Prince Mahesh Babu: ಈಗ ಟಾಲಿವುಡ್​ ನಂಬರ್​ ಒನ್​ ಹೀರೋ ಮಹೇಶ್​ ಬಾಬು..!

Prince Mahesh Babu: ಟಾಲಿವುಡ್​ ಪ್ರಿನ್ಸ್​ ಎಂದೇ ಖ್ಯಾತರಾಗಿರುವ ಮಹೇಶ್​ ಬಾಬು ಸದಾ ತಮ್ಮ ಸಿನಿಮಾ, ಸಾಮಾಜಿಕ ಕಳಕಳಿ ಹೀಗೆ ಸಕಾರಾತ್ಮಕ ವಿಷಯಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಈಗಲೂ ಅಷ್ಟೆ ಅವರು ಸಿನಿಮಾ ಹಾಗೂ ಟಾಲಿವುಡ್​ಗೆ ಸಂಬಂಧಪಟ್ಟ ವಿಷಯದಿಂದಲೇ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 

Anitha E | news18
Updated:August 2, 2019, 11:41 AM IST
Prince Mahesh Babu: ಈಗ ಟಾಲಿವುಡ್​ ನಂಬರ್​ ಒನ್​ ಹೀರೋ ಮಹೇಶ್​ ಬಾಬು..!
ಮಹೇಶ್​ ಬಾಬು
  • News18
  • Last Updated: August 2, 2019, 11:41 AM IST
  • Share this:
ಒಂದು ಕಾಲದಲ್ಲಿ ಎನ್​ಟಿಆರ್ ಟಾಲಿವುಡ್​ ಅನ್ನು ಆಳಿದ್ದು, ನಂಬರ್​ ಒನ್​ ಸ್ಥಾನದಲ್ಲಿದ್ದರು. ಆಗಲೇ ಅವರು ರಾಜಕೀಯಕ್ಕೂ ಪ್ರವೇಶಿಸಿದರು. ಇದಾದ ನಂತರ ಸೂಪರ್​ ಸ್ಟಾರ್​ ಕೃಷ್ಣ, ಆಮೇಲೆ ಮೆಗಾಸ್ಟಾರ್​ ಚಿರಂಜೀವಿ ದಶಕಗಳ ಕಾಲ ತೆಲುಗು ಸಿನಿಮಾವನ್ನು ಸಿಂಹದಂತೆ ರಾಜ್ಯಭಾರ ಮಾಡಿದರು.

ಎನ್​ಟಿಆರ್​ ಅವರಂತೆಯೇ ಚಿರಂಜೀವಿ ಅವರೂ ಸಹ ರಾಜಕೀಯಕ್ಕೆ ಎಂಟ್ರಿಕೊಟ್ಟು ಪ್ರಜಾ ರಾಜ್ಯ ಪಕ್ಷ ಕಟ್ಟಿದರು. ಆದರೆ ಅಲ್ಲಿ ಯಶಸ್ಸು ಕಾಣದ ಕಾರಣದಿಂದ ಅವರು ಮತ್ತೆ ಸಿನಿಮಾ ರಂಗಕ್ಕೆ ಮರಳಿ ಇಡೀ ಜೀವನವನ್ನೇ ಕಲಾ ಸೇವೆಗೆ ಮುಡುಪಾಗಿಸಿಕೊಂಡರು. ಈಗ ಟಾಲಿವುಡ್​ನಲ್ಲಿ ನಂಬರ್​ ಒನ್​ ನಟ ಯಾರು ಎಂದು ಹುಟುಕಾಟ ನಡೆಸಿದರೆ, ಗೂಗಲ್​ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಿಗುವ ಉತ್ತರ ಪ್ರಿನ್ಸ್​ ಮಹೇಶ್​ ಬಾಬು.

Mahesh babu and Allu Arjun
ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್​


ಹೌದು, ಒಂದು ಕಾಲದಲ್ಲಿ ಇವರ ತಂದೆ ಸೂಪರ್​ ಸ್ಟಾರ್​ ಕೃಷ್ಣ ಸಹ ನಂಬರ್​ ಒನ್​ ಸ್ಥಾನದಲ್ಲಿದ್ದವರೇ ಈಗ ಸರದಿ ಮಗ ಮಹೇಶ್​ ಬಾಬು ಅವರದ್ದು. ಅಂದರೆ ಗೂಗಲ್​ನಲ್ಲಿ ತೆಲುಗು ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಹುಡುಕಲ್ಪಟ್ಟವರಲ್ಲಿ ಮಹೇಶ್​ ಬಾಬುರದ್ದೇ ಮೇಲುಗೈ. ಅದಕ್ಕೆ ಪ್ರಿನ್ಸ್​ ಮಹೇಶ್ ಬಾಬು ಟಾಲಿವುಡ್​ ನಂಬರ್​ ಸ್ಟಾರ್​ ಎಂದು ಹೇಳಲಾಗುತ್ತಿದೆ.

ನಟ ರಾಮ್​ ಚರಣ್​


ಇನ್ನು ನಟ ಅಲ್ಲು ಅರ್ಜುನ್​ ಎರಡನೇ ಸ್ಥಾನದಲ್ಲಿದ್ದಾರೆ.  ಮೂರನೇ ಸ್ಥಾನದಲ್ಲಿ ರಾಮ್​ ಚರಣ್​ ಹಾಗೂ ಪ್ರಭಾಸ್​ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ವಿಷಯ ತಿಳಿದ ಮಹೇಶ್​ ಬಾಬು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬ ಮಾಡುತ್ತಿದ್ದಾರೆ.

ಇದನ್ನೂ ಓದಿ: Pawan Kalyan: ಪವನ್​ ಕಲ್ಯಾಣ್​ ಜತೆ ಸಂಬಂಧ ಇದೆ ಎಂದು ಟ್ವೀಟ್​ ಮಾಡಿದ್ದ ನಟಿಯ ಪೋಟೋ ವೈರಲ್​..!ಇನ್ನೊಂದು ಕಡೆ ಗೂಗಲ್​ನಲ್ಲಿ ಅತಿ ಹೆಚ್ಚು ಹುಟುಕಲ್ಪಟ್ಟ ಕಾರಣಕ್ಕೆ ಅವರನ್ನು ನಂಬರ್​ ಒನ್​ ಎಂದು ಹೇಳಲಾಗುವುದಿಲ್ಲ ಎನ್ನಲಾಗುತ್ತಿದೆ. ಉಳಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಿಸದ ತುಂಬಾ ಮಂದಿ ಅಭಿಮಾನಿಗಳು ಇರುತ್ತಾರೆ ಅನ್ನೋದು ಇತರೆ ನಾಯಕರ ಅಭಿಮಾನಿಗಳ ವಾದ.

HBD Tapsi: 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ತಾಪ್ಸಿ ಪನ್ನು ಹಾಟ್​ ಚಿತ್ರಗಳು..!


 
First published:August 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading