ಗೋಲ್ಡನ್​ ಸ್ಟಾರ್​ ಗಣೇಶ್​ ಗೀತಾ ಸಿನಿಮಾದ ಫಸ್ಟ್​ಲುಕ್​ ರಿಲೀಸ್​

news18
Updated:June 30, 2018, 3:44 PM IST
ಗೋಲ್ಡನ್​ ಸ್ಟಾರ್​ ಗಣೇಶ್​ ಗೀತಾ ಸಿನಿಮಾದ ಫಸ್ಟ್​ಲುಕ್​ ರಿಲೀಸ್​
  • Share this:
ನ್ಯೂಸ್​ 18 ಕನ್ನಡ
ಗೋಲ್ಡನ್​ ಸ್ಟಾರ್​ ಗಣೇಶ್​ ಸಿನಿಮಾ ಎಂದರೆ ಯುವಪೀಳಿಗೆಗೆ ಹಬ್ಬದೌತಣ ಖಂಡಿತ. ಹೊಸಬಗೆಯ ಸ್ಟೈಲ್​ನಿಂದ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಗಣೇಶ್​ ಅವರ ಹೊಸ ಸಿನಿಮಾ 'ಗೀತಾ' ಫಸ್ಟ್ ಲುಕ್​ ಬಿಡುಗಡೆಯಾಗಿದ್ದು, ಮತ್ತಷ್ಟು ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮ ಹೊಸ ಸಿನಿಮಾದ ಫಸ್ಟ್​ ಲುಕ್​ ಅನ್ನು ಟ್ವಿಟ್ಟರ್​ನಲ್ಲಿ ಶೇರ್​ ಮಾಡಿಕೊಂಡಿರುವ ಗೋಲ್ಡನ್​ ಸ್ಟಾರ್​ ತಮ್ಮ ಚಿತ್ರತಂಡವನ್ನು ಆಶೀರ್ವದಿಸಬೇಕೆಂದು ಅಭಿಮಾನಿಗಳಲ್ಲಿ ಪ್ರೀತಿಯಿಂದ ಮನವಿ ಮಾಡಿದ್ದಾರೆ.


ಶಂಕರ್​ನಾಗ್​ ಅವರ ಪ್ರಸಿದ್ಧ ಸಿನಿಮಾಗಳಲ್ಲಿ ಒಂದಾದ 'ಗೀತಾ' ಸಿನಿಮಾದ ಹೆಸರಿನಿಂದ ಮೂಡಿಬರುತ್ತಿರುವ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ತಮ್ಮದೇ ಬ್ಯಾನರ್​ ಗೋಲ್ಡನ್​ ಮೂವೀಸ್​ ಮತ್ತು ಎಸ್​.ಎಸ್​. ಫಿಲ್ಮ್ಸ್​ ಬ್ಯಾನರ್​ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಗೀತಾ' ಸಿನಿಮಾವನ್ನು ನಿರ್ದೇಶಕ ಸಂತೋಷ್​ ಆನಂದರಾಮ್​ ಜೊತೆಯಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ವಿಜಯ್​ ನಾಗೇಂದ್ರ ನಿರ್ದೇಶಿಸುತ್ತಿದ್ದಾರೆ. ಹರಿಕೃಷ್ಣ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.

ಹೊಸಬಗೆಯ ಲುಕ್​ನಲ್ಲಿ ಸ್ಟೈಲಿಶ್​ ಆಗಿರುವ ಬೈಕ್​ ಮೇಲೆ ಕುಳಿತಿರುವ ಗಣೇಶ್​ ಅವರ ಸಿನಿಮಾದ ಫಸ್ಟ್​ ಲುಕ್​ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಸೋಮವಾರ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಗೋಲ್ಡನ್​ ಸ್ಟಾರ್​ ಬರ್ತಡೇಗೆ ಅವರ ಅಭಿಮಾನಿಗಳು ಈಗಾಗಲೇ ಗಣೇಶ್​ ಮನೆಯ ಮುಂದೆ 'ಗೀತಾ' ಸಿನಿಮಾದ ಕಟೌಟ್​ ಮಾಡಿ ನಿಲ್ಲಿಸಿ ಅಡ್ವಾನ್ಸ್​ ಆಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
First published:June 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ