ಎನ್ನಡ-ಎಕ್ಕಡ ನಡುವೆ ಕನ್ನಡ: ಸಖತ್ ಸೌಂಡ್ ಮಾಡುತ್ತಿದೆ ಗೀತಾ ಚಿತ್ರದ ಟ್ರೈಲರ್

Geetha movie trailer: ಕನ್ನಡ ಕನ್ನಡ ಕನ್ನಡವೇ ಸತ್ಯ..ಕನ್ನಡ ಕನ್ನಡ ಕನ್ನಡವೇ ನಿತ್ಯ...ಕನ್ನಡದ ಗರಿಮೆ,ಹಿರಿಮೆ ಸಾರುತ್ತ,ಮೈ ನವಿರೇಳಿಸುವ ಹಾಡೊಂದನ್ನು ಗೀತಾ ಚಿತ್ರದಲ್ಲಿ ಪವರ್​ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ.

zahir | news18-kannada
Updated:September 12, 2019, 7:44 AM IST
ಎನ್ನಡ-ಎಕ್ಕಡ ನಡುವೆ ಕನ್ನಡ: ಸಖತ್ ಸೌಂಡ್ ಮಾಡುತ್ತಿದೆ ಗೀತಾ ಚಿತ್ರದ ಟ್ರೈಲರ್
ಗೋಲ್ಡನ್ ಸ್ಟಾರ್ ಗಣೇಶ್
  • Share this:
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ 'ಗೀತಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಲಿದೆ ಎನ್ನಲಾಗಿರುವ ಈ ಚಿತ್ರದ ಕನ್ನಡಿಗ.. ಗೀತೆಯು ಈಗಾಗಲೇ ಭಾರೀ ವೈರಲ್ ಆಗಿದ್ದು,ಇದರ ಬೆನ್ನಲ್ಲೇ ಇದೀಗ ಪವರ್ ಫುಲ್ ಪಂಚಿಂಗ್ ಡೈಲಾಗ್ ಹೊಂದಿರುವ ಟ್ರೈಲರ್ ಸಖತ್ ಸೌಂಡ್ ಮಾಡುತ್ತಿದೆ.

ಗೀತಾ ಚಿತ್ರಕ್ಕೆ ವಿಜಯ್ ನಾಗೇಂದ್ರ ಆ್ಯಕ್ಷನ್ ಕಟ್ ಹೇಳಿದ್ದು, ಒಂದು ರೋಮ್ಯಾಂಟಿಕ್ ಕಥೆಗೆ ಕನ್ನಡ ಹೋರಾಟದ ಟಚ್ ನೀಡಲಾಗಿದೆ ಎಂದು ಹೇಳಲಾಗಿದೆ. ಇನ್ನು ಈ ಚಿತ್ರದಲ್ಲಿ  ಗೋಲ್ಡನ್ ಗಣಿ ಲವರ್​ ಬಾಯ್​ ಹಾಗೂ ಹೋರಾಟಗಾರನ ಎರಡು ಶೇಡ್​ಗಳಲ್ಲಿ ಕಾಣಿಸಲಿದ್ದಾರೆ ಎಂಬುದು ಟ್ರೈಲರ್ ನೋಡಿದಾಗ ತಿಳಿದು ಬರುತ್ತದೆ.

ಕನ್ನಡದ ಕಾಳಜಿ, ಕನ್ನಡದ ಅರಿವು, ಕನ್ನಡಿಗರಿಗಾಗಿ ಮಾಡಿರುವ ಈ ಚಿತ್ರದಲ್ಲಿ ಗೋಕಾಕ್ ಚಳುವಳಿಯ ಒಂದಷ್ಟು ಮಾಹಿತಿಗಳೂ ಸಹ ಹೊರಬೀಳಲಿದೆ ಎನ್ನಲಾಗಿದೆ. ಹೀಗಾಗಿ ಪ್ರತಿಯೊಬ್ಬ ಕನ್ನಡಿಗರು ನೋಡಲೇಬೇಕಾದ ಸಿನಿಮಾ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

ಇನ್ನು ಟ್ರೈಲರ್​​ನಲ್ಲಿ ಕೇಳಿ ಬಂದಿರುವ 'ಎದೆಯಲ್ಲಿ ಕನ್ನಡಾಭಿಮಾನ ಇಟ್ಟುಕೊಂಡಿರುವ ಪ್ರತಿಯೊಬ್ಬನೂ ಕನ್ನಡದ ಸೈನಿಕ', 'ಭಾಷೆನಾ ನಾವು ಬೆಳೆಸಕ್ಕಾಗಲ್ಲ, ನಮ್ಮ ಭಾಷೆ ನಮ್ಮನ್ನು ಬೆಳೆಸುತ್ತೆ', 'ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ' ಎಂಬ ಡೈಲಾಗ್​ಗಳು ಸಿನಿಪ್ರಿಯರನ್ನು ಸೆಳೆಯುವುದರಲ್ಲಿ ಸಂದೇಹವಿಲ್ಲ.

ಕನ್ನಡ ಕನ್ನಡ ಕನ್ನಡವೇ ಸತ್ಯ..ಕನ್ನಡ ಕನ್ನಡ ಕನ್ನಡವೇ ನಿತ್ಯ...ಕನ್ನಡದ ಗರಿಮೆ,ಹಿರಿಮೆ ಸಾರುತ್ತ,ಮೈ ನವಿರೇಳಿಸುವ ಹಾಡೊಂದನ್ನು 'ಗೀತಾ' ಚಿತ್ರದಲ್ಲಿ ಪವರ್​ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದು, ಈ ಗೀತೆಯನ್ನು ಕೆಚ್ಚೆದೆಯ ಕನ್ನಡ ಹೋರಾಟಗಾರರಿಗೆ,ಗೋಕಾಕ್ ಹೋರಾಟದಲ್ಲಿ ಹೋರಾಡಿದ ಕಲಿಗಳಿಗೆ, ಸ್ವಾಭಿಮಾನಿ ಕನ್ನಡಿಗ ಬಂಧುಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅರ್ಪಿಸಿದ್ದಾರೆ.


ಸೈಯದ್ ಸಲಾಂ ಮತ್ತು ಶಿಲ್ಪಾ ಗಣೇಶ್ ಬಂಡವಾಳ ಹಾಕಿದ್ದಾರೆ. ಇನ್ನು ಸಿನಿಮಾದ ಮುಖ್ಯ ಪಾತ್ರದಲ್ಲಿ ದೇವರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಅವರು ಕೂಡ ಕಾಣಿಸಲಿದ್ದಾರೆ.


First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading