HOME » NEWS » Entertainment » GOLDEN STAR GANESH SHARED HIS DAUGHTER CHARITHRYAS FUNNY COOKING VIDEO AE

Ganesh: ಮಗಳ ಮಾತು ಕೇಳಿ ಶಾಕ್​ ಆದ ನಟ ಗಣೇಶ್​: ಇಲ್ಲಿದೆ ಆ ವಿಡಿಯೋ..!

Ganesh Daughter Charithrya: ಗಣೇಶ್​ ಮನೆಯಲ್ಲಿ ಮಕ್ಕಳೊಂದಿಗೆ ತುಂಬಾ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಮಗಳು ಚಾರಿತ್ರ್ಯಾ ಅಪ್ಪನಿಗೆ ಅಡುಗೆ ಮಾಡಿ ಉಣಬಡಿಸುತ್ತಿದ್ದಾಳೆ. ಅಡುಗೆ ಮನೆಯಲ್ಲಿದ್ದ ಮಗಳಿಗೆ ಗಣೇಶ್​ ಏನು ಮಾಡ್ತಿದ್ದೀಯಮ್ಮಾ ಎಂದರೆ, ಮಗಳು ಕೊಟ್ಟ ಉತ್ತರದಿಂದ ಅಪ್ಪ ಕೆಲಕಾಲ ಮಾರು ಬಾರದಂತಾಗುತ್ತಾರೆ. 

Anitha E | news18-kannada
Updated:November 24, 2020, 10:56 AM IST
Ganesh: ಮಗಳ ಮಾತು ಕೇಳಿ ಶಾಕ್​ ಆದ ನಟ ಗಣೇಶ್​: ಇಲ್ಲಿದೆ ಆ ವಿಡಿಯೋ..!
ಗಣೇಶ್ ಹಾಗೂ ಅವರ ಮಗಳು ಚಾರಿತ್ರ್ಯಾ
  • Share this:
ಸಾಮಾನ್ಯವಾಗಿ ಸಲೆಬ್ರಿಟಿಗಳ ಮಕ್ಕಳು ಆದಷ್ಟು ಸಾಮಾಜಿಕ ಜಾಲತಾಣದಿಂದ ದೂರ ಇರುತ್ತಾರೆ. ಆದರೆ ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಮಕ್ಕಳು ಮಾತ್ರ ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅದೂ ಸಹ ಅಮ್ಮ-ಅಮ್ಮನ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೆಲವೊಮ್ಮೆ ಮಕ್ಕಳದ್ದೇ ಕಾರುಬಾರು. ಶಿಲ್ಪಾ ಹಾಗೂ ಗಣೇಶ್​ ತಮ್ಮ ಮಗಳು ಹಾಗೂ ಮಗನ ವಿಡಿಯೋಗಳನ್ನು ಆಗಾಗ ಪೋಸ್ಟ್​ ಮಾಡುತ್ತಿರುತ್ತಾರೆ. ಪ್ರವಾಸದ ಚಿತ್ರಗಳು ಹಾಗೂ ಮಗಳ ಡಬ್​ಸ್ಮ್ಯಾಶ್​ ಹೀಗೆ ಹಲವಾರು ವಿಡಿಯೋ ಮತ್ತು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ ಈ ಸೆಲೆಬ್ರಿಟಿ ದಂಪತಿ. ಇನ್ನುಗಣೇಶ್​ ತಮ್ಮ ಮಗಳೊಂದಿಗೆ ಖಾಸಗಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್​ ಹಾಕಿದ್ದ ವಿಡಿಯೋ ಬಹಳ ಹಿಂದೆ ವೈರಲ್ ಆಗಿತ್ತು. ಈಗ ಮತ್ತೆ ಇದೇ ಪುಟ್ಟ ಸೆಲೆಬ್ರಿಟಿಯ ಲೆಟೆಸ್ಟ್​ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 

ಸೆಲೆಬ್ರಿಟಿಗಳ ಮಕ್ಕಳು ಸಾಮಾನ್ಯವಾಗಿ ಅಡುಗೆ ಮನೆ ಕಡೆ ಹೋಗುವುದೇ ಅಪರೂಪ. ಆದರೆ ಲಾಕ್​ಡೌನ್​ನಲ್ಲಿ ಕೆಲವು ಸೆಲೆಬ್ರಿಟಿಗಳ ಮಕ್ಕಳು ಅಡುಗೆ ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡಿದ್ದನೂ ನೋಡಿದ್ದೇವೆ. ಈ ಹಿಂದೆ ಪ್ರಿಯಾಂಕಾ ಉಪೇಂದ್ರ ತಮ್ಮ ಮಗಳ ಹಾಗೂ ಮಗಳಿಗೆ ಅಡುಗೆ ಮನೆಯ ಕೆಲಸ ಹೇಳಿಕೊಟ್ಟಿದ್ದ ವಿಡಿಯೋ ಹಾಗೂ ಫೋಟೋ ವೈರಲ್ ಆಗಿತ್ತು. ನಂತರದಲ್ಲಿ ಗಣೇಶ್​ ಹಾಗೂ ಶಿಲ್ಪಾ ಅವರ ಮಗಳು ಚಾರಿತ್ಯ್ರಾ ಅಡುಗೆ ಮಾಡುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.





 

 

 

View this post on Instagram


 

 

 


A post shared by Shilpa Ganesh (@shilpaaganesh)






ಗಣೇಶ್​ ಮನೆಯಲ್ಲಿ ಮಕ್ಕಳೊಂದಿಗೆ ತುಂಬಾ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಮಗಳು ಚಾರಿತ್ರ್ಯಾ ಅಪ್ಪನಿಗೆ ಅಡುಗೆ ಮಾಡಿ ಉಣಬಡಿಸುತ್ತಿದ್ದಾಳೆ. ಅಡುಗೆ ಮನೆಯಲ್ಲಿದ್ದ ಮಗಳಿಗೆ ಗಣೇಶ್​ ಏನು ಮಾಡ್ತಿದ್ದೀಯಮ್ಮಾ ಎಂದರೆ, ಮಗಳು ಕೊಟ್ಟ ಉತ್ತರದಿಂದ ಅಪ್ಪ ಕೆಲಕಾಲ ಮಾರು ಬಾರದಂತಾಗುತ್ತಾರೆ.








View this post on Instagram






A post shared by Ganesh (@goldenstar_ganesh)






ಈ ವಿಡಿಯೋದಲ್ಲಿ ನೋಡಿದ್ರಲ್ಲ ಅಡುಗೆ ಮನೆಯಲ್ಲಿ ನಿಂತ ಮಗಳಿಗೆ ಏನ್​ ಮಾಡ್ತಿದ್ದೀಯಮ್ಮ ಅಂತ ಗಣೇಶ್​ ಕೇಳ್ತಾರೆ, ಅದಕ್ಕೆ ಚಾರಿತ್ರ್ಯಾ ಇಂಗ್ಲಿಷ್​ನಲ್ಲಿ ವಿವರಣೆ ಕೊಡುತ್ತಾರೆ. ಮಗಳು ಕೊಟ್ಟ ಉತ್ತರ ಕಂಡು ದಂಗಾದ ಗಣೇಶ್, ಮಗಳೇ ಈಗ ಸರಿಯಾಗಿ ಹೇಳು ಏನು ಮಾಡುತ್ತೀದ್ದೀಯಾ ಎನ್ನುತ್ತಾರೆ. ಆಗ ಚಾರಿತ್ರ್ಯಾ ಆಮ್ಲೆಟ್​ ಮಾಡ್ತಿದ್ದೀನಿ ಅಂತಾರೆ.




ಗಣೇಶ್​ ಈ ಫನ್ನಿ ವಿಡಿಯೋ ಹಂಚಿಕೊಂಡಿದ್ದು, ಇದೆಲ್ಲ ಯೂಟ್ಯೂಬ್​ ಪ್ರಭಾವ ಎಂದಿದ್ದಾರೆ. ಆದರೆ ಚಾರಿತ್ರ್ಯಾ ಆಗಾಗ ಅಪ್ಪ-ಅಮ್ಮನಿಗೆ ಸಖತ್​ ರುಚಿತಾ ಡುಗೆ ಮಾಡಿ ಬಡಿಸುತ್ತಾರೆ.
Published by: Anitha E
First published: November 24, 2020, 10:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories