Anitha EAnitha E
|
news18-kannada Updated:March 2, 2021, 1:13 PM IST
ದಿಗಂತ್ ಹಾಗೂ ಗಣೇಶ್
ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ 2' ಸಿನಿಮಾದ ಕುರಿತಾದ ಅಪ್ಡೇಟ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸಿಗುತ್ತಲೇ ಇದೆ. ಅದರಲ್ಲೂ ಗಾಳಿಪಟ 3 ಸಿನಿಮಾದ ಸ್ಟಾರ್ಗಳೇ ಚಿತ್ರದ ಚಿತ್ರೀಕರಣದ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಶೂಟಿಂಗ್ ಸೆಟ್ನಿಂದ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನಳಿಂದ ಗಾಳಿಪಟ 2 ತಂಡ ದೂರದ ಕಜಕಿಸ್ತಾನದಲ್ಲಿದೆ. ಕೊರೆಯುವ ಚಳಿಯಲ್ಲಿ ಚಿತ್ರೀಕರಣ ನಡೆಸುತ್ತಿರುವ ಈ ತಂಡ ಬಗ್ಗೆ ಸಾಕಷ್ಟು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಗಾಳಿಪಟ ಸಿನಿಮಾದಲ್ಲಿದ್ದ ಗಣೇಶ್ ಹಾಗೂ ದಿಗಂತ್ ಅನ್ನು ಹೊರತುಪಡಿಸಿದರೆ, ಉಳಿದ ಪ್ರಮುಖ ಪಾತ್ರಗಳನ್ನು ಬದಲಾಯಿಸಲಾಗಿದೆ. ರಾಜೇಶ್ ಕೃಷ್ಣನ್ ಜಾಗಕ್ಕೆ ನಟ ಹಾಗೂ ನಿರ್ದೇಶಕ ಪವನ್ ಕುಮಾರ್ ಅವರನ್ನು ತರಲಾಗಿದೆ. ಪವನ್ ಸಹ ನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಚಿತ್ರೀಕರಣದ ಬಗ್ಗೆ ಅಪ್ಡೇಟ್ ಕೊಡುತ್ತಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಕಜಕಿಸ್ತಾನಕ್ಕೆ ಹೋದಾಗಿನಿಂದಲೂ ಸಖತ್ ಮಜವಾದ ಫನ್ನಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಜಕಿಸ್ತಾನಕ್ಕೆ ಹೋದಾಗ ಆರಂಭದಲ್ಲಿ ಹಿಮ ತುಂಬಿದ ಕಜಕಿಸ್ತಾನದ ರಸ್ತೆಗಳನ್ನು ತೋರಿಸುತ್ತಲೇ ಜೊತೆಯಲ್ಲಿ ಕಾರಿನಲ್ಲಿ ನಿದ್ದೆ ಮಾಡುತ್ತಿದ್ದ ದಿಗಂತ್ ಅವರನ್ನು ಎಬ್ಬಿಸುವ ವಿಡಿಯೋ ಹಂಚಿಕೊಂಡಿದ್ದರು.
ಈಗ ಮತ್ತೆ ಅದೇ ಗಣೇಶ್, ದಿಗಂತ್ ಜೊತೆ ಕಜಕಿಸ್ತಾನದಲ್ಲಿ ಶೂಟ್ ಮಾಡಿರುವ ಮತ್ತೊಂದು ಕ್ರೇಜಿ ವಿಡಿಯೋ ಶೇರ್ ಮಾಡಿದ್ದಾರೆ. ಕೊರೆಯುವ ಚಳಿಯನ್ನು ತಡೆಯಲಾರದೆ ಪರಮಾತ್ಮನನ್ನು ನೆನಪಿಸಿಕೊಂಡಿದ್ದಾರೆ.
ಸಂದರ್ಭಕ್ಕೆ ತಕ್ಕಂತೆ ಪುನೀತ್ ರಾಜ್ಕುಮಾರ್ ಅಭಿನಯದ ಹಾಡನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಪರಮಾತ್ಮ ಸಿನಿಮಾದ ಯಾವಾನಿಗ್ ಗೊತ್ತು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಎಂದಿನಂತೆ ದಿಗಿ-ಗಣಿ ಜೋಡಿ ಸಾಮಾಜಿಕ ಜಾಲತಾದಣಲ್ಲಿ ಮತ್ತೆ ನೆಟ್ಟಿಗರನ್ನು ರಂಜಿಸಲಾರಂಭಿಸಿದ್ದಾರೆ.
ಇದನ್ನೂ ಓದಿ: Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!
ಈಗಾಗಲೇ ಗಾಳಿಪಟ 2 ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ಈ ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್ ವೈಭವಿ ಶಾಂಡಿಲ್ಯ ನಾಯಕಿಯರಾಗಿದ್ದಾರೆ. ಖಜಕಿಸ್ತಾನದಲ್ಲಿ ಚಿತ್ರೀಕರಣದ ವೇಳೆ ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್ ಹಾಗೂ ಪವನ್ ಕುಮಾರ್ ಜತೆ ತೆಗೆಸಿಕೊಂಡ ಚಿತ್ರವನ್ನು ದಿಗಂತ್ ಇತ್ತೀಚೆಗಷ್ಟೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಲಾಕ್ಡೌನ್ ಅನ್ಲಾಕ್ ಆದಾಗ 'ಗಾಳಿಪಟ 2' ಸಿನಿಮಾದ ಚಿತ್ರೀಕರಣ ಆರಂಭವಾದ ಮೊದಲ ದಿನದ ಚಿತ್ರವನ್ನು ನಿರ್ದೇಶಕ ಯೋಗರಾಜ್ ಭಟ್ ಹಂಚಿಕೊಂಡಿದ್ದರು. ಭಟ್ರು ತಾವು ಹಂಚಿಕೊಂಡ ಚಿತ್ರಕ್ಕೆ ಕೊಟ್ಟಿದ್ದ ಶೀರ್ಷಿಕೆ ಆಗ ನೆಟ್ಟಿಗರ ಗಮನ ಸೆಳೆದಿತ್ತು. 'ಗಾಳಿಪಟ 2 ನೇ ಬಾರಿಗೆ ಹಾರಿಸಿದ ಮೊದಲ ದಿನ... ಅವತ್ತೊಂದೇ ದಿನ ಎಲ್ರೂ ಫ್ರೆಶ್ ಆಗಿ ಕಂಡಿದ್ದು ಎಂದು ಭಟ್ರು ಬರೆದುಕೊಂಡಿದ್ದರು.
ಭಟ್ರ ಶೀರ್ಷಿಕೆ ನೋಡಿದ ನೆಟ್ಟಿಗರೊಬ್ಬರು 'ಇದನ್ನೇ ಫ್ರೆಶ್ ಎಂದರೆ ಇನ್ನು ಬೇರೆ ದಿನ ಹೇಗೋ' ಅಂತ ಕಾಲೆಳೆದಿದ್ದರು.
ಇದನ್ನೂ ಓದಿ: Bro Gowda: ಬಿಗ್ ಬಾಸ್ ಮನೆಯಲ್ಲಿ ಚಿಗುರಿತು ಪ್ರೀತಿ: ಅಣ್ಣಂಗೆ ಲವ್ ಆಗಿದೆ...!
ಗಣೇಶ್ ಹಾಗೂ ದಿಗಂತ್ ಬದಲು ಈ ಹಿಂದೆ ರಿಷಿ ಹಾಗೂ ಶರಣ್ ಅವರನ್ನುಈ ಸಿನಿಮಾಗಾಗಿ ಆಯ್ಕೆ ಮಾಡಿ ಪೋಸ್ಟರ್ ಸಹ ರಿಲೀಸ್ ಮಾಡಲಾಗಿತ್ತು. ನಂತರ ರಿಷಿ ಹಾಗೂ ಶರಣ್ ಸಿನಿಮಾದಿಂದ ಹೊರ ನಡೆದರು. ಈ ಹಿಂದೆ ತೆರೆಕಂಡು ಹಿಟ್ ಆಗಿರುವ 'ಗಾಳಿಪಟ' ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭಟ್ಟರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
Published by:
Anitha E
First published:
March 2, 2021, 1:11 PM IST