Love Breakup: ಅವನಲ್ಲಿ.. ಅವಳಿಲ್ಲಿ... ಮಾತಿಲ್ಲ, ಲವ್ ಇಲ್ಲ! ಮೂರು ವರ್ಷ ಪ್ರೀತಿಸಿದ್ದ ಈ ಸ್ಟಾರ್ಸ್ ಈಗ ದೂರಾ ದೂರ!

ಬಹುಕಾಲ ಪ್ರೀತಿಯಲ್ಲಿದ್ದ ಮತ್ತೊಂದು ತಾರಾ ಜೋಡಿಯ ಬ್ರೇಕಪ್ ಬಾಲಿವುಡ್ ಅಂಗಳದಲ್ಲಿ ಬಿಸಿ, ಬಿಸಿ ಸುದ್ದಿಯಾಗಿದೆ. ಸಿನಿಮಾಕ್ಕಿಂತ ಹೆಚ್ಚಾಗಿ ತಮ್ಮ ಲವ್ ಸ್ಟೋರಿ ಮೂಲಕವೇ ಹೆಚ್ಚು ಹೆಸರುವಾಸಿಯಾಗಿದ್ದ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಬ್ರೇಕಪ್ ಮಾಡಿಕೊಂಡಿದ್ದಾರೆ.

ಇಶಾನ್ ಖಟ್ಟರ್ - ಅನನ್ಯಾ ಪಾಂಡೆ

ಇಶಾನ್ ಖಟ್ಟರ್ - ಅನನ್ಯಾ ಪಾಂಡೆ

 • Share this:
  ಬಾಲಿವುಡ್ (Bollywood) ಮಂದಿಗೆ ಲವ್ (Love), ಬ್ರೇಕಪ್ (Break Up), ಡಿವೋರ್ಸ್ (Divorce) ಎಲ್ಲಾ ತುಂಬಾ ಸಾಮಾನ್ಯವಾಗಿದೆ. 3 ವರ್ಷಗಳ ಕಾಲ ಪ್ರಣಯ ಪಕ್ಷಿಗಳಂತಿದ್ದ ಜೋಡಿಯೊಂದು (Couple) ಸದ್ಯ ಬೇರೆಯಾಗಿದ್ದಾರೆ. ಬಹುಕಾಲ ಪ್ರೀತಿಯಲ್ಲಿದ್ದ ಮತ್ತೊಂದು ತಾರಾ ಜೋಡಿಯ ಬ್ರೇಕಪ್ ಬಾಲಿವುಡ್ ಅಂಗಳದಲ್ಲಿ ಬಿಸಿ, ಬಿಸಿ ಸುದ್ದಿಯಾಗಿದೆ. ಸಿನಿಮಾಕ್ಕಿಂತ (Cinema) ಹೆಚ್ಚಾಗಿ ತಮ್ಮ ಲವ್ ಸ್ಟೋರಿ (Love Story) ಮೂಲಕವೇ ಹೆಚ್ಚು ಹೆಸರುವಾಸಿಯಾಗಿದ್ದ ಬಾಲಿವುಡ್ ನಟಿ ಅನನ್ಯಾ ಪಾಂಡೆ (Ananya Pandey) ಮತ್ತು ಇಶಾನ್ ಖಟ್ಟರ್ (Ishaan Khattar) ಬ್ರೇಕಪ್ ಮಾಡಿಕೊಂಡಿದ್ದಾರೆ. 3 ವರ್ಷಗಳ ಕಾಲ ಪ್ರೀತಿಸಿ ಒಟ್ಟಿಗೆ ಇದ್ದು ಈದೀಗ ತಮ್ಮ ಪ್ರೀತಿಗೆ ಎಳ್ಳು-ನೀರು ಬಿಟ್ಟಿದ್ದಾರೆ.

  ಬಾಲಿವುಡ್‌ನಲ್ಲಿ ಮತ್ತೊಂದು ಲವ್ ಬ್ರೇಕ್‌ ಅಪ್

  ಬಾಲಿವುಡ್ನಲ್ಲಿ ಇದೀಗ ಬೆಳೆಯುತ್ತಿರುವ ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಸಿನಿಮಾ ಬದುಕನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವ ಮುನ್ನವೇ ಲವ್ ಬ್ರೇಕಪ್ ಆಗಿದೆ. ಕಳೆದ ಕೆಲವು ವರ್ಷಗಳಿಂದ, ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಪರಸ್ಪರ ಡೇಟ್ ಮಾಡುತ್ತಿದ್ದರು. ಆದರೆ ತಮ್ಮ ರಿಲೇಶನ್ಶಿಪ್ ಬಗ್ಗೆ ಇಬ್ಬರೂ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ತಮ್ಮ ಸಂಬಂಧದ ಸ್ಥಿತಿ ಇನ್ನು ಮುಂದೆ ಏಕಾಂಗಿಯಾಗಿಲ್ಲ ಎಂದಿದ್ದರು. ಅಲ್ಲದೇ ಇಬ್ಬರು ಒಟ್ಟಿಗೆ ಬಾಲಿವುಡ್ಡಿನ ಅನೇಕ ಪಾರ್ಟಿಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದರು. ಅನನ್ಯ ಮತ್ತು ಇಶಾನ್ ಖಟ್ಟರ್ ತಮ್ಮ ಹಾಲಿಡೇಯನ್ನು ಸಹ ಒಟ್ಟಿಗೆ ಕಳೆಯುತ್ತಿದ್ದರು. ಸಿನಿಮಾ ಮೂಲಕ 2020ರಲ್ಲಿ ಶುರುವಾದ ಪ್ರೇಮ ಕಥೆ 2022ರಲ್ಲಿ ಅಂತ್ಯಗೊಂಡಿದೆ.

  ದೂರ ಆಗಲು ನಿರ್ಧರಿಸಿದ ಸಿನಿ ಜೋಡಿ

  2020ರಲ್ಲಿ ತೆರೆಗೆ ಬಂದ 'ಖಾಲಿ ಪೀಲಿ' ಚಿತ್ರದಿಂದ ಈ ಜೋಡಿ ಜೊತೆಯಾಗಿದೆ. ಈ ಚಿತ್ರ ಮಾಡುವಾಗಲೇ ಇವರ ನಡುವೆ ಪ್ರೇಮಾಂಕುರವಾಗಿದೆ. ನಂತರ ಈ ಜೋಡಿ ಸದಾ ಒಟ್ಟಾಗಿ ಕ್ಯಾಮೆರಾ ಕಣ್ಣಿಗೆ ಬೀಳುತಿದ್ದಾಗಲೇ, ಇವರ ಪ್ರೀತಿಯ ಬಗ್ಗೆ ಗಾಸಿಪ್ ಹಬ್ಬಿತ್ತು. ಶಾಹಿದ್ ಕಪೂರ್ ಬರ್ತ್ ಡೇ ಪಾರ್ಟಿಯ ಕೆಲ ಫೋಟೋಗಳು ಇವರ ಪ್ರೀತಿ ಸುದ್ದಿಗೆ ಕನ್ನಡಿಯಾದವು. ಆದರೆ ಪಾರ್ಟಿ, ಡೇಟಿಂಗ್, ಔಟಿಂಗ್ ಅಂತ ಸುತ್ತಾಡಿ ಸುದ್ದಿ ಮಾಡುತ್ತಿದ್ದ ಜೋಡಿ ಈದೀಗ ದೂರ ಆಗಲು ನಿರ್ಧರಿಸಿದ್ದಾರೆ.

  ಇದನ್ನೂ ಓದಿ: HBD Rashmika: ಹುಟ್ಟು ಹಬ್ಬದ ಸಂಭ್ರಮದಲ್ಲಿ National Crush; ರಶ್ಮಿಕಾ ಮಂದಣ್ಣಗೆೆ ಅಭಿಮಾನಿಗಳಿಂದ ಶುಭಾಶಯ

   ಮುಂದೆ ಇಬ್ಬರೂ ಸ್ನೇಹಿತರಾಗಿಯೇ ಇರುತ್ತಾರಂತೆ

  ಈ ಜೋಡಿ ದೂರ ಆಗುವ ನಿರ್ಧಾರದ ಜೊತೆ ಇನ್ನು ಮುಂದೆ ಸ್ನೇಹಿತರಾಗಿಯೇ ಉಳಿಯಲು ನಿರ್ಧಾರ ಮಾಡಿದ್ದಾರಂತೆ. ಹಾಗಾಗಿ ಈ ಜೋಡಿ ಮುಂದೆ ಒಟ್ಟಾಗೆ ಸಿನಿಮಾ ಮಾಡುವ ಆಫರ್ ಬಂದರೆ ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದು ಪರಸ್ಪರ ಕರೆಯಾಗಿದೆ ಮತ್ತು ಸಕಾರಾತ್ಮಕವಾಗಿ ಕೊನೆಗೊಂಡಿದೆ. ಮುಂದೆ ಇಬ್ಬರೂ ಸೌಹಾರ್ದಯುತವಾಗಿ ಮುಂದುವರಿಯುತ್ತಾರೆ. ಬ್ರೇಕಪ್ ಅನ್ನು ಪ್ರಬುದ್ಧತೆಯಿಂದ ನಿಭಾಯಿಸುತ್ತಿದ್ದಾರೆ. ತಮ್ಮ ತಮ್ಮ ಸಿನಿಮಾ ಬದುಕಿನ ಬಗ್ಗೆ ಹೆಚ್ಚು ಗಮನ ನೀಡಲು ಈ ನಿರ್ಧಾರ ಮಾಡಿದ್ದಾರೆ ಎಂದು ಬಲ್ಲ ಮೂಲಗಳು ಹೇಳಿವೆ.

  ಈ ಬಗ್ಗೆ ಇಶಾನ್ ತಾಯಿ ಹೇಳಿದ್ದೇನು?

  ಈ ವರ್ಷದ ಆರಂಭದಲ್ಲಿ, ಇಶಾನ್ ಅವರ ತಾಯಿ ನೆಲಿಮಾ ಅಜೀಮ್ ಅನನ್ಯಾ ಅವರೊಂದಿಗಿನ ಕಪೂರ್ ಕುಟುಂಬದ ಬಾಂಧವ್ಯದ ಬಗ್ಗೆ ಮಾತನಾಡಿದ್ದರು. “ಅನನ್ಯಾ ನಮ್ಮ ಆಂತರಿಕ ವಲಯ ಮತ್ತು ಕುಟುಂಬ ವಲಯದ ಭಾಗವಾಗಿದ್ದಾರೆ. ಅವಳು ಶಾಹಿದ್ (ಕಪೂರ್) ಮತ್ತು ಮೀರಾ (ರಜಪೂತ್) ಗೆ ಒಳ್ಳೆಯ ಸ್ನೇಹಿತೆ ಮತ್ತು ನಿಸ್ಸಂಶಯವಾಗಿ, ಅವರು ಇಶಾನ್‌ನ ಜೀವನದ ಪ್ರಮುಖ ಭಾಗವಾಗಿದ್ದಾರೆ." ಇಶಾನ್ ಮತ್ತು ಅನನ್ಯಾ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದರು.

  ಇದನ್ನೂ ಓದಿ: Raai Laxmi: ಗ್ಲಾಮರಸ್​ ಲುಕ್​ನಲ್ಲಿ `ಜಂಗಲ್​ ಕ್ವೀನ್​’! ಪಡ್ಡೆ ಹೈಕ್ಳ ಎದೆಬಡಿತ ಹೆಚ್ಚಿಸಿದ ರಾಯ್​ ಲಕ್ಷ್ಮಿ

  ‘ಸ್ಟೂಡೆಂಟ್ ಆಫ್ ದಿ ಇಯರ್’ ಆಗಿದ್ದ ಅನನ್ಯಾ

  ಅನನ್ಯಾ 2009 ರಲ್ಲಿ ಹಿಂದಿ ಚಲನಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ 2 ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತದನಂತರ ಪತಿ ಪತ್ನಿ ಔರ್ ವೋಹ್, ಆಂಗ್ರೇಜಿ ಮೀಡಿಯಮ್ ಮತ್ತು ಇತ್ತೀಚೆಗೆ ತೆರೆಕಂಡಿದ್ದ ‘ಗೆಹರಾಯಿಯಾ’ ಸಿನಿಮಾದಲ್ಲಿ ನಟಿಸಿದ್ದರು, ಇವರ ನಟನೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಇಶಾನ್ ಖಟ್ಟರ್ 2005ರಲ್ಲಿ ವಾಹ್!ಲೈಫ್ ಹೋ ತೊ ಐಸಿ ಎಂಬ ಚಿತ್ರದ ಮೂಲಕ ಮೊದಲ ಬಾರಿಗೆ ಚಿತ್ರರಂಗದಲ್ಲಿ ಕಾಣಿಸಿಕೊಂಡರು. ನಂತರ ಉಡ್ತಾ ಪಂಜಾಬ್, ಬಿಯಾಂಡ್ ದಿ ಕ್ಲೌಡ್ಸ್ ದಢಕ್ ಚಿತ್ರದಲ್ಲಿ ಕಾಣಿಸಿಕೊಂಡರು.
  Published by:Annappa Achari
  First published: