• Home
  • »
  • News
  • »
  • entertainment
  • »
  • ತಂಪಾದ ಹೊತ್ತಲ್ಲಿ ತ್ರಿಬಲ್​ ರೈಡಿಂಗ್​ಗಾಗಿ ಸೈಕಲ್​ ರೈಡ್​ ಮಾಡಿದ ಗೋಲ್ಡನ್​ ಸ್ಟಾರ್​ ಗಣೇಶ್​..!

ತಂಪಾದ ಹೊತ್ತಲ್ಲಿ ತ್ರಿಬಲ್​ ರೈಡಿಂಗ್​ಗಾಗಿ ಸೈಕಲ್​ ರೈಡ್​ ಮಾಡಿದ ಗೋಲ್ಡನ್​ ಸ್ಟಾರ್​ ಗಣೇಶ್​..!

ನಟ ಗಣೇಶ್​

ನಟ ಗಣೇಶ್​

ಗಣೇಶ್​ ಬಹಳ ಸಮಯದಿಂದ ಸೈಕ್ಲಿಂಗ್​ ಮಾಡುತ್ತಿದ್ದಾರೆ. ಈ ಹಿಂದೆಯೂ ಅವರು ಸೈಕ್ಲಿಂಗ್​ ಮಾಡಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿದ್ದೇವೆ. ದಿಗಂತ್​, ಅಮೂಲ್ಯಾ ಅವರ ಪತಿ ಜಗದೀಶ್​ ಅವರೊಂದಿಗೆ ವಾರಾಂತ್ಯಗಳಲ್ಲಿ ಆಗಾಗ ನಗರದಿಂದ ಹೊರ ಹೋಗಿ ಸೈಕ್ಲಿಂಗ್​ ಮಾಡುತ್ತಿರುತ್ತಾರೆ.

  • Share this:

ಗೋಲ್ಡನ್​ ಸ್ಟಾರ್ ಗಣೇಶ್​ ಇತ್ತೀಚೆಗಷ್ಟೆ ತಮ್ಮ ಬದುಕಿನ ಭಾಗವಾಗಿರುವಾತನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಜೊತೆಗೆ ತಮ್ಮ ಹೊಸ ಸಿನಿಮಾ ತ್ರಿಬಲ್​ ರೈಡಿಂಗ್​ ಸಿನಿಮಾದ ಚಿತ್ರೀಕರಣ ಆರಂಭವಾಗಿರುವ ಬಗ್ಗೆಯೂ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರು ಗಣೇಶ್​ ಲಾಕ್​ಡೌನ್​ಲ್ಲಿ ಮನೆಯಲ್ಲಿ ಮಕ್ಕಳು ಹಾಗೂ ಮದಡಿ ಜೊತೆ ಲಾಕ್​ಡೌನ್​ ಹೇಗೆ ಸಮಯ ಕಳೆದರು ಎಂದು ಆಗಾಗ ವಿಡಿಯೋ ಹಾಗೂ ಫೋಟೋಗಳ ಮೈಲಕ ಹಂಚಿಕೊಳ್ಳುತ್ತಿದ್ದರು. ಅದರಲ್ಲೂ ಖಾಲಿ ಸಮಯದಲ್ಲಿ ತಾವೇನು ಮಾಡಲು ಬಯಸುತ್ತೇವೆ ಎಂದೂ ಅಭಿಮಾನಿಗಳ ಜೊತೆ ಶೇರ್​ ಮಾಡುತ್ತಿದ್ದರು. ಇನ್ನು ಕೆಲಸ ಇರಲಿ ಬಿಡಲಿ, ಗಣೇಶ್​ ಫಿಟ್ನೆಸ್​ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ನಿತ್ಯ ವ್ಯಾಯಾಮಕ್ಕೆಂದು ಕೊಂಚ ಸಮಯ ಮೀಸಾಗಿಟ್ಟಿರುತ್ತಾರೆ. ಅದರಲ್ಲೂ ವ್ಯಾಯಾಮ ಎಂದರೆ ಅದು ಜಿಮ್​ನಲ್ಲಿ ಬೆವರಿಳಿಸಬೇಕೆಂದಿಲ್ಲ ಅವರಿಗೆ. ಒಟ್ಟಾರೆ ದೇಹಕ್ಕೆ ವ್ಯಾಯಾಮ ಆದರೆ ಆಯಿತು ಅಷ್ಟೆ.


ಗಣೇಶ್​ ಬಹಳ ಸಮಯದಿಂದ ಸೈಕ್ಲಿಂಗ್​ ಮಾಡುತ್ತಿದ್ದಾರೆ. ಈ ಹಿಂದೆಯೂ ಅವರು ಸೈಕ್ಲಿಂಗ್​ ಮಾಡಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿದ್ದೇವೆ. ದಿಗಂತ್​, ಅಮೂಲ್ಯಾ ಅವರ ಪತಿ ಜಗದೀಶ್​ ಅವರೊಂದಿಗೆ ವಾರಾಂತ್ಯಗಳಲ್ಲಿ ಆಗಾಗ ನಗರದಿಂದ ಹೊರ ಹೋಗಿ ಸೈಕ್ಲಿಂಗ್​ ಮಾಡುತ್ತಿರುತ್ತಾರೆ.
ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಮಳೆಯಾಗುತ್ತಿದ್ದು, ಹಲವೆಡೆ ಮೋಡ ಕವಿದ ವಾತಾವರಣವಿದೆ. ಇಂತಹ ತಂಪಾದ ವಾತಾವರಣದಲ್ಲಿ ಗಣೇಶ್​ ಸೈಕಲ್​ ಮೇಲೆ ಏಕಾಂಗಿ ಪಯಣ ಆರಂಭಿಸಿದ್ದಾರೆ. ಇದಕ್ಕೆ ಕಾರಣ ಅವರ ಸಿನಿಮಾ ತ್ರಿಬಲ್​ ರೈಡಿಂಗ್​ ಚಿತ್ರೀಕರಣವಂತೆ.

View this post on Instagram

Happy cycling🚴🏻‍♂️🤗


A post shared by Shilpa Ganesh (@shilpaaganesh) on

ಗಣೇಶ್​ ಸೈಕಲ್​ ಹತ್ತಿ ಇಂತಹ ತಂಪಾದ ವಾತಾವತಣದಲ್ಲಿ ತ್ರಿಬಲ್​ ರೈಡಿಂಗ್​ ಚಿತ್ರೀಕರಣದ ಸೆಟ್​ಗೆ ಹೋಗಿಬರಹುದು ಎನ್ನಲಾಗುತ್ತಿದೆ. ಈ ಹಿಂದೆ ಕೋಟಿಗೊಬ್ಬ 3 ಸಿನಿಮಾದ ಚಿತ್ರೀಕರಣದ ವೇಳೆ ಕಿಚ್ಚ ಸುದೀಪ್​ ಸಹ ತಾವು ಉಳಿದುಕೊಂಡಿದ್ದ ಹೋಟೆಲ್​ನಿಂದ ಕಂಠೀರವ ಸ್ಟುಡಿಯೋಗೆ ಸೈಕಲ್​ನಲ್ಲಿ ಹೋಗಿದ್ದರು.

View this post on Instagram

The WORST thing happened!!!! I lost my Strava account!😢 @strava , need help!


A post shared by Aindrita Ray (@aindrita_ray) on

ಇನ್ನು ನಟಿ ಐಂದ್ರಿತಾ ಹಾಗೂ ದಿಂಗತ್​ ಅಂತೂ ವಾರಾಂತ್ಯಗಳಲ್ಲಿ ಹೆಚ್ಚಾಗಿ ಸೈಕ್ಲಿಂಗ್​ ಅಂತಲೇ ಕಾಲ ಕಳೆಯುತ್ತಿರುತ್ತಾರೆ. ಅವರ ವಿಡಿಯೋಗಳನ್ನು ಅವರ ಇನ್​ಸ್ಟಾಗ್ರಾಂನಲ್ಲಿ ನೋಡಬಹುದಾಗಿದೆ.

Published by:Anitha E
First published: