Diganth-Ganesh: ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದ ಮೊದಲ ಹಾಡು ರಿಲೀಸ್​ ಮಾಡಿದ ಗಣೇಶ್​

Kshamisi Nimma Khaatheyalli Hanavilla: ಮಲೆನಾಡಿನ ಸೊಗಡನ್ನು ಹೊಂದಿರುವ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದ ಮೊದಲ ಹಾಡು ಈಗ ರಿಲೀಸ್ ಆಗಿದೆ. ಮೊದಲ ಲಿರಿಕಲ್​ ವಿಡಿಯೋ ಲಹರಿ ಮ್ಯೂಸಿಕ್​ ಯೂಟ್ಯೂಬ್​ ಚಾನಲ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ. ವಿಶೇಷ ಅಂದರೆ ಈ ಹಾಡನ್ನು ಗೋಲ್ಡನ್​ ಸ್ಟಾರ್ ಗಣೇಶ್ ಅವರು ರಿಲೀಸ್ ಮಾಡಿದ್ದಾರೆ.

ದಿಗಂತ್ ಸಿನಿಮಾದ ಹಾಡು ರಿಲೀಸ್​ ಮಾಡಿದ ಗಣೇಶ್​

ದಿಗಂತ್ ಸಿನಿಮಾದ ಹಾಡು ರಿಲೀಸ್​ ಮಾಡಿದ ಗಣೇಶ್​

  • Share this:
ಸ್ಯಾಂಡಲ್​ವುಡ್​ ಧೂದ್​ಪೇಡಾ ದಿಗಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರ ಸಹ ಒಂದು. ಈ  ಸಿನಿಮಾದ ಚಿತ್ರೀಕರಣ ಮುಗಿದಿದ್ದು ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಈ ಸಿನಿಮಾದಲ್ಲಿ ದಿಗಂತ್​ ಜತೆಗೆ ಪತ್ನಿ ಐಂದ್ರಿತಾ ರೇ ಹಾಗೂ ಪುಟ್ಟಗೌರಿ ಹಾಗೂ ಕನ್ನಡತಿ ಧಾರಾವಾಹಿ ಖ್ಯಾತಿಯ ಕಲಾವಿದೆ ರಂಜನಿ ರಾಘವನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ವಿಭಿನ್ನವಾದ ಟೈಟಲ್​  ಈಗಾಗಲೇ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಜೊತೆಗೆ ಇದು ಮಲೆನಾಡಿನ ಅಡಿಕೆ ಬೆಳೆಯುವವರ ಕಷ್ಟ ಹಾಗೂ ಜೀವನದ ಬಗ್ಗೆ ಬೆಳಕು ಚೆಲ್ಲುವ ಕಥೆಯಾಗಿದೆ. 

ಮಲೆನಾಡಿನ ಸೊಗಡನ್ನು ಹೊಂದಿರುವ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದ ಮೊದಲ ಹಾಡು ಈಗ ರಿಲೀಸ್ ಆಗಿದೆ. ಮೊದಲ ಲಿರಿಕಲ್​ ವಿಡಿಯೋ ಲಹರಿ ಮ್ಯೂಸಿಕ್​ ಯೂಟ್ಯೂಬ್​ ಚಾನಲ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ. ವಿಶೇಷ ಅಂದರೆ ಈ ಹಾಡನ್ನು ಗೋಲ್ಡನ್​ ಸ್ಟಾರ್ ಗಣೇಶ್ ಅವರು ರಿಲೀಸ್ ಮಾಡಿದ್ದಾರೆ.ಪ್ರಜ್ವಲ್​ ಪೈ ಸಂಗೀತ ನೀಡಿರುವ ಈ ಹಾಡನ್ನು ಹರಿಚರಣ್ ಹಾಡಿದ್ದಾರೆ. ಒಲವೇ ಒಲವೇ ಹಾಡಿಗೆ ವಿರ್ಶವಜಿತ್ ರಾವ್​ ಅವರು ಸಾಹಿತ್ಯ ಬರೆದಿದ್ದಾರೆ. ಹಾಡಿನಲ್ಲಿ ಮಲೆನಾಡಿನ ಅಡಕೆ ಬೆಳೆಯುವ ಯುವಕನಾಗಿ ದಿಗಂತ್ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಇ ಐಂದ್ರಿತಾ ರೇ ಸಹ ಇದ್ದಾರೆ.

ಇದನ್ನೂ ಓದಿ: Bigg Boss 8 Kannada: ದಿವ್ಯಾ ಸುರೇಶ್​ ಮೇಲೆ ಕೈ ಮಾಡಿದ ಪ್ರಿಯಾಂಕಾ ತಿಮ್ಮೇಶ್​..!

ವಿನಾಯಕ ಕೋಡ್ಸರ ಅವರ ನಿರ್ದೇಶನದ ಸಿನಿಮಾ ಇದಾಗಿದ್ದು, ಗೆಳೆಯರಾದ ಗಣೇಶ್​ ಹಾಗೂ ದಿಗಂತ್​ ಹಾಡಿನ ರಿಲೀಸ್​ಗಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹಾಡನ್ನು ಬಿಡುಗಡೆ ಮಾಡಿದ ನಂತರ ಸಿನಿರಂಗದ ಚಟುವಟಿಕೆಗಳು ಮತ್ತೆ ಆರಂಭವಾಗಿರುವ ಕುರಿತಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡವೇ ಭಾಗಿಯಾಗಿತ್ತು.

ಇದನ್ನೂ ಓದಿ: Arjun Sarja: ಚೆನ್ನೈನಲ್ಲಿ ಅರ್ಜುನ್ ಸರ್ಜಾ ನಿರ್ಮಿಸಿರುವ ಆಂಜನೇಯ ದೇವಾಲಯದ ಚಿತ್ರಗಳು

ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿ ರಂಜನಿ ರಾಘವನ್ ಅವರು ಮಾತನಾಡಿ, ಈ ಸಿನಿಮಾದ ಭಾಗ ಆಗಿರುವುದು ನಿಜಕ್ಕೂ ಖುಷಿ ನೀಡಿದೆ ಎಂದಿದ್ದಾರೆ. ಅಲ್ಲದೆ ಗಾಳಿಪಟ ಸಿನಿಮಾವನ್ನು ಬ್ಲಾಕ್​ನಲ್ಲಿ ಟಿಕೆಟ್​ ಖರೀದಿಸಿ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಗಾಳಿಪಟ ಸಿನಿಮಾದಲ್ಲಿ ಗಣೇಶ್ ಹಾಗೂ ದಿಗಂತ್ ಒಟ್ಟಿಗೆ ನಟಿಸಿದ್ದಾರೆ. ಇನ್ನು ಈ ಸಿನಿಮಾ ಬಾಕ್ಸಾಫಿಸ್​ನಲ್ಲಿ ಹಿಟ್​ ಆಗಿತ್ತು. ಈಗ ಈ ಸಿನಿಮಾದ 2ನೇ ಭಾಗ ಸಹ ತೆರೆಗೆ ಬರಲು ಸಜ್ಜಾಗುತ್ತಿದೆ.

ಸಾಗರದ ಪುಟ್ಟಹಳ್ಳಿಯಲ್ಲಿ ನಡೆಯಲಿರುವ ಈ ಸಿನಿಮಾದ ಕಥೆಯಲ್ಲಿ ದಿಗಂತ್​ ಅಡಿಕೆ ವ್ಯಾಪಾರಿಯಾಗಿ ನಟಿಸುತ್ತಿದ್ದಾರೆ. ಈ ರೀತಿಯ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ದಿಗಂತ್​ ಅಭಿನಯಿಸುತ್ತಿದ್ದಾರೆ. ಇನ್ನು ದಿಗಂತ್​ ಅವರಿಗೆ ನಾಯಕಿಯಾಗಿ ಐಂದ್ರಿತಾ ರೇ ನಟಿಸಲಿದ್ದಾರಂತೆ. ಅಂದಾಜು ಏಳು ವರ್ಷಗಳ ನಂತರ ದಿಗಂತ್​ ಹಾಗೂ ಐಂದ್ರಿತಾ ಮತ್ತೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: RIP Dilip Kumar: ಮೊಹಮ್ಮದ್​ ಯೂಸುಫ್​ ಖಾನ್ ಟ್ರಾಜಿಡಿ ಕಿಂಗ್​​ ದಿಲೀಪ್​ ಕುಮಾರ್ ಆದ ಕಥೆ..!

ದಿಗಂತ್​ ಕೈಯಲ್ಲಿ ಸಖತ್ ವಿಭಿನ್ನವಾದ ಟೈಟಲ್​ ಇರುವ ಸಾಲು ಸಾಲು ಸಿನಿಮಾಗಳಿವೆ. ಇತ್ತೀಚೆಗಷ್ಟೆ ದಿಗಂತ್​ ಅವರ ಇನ್ನೂ ಹೆಸರಿಡದ ಚಿತ್ರಕ್ಕೆ ಗಣೇಶ್​ ಕ್ಯ್ಲಾಪ್​ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹರಿಪ್ರಿಯಾ ದಿಗಂತ್​ಗೆ ಜೋಡಿಯಾಗಿದ್ದಾರೆ. ಇದರ ಜೊತೆಗೆ ಮಾರಿಗೋಲ್ಡ್​, ಗಾಳಿಪಟ 2, ವೇರ್​ ಇಸ್​ ಮೈ ಕನ್ನಡಕ, ಹುಟ್ಟುಹಬ್ಬದ ಶುಭಾಷಯಗಳು ಸಿನಿಮಾ ಸೇರಿದಂತೆ ಮತ್ತಷ್ಟು ಚಿತ್ರಗಳು ದಿಗಂತ್​ ಕೈಯಲ್ಲಿವೆ.
Published by:Anitha E
First published: