುತ್ತೇನೆ ಅಜ್ಜಿ” ಅಂತ ಹೃತ್ಪೂರ್ವಕ ಉತ್ತರವನ್ನು ಬರೆದಿದ್ದಾರೆ.
ಇದನ್ನೂ ಓದಿ: Bollywood News: ನಟ ಅಕ್ಷಯ್ ಮಗನಿಗೆ ಅಪ್ಪನಂತೆ ಆಗೋಕೆ ಇಷ್ಟವಿಲ್ವಂತೆ, ಬೇರೆ ಏನ್ ಮಾಡ್ತಾರಂತೆ ಆರವ್ ನೋಡಿ!
ಗುಜರಾತಿ ಭಾಷೆಯಲ್ಲಿ ಶಾರುಖ್ ಖಾನ್ ಅವರು ನೀಡಿದ ಉತ್ತರ ತುಂಬಾನೇ ವೈರಲ್ ಆಗಿದೆ. ಅಭಿಮಾನಿಗಳು ಇದನ್ನು ತುಂಬಾನೇ ಮೆಚ್ಚಿಕೊಂಡರು. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಭಾರತ್ ಕಿ ಶಾನ್ ಶಾರುಖ್ ಖಾನ್ ಸಾಹೇಬ್” ಎಂದು ಬರೆದಿದ್ದಾರೆ.
ಶಾರುಖ್ ಶೇರ್ ಮಾಡಿದ ವೈರಲ್ ವೀಡಿಯೋ ಈಗ 620 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ಮೇಲೆ ಪ್ರೀತಿಯನ್ನು ಸುರಿಸುತ್ತಾ ಕಾಮೆಂಟ್ ಗಳ ವಿಭಾಗವನ್ನು ತುಂಬಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ