Golden Gang ಜೊತೆ ಬಂದ್ರು ಗೋಲ್ಡನ್​ ಸ್ಟಾರ್​ ಗಣೇಶ್: ಜ.8ರಿಂದ ಜೀ ಕನ್ನಡದಲ್ಲಿ ಪ್ರತಿ ವೀಕೆಂಡ್​ ಫುಲ್​ ಮಸ್ತಿ!

ಗೋಲ್ಡನ್ ತಾರೆಗಳ ಗೋಲ್ಡನ್ ಕ್ಷಣಗಳನ್ನು ಸೆರೆಹಿಡಿದು ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ನೀಡಲಿದೆ ಈ ಗೋಲ್ಡನ್ ಗ್ಯಾಂಗ್. ಈ ಕಾರ್ಯಕ್ರಮ ಮನೋರಂಜನೆಯ ಜೊತೆಗೆ ನಗೆಯ ರಸದೌತಣವನ್ನೂ ನೀಡಲಿದೆ. ಕರ್ನಾಟಕದ ಬಹುನಿರೀಕ್ಷೆಯ ಈ ರಿಯಾಲಿಟಿ ಶೋ ಇದೇ ಜನವರಿ 8 ರಿಂದ ಪ್ರತಿ ಶನಿ-ಭಾನು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ಗೋಲ್ಡನ್​ ಸ್ಟಾರ್ ಗಣೇಶ್​

ಗೋಲ್ಡನ್​ ಸ್ಟಾರ್ ಗಣೇಶ್​

  • Share this:
ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ(Zee Kannada) ವಾಹಿನಿ ಕೇವಲ ಮನೋರಂಜನೆ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗದೇ ಸದಭಿರುಚಿಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಇಂತಹ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ವೀಕೆಂಡ್ ವಿತ್ ರಮೇಶ್(Weekend With Ramesh), ಡ್ರಾಮಾ ಜೂನಿಯರ್ಸ್(Drama Juniors), ಸರಿಗಮಪ(Sarigamapa), ಕಾಮಿಡಿ ಕಿಲಾಡಿಗಳು(Comedy Khiladigalu), ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್(Dance Karnataka Dance), ಜೀನ್ಸ್, ಕನ್ನಡದ ಕಣ್ಮಣಿ, ಯಾರಿಗುಂಟು ಯಾರಿಗಿಲ್ಲ, ಹೀಗೆ ಸಾಲು ಸಾಲು ವಿನೂತನ ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನೆ-ಮನಗಳನ್ನು ಮೆಚ್ಚಿಸಿ ಕಿರುತೆರೆಯಲ್ಲಿ ಸತತವಾಗಿ 3 ವರ್ಷದಿದಂದ ನಂಬರ್ 1 ಸ್ಥಾನದಲ್ಲಿರುವುದು ಜೀ ಕನ್ನಡಕ್ಕೆ ಹೆಮ್ಮೆಯ ಗರಿ. ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ(Reality Show)ಗಳಿಗೆ ಹೊಸ ತಿರುವನ್ನು ಕೊಟ್ಟ ಜೀ ಕನ್ನಡ, ಕಿರುತೆರೆಯ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಸ್ನೇಹಿತ(Friends)ರಿಗಾಗಿ ವಿಶೇಷ ಕಾರ್ಯಕ್ರಮವನ್ನು ರೂಪಿಸಿದೆ. ಪ್ರತಿಸಲ ರಿಯಾಲಿಟಿ ಶೋಗಳಲ್ಲಿ ಮನೋರಂಜನೆಯ ಜೊತೆಗೆ ಒಂದು ಭಾವನಾತ್ಮಕ ಸತ್ಯ ಸಂದೇಶವನ್ನು ನೀಡುವ ನಮ್ಮ ವಾಹಿನಿ ಈ ಬಾರಿ ನಮ್ಮ ಚಂದನವನದ ಬಹುಕಾಲದ ಗೆಳೆಯ-ಗೆಳತಿಯರ ಸ್ನೇಹ ಸಮ್ಮಿಲನದ ಬುತ್ತಿಯನ್ನು ಬಿಚ್ಚಿ ಅಲ್ಲಿ ಎಷ್ಟೋ ಜನ ತಮ್ಮ ಜೊತೆಯಾದ ಕಥೆಯನ್ನು ವೀಕ್ಷಕರಿಗೆ ಉಣಬಡಿಸಲು ವೇದಿಕೆ ಸಜ್ಜಾಗಿದೆ.

ಗೆಳೆಯರಿಗಾಗಿ, ಗೆಳೆಯರಿಗೋಸ್ಕರನೇ ‘ಗಜಾನಾನ ಗ್ಯಾಂಗ್’​!

ನೋವಲ್ಲಿ ಸಾಂತ್ವನಗೈದವರು, ನಲಿವಲ್ಲಿ ನಮ್ಮೊಡನೆ ನಕ್ಕು ನಲಿದವರು, ಕಷ್ಟಕ್ಕೆ ಬೆಂಬಲವಾಗಿ ನಿಂತವರು, ಸುಖದಲ್ಲಿ ಸವಿಯಾದವರು, ಸೋತಾಗ ಕಣ್ಣೀರಾದವರು, ಗೆದ್ದಾಗ ಗೆಲುವನ್ನು ಸಂಭ್ರಮಿಸಿದವರು, ನಮ್ಮ ತರಲೆ-ತುಂಟಾಟಗಳಿಗೆ ಜೊತೆಯಾದವರು ಹೀಗೆ ಜೀವನದ ಭಾಗವಾಗಿರುವ ಈ ಎಲ್ಲ ಸ್ನೇಹಿತರೆಂಬ ಪಾತ್ರಗಳು ಜೀವನದ ಪ್ರತಿಯೊಂದು ಹಂತದಲ್ಲೂ ಕುಟುಂಬದಷ್ಟೇ ಸರಿಸಮನಾಗಿ ಕೊನೆಗೆ ತಾನೇ ಒಂದು ಕುಟುಂಬವಾಗುತ್ತದೆ. ಜೀವದ ಗೆಳೆಯರಿಗೆ ಈ ಕಾರ್ಯಕ್ರಮವನ್ನು ಜಿûೀ ಕನ್ನಡ ಸಮರ್ಪಿಸುತ್ತಿದೆ. ಇದರೊಂದಿಗೆ ಒಂದಷ್ಟು ಮೋಜು-ಮಸ್ತಿ, ಆಟ-ತುಂಟಾಟ ಎಲ್ಲವನ್ನು ಒಳಗೊಂಡ ವಿಭಿನ್ನ ಮನೋರಂಜನೆಯ ರಸಗವಳವನ್ನು ಕನ್ನಡಿಗರು ಸವಿಯಬಹುದಾಗಿದೆ.

ಗೋಲ್ಡನ್ ಗ್ಯಾಂಗ್


ಇದನ್ನು ಓದಿ: ಇಷ್ಟು ಬೇಗ ಒಟಿಟಿಯಲ್ಲಿ ಬರ್ತಿದೆ `ಪುಷ್ಪ’ ಸಿನಿಮಾ​! ಜ.7ರಂದು ಅಮೇಜಾನ್​ ಪ್ರೈಮ್​ನಲ್ಲಿ ಪ್ರೀಮಿಯರ್​!

ಬಾಲ್ಯ ಮೆಲುಕು ಹಾಕುವ ರಿಯಾಲಿಟಿ ಶೂ!

ಈ ಕಾರ್ಯಕ್ರಮದಲ್ಲಿ ನಮ್ಮ ಸ್ಯಾಂಡಲ್‍ವುಡ್‍ನ ತಾರೆಯರ ಜೊತೆಗೆ ಕಿರುತೆರೆಯಲ್ಲಿ ಮೋಡಿಮಾಡಿದ ಹಿಂದಿನ ಧಾರವಾಹಿ ಗ್ಯಾಂಗ್, ಹಾಸ್ಯಕ್ಕೆ ಮೆರುಗು ತಂದಂತಹ ಹರಟೆ ಗ್ಯಾಂಗ್, ಟ್ರೆಂಡ್ ಸೆಟ್ ಮಾಡಿದಂತಹ ಸಿನಿಮಾಗಳು, ಜೊತೆಗೆ ಕರ್ನಾಟಕದ ವಿವಿಧ ಕ್ಷೇತ್ರಗಳಾದ ರಾಜಕೀಯ ದಿಗ್ಗಜರು, ಕ್ರೀಡಾ ತಾರೆಗಳು, ಪತ್ರಿಕೋದ್ಯಮದ ಪ್ರವರ್ತಕರು ಕೂಡ ಭಾಗವಹಿಸುವ ಎಲ್ಲಾ ನಿರೀಕ್ಷೆಗಳಿವೆ. ಅಪೂರ್ವ ಸ್ನೇಹಿತರ ಅನನ್ಯ ಸ್ನೇಹವನ್ನು ಸಂಭ್ರಮಿಸಲೆಂದೇ ಸಿದ್ಧಗೊಂಡಿರುವ ಈ ಶೋ ವೀಕ್ಷಕರ ಮನದಲ್ಲಿ ಹೊಸ ಸಂಚಲನವನ್ನು ಸೃಷ್ಠಿಸುತ್ತದೆ ಎಂದು ಹೇಳಲು ಸಂತೋಷಪಡುತ್ತದೆ.

ಇದನ್ನು ಓದಿ : ಸಿಂಪಲ್​ ಆಗಿ ಸುಮಂತ್​​ ಜೊತೆ ಸಪ್ತಪದಿ ತುಳಿದ ನಟಿ ಶುಭ ಪೂಂಜಾ! ಫೋಟೋಗಳು ವೈರಲ್​!

ಈ ಕಾರ್ಯಕ್ರಮ ವೀಕ್ಷಕರಿಗೆ ವೈವಿಧ್ಯಮಯ ಜನಪ್ರಿಯ ವ್ಯಕ್ತಿಗಳ ಸ್ನೇಹವಲಯದ ವಿಸ್ತಾರವನ್ನು ಪರಿಚಯ ನೀಡುವುದರ ಜೊತೆಗೆ ತಮ್ಮ ಬಾಲ್ಯಯವ್ವನವನ್ನು ಮತ್ತೊಮ್ಮೆ ಕಾರ್ಯಕ್ರಮದೊಂದಿಗೆ ಮೆಲುಕುಹಾಕಿ ತಮ್ಮ ಗೆಳೆಯರ ಬಳಗದ ಜೀವನವನ್ನು ಮರುಸೃಷ್ಟಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಲು ಜೀ-ಕನ್ನಡ ಹೆಮ್ಮೆ ಪಡುತ್ತದೆ. ಈಗಾಗಲೇ ಬಿಡುಗಡೆಗೊಂಡಿರುವ ಪ್ರೋಮೋ ಬಹಳಷ್ಟು ಜನ ಮೆಚ್ಚುಗೆಗಳಿಸಿದ್ದು ನೋಡುಗರಲ್ಲಿ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಗೋಲ್ಡನ್​ ಸ್ಟಾರ್​ ಜೊತೆ ಗೋಲ್ಡ್​ನ್​ ರಿಯಾಲಿಟಿ ಶೋ!

ಈ ಕಾರ್ಯಕ್ರಮದ ನಿರೂಪಣೆಯನ್ನು ನಮ್ಮ ಮನೆಮಗ, ಮಳೆ ಹುಡುಗ, ಭಾವುಕ ಕಣ್ಣೀರಿನ ಅಮರ ಪ್ರೇಮಿ, ಚೆಲುವಿನ ಚಿತ್ತಾರದ ಚಿತ್ತಾರವನ್ನು ಚಂದನವನದಲ್ಲಿ ಮೂಡಿಸಿದ "ಗೋಲ್ಡನ್ ಸ್ಟಾರ್" ಗಣೇಶ್ ನಿರ್ವಹಿಸುತ್ತಿರುವುದು ಈ ಕಾರ್ಯಕ್ರಮದ ಮತ್ತೊಂದು ಹೆಗ್ಗಳಿಕೆ.ಗೆಳೆತನವೆಂಬ ಸಿರಿತನಕ್ಕೆ ಸೋಲದವರಾರೂ ಇಲ್ಲ, ಗೋಲ್ಡನ್ ತಾರೆಗಳ ಗೋಲ್ಡನ್ ಕ್ಷಣಗಳನ್ನು ಸೆರೆಹಿಡಿದು ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ನೀಡಲಿದೆ ಈ ಗೋಲ್ಡನ್ ಗ್ಯಾಂಗ್. ಈ ಕಾರ್ಯಕ್ರಮ ಮನೋರಂಜನೆಯ ಜೊತೆಗೆ ನಗೆಯ ರಸದೌತಣವನ್ನೂ ನೀಡಲಿದೆ. ಕರ್ನಾಟಕದ ಬಹುನಿರೀಕ್ಷೆಯ ಈ ರಿಯಾಲಿಟಿ ಶೋ ಇದೇ ಜನವರಿ 8 ರಿಂದ ಪ್ರತಿ ಶನಿ-ಭಾನು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.
Published by:Vasudeva M
First published: