ದಿ ವಿಲನ್​ ಟೀಸರ್​ಗೆ 29 ಲಕ್ಷ ವ್ಯೂ: ಅಭಿಮಾನಿಗಳಿಗೆ ಕಿಚ್ಚನ ಕೃತಜ್ಞತೆ

news18
Updated:July 3, 2018, 3:24 PM IST
ದಿ ವಿಲನ್​ ಟೀಸರ್​ಗೆ 29 ಲಕ್ಷ ವ್ಯೂ: ಅಭಿಮಾನಿಗಳಿಗೆ ಕಿಚ್ಚನ ಕೃತಜ್ಞತೆ
news18
Updated: July 3, 2018, 3:24 PM IST
ನ್ಯೂಸ್​ 18 ಕನ್ನಡ
ಸ್ಯಾಂಡಲ್​ವುಡ್​ನಲ್ಲಿ ಹೊಸ ಬಗೆಯ ಸಿನಿಮಾಗಳಿಗೆ ಕ್ರೇಜ್​ ಹುಟ್ಟಿದ್ದರೂ ಕೆಲ ಸ್ಟಾರ್​ಗಳಿಗೆ ಇರುವ ಬೇಡಿಕೆ ಕಡಿಮೆಯಾಗಿಲ್ಲ. ತಮ್ಮ ಮೆಚ್ಚಿನ ಹೀರೋನ ಸಿನಿಮಾ ನೋಡಲು ಕಾತುರದಿಂದ ಕಾಯುವ ಅಭಿಮಾನಿಗಳಿಂದಲೇ ಕೆಲವು ಸಿನಿಮಾಗಳು ಶತದಿನೋತ್ಸವ ಆಚರಿಸುತ್ತವೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಸುದೀಪ್​ ಮತ್ತು ಶಿವರಾಜ್​ಕುಮಾರ್​ ಒಟ್ಟಾಗಿ ಕಾಣಿಸಿಕೊಳ್ಳಲಿರುವ 'ದಿ ವಿಲನ್​' ಸಿನಿಮಾದ ಟೀಸರ್​ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಟೀಸರ್​ನಲ್ಲಿ ಗಮನ ಸೆಳೆದಿರುವ ಶಿವರಾಜ್​ಕುಮಾರ್​ ಮತ್ತು ಸುದೀಪ್​ ಅವರ ಲುಕ್​ಗೆ ಸೋತಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿಯೇ ಪ್ರಚಾರ ಮಾಡುತ್ತಿದ್ದಾರೆ.

 
ಈಗಾಗಲೇ ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ 3ನೇ ಸ್ಥಾನದಲ್ಲಿರುವ 'ದಿ ವಿಲನ್​' ಸಿನಿಮಾ ಟೀಸರ್​ ಅನ್ನು 5 ದಿನದೊಳಗೆ 29 ಲಕ್ಷ ಜನ ವೀಕ್ಷಿಸಿದ್ದಾರೆ. ಈ ಕಾರಣಕ್ಕೆ ಟ್ವಿಟ್ಟರ್​ನಲ್ಲಿ ಅಭಿಮಾನಿಗಳಿಗೆ ಕೃತಜ್ಞತೆ ಸೂಚಿಸಿರುವ ಕಿಚ್ಚ ಸುದೀಪ್​ ಸದ್ಯದಲ್ಲೇ ಆಡಿಯೋ ರಿಲೀಸ್ ಮಾಡಲಿದ್ದೇವೆ. ಅದಕ್ಕೂ ನಿಮ್ಮ ಸಹಕಾರ ಹೀಗೇ ಇರಲಿ ಎಂದು ಮನವಿ ಮಾಡಿದ್ದಾರೆ. 'ಜೋಗಿ' ಖ್ಯಾತಿಯ ಪ್ರೇಮ್​ ನಿರ್ದೇಶಿಸಿರುವ ಈ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ