Ganesh: ಗಣೇಶ್​-ಸಿಂಪಲ್​ ಸುನಿ ಜೋಡಿಯ ಸಖತ್​ ಚಿತ್ರದ ಚಿತ್ರೀಕರಣ ಮತ್ತೆ ಆರಂಭ..!

Sakath Movie: ಕೆವಿಎನ್​​ ಮತ್ತು ಸುಪ್ರೀತ್​​ ಪ್ರೊಡಕ್ಷನ್​​ಬ್ಯಾನರ್​ನಡಿಯಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಭರಾಟೆಯ ಭರ್ಜರಿ ನಿರ್ಮಾಪಕ ಸುಪ್ರೀತ್ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಮೊದಲ ಹಂತದ ಚಿತ್ರೀಕರಣ ಮುಗಿದು ಬ್ರೇಕ್​ ಪಡೆದಿದ್ದ ಚಿತ್ರತಂಡ ಈಗ 2ನೇ ಶೆಡ್ಯೂಲ್​ ಶೂಟಿಂಗ್​ ಆರಂಭಿಸಿದೆ.

ಗಣೇಶ್​ ಹಾಗೂ ಸಿಂಪಲ್​ ಸುನಿ

ಗಣೇಶ್​ ಹಾಗೂ ಸಿಂಪಲ್​ ಸುನಿ

  • Share this:
ಸ್ಯಾಂಡಲ್​ವುಡ್​ಗೆ 'ಚಮಕ್' ಕೊಟ್ಟ ಜೋಡಿ ಸಿಂಪಲ್ ಸುನಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಸಖತ್​. ನಾಲ್ಕು ವರ್ಷಗಳ ಹಿಂದೆ ಅಂದರೆ 2017ರಲ್ಲಿ  ಕಾಮಿಡಿ-ರೊಮ್ಯಾನ್ಸ್ ಕಥಾಹಂದರವುಳ್ಳ ಚಮಕ್​ ಸಿನಿಮಾದ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ಸಖತ್​ ಸಿನಿಮಾಗಾಗಿ ಒಂದಾಗಿದ್ದಾರೆ. ಸಿಂಪಲ್​ ಸುನಿ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಸಹ ಹಾಸ್ಯ ಪ್ರಧಾನ ಸಿನಿಮಾ ಆಗಿದ್ದು, ವಿಭಿನ್ನ ಶೀರ್ಷಿಕೆ ಮೂಲಕವೇ ಬಹಳ ಸದ್ದು ಮಾಡುತ್ತಿದೆ.  ಈ ಹಿಂದೆಯೇ ಸಖತ್​ ಚಿತ್ರತಂಡ  ಆನಂದ್​ ಆಡಿಯೋ ಯ್ಯೂಟೂಬ್​ ಚಾನೆಲ್​ನಲ್ಲಿ ರ‍್ಯಾಪ್​​ ಮೋಷನ್​ ಪೋಸ್ಟರ್​​ ರಿಲೀಸ್​ ಮಾಡಿತ್ತು. ಕೆವಿಎನ್​​ ಪ್ರೊಡಕ್ಷನ್​ ಬ್ಯಾನರ್​ನಡಿಯಲ್ಲಿ ಈ ರ‍್ಯಾಪ್​​ ಮೋಷನ್​ ಪೋಸ್ಟರ್​ ನಿರ್ಮಾಣವಾಗಿದ್ದು, ಜುದಾಹ್​​​​ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ಗಣೇಶ್​ ಹುಟ್ಟುಹಬ್ಬಕ್ಕೆ ಹೊಸ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಸಿಂಪಲ್​ ಸುನಿ ವಿಶ್​ ಮಾಡಿದ್ದರು. 

ಕೆವಿಎನ್​​ ಮತ್ತು ಸುಪ್ರೀತ್​​ ಪ್ರೊಡಕ್ಷನ್​​ಬ್ಯಾನರ್​ನಡಿಯಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಭರಾಟೆಯ ಭರ್ಜರಿ ನಿರ್ಮಾಪಕ ಸುಪ್ರೀತ್ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಮೊದಲ ಹಂತದ ಚಿತ್ರೀಕರಣ ಮುಗಿದು ಬ್ರೇಕ್​ ಪಡೆದಿದ್ದ ಚಿತ್ರತಂಡ ಈಗ 2ನೇ ಶೆಡ್ಯೂಲ್​ ಶೂಟಿಂಗ್​ ಆರಂಭಿಸಿದೆ.








View this post on Instagram






A post shared by Ganesh (@goldenstar_ganesh)











"ಪ್ರತಿ ಚಿತ್ರವು ನನಗೆ ಹೊಸತನ. ಮೊದಲ ಬಾರಿಗೆ ಮಾಡುತ್ತಿರುವೆ ಈ ರೀತಿಯ ಪಾತ್ರ ನಾ. ಚಿತ್ರಕಥೆ ಸಂಭಾಷಣೆ ನಗು ತರುತ್ತಿದೆ. ಶೂಟಿಂಗ್ ಸಖತ್ತಾಗಿ ಹೋಗ್ತಿದೆ' ಎಂದು ಗಣೇಶ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸುನಿ ಜೊತೆಗಿರುವ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.










View this post on Instagram






A post shared by Ganesh (@goldenstar_ganesh)






ಅಲ್ಲದೆ, ಗಣೇಶ್​ 2ನೇ ಹಂತದ ಚಿತ್ರೀಕರಣದ ಸೆಟ್​ನಲ್ಲಿ ತೆಗೆದ ತಮ್ಮ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಸಖತ್​ ಚಿತ್ರದ ಶೂಟಿಂಗ್​ ಸಖತ್ತಾಗಿ ನಡೆಯುತ್ತಿದೆ ಎನ್ನುತ್ತಲೇ ತಮ್ಮ ಲುಕ್​ ಅನ್ನು ರಿವೀಲ್​ ಮಾಡಿದ್ದಾರೆ.

ಇದನ್ನೂ ಓದಿ: Rashmika Mandanna: ಟಾಲಿವುಡ್​ನಲ್ಲಿ ಯಶಸ್ವಿಯಾಗಿ ಮೂರು ವರ್ಷ ಪೂರೈಸಿದ ರಶ್ಮಿಕಾ ಮಂದಣ್ಣ..!

ಗಣೇಶ್​ ಅವರ ಹುಟ್ಟುಹಬ್ಬಕ್ಕೂ ಮೊದಲೇ ರಿಲೀಸ್​ ಮಾಡಲಾಗಿದ್ದ ‘ಸಖತ್’​​ ರ‍್ಯಾಪ್​​ ಮೋಷನ್​ ಪೋಸ್ಟರ್​​​ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ 14 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿತ್ತು. ಅನೇಕರು ಈ ವಿಡಿಯೋ ನೋಡುವ ಮೂಲಕ ಗೋಲ್ಡನ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಅಡ್ವಾನ್ಸ್​​​ ವಿಶ್​ ಮಾಡಿದ್ದರು.



ಅಂದಹಾಗೆ ಸಖತ್​ ಚಿತ್ರಕ್ಕೆ ಸಖತ್ತಾಗಿರುವ ನಾಯಕಿಯನ್ನೇ ಸುನಿ ಆಯ್ಕೆ ಮಾಡಿಕೊಂಡಿದ್ದು, ಈ ಚಿತ್ರದ ಮೂಲಕ ಟಾಲಿವುಡ್-ಕಾಲಿವುಡ್​ನಲ್ಲಿ ಮಿಂಚಿರುವ ನಟಿ ಸುರಭಿ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಸಾಧು ಕೋಕಿಲ, ಕುರಿ ಪ್ರತಾಪ್​​, ರಘುರಾಮ್​, ಗಿರಿ, ಧರ್ಮಣ್ಣ ಸೇರಿದಂತೆ ಅನೇಕ ಕಲಾವಿದರ ಬಳಗ ಈ ಸಿನಿಮಾದಲ್ಲಿದೆ.










View this post on Instagram






A post shared by Ganesh (@goldenstar_ganesh)






ಇನ್ನು ಗೋಲ್ಡನ್​ ಸ್ಟಾರ್ ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ‘ಗಾಳಿಪಟ-2’, ‘ತ್ರಿಬಲ್​ ರೈಡಿಂಗ್​’​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೇನು ಈ ತಿಂಗಳ ಅಂತ್ಯಕ್ಕೆ ಗಣೇಶ್ ಗಾಳಿಪಟ 2 ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
Published by:Anitha E
First published: