ಇತ್ತೀಚೆಗೆ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾದ ಟೀಸರ್ ಯ್ಯೂಟೂಬ್ನಿಂದ ಡಿಲೀಟ್ ಆಗಿತ್ತು. ಈ ದಿಢೀರ್ ಪ್ರಕ್ರಿಯೆ ಕಿಚ್ಚ ಅಭಿಮಾನಿಗಳಿಗೆ ಆತಂಕ ತಂದೊಡ್ಡಿತ್ತು. ಆನಂತರ ಟೀಸರ್ ಡಿಲೀಟ್ ಆಗಲು ಮುಂಬೈ ಮೂಲದ ವ್ರೈಬೆಂಟ್ವ ಕಂಪೆನಿ ಕಾಪಿರೈಟ್ಸ್ ವಿಚಾರವಾಗಿ ಟೀಟರ್ ಅನ್ನು ಯ್ಯೂಟೂಬ್ನಿಂದ ತೆಗೆದು ಹಾಕಿದೆ ಎಂಬ ವಿಚಾರ ಬೆಳಕಿಗೆ ಬಂತು.
ಇದೀಗ ಈ ಜಟಾಪಟಿಯ ಬೆನ್ನಲ್ಲೇ ಕೋಟಿಗೊಬ್ಬ-3 ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಕೋಟಿಗೊಬ್ಬ ಮುಂದಿನ ಸರಣಿಗಳನ್ನು ತೆರೆಗೆ ತರಲು ಯೋಚಿಸಲಾಗಿದೆ ಎಂದಿದ್ದಾರೆ.
ಟೀಸರ್ ಡಿಲೀಟ್ ಆಗಿರುವ ಬಗ್ಗೆ ಮಾತನಾಡಿದ್ದ ಅವರು ‘ಈಗಾಗಲೇ ಕೋಟಿಗೊಬ್ಬ 3 ಸಿನಿಮಾದ ಟೀಸರ್ ಡಿಲೀಟ್ ಆಗಿರುವ ವಿಚಾರ ನಿಮಗೆಲ್ಲರಿಗೂ ಗೊತ್ತಿದೆ. ಇದು ನನ್ನನ್ನು ಮತ್ತು ನನ್ನ ಸಿನಿಮಾವನ್ನು ಹಾಳು ಮಾಡುತ್ತಿರುವ ಕೆಲಸ ಎಂದಿದ್ದಾರೆ.
ಸದ್ಯ ಎಲ್ಲವೂ ಸರಿಯಾಗಲಿದ್ದು. ಆದಷ್ಟು ಬೇಗ ಟೀಸರ್ ಅನ್ನು ಆನಂದ್ ಆಡಿಯೋ ಸಂಸ್ಥೆ ಯ್ಯೂಟೂಬ್ನಲ್ಲಿ ಅಪ್ಲೋಡ್ ಮಾಡಲಿದೆ. ಕೋಟಿಗೊಬ್ಬ-4 ಚಿತ್ರಕ್ಕಾಗಿ ಕಥೆ ರೆಡಿಯಾಗಿದ್ದು, ಅದನ್ನು ತೆರೆಗೆ ತರಲು ಪ್ಲಾನ್ ಹಾಕಿಕೊಂಡಿದ್ದೇವೆ ಎಂದು ಸೂರಪ್ಪ ಬಾಬು ಹೇಳಿದ್ದಾರೆ.
ನಂತರ ಮಾತು ಮುಂದುವರೆಸಿದ ಅವರು. ಈಗಾಗಲೇ ಕೋಟಿಗೊಬ್ಬ 3 ಸಿನಿಮಾದ ಕೆಲಸಗಳು ಕೊನೆ ಹಂತದಲ್ಲಿದೆ. ಸದ್ಯದಲ್ಲೇ ರಿಲೀಸ್ ದಿನಾಂಕವನ್ನು ನಿರ್ಮಾಪಕರು ಅನೌನ್ಸ್ ಮಾಡಲಿದ್ದಾರೆ.
ಇದನ್ನೂ ಓದಿ: ಭಟ್ರ ಗಾಳಿಪಟಕ್ಕೂ ಕೊರೋನಾ ಭೀತಿ!: ಶೂಟಿಂಗ್ ಇನ್ನೆರಡು ತಿಂಗಳು ಮುಂದಕ್ಕೆ
ಇದನ್ನೂ ಓದಿ: ಗಲ್ಲು ಶಿಕ್ಷೆಗೆ ಗುರಿಯಾದ ವಿಶ್ವದ ಏಕೈಕ ಅಂತರಾಷ್ಟ್ರೀಯ ಕ್ರಿಕೆಟಿಗ ಈತ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ