ನಿಕೋಟಿನ್​ ನಶೆಯಲ್ಲಿ ಸಿಕ್ಕಿಬಿದ್ದ ಗೋಲ್ಡ್​ನ್​ ಸ್ಟಾರ್​ ಗಣೇಶ್​


Updated:January 29, 2018, 11:13 AM IST
ನಿಕೋಟಿನ್​ ನಶೆಯಲ್ಲಿ ಸಿಕ್ಕಿಬಿದ್ದ ಗೋಲ್ಡ್​ನ್​ ಸ್ಟಾರ್​ ಗಣೇಶ್​
  • Share this:
ಓಂ ಸಕಲೇಶಪುರ, ನ್ಯೂಸ್ 18 ಕನ್ನಡ

ನಿಕೋಟಿನ್‍ ನಶೆಯಲ್ಲಿ ಚಂದನವನದ ಗೋಲ್ಡನ್‍ಸ್ಟಾರ್ ಗಣೇಶ್ ಸಿಕ್ಕಿ ಹಾಕಿಕೊಂಡಿದ್ದಾರೆ. ಗಣೇಶ್​ ಯಾಕೆ ಹೀಗಾದರು. ಸಿಗರೇಟ್ ಜಾಸ್ತಿ ಸೇದಿ ಹೀಗಾಯಿತಾ. ವಿವಾದಗಳಿಂದ ದೂರವಿರೋ ಗಣೇಶ್ ಬಗ್ಗೆ ಏನಿದು ವಿವಾದ. ಏನಿದು ಸುದ್ದಿ  ಅಂತ ತಿಳಿಯೋಕೆ ಈ ಸ್ಟೋರಿ ಓದಿ.

ಸಿನಿ ಪ್ರೇಮಿಗಳ ಮುದ್ದಿನ ಗಣಿ ಈಗ ಲೂಸಿಯಾ ಪವನ್‍ಕುಮಾರ್ ನಿರ್ದೇಶನದ ‘ನಿಕೋಟಿನ್’ ಸಿನಿಮಾದಲ್ಲಿ ನಟಿಸೋಕೆ ಸಿದ್ಧರಾಗುತ್ತಿದ್ದಾರೆ. ಆದರೆ ಗಣೇಶ್‍ ಅವರದ್ದು ಈ ಚಿತ್ರದಲ್ಲಿ ಯಾವ ಅನ್ನೋದು ಇನ್ನೂ ಗೊತ್ತಾಗಿಲ್ಲ.

ಪವನ್ ಕುಮಾರ್ ಹೊಸಬರಿಗೆ ಸಿನಿಮಾ ಮಾಡೋ ನಿರ್ದೇಶಕ. ಆದರೆ ‘ನಿಕೋಟಿನ್‍ಗೆ’ ಗಣೇಶ್​ ಅವರನ್ನುಯಾವ ಕಾರಣಕ್ಕೆ ಆಯ್ಕೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಪವನ್ ಕುಮಾರ್ ಸಿನಿಮಾ ನಿಕೋಟಿನ್‍ನಲ್ಲಿ ಗಣೇಶ್ ಅಭಿನಯಿಸಲಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸದ್ಯ ಗಣೇಶ್ ಕೈಯಲ್ಲಿ ಆರೆಂಜ್ ಸಿನಿಮಾ ಇದ್ದು, ಫೆಬ್ರವರಿ 10ಕ್ಕೆ ಚಿತ್ರದ ಮುಹೂರ್ತ ಕಾರ್ಯಕ್ರಮದ ನಡೆಯಲಿದೆ. ಅಂದೇ ಗಣೇಶ್-ಶಿಲ್ಪಾ ಮದುವೆಯ 10ನೇ ವಾರ್ಷಿಕೋತ್ಸವ ಸಹ ಇದ್ದು, ‘ನಿಕೋಟಿನ್’ ಸಿನಿಮಾದ ವಿಷಯ ಗೊತ್ತಾಗಲಿದೆ.

 
First published:January 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ