ಟಾಲಿವುಡ್​​ ಸಿನಿ ರಂಗಕ್ಕೆ ಸಿಹಿ ಸುದ್ದಿ; ಶೀಘ್ರದಲ್ಲೇ ಶೂಟಿಂಗ್​ಗೆ ಅವಕಾಶ

ಇತ್ತೀಚಿಗೆ ಟಾಲಿವುಡ್ ನ ಖ್ಯಾತ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ಚಿರಂಜೀವಿ ಮನೆಯಲ್ಲಿ ಸಭೆ ಸೇರಿದ್ದರು. ಕೊರೋನಾದಿಂದ ಆಗಿರುವ ತೊಂದರೆಗಳ ಬಗ್ಗೆ ಚರ್ಚಿಸಿದರು.

ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ

ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ

  • Share this:
ಕೊರೋನಾ ಹಿನ್ನೆಲೆ ಸಿನಿಮಾ ರಂಗ ಸ್ಥಬ್ದವಾಗಿದೆ. ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಎಲ್ಲಾ ಸಿನಿಮಾ ರಂಗಗಳಲ್ಲೂ ಶೂಟಿಂಗ್​ಗೆ ಬ್ರೇಕ್ ಬಿದ್ದಿದೆ. ಇದರಿಂದ ಸಿನಿಮಾ ಉದ್ಯಮ ಸಂಕಷ್ಟಕ್ಕೆ ಈಡಾಗಿದೆ‌‌. ಸಾವಿರಾರು ‌ಕಾರ್ಮಿಕರು ಅತಂತ್ರರಾಗಿದ್ದಾರೆ. ಮತ್ತೆ ಯಾವಾಗ ಮೊದಲಿನಂತೆ ಆಗಲಿದೆ. ಚಿತ್ರೀಕರಣ ಕೆಲಸಗಳು ಶುರುವಾಗಿ, ನಮ್ಮ ಬದುಕು ಸರಾಗವಾಗಲಿದೆ. ಅಂತ ಆಕಾಶ ನೋಡುವಂತಾಗಿದೆ.

ಸದ್ಯ ತೆಲಂಗಾಣ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಅದರ ಪ್ರಕಾರ ಶೀಘ್ರದಲ್ಲಿಯೇ ಶೂಟಿಂಗ್ ಗೆ ಅವಕಾಶ ನೀಡಲಾಗುತ್ತದೆಯಂತೆ. ಅಂದಹಾಗೆ, ಇತ್ತೀಚಿಗೆ ಟಾಲಿವುಡ್ ನ ಖ್ಯಾತ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ಚಿರಂಜೀವಿ ಮನೆಯಲ್ಲಿ ಸಭೆ ಸೇರಿದ್ದರು. ಕೊರೋನಾದಿಂದ ಆಗಿರುವ ತೊಂದರೆಗಳ ಬಗ್ಗೆ ಚರ್ಚಿಸಿದರು.

ಮುಂದಿನ ದಿನಗಳಲ್ಲಿ ಇದೆಲ್ಲವನ್ನೂ ದಾಟಿ ನಾವು ಹೇಗೆ ಸಾಗಬೇಕೆಂಬುದರ ಬಗ್ಗೆ ಮಾತುಕತೆ ನಡೆಸಿದರು.
ಜೊತೆಗೆ ತಮ್ಮ ಕಷ್ಟ ಕಾರ್ಪಣ್ಯಗಳನ್ನ ಸರ್ಕಾರದ ಗಮನ ಸೆಳೆಯುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಯಿತು‌. ಅದರಂತೆ ಚಿರಂಜೀವಿ ನೇತೃತ್ವದ ನಿಯೋಗ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ಅವರನ್ನ ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಿತ್ತು.

ತೆಲುಗು ಚಿತ್ರರಂಗದ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರೋ ಕೆ.ಸಿ.ಆರ್ ಶೀಘ್ರದಲ್ಲೇ ಶೂಟಿಂಗ್​ಗೆ  ಅನುಮತಿ ಕೊಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಕೊರೋನಾ ‌ಕಾಲದಲ್ಲಿ ಒಂದಷ್ಟು ಮಾರ್ಗಸೂಚಿಯನ್ನ ಸರ್ಕಾರ ರೂಪಿಸಲಿದ್ದು, ಅದರ ಅನ್ವಯ ಚಿತ್ರತಂಡಗಳು ಶೂಟಿಂಗ್ ನಡೆಸಲಿದೆ.

ತೆಲಂಗಾಣ ಸರ್ಕಾರದಿಂದ ಶೂಟಿಂಗ್ ಗೆ ಅನುಮತಿ ಸಿಕ್ಕರೆ ಬೇರೆ ರಾಜ್ಯಗಳು ಸಹ ಇದನ್ನ ಅನುಸರಿಸೋ ಸಾಧ್ಯತೆ ಇಲ್ಲದಿಲ್ಲ‌. ಅಲ್ಲಿಗೆ ಇಷ್ಟು ದಿನ ಸ್ತಬ್ಧವಾಗಿದ್ದ ಚಿತ್ರರಂಗ ಮತ್ತೆ ಮೈ ಕೊಡವಿ ಎದ್ದು ನಿಲ್ಲುವ ಕಾಲ ಬಂದಂತಾಗಿದೆ.

ಪ್ರೇಮ್​ ‘ಏಕ್​ ಲವ್​ ಯಾ‘ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಈ ಸ್ವಾಮೀಜಿ!
First published: