ಭಾರತೀ(India)ಯ ಪ್ರಸಿದ್ಧ ಸಂಗೀತ ಸಂಯೋಜಕ ರಿಕಿ ಕೇಜ್(Ricky Kej) ಅವರು ಜಾಗತಿಕ ಸಂಗೀತ ಲೋಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೆಂದು ಹೇಳಲ್ಪಡುವ ಗ್ರ್ಯಾಮಿ ಪ್ರಶಸ್ತಿ(Grammy Awards)ಯನ್ನು ಎರಡು ಬಾರಿ ಗೆದ್ದಿದ್ದಾರೆ. ಅಲ್ಲದೇ ರಿಕಿ ಕೇಜ್ ಮೂಲತಃ ಬೆಂಗಳೂರಿನ ನಿವಾಸಿ ಎನ್ನುವುದು ಮತ್ತೊಂದು ಹೆಮ್ಮೆಯ ವಿಷಯ. ಆದರೆ ಅವರು ಇದೀಗ ತಮಗೆ ಅದ ಒಂದು ಕೆಟ್ಟ ಅನುಭವವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಹೌದು, ಇತ್ತೀಚೆಗೆ ಕೇನ್ ಫಿಲ್ಮ್ ಫೆಸ್ಟಿವಲ್ 2022 ರಿಂದ ಭಾರತಕ್ಕೆ ಹಿಂದಿರುಗಿದ ಸಂಗೀತ ಸಂಯೋಜಕ ರಿಕಿ ಕೇಜ್ ಅವರು ಬೆಂಗಳೂರು (Bengaluru) ವಿಮಾನ ನಿಲ್ದಾಣದಲ್ಲಿ ಅವರಿಗಾದ ಒಂದು ಕಹಿ ಘಟನೆಯನ್ನು ವಿಡಿಯೋ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
ರಿಕಿ ಕೇಜ್ ಹಂಚಿಕೊಂಡ ವಿಡಿಯೋದಲ್ಲೇನಿದೆ?:
ಇತ್ತೀಚೆಗೆ ಕೇನ್ ಫಿಲ್ಮ್ ಫೆಸ್ಟಿವಲ್ 2022 ರಿಂದ ಭಾರತಕ್ಕೆ ಹಿಂದಿರುಗಿದ ಸಂಗೀತ ಸಂಯೋಜಕ ರಿಕಿ ಕೇಜ್ ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರಿಗಾದ ಒಂದು ಕಹಿ ಘಟನೆಯನ್ನು ವಿಡಿಯೋ ಮೂಲಕ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ಕಾಯುತ್ತಿರುವ ವಿಡಿಯೋವನ್ನು ಹಂಚಿಕೊಂಡು ಎಲ್ಲರೂ ವಲಸೆಗೆ ಹೋಗುವಂತೆ ಕಾಣುತ್ತಿದೆ 1 ಗಂಟೆಗೂ ಹೆಚ್ಚು ಕಾಲ ಸರದಿಯಲ್ಲಿ ನಿಂತಿದ್ದೇನೆ ಎಂದು ತಿಳಿಸಿದ್ದಾರೆ.
Pathetic state of immigration at the Bengaluru International Airport. Been in line for over an hour now. Currently well over 1000 people waiting, not all counters working, staff is clueless, inefficient. @BLRAirport Why have so many flights, when there is no capacity? @kiranshaw pic.twitter.com/6MkcuU1G5S
— Ricky Kej (@rickykej) May 21, 2022
ಇನ್ನು, ಟ್ವಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಕೇವಲ ತಮಗಾದ ಸಮಸ್ಯೆ ಮಾತ್ರವಲ್ಲದೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಸಮಸ್ಯೆಗಳ ಬಗ್ಗೆಯೂ ಬರೆದುಕೊಂಡಿದ್ದು, ‘ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆಯ ದಯನೀಯ ಸ್ಥಿತಿ ಇದ್ದಂತಾಗಿದೆ. ಈಗ ಒಂದು ಗಂಟೆಗೂ ಹೆಚ್ಚು ಕಾಲ ಸರತಿಯಲ್ಲಿದ್ದೇವೆ. ಪ್ರಸ್ತುತ, 1000 ಕ್ಕೂ ಹೆಚ್ಚು ಜನರು ಕಾಯುತ್ತಿದ್ದಾರೆ, ಎಲ್ಲಾ ಕೌಂಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ, ಸಿಬ್ಬಂದಿ ಸುಳಿವಿಲ್ಲ‘ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ @BLRAirport ಗೆ ಟ್ಯಾಗ್ ಸಹ ಮಾಡಿದ್ದಾರೆ.
ಇದನ್ನೂ ಓದಿ: Prashanth Neel: ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಪ್ರಶಾಂತ್ ನೀಲ್, 3 ಚಿತ್ರಗಳ ಫೋಟೋ ಹಂಚಿಕೊಂಡ ಸ್ಟಾರ್ ಡೈರೆಕ್ಟರ್
ಇದಲ್ಲದೇ ಸರಣಿ ಟ್ವೀಟ್ ಮಾಡಿರುವ ರಿಕಿ, ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಕೆಲ ಹಂತಗಳನ್ನು ತಿಳಿಸಿದ್ದಾರೆ. ಅದರಂತೆ, ಬೆಂಗಳೂರು, ಭಾರತಕ್ಕೆ ಪ್ರವೇಶಿಸಲು ಲೈನ್‌ಗಳ ಸಂಖ್ಯೆ @BLRAirport - 1) ಏರ್ ಸುವಿಧಾ ತಪಾಸಣೆ, 2) ಇಮಿಗ್ರೇಷನ್, 3) ಇಮಿಗ್ರೇಷನ್ ಸ್ಟ್ಯಾಂಪ್ ನಿಖರವಾಗಿದೆಯೇ ಎಂದು ಪರಿಶಲನೆ (ತಮಾಷೆ ಮಾಡುತ್ತಿಲ್ಲ, ಇದು ಇನ್ನೊಂದು ಸಾಲು), 4) ಬ್ಯಾಗೇಜ್ ಸ್ಕ್ರೀನಿಂಗ್ -ಕಸ್ಟಮ್ಸ್, 5) ಬ್ಯಾಗ್‌ಗಳನ್ನು ಸಂಗ್ರಹಿಸುವುದು, 6) ಕಸ್ಟಮ್ಸ್ ಹೆಚ್ಚುವರಿ ಸ್ಕ್ರೀನಿಂಗ್ ಮಾಡುವುದು, ಎಂದು ಇಲ್ಲಿನ ಹಂತಗಳನ್ನು ತಿಳಿಸಿದ್ದಾರೆ. ಅಲ್ಲದೇ ಕೊನೆಯಲ್ಲಿ ಈ ಹಂತಗಳನ್ನು ಕಡಿಮೆ ಮಾಡಬಹುದಲ್ಲವೇ ಎಂದು ಕೇಳಿದ್ದಾರೆ.
ಇದನ್ನೂ ಓದಿ: Ricky Kej: 2ನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದ ರಿಕಿ ಕೇಜ್! ಪ್ರಧಾನಿ ಮೋದಿಗೆ ಧನ್ಯಾವಾದ ತಿಳಿಸಿದ್ದೇಕೆ ಅಂತ ನೀವೇ ನೋಡಿ
100ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿರುವ ರಿಕಿ ಕೇಜ್:
ರಿಕಿ ಕೇಜ್ 64 ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ‘ಡಿವೈನ್ ಟೈಡ್ಸ್’ ಆಲ್ಬಂ ಗಾಗಿ ಅತ್ಯುತ್ತಮ ‘ನ್ಯೂ ಏಜ್ ಆಲ್ಬಂ’ ಪ್ರಶಸ್ತಿಯನ್ನು ಗೆದ್ದರು. ಒಬ್ಬ ಸಕ್ರಿಯ ಪರಿಸರವಾದಿ ರಿಕಿ ಕೇಜ್ ಅವರು ವಿಶ್ವಸಂಸ್ಥೆಯ ಜಾಗತಿಕ ಮಾನವತಾವಾದಿ ಕಲಾವಿದ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಜೊತೆಗೆ ಅವರ ವೃತ್ತಿ ಜೀವನದ ಅವಧಿಯಲ್ಲಿ 100 ಕ್ಕೂ ಹೆಚ್ಚು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ