ಡಿಸೆಂಬರ್​ನ ಲಕ್ಕಿ ಸ್ಟಾರ್ ಗೋಲ್ಡನ್‍ಸ್ಟಾರ್: ಗಣೇಶ್​ಗೆ 'ಆರೆಂಜ್'​ ರಿಲೀಸ್​ ಸಂಭ್ರಮ

Anitha E | news18india
Updated:December 6, 2018, 3:47 PM IST
ಡಿಸೆಂಬರ್​ನ ಲಕ್ಕಿ ಸ್ಟಾರ್ ಗೋಲ್ಡನ್‍ಸ್ಟಾರ್: ಗಣೇಶ್​ಗೆ 'ಆರೆಂಜ್'​ ರಿಲೀಸ್​ ಸಂಭ್ರಮ
Anitha E | news18india
Updated: December 6, 2018, 3:47 PM IST
ಡಿಸೆಂಬರ್ ಬಂತು ಅಂದರೆ ಸಾಕು ಗೋಲ್ಡನ್‍ಸ್ಟಾರ್ ಸಿನಿಮಾ ಒಂದಾದರೂ ಬಿಡುಗಡೆಯಾಗಲೇ ಬೇಕು. ಅದೊಂಥರಾ ಅಲಿಖಿತ ನಿಯಮ ಅನ್ನೋ ಹಾಗೆ. ಸ್ಯಾಂಡಲ್‍ವುಡ್ ಚಿತ್ರಪ್ರೇಮಿಗಳಿಗೆ 'ಆರೆಂಜ್​' ಸೀಜನ್‍ನಲ್ಲೇ ಗಣೇಶ್ ಸ್ವೀಟ್ ಹಾಗೂ ಟೇಸ್ಟಿ 'ಆರೆಂಜ್' ಜ್ಯೂಸ್ ತೊಗೊಂಡು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.

ನಿರ್ದೇಶಕ ಪ್ರಶಾಂತ್‍ರಾಜ್ ಮತ್ತು ಗೋಲ್ಡನ್‍ಸ್ಟಾರ್ ಅಭಿನಯದ 'ಜೂಮ್' ಚಿತ್ರಪ್ರೇಮಿಗಳಿಗೆ ಇಷ್ಟವಾಗಿತ್ತು. ಈಗ ಎರಡನೇ ಬಾರಿಗೆ ಜೂಮ್ ಧಮಾಕಾ 'ಆರೆಂಜ್​' ಮೂಲಕ ಈ ಜೋಡಿ ಕಲರ್​ಫುಲ್​ ಕಾಮನಬಿಲ್ಲನ್ನು ಆಕಾಶವೆಂಬ ಚಿತ್ರಮಂದಿರಲ್ಲಿ ಮೂಡಿಸಲಿದೆ.

ಇದನ್ನೂ ಓದಿ: 'ಟಗರು' ಡಾಲಿಗೆ 'ತೋತಾಪುರಿ' ಬಯಕೆ: ನವರಸನಾಯಕನಿಗೆ ಧನಂಜಯ್ ಕೋರಿಕೆ!

ಬ್ಲಾಕ್ ಬಸ್ಟರ್ 'ರಾಜಕುಮಾರ' ಚಿತ್ರದ ನಂತರ ಗ್ಲ್ಯಾಮರ್ ಬೆಡಗಿ ಪ್ರಿಯಾ ಆನಂದ್ ಮತ್ತು ಗೋಲ್ಡನ್‍ಸ್ಟಾರ್​ ಜೋಡಿಯಾಗಿದ್ದಾರೆ. ಆನ್‍ಸ್ಕ್ರೀನ್‍ನಲ್ಲಿ ಗಣೇಶ್ ಪ್ರಿಯಾ ಆನಂದ್ ಜೋಡಿ, ಆರೆಂಜ್‍ಗೆ ಸಕ್ಕರೆ ಸೇರಿ ಸಿಹಿಯಾದ ಜ್ಯೂಸ್‍ನಂತಿರುತ್ತೆ ಅನ್ನೋ ನಿರೀಕ್ಷೆ ಅಭಿಮಾನಿಗಳದ್ದು.

ಲವ್​, ರೊಮ್ಯಾನ್ಸ್​ ಜೊತೆ ಒಂದು ಕಲಾಕೃತಿಯಂತೆ ಚಿತ್ರವನ್ನು ಮಾಡೋ ಮೂಲಕವೇ ಕನ್ನಡ ಚಿತ್ರ ಪ್ರೇಮಿಗಳಿಗೆ ಪ್ರಶಾಂತ್‍ರಾಜ್ ಪರಿಚಿತ. ಆದರೆ 'ಆರೆಂಜ್‍'ನಲ್ಲಿ ಸ್ವೀಟ್ ಜೊತೆಗೆ ಖಾರ ಹುಳಿ, ಉಪ್ಪು... ವೆರೈಟಿ ವೆರೈಟಿ ಟೇಸ್ಟ್ ಇದೆ.. ಜೊತೆಗೆ  ಆ್ಯಕ್ಷನ್​ ಜೊತೆ ಮಾಸ್ ಡೈಲಾಗ್‍ಗಳೂ ಚಿತ್ರದ ಹೈಲೈಟ್.

ಇದನ್ನೂ ಓದಿ: ಮಾಲ್ಡೀವ್ಸ್​ನಲ್ಲಿ ರಾಗಿಣಿ: ತುಪ್ಪದ ಹುಡುಗಿ ಜತೆಗಿರುವ ಆತ ಯಾರು..?

ನಾಳೆ 'ಆರೆಂಜ್' ಅಬ್ಬರ ಚಿತ್ರಮಂದಿರಗಳಲ್ಲಿ ಶುರುವಾಗುತ್ತಿದೆ. ವರ್ಷಕ್ಕೆರಡು ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ನೋಡುತ್ತಿದ್ದವರಿಗೆ ಈ ವರ್ಷ ಡಿಸೆಂಬರ್​ನಲ್ಲಿ 'ಆರೆಂಜ್' ಬರುತ್ತಿದೆಯಲ್ಲ ಅನ್ನೋ ಸಂಭ್ರಮ.
Loading...

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ